ಯುರೋಪಿನ ಒಂದು ಆಸ್ಪತ್ರೆಯಲ್ಲಿದ್ದ ಡಾಕ್ಟರರು ಮತ್ತು ಸಿಬ್ಬಂದಿಗಳ ವಿಷಯದಲ್ಲಿ ಅನುಭವಕ್ಕೆ ಬಂದ ಯೋಗ್ಯ ಮತ್ತು ಅಯೋಗ್ಯ ವರ್ತನೆ !

ಶ್ರೀ. ದೇಯಾನ ಗ್ಲೆಶ್ಚಿಚ್
೨೮.೧೦.೨೦೧೪ ರಂದು ‘ಪಾಯ ಲೊನೀಡಲ್ ಸಿಸ್ಟ್’ (ಸೊಂಟದಲ್ಲಾಗಿರುವ ಗೆಡ್ಡೆ) ತೆಗೆಯುವ ಶಸ್ತ್ರಚಿಕಿತ್ಸೆ ಮಾಡಿಸಲು ನಾನು ಯುರೋಪಿನ ಒಂದು ಖಾಸಗಿ ಆಸ್ಪತ್ರೆಗೆ ಸೇರಿದ್ದೆನು. ಆಸ್ಪತ್ರೆಯಲ್ಲಿರುವಾಗ ನನಗೆ ಅಲ್ಲಿಯ ಸಿಬ್ಬಂದಿಗಳ ಯೋಗ್ಯ ಮತ್ತು ಅಯೋಗ್ಯ ವರ್ತನೆಗಳ ನಿರೀಕ್ಷಣೆಯಾಯಿತು. ಈ ಸಿಬ್ಬಂದಿಗಳು ರೋಗಿಗಳನ್ನು ಒತ್ತಡದಲ್ಲಿಟ್ಟು ಪಾಪಾಚರಣೆ ಮಾಡುತ್ತಿರುವುದು ಕಂಡುಬಂದಿತು. ಆಗ ಉತ್ತಮ ವೈದ್ಯಕೀಯ ಸೌಕರ್ಯಕ್ಕಾಗಿ ‘ಧರ್ಮಶಿಕ್ಷಣವು ಅನಿವಾರ್ಯವಾಗಿದೆ’, ಎಂಬುದು ನನ್ನ ಗಮನಕ್ಕೆ ಬಂತು.

೧. ವೈದ್ಯಕೀಯ ಸಿಬ್ಬಂದಿಗಳ ಶಸ್ತ್ರಚಿಕಿತ್ಸೆಯ ಮೊದಲ ತಪಾಸಣೆ 
ಮತ್ತು ಶಸ್ತ್ರಚಿಕಿತ್ಸೆಯ ಸಮಯದಲ್ಲಿನ ವರ್ತನೆ
೧ ಅ. ಆಸ್ಪತ್ರೆಯ ಸಿಬ್ಬಂದಿಗಳ ಅಸಭ್ಯ ವರ್ತನೆಯಿಂದಾಗಿ ರೋಗಿಗಳು ಹತಾಶರಾಗುವುದು : ನನ್ನ ಶಸ್ತ್ರಚಿಕಿತ್ಸೆಯ ಮೊದಲು ತಪಾಸಣೆ ಮಾಡುವಾಗ ಡಾಕ್ಟರರು ಮತ್ತು ದಾದಿಗಳ ವರ್ತನೆಗಳು ಬೇರೆಬೇರೆಯಾಗಿದ್ದವು. ಕೆಲವು ಡಾಕ್ಟರರು ಮತ್ತು ಕೆಲವು ದಾದಿಗಳು ತುಂಬ ಪ್ರೀತಿಯಿಂದ ಹಾಗೂ ನಮ್ರತೆಯಿಂದ ನಡೆದುಕೊಳ್ಳುತ್ತಿದ್ದರು. ಅವರು ಸಭ್ಯತೆಯಿಂದ, ಶಾಂತತೆ ಯಿಂದ ಕಾಳಜಿ ವಹಿಸುತ್ತಾ ಮತ್ತು ಸ್ನೇಹದಿಂದ ನಡೆದುಕೊಳ್ಳುತ್ತಿದ್ದರು. ಆದರೂ ಅರ್ಧಕ್ಕಿಂತ ಹೆಚ್ಚು ಸಿಬ್ಬಂದಿಗಳ ವರ್ತನೆ ‘ತಾವು ಯಾರೋ ಶ್ರೇಷ್ಠರಿದ್ದೇವೆ’, ಎನ್ನುವಂತಿತ್ತು. ಅವರು ನನ್ನೊಡನೆ ಹಾಗೂ ಇತರ ಕೆಲವು ರೋಗಿಗಳೊಂದಿಗೆ ತುಂಬ ತುಚ್ಚವಾಗಿ ಮಾತನಾಡುತ್ತಿದ್ದರು. ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ಇಂತಹ ಅಯೋಗ್ಯ ವರ್ತನೆಯಿಂದಾಗಿ ರೋಗಿಗಳು ತುಂಬಾ ಬೇಸತ್ತಿದ್ದರು. ಸೊಕ್ಕಿನಿಂದ ವರ್ತಿಸುವ ಡಾಕ್ಟರರು ಮತ್ತು ದಾದಿಗಳ ಬಗ್ಗೆ ರೋಗಿಗಳು ಭಯಗೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತಿತ್ತು. ಅನೇಕ ರೋಗಿಗಳು ತಮ್ಮ ಕಾಯಿಲೆಯ ವೇದನೆಯಿಂದ ನೊಂದಿದ್ದರು ಮತ್ತು ಡಾಕ್ಟರರ ಮತ್ತು ದಾದಿಗಳ ಸೊಕ್ಕಿನ ನಡತೆಯಿಂದಾಗಿ ಅವರ ಮೇಲಿನ ಒತ್ತಡ ಹೆಚ್ಚುತ್ತಿತ್ತು. ಡಾಕ್ಟರರು ಪ್ರೀತಿಯಿಂದ ವರ್ತಿಸಿದರೆ, ರೋಗಿಗಳು ಸಮಾಧಾನದಿಂದ ಇರುತ್ತಿದ್ದರು ಮತ್ತು ತಾವು ‘ಈ ಕಾಯಿಲೆಯಿಂದ ಬೇಗನೆ ವಾಸಿಯಾಗುವೆವು’, ಎನ್ನುವ ವಿಶ್ವಾಸವು ಅವರಲ್ಲಿ ಮೂಡಿಬರುತ್ತಿತ್ತು.
೧ ಆ. ಸರಕಾರಿ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಂತೆ ಖಾಸಗಿ ಆಸ್ಪತ್ರೆ ಯಲ್ಲಿನ ಸಿಬ್ಬಂದಿಗಳ ವರ್ತನೆ ಇರುವುದು : ನಾನು ಒಂದು ಖಾಸಗಿ ಆಸ್ಪತ್ರೆ ಯಲ್ಲಿದ್ದೆನು. ಇಲ್ಲಿ ರೋಗಿಗಳು ಹಣ ತುಂಬಿ ವೈದ್ಯಕೀಯ ಸೌಕರ್ಯಗಳನ್ನು ಪಡೆಯತ್ತಾರೆ. ಇಲ್ಲಿಯ ವೈದ್ಯಕೀಯ ಸಿಬ್ಬಂದಿಗಳಿಗೆ ಸರಕಾರಿ ಆಸ್ಪತ್ರೆಗಿಂತ ಸಾಕಷ್ಟು ಹೆಚ್ಚು ಸಂಬಳವಿದು, ಇದೊಂದು ತುಂಬ ಪ್ರಸಿದ್ಧ ಆಸ್ಪತ್ರೆಯಾಗಿದೆ. ಆದುದರಿಂದ ಸರಕಾರಿ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಂತಿರುವ ಇಲ್ಲಿಯ ಸಿಬ್ಬಂದಿಗಳ ವರ್ತನೆಯನ್ನು ಕಂಡು ನನಗೆ ಆಶ್ಚರ್ಯವೆನಿಸಿತು. ವೈದ್ಯಕೀಯ ಶಿಕ್ಷಣವನ್ನು ನೀಡುವಾಗ ಡಾಕ್ಟರರು ಮತ್ತು ದಾದಿಗಳಿಗೆ ‘ರೋಗಿಗಳೊಂದಿಗೆ ಹೇಗೆ ವರ್ತಿಸಬೇಕು ?’ ಎನ್ನುವುದನ್ನು ಕಲಿಸದಿರುವುದರಿಂದ ಇಲ್ಲಿಯ ಶಿಕ್ಷಣ ಪದ್ಧತಿಯು ದೋಷಯುಕ್ತವಾಗಿದೆ ಎಂಬುದು ನನ್ನ ಗಮನಕ್ಕೆ ಬಂತು.
