ಮಹರ್ಷಿಗಳು ಸಾಧಕರಿಗೆ ನೀಡಿದ ಸಂದೇಶ !

ಸಾಧಕರೇ, ಪ್ರತಿನಿತ್ಯ ಅನ್ನಗ್ರಹಣ ಮಾಡುವಾಗ ಪ.ಪೂ. ಗುರುದೇವರನ್ನು ಸ್ಮರಿಸಿ !
ಮಹರ್ಷಿಗಳ ಬೋಧನೆ ಮತ್ತು ಕಾರ್ಯ !
ಸದ್ಯ ಸಾಧಕರಿಗೆ ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗಳಾಗುವ ಪ್ರಮಾಣವು ಹೆಚ್ಚಾಗಿದೆ. ಅನೇಕ ಸಾಧಕರು ಹೊಟ್ಟೆ ನೋವಿ ನಿಂದ ಬಳಲುತ್ತಿದ್ದಾರೆ. ಇದಕ್ಕೆ ಉಪಾಯ ವೆಂದು ಮಹರ್ಷಿಗಳು ೩೦.೮.೨೦೧೬ ರಂದು ಮುಂದಿನ ಸಂದೇಶವನ್ನು ನೀಡಿದ್ದಾರೆ.
ಸಾಧಕರಿಗೆ ಪ.ಪೂ. ಗುರುದೇವರೇ ಸರ್ವಸ್ವವಾಗಿದ್ದಾರೆ. ಸಾಧಕರು ಅನ್ನಗ್ರಹಣ ಮಾಡುವ ಮೊದಲು ಒಂದು ನಿಮಿಷವಾದರೂ ಪ.ಪೂ. ಗುರುದೇವರ ಸ್ಮರಣೆಯನ್ನು ಮಾಡಿದ ನಂತರವೇ ಅನ್ನಗ್ರಹಣ ಮಾಡಬೇಕು. ಪ.ಪೂ. ಗುರುದೇವರ ಕೃಪೆಯಿಂದ ಸಾಧಕರು ಗ್ರಹಣ ಮಾಡಿದ ಅನ್ನವೇ ಸಾಧಕರನ್ನು ಎಲ್ಲ ರೋಗಗಳಿಂದ ಮತ್ತು ಆಧ್ಯಾತ್ಮಿಕ ತೊಂದರೆಗಳಿಂದ ರಕ್ಷಣೆ ಮಾಡಲಿದೆ. ಈ ಅನ್ನದಲ್ಲಿ ಕೆಟ್ಟ ಶಕ್ತಿಗಳು ತೊಂದರೆದಾಯಕ ಶಕ್ತಿ ಹಾಕಲು ಸಾಧ್ಯವಿಲ್ಲ. ಹೇಗೆ ಮರದ ಹಲಗೆಯ ಮೇಲೆ ನಿಂತು ವಿದ್ಯುತ್‌ನ ತಂತಿಯನ್ನು ಸ್ಪರ್ಶಿಸಿದರೆ, ನಮಗೆ ವಿದ್ಯುತ್ ಆಘಾತವಾಗುವುದಿಲ್ಲವೋ ಅದೇ ರೀತಿಯಾಗಿದೆ.

ಇಲ್ಲಿ ಸಾಧಕರು, ಪ.ಪೂ. ಡಾಕ್ಟರರು ಎಂದರೆ ಟ್ರಾನ್ಸ್‌ಫಾರ್ಮರ್ (ಶಕ್ತಿಯ ಸಂಕೀರ್ಣ) ಆಗಿದ್ದಾರೆ; ಆದ್ದರಿಂದ ಅವರ ಹತ್ತಿರ ಯಾವುದೇ ಕೆಟ್ಟ ಶಕ್ತಿ ಬರಲು ಸಾಧ್ಯವಿಲ್ಲ ಮತ್ತು ಆದ್ದರಿಂದಲೇ ಅವರಿಗೆ ಅರ್ಪಣೆ ಮಾಡಿ ಸೇವಿಸಿದ ಅನ್ನದಿಂದ ನಮಗೆ ಕೆಟ್ಟ ಶಕ್ತಿಗಳು ತೊಂದರೆ ಕೊಡಲು ಸಾಧ್ಯವಿಲ್ಲ. - (ಸದ್ಗುರು) ಸೌ. ಅಂಜಲಿ ಗಾಡಗೀಳ, ಸನಾತನ ಆಶ್ರಮ , ಗೋವಾ. (೩೦.೮.೨೦೧೬ )
ಕೆಟ್ಟ ಶಕ್ತಿ : ವಾತಾವರಣದಲ್ಲಿ ಒಳ್ಳೆಯ ಶಕ್ತಿ ಮತ್ತು ಕೆಟ್ಟ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿಗಳು ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತದೆ, ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಪ್ರಾಚೀನ ಕಾಲದಲ್ಲಿ ಋಷಿ- ಮುನಿಗಳ ಮಾಡಿದ ಯಜ್ಞದಲ್ಲಿ ರಾಕ್