. ಶಸ್ತ್ರಚಿಕಿತ್ಸೆಯ ಕಾಲಾವಧಿಯಲ್ಲಿ ಅನುಭವಿಸಿದ ವೈದ್ಯಕೀಯ ಸಿಬ್ಬಂದಿಗಳ ಅಯೋಗ್ಯ ವರ್ತನೆ

೨ ಅ. ವೈದ್ಯಕೀಯ ಸಿಬ್ಬಂದಿಗಳಲ್ಲಿ ಕಂಡುಬರುವ ಮಿತಿಮೀರಿದ ಉದಾಸೀನತೆ : ನಾನು ಶಸ್ತ್ರಚಿಕಿತ್ಸೆಯ ಕೋಣೆಗೆ ಪ್ರವೇಶಿಸಿದಾಗ ಅಲ್ಲಿನ ತಾಪಮಾನ ಯೋಗ್ಯವಾಗಿಟ್ಟಿಲ್ಲ ಎಂಬುದು ನನ್ನ ಗಮನಕ್ಕೆ ಬಂತು. ನನ್ನ ಮೇಲೆ ಕೇವಲ ಒಂದು ಹೊದಿಕೆ ಹೊದಿಸಲಾಗಿದ್ದರಿಂದ ನನಗೆ ಅಲ್ಲಿ ತುಂಬಾ ಚಳಿಯಾಗುತ್ತಿತ್ತು. ಇದನ್ನು ನಾನು ಅಲ್ಲಿಯ ವೈದ್ಯಕೀಯ ಸಿಬ್ಬಂದಿಗಳ ಗಮನಕ್ಕೆ ತಂದು ಕೊಟ್ಟ ನಂತರವೂ ಅವರು ನನ್ನಕಡೆಗೆ ದುರ್ಲಕ್ಯ ಮಾಡಿದರು.
೨ ಆ. ಶಸ್ತ್ರಚಿಕಿತ್ಸೆಯ ಕೋಣೆಯ ವಾತಾವರಣವು ಮನೋರಂಜನೆಯ ಕಾರ್ಯಕ್ರಮದಂತಿದ್ದು ಸಿಬ್ಬಂದಿಗಳಲ್ಲಿ ಕರ್ತವ್ಯಭಾವನೆ, ಕರ್ತವ್ಯದ ಬಗ್ಗೆ ಅರಿವು ಅಥವಾ ಗಾಂಭೀರ್ಯತೆ ಇಲ್ಲದಿರುವುದು : ಶಸ್ತ್ರಚಿಕಿತ್ಸೆ ಮಾಡುವ ಕೋಣೆಯ ವಾತಾವರಣವು ಶಾಂತವಾಗಿದ್ದರೆ, ಅಲ್ಲಿಯ ಸಿಬ್ಬಂದಿಗಳು ಶಾಂತಿಯುತ, ನಮ್ರತೆಯುಳ್ಳ ಮತ್ತು ಅವರ ಸೇವೆಯ ಬಗ್ಗೆ ಜಾಗೃತವಾಗಿರುತ್ತಾರೆ’, ಎಂದು ನನಗನಿಸಿತು. ಆದರೆ ಪ್ರತ್ಯಕ್ಷದಲ್ಲಿ ಮಾತ್ರ ವೈದ್ಯಕೀಯ ಸಿಬ್ಬಂದಿಗಳು ತಮ್ಮತಮ್ಮೊಳಗೆ ದೊಡ್ಡದಾಗಿ ಹರಟೆ ಹೊಡೆ ಯುವುದು, ತಮಾಷೆ ಮಾಡುವುದು, ಗಲಾಟೆ ಮಾಡುವುದು ಹೀಗೆಲ್ಲಾ ಮಾಡುವುದನ್ನು ನೋಡಿ ನನಗೆ ತುಂಬಾ ಧಕ್ಕೆಯುಂಟಾಯಿತು. ಇಷ್ಟೇ ಅಲ್ಲದೇ ಶಸ್ತ್ರಚಿಕಿತ್ಸೆಯ ಕೋಣೆಯಲ್ಲಿ ಆಕಾಶವಾಣಿಯಲ್ಲಿ ಪಾಶ್ಚಾತ್ಯ ಸಂಗೀತ ಹಾಕಿಡಲಾಗುತ್ತಿತ್ತು. ಪ್ರತ್ಯಕ್ಷ ಶಸ್ತ್ರಚಿಕಿತ್ಸೆಯ ಸಮಯದಲ್ಲಿಯೂ ಅವರು ದೊಡ್ಡ ಸ್ವರದಲ್ಲಿ ಹರಟೆ ಹೊಡೆಯುವುದು ಮತ್ತು ಹಾಸ್ಯ ವಿನೋದ ಗಳನ್ನು ಮಾಡುವುದೆಲ್ಲ ನಡೆಯತ್ತಲೇ ಇದ್ದವು. ಅವರ ಗಮನವೆಲ್ಲ ಕೇವಲ ಮನೋರಂಜನೆಯ ಕಡೆಗೆ ಇತ್ತು. ಅವರಲ್ಲಿ ‘ನಮ್ಮ ಸೇವೆ ನಮಗೆ ಪೂರ್ಣಗೊತ್ತಿದ್ದು ಅದು ತುಂಬಾ ಸುಲಭವಿರುತ್ತದೆ’, ಎಂಬ ಅಹಂಕಾರದ ಭಾವನೆ ಕಾಣುತ್ತಿತ್ತು. ಅಲ್ಲಿನ ವಾತಾವಾರಣದ ಸ್ವರೂಪವು ಶಸ್ತ್ರಚಿಕಿತ್ಸೆಗಿಂತ ಮನೋರಂಜನೆಯ ಕಾರ್ಯಕ್ರಮಕ್ಕೆ ಬಂದಿರುವಂತೆ ತೋರುತ್ತಿತ್ತು. ಅವರು ಸ್ವಲ್ಪವೂ ಅಂತರ್ಮುಖರಾಗಿರಲಿಲ್ಲ. ಅವರಲ್ಲಿ ಕರ್ತವ್ಯಭಾವನೆ, ಕರ್ತವ್ಯದ ಅರಿವು ಅಥವಾ ಗಾಂಭೀರ್ಯತೆಯೇ ಇರಲಿಲ್ಲ.
೨ ಇ. ವೈದ್ಯಕೀಯ ಸಿಬ್ಬಂದಿಗಳಲ್ಲಿ ರೋಗಿಗಳೊಂದಿಗಿನ ಆತ್ಮೀಯತೆ ಇಲ್ಲದಿರುವುದು : ವೈದ್ಯಕೀಯ ಸಿಬ್ಬಂದಿಗಳಿಗೆ ರೋಗಿಗಳ ಸೇವೆಗಿಂತ ಅವರ ಮನೋರಂಜನೆಯು ಮಹತ್ವದ್ದೆಂದು ಅನಿಸುತ್ತಿತ್ತು. ಆದುದರಿಂದ ಆ ಶಸ್ತ್ರಚಿಕಿತ್ಸೆಯ ಕೋಣೆಯಲ್ಲಿ ನನ್ನ ಮನಸ್ಸಿನಲ್ಲಿ ಏಕಾಂಗಿತನದ ಭಾವನೆ ನಿರ್ಮಾಣವಾಗಿತ್ತು. ಡಾಕ್ಟರರು ಸಹ ನಾನೊಬ್ಬ ಯಾರೋ ‘ಅಪರಿಚಿತ ಮನುಷ್ಯ’ನಿದ್ದೇನೆ, ಎನ್ನುವಂತೆ ವರ್ತಿಸುತ್ತಿದ್ದರು. ಆದುದರಿಂದ ಡಾಕ್ಟರರು ಮತ್ತು ನನ್ನಲ್ಲಿ (ರೋಗಿ) ಆತ್ಮೀಯತೆ ಇರಲಿಲ್ಲ.
೨ ಈ. ಶಸ್ತ್ರಚಿಕಿತ್ಸೆಯ ಕೋಣೆಯಲ್ಲಿ ಕಡಿಮೆಪಕ್ಷ ಗುಪ್ತಾಂಗವನ್ನು ಮುಚ್ಚಲು ಸಹ ಯಾವುದೇ ರೀತಿಯ ವ್ಯವಸ್ಥೆ ಇಲ್ಲದಿರುವುದು : ಶಸ್ತ್ರಚಿಕಿತ್ಸೆ ಯನ್ನು ಮಾಡುವಾಗ ನಾನು ವಿವಸ್ತ್ರನಾಗಿದ್ದೆನು. ಆ ಸಮಯದಲ್ಲಿ ಅಲ್ಲಿ ಮಹಿಳಾ ಸಿಬ್ಬಂದಿಗಳು ಸಹ ಇದ್ದರು. ಆದುದರಿಂದ ನನಗೆ ತುಂಬ ಸಂಕೋಚವಾಯಿತು. ‘ಅನೇಕ ಪುರುಷ ಸಿಬ್ಬಂದಿಗಳೆದುರು ಸ್ತ್ರೀ ರೋಗಿಗಳಿಗೆ ಅದೆಷ್ಟು ತೊಂದರೆಯಾಗುತ್ತಿರಬಹುದು’, ಎಂದು ನಾನು ಕೇವಲ ಕಲ್ಪನೆ ಮಾಡುತ್ತಿದ್ದೆನು. ‘ರೋಗಿಗಳ ಗುಪ್ತಾಂಗವನ್ನಾದರೂ ಪೂರ್ಣ ಮುಚ್ಚುವ ವ್ಯವಸ್ಥೆಯನ್ನು ಆಸ್ಪತ್ರೆಯವರು ಮಾಡಬೇಕು’, ಎಂದು ನನಗೆ ಅನಿಸಿತು.
. ಶಸ್ತ್ರಚಿಕಿತ್ಸೆಯ ನಂತರ ವೈದ್ಯಕೀಯ ಸಿಬ್ಬಂದಿಗಳು ರೋಗಿಗಳೊಂದಿಗೆ ಮಾಡುವ ವರ್ತನೆ

೩ ಅ. ಕೆಲವು ಡಾಕ್ಟರರಿಗೆ ರೋಗಿಗಳ ಬಗ್ಗೆ ಗೌರವ ಇಲ್ಲದಿರುವುದು :
ಪೂರ್ವ ಯುರೋಪ್‌ನಲ್ಲಿ ಯಾವುದೇ ಪರಿಚಿತ ಅಥವಾ ಹಿರಿಯ ವ್ಯಕ್ತಿ ಗಳೊಂದಿಗೆ ಮಾತನಾಡುವಾಗ ಗೌರವದಿಂದ ಹಾಗೂ ನಮ್ರತೆಯಿಂದ ಮಾತನಾಡುವ ಪದ್ಧತಿ ಇದೆ; ಆದರೆ ಈ ಆಸ್ಪತ್ರೆಯ ಕೆಲವು ಡಾಕ್ಟರರು ಅವರಿಗಿಂತ ೨೦ ರಿಂದ ೩೦ ವರ್ಷ ಹಿರಿಯ ವ್ಯಕ್ತಿಗಳೊಂದಿಗೂ ಏಕವಚನ ದಲ್ಲಿ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂತು.
೩ ಆ. ದಾದಿಯರ ಉದ್ಧಟ ವರ್ತನೆ : ಮಾರನೆಯ ದಿನ ಬೆಳಗ್ಗೆ ೬.೩೫ ಕ್ಕೆ ಓರ್ವ ದಾದಿ ನಮ್ಮ ಕೋಣೆಗೆ ಬಂದಳು. ಅವಳು ಬರುತ್ತಿದ್ದಂತೆಯೆ ಕೋಣೆಯಲ್ಲಿನ ಎಲ್ಲ ದೀಪಗಳನ್ನು ಉರಿಸಿದಳು ಮತ್ತು ನಮ್ಮೊಡನೆ ದೊಡ್ಡ ಧ್ವನಿಯಲ್ಲಿ ಕರ್ಕಶವಾಗಿ ಮಾತನಾಡಲು ಆರಂಭಿಸಿದಳು. ನಂತರ ಅವಳು ನಮ್ಮ ಪಲ್ಲಂಗದ ಮೇಲಿನ ಹಾಸುವುದು ಹಾಗೂ ಹೊದಿಕೆಯನ್ನು ಸರಿಪಡಿಸಿದಳು. ಆ ಸಮಯದಲ್ಲಿ ಅವಳ ವರ್ತನೆ ಅಥವಾ ವಸ್ತುಗಳನ್ನು ಎತ್ತಿಡುವಾಗ ಅವಳಲ್ಲಿ ಎಷ್ಟೊಂದು ಕಠೋರತೆ ಇತ್ತೆಂದರೆ ನಾವು ಯಾರೂ ಅಲ್ಲಿ ಇಲ್ಲ ಎನ್ನುವಂತೆ ಅವಳು ಕೋಣೆಯನ್ನು ಸರಿಪಡಿಸುತ್ತಿದ್ದಳು.
೩ ಇ. ರೋಗಿಗಳ ಸಮಸ್ಯೆಗಳ ಬಗ್ಗೆ ಸಂವೇದನಾಶೂನ್ಯರಾಗಿರುವ ಡಾಕ್ಟರರು ಮತ್ತು ದಾದಿಯರು : ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬೆನ್ನಿಗೆ ಕೊಟ್ಟಿರುವ ಅರವಳಿಕೆ ಇಳಿಯುವವರೆಗೆ ನನಗೆ ಮೂತ್ರವಿಸರ್ಜನೆ ಯಾಗಿರಲಿಲ್ಲ. ಆದುದರಿಂದ ನನ್ನ ಹೊಟ್ಟೆ (ಮೂತ್ರಾಶಯ) ಉಬ್ಬಿ ನನಗೆ ವೇದನೆಯಾಗುತ್ತಿತ್ತು. ನಾನು ದಾದಿಯಲ್ಲಿ ನನಗಾಗುತ್ತಿರುವ ತೊಂದರೆ ಯನ್ನು ಎರಡು ಸಲ ಹೇಳಿದೆನು; ಆದರೆ ಅವಳು ಅದನ್ನು ದುರ್ಲಕ್ಷಿಸಿ ನನಗೆ, ‘ಎಲ್ಲವೂ ಸರಿ ಹೋಗುವುದು’ ಎಂದಳು. ಮೂರನೇ ಸಲ ನಾನು ನನಗಾಗುತ್ತಿರುವ ತೊಂದರೆಯ ಬಗ್ಗೆ ಹೇಳಿದ ನಂತರ ಅವಳು ಡಾಕ್ಟರ ರನ್ನು ಕರೆದಳು.
ಡಾಕ್ಟರರು ಬಂದು ಪರೀಕ್ಷಿಸಿದಾಗ ಇದು ತುಂಬಾ ಗಂಭೀರವಾಗಿದೆ, ‘ತಕ್ಷಣ ಹೊಟ್ಟೆ ಖಾಲಿ ಮಾಡಬೇಕು’, ಎಂದು ಹೇಳಿದರು. ಆಗ ಆ ದಾದಿಯು ‘ಬೇರೆ ಏನಾದರೂ ಉಪಾಯವನ್ನು ಮಾಡಬಹುದೇ ?’ ಎನ್ನುವ ವಿಚಾರ ಮಾಡದೇ ಅವಳು ಕ್ಯಾಥೇಟರ್‌ನ (ಮೂತ್ರಾಶಯವನ್ನು ಖಾಲಿಗೊಳಿಸುವ ಒಂದು ವೇದನಾಯುಕ್ತ ಪದ್ಧತಿ) ಉಪಾಯವನ್ನು ಆಯ್ದು ಅದರ ಸಿದ್ಧತೆ ಮಾಡಿದಳು.
. ಆಸ್ಪತ್ರೆಯಲ್ಲಿರುವಾಗ  ಅನುಭವಿಸಿದ ಉತ್ತಮ ಅನುಭವಗಳು 
 ಆಸ್ಪತ್ರೆಯಲ್ಲಿರುವಾಗ ನನಗೆ ಕೆಲವು ಉತ್ತಮ ಅನುಭವಗಳೂ ಬಂದವು.
೪ ಅ. ಪ್ರೀತಿಯಿಂದ ಕಾಳಜಿ ವಹಿಸುವ ಮುಖ್ಯ ಶಸ್ತ್ರಚಿಕಿತ್ಸಕರು: ಡಾಕ್ಟರರು ಮತ್ತು ದಾದಿಯರು ನನಗೆ ಕ್ಯಾಥೇಟರ್ (ರಬ್ಬರ್ ನಳಿಕೆ) ನ್ನು ಹಾಕುವ ಸಿದ್ಧತೆ ಮಾಡುತ್ತಿರುವಾಗ ನಾನು ಶ್ರೀಕೃಷ್ಣನಿಗೆ ಸಹಾಯ ಮಾಡಲು ಪ್ರಾರ್ಥನೆ ಮಾಡಿದೆನು. ಆಗ ನನಗೆ ಶಸ್ತ್ರಚಿಕಿತ್ಸೆ ಮಾಡಿದ ಮುಖ್ಯ ಶಸ್ತ್ರಚಿಕಿತ್ಸಕರು ಅಲ್ಲಿಂದ ಹೋಗುತ್ತಿದ್ದರು. ಅವರು ನನಗಾಗುತ್ತಿರುವ ತೊಂದರೆಯ ಬಗ್ಗೆ ಕೇಳಿಸಿಕೊಂಡರು ಮತ್ತು ತಕ್ಷಣ ಅವರು ನನ್ನೊಡನೆ ಮಾತನಾಡಲು ಒಳಗೆ ಬಂದರು. ಅವರು ನನಗೆ, ‘ನಾನು ಕ್ಯಾಥೇಟರ್‌ನ್ನು ಉಪಯೋಗಿಸುವುದಿಲ್ಲ. ನೀನು ಸ್ವತಃ ಮೂತ್ರವಿಸರ್ಜನೆ ಮಾಡಲು ಪ್ರಯತ್ನಿಸಬೇಕು’ ಎಂದು ಅವರು ನಿಧಾನವಾಗಿ ನನಗೆ ಪಲ್ಲಂಗದಿಂದ ಏಳಲು ಸಹಾಯ ಮಾಡಿದರು ಮತ್ತು ಶೌಚಾಲಯಕ್ಕೆ ಕರೆದುಕೊಂಡು ಹೋದರು. ಬಳಿಕ ಐದೇ ನಿಮಿಷದಲ್ಲಿ ನನಗೆ ಮೂತ್ರವಿಸರ್ಜನೆಯಾಯಿತು ಮತ್ತು ಎಲ್ಲ ತೊಂದರೆ ಕಡಿಮೆಯಾಯಿತು. ಶಸ್ತ್ರಚಿಕಿತ್ಸಕರು ಆ ಸಮಯದಲ್ಲಿ ಬರದಿದ್ದರೆ, ನನಗೆ ಕ್ಯಾಥೇಟರನ್ನು ಹಾಕಿಕೊಳ್ಳುವುದು ಅನಿವಾರ್ಯವಾಗುತ್ತಿತ್ತು.
೪ ಆ. ಕೆಲವು ವೈದ್ಯಕೀಯ ಸಿಬ್ಬಂದಿಗಳಲ್ಲಿರುವ ಆತ್ಮೀಯತೆಯ ಸ್ವಭಾವ : ಆಸ್ಪತ್ರೆಯ ಸಾಕಷ್ಟು ಸಿಬ್ಬಂದಿಗಳು ದೊಡ್ಡಧ್ವನಿಯಲ್ಲಿ ಮಾತನಾಡುತ್ತ ಹಾಸ್ಯ-ವಿನೋದ ಮಾಡುತ್ತಿದ್ದರು; ಆದರೆ ಒಬ್ಬ ಡಾಕ್ಟರರು ಮತ್ತು ಕೆಲವು ದಾದಿಯರು ಅಂತರ್ಮುಖರಾಗಿದ್ದು ಅವರು ತಮ್ಮ ಸೇವೆಯ ಬಗ್ಗೆ ಗಾಂಭೀರ್ಯತೆಯಿಂದ ಇರುತ್ತಿದ್ದರು. ಕೆಲವೊಮ್ಮೆ ಅವರು ನನ್ನ ವಿಚಾರಣೆ ಮಾಡಿ ‘ನನಗೆ ಯಾವುದೇ ರೀತಿಯ ಅಡಚಣೆ ಇಲ್ಲವಲ್ಲ ?’ ಎಂದು ತಿಳಿದುಕೊಳ್ಳುತ್ತಿದ್ದರು. ಇದರಿಂದಾಗಿ ನನಗೆ ಅವರ ಬಗ್ಗೆ ತುಂಬಾ ಆತ್ಮೀಯತೆ ಅನಿಸಿತು.
೪ ಇ. ನಮ್ರತೆಯಿಂದ ವರ್ತಿಸುವ ಸ್ವಚ್ಛತೆ ಮಾಡುವ ಮಹಿಳೆ : ಕೋಣೆಯನ್ನು ಸ್ವಚ್ಛ ಮಾಡುವ ಮಹಿಳೆಯು ಕೋಣೆಗೆ ನಿಧಾನವಾಗಿ ಬರುತ್ತಾಳೆ ಮತ್ತು ಅತ್ಯಂತ ಶಾಂತಿಯುತವಾಗಿ ಕೆಲಸ ಮಾಡುತ್ತಿರುತ್ತಾಳೆ. ಅವಳು ನಮ್ಮೊಡನೆ ತುಂಬಾ ವಿನಯಪೂರ್ವಕವಾಗಿ ಮಾತನಾಡುತ್ತಿದ್ದಳು. ಅವಳ ನಮ್ರ ವರ್ತನೆಯಿಂದ ನಮಗೆ ಸಮಾಧಾನ ಅನಿಸುತ್ತಿದ್ದುದರಿಂದ ನಾವು ಅವಳೊಂದಿಗೆ ಮುಕ್ತಮನಸ್ಸಿನಿಂದ ಮಾತನಾಡುತ್ತಿದ್ದೆವು.
೪ ಈ. ಅಡುಗೆ ಮಾಡುವ ಮಹಿಳೆಯು ತನ್ನದೇ ಮಕ್ಕಳಂತೆ ರೋಗಿಗಳ ಕಾಳಜಿ ವಹಿಸುವುದು : ನಮಗಾಗಿ ಅಡುಗೆ ಮಾಡುವ ಓರ್ವ ವಯಸ್ಕರ ಮಹಿಳೆಯು ತುಂಬಾ ಆತ್ಮೀಯತೆಯಿಂದ ಇದ್ದಳು. ನಾವೆಲ್ಲಾ ಅವಳದ್ದೇ ಮಕ್ಕಳಂತೆ ನಮ್ಮ ಕಾಳಜಿ ವಹಿಸುತ್ತಿದ್ದಳು. ನಮಗೆಲ್ಲರಿಗೂ ಆಕೆಯ ಬಗ್ಗೆ ಆತ್ಮೀಯತೆ ಅನಿಸಿ ಅವಳೊಂದಿಗೆ ಮಾತನಾಡಬೇಕನಿಸುತ್ತಿತ್ತು. ವಾಸ್ತವದಲ್ಲಿ ಡಾಕ್ಟರರು ಮತ್ತು ದಾದಿಯರ ಮೇಲೆ ರೋಗಿಗಳನ್ನು ನೋಡಿಕೊಳ್ಳುವ ನಿಜವಾದ ಹೊಣೆಯಿರುತ್ತದೆ. ಇಲ್ಲಿ ಆಸ್ಪತ್ರೆಯಲ್ಲಿನ ಇತರ ಸಿಬ್ಬಂದಿಗಳ ಒಳ್ಳೆಯ ವರ್ತನೆಯಿಂದ ರೋಗಿಗಳು ಅವರೊಂದಿಗೆ ಮುಕ್ತಮನಸ್ಸಿನಿಂದ ವರ್ತಿಸುತ್ತಾರೆ; ಆದರೆ ಆಸ್ಪತ್ರೆಯಲ್ಲಿನ ಡಾಕ್ಟರರು ಮತ್ತು ದಾದಿಯರ ಅಯೋಗ್ಯ ವರ್ತನೆಯಿಂದಾಗಿ ರೋಗಿಗಳಿಗೆ ಅವರ ಬಗ್ಗೆ ಸ್ವಲ್ಪವೂ ಪ್ರೀತಿ
ಅನಿಸುವುದಿಲ್ಲ.’ - ಶ್ರೀ. ದೇಯಾನ ಗ್ಲೆಶ್ಚಿಚ್, ಯುರೋಪ್ (೩೧.೧೦.೨೦೧೪)

ಪಾಶ್ಚಾತ್ಯ ಸಂಸ್ಕೃತಿಯನ್ನು ಹೊಗಳುವವರಿಗೆ
ಅದು ಎಷ್ಟು ವಿಕೃತವಾಗಿದೆ, ಎನ್ನುವುದು ಗೊತ್ತಿಲ್ಲವೇ ?
ಮೆಕಾಲೆ ಪುರಸ್ಕೃತ ಶಿಕ್ಷಣಪದ್ಧತಿಯಿಂದಾಗಿ ‘ಸ್ವದೇಶದ್ದೆಲ್ಲವೂ ನಿಕೃಷ್ಠ ಮತ್ತು ವಿದೇಶದ್ದೆಲ್ಲವೂ ಶ್ರೇಷ್ಠ’, ಎಂಬ ದುಷ್ಪ್ರಚಾರವು ಕಳೆದ ಅನೇಕ ದಶಕಗಳಿಂದ ಆಗುತ್ತಿದೆ. ಈ ಮಾನಸಿಕತೆಯಿಂದಾಗಿ ಪಾಶ್ಚಾತ್ಯ ದೇಶಗಳಲ್ಲಿನ ವೈದ್ಯಕೀಯ ಉಪಚಾರ ಮತ್ತು ವೈದ್ಯಕೀಯ ಸೇವೆ ಭಾರತದಲ್ಲಿನ ಸೇವೆಗಿಂತ ಶ್ರೇಷ್ಠವಾದದ್ದು ಎಂದು ತಿಳಿಯಲಾಗಿತ್ತು. ಅದರಲ್ಲೂ ‘ವಿದೇಶದಲ್ಲಿ ಉಪಚಾರ ಪಡೆಯುವುದು ಎಂದರೆ ಸುರಕ್ಷಿತವಾಗಿರುತ್ತದೆ’, ಎಂಬ ಮಾನಸಿಕತೆಯು ಭಾರತೀಯರಲ್ಲಿ ನಿರ್ಮಾಣವಾಗಿತ್ತು. ವಾಸ್ತವದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ತುಂಬ ಪ್ರಗತಿ ಹೊಂದಿರುವ ಯುರೋಪ್ ದೇಶದ ನಾಗರಿಕರು ಅಲ್ಲಿಯ ವೈದ್ಯಕೀಯ ಸೇವೆಯಲ್ಲಿ ಅನುಭವಿಸಿದ ಕಹಿ ಅನುಭವವನ್ನು ನೋಡಿದರೆ, ಪಾಶ್ಚಾತ್ಯರು ಅದೆಷ್ಟು ವಿಕೃತರು ಮತ್ತು ರೋಗಿಗಳ ಬಗ್ಗೆ ಅಸಂವೇದನಶೀಲರಾಗಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ !’
- (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಯುರೋಪಿನ ಒಂದು ಆಸ್ಪತ್ರೆಯಲ್ಲಿದ್ದ ಡಾಕ್ಟರರು ಮತ್ತು ಸಿಬ್ಬಂದಿಗಳ ವಿಷಯದಲ್ಲಿ ಅನುಭವಕ್ಕೆ ಬಂದ ಯೋಗ್ಯ ಮತ್ತು ಅಯೋಗ್ಯ ವರ್ತನೆ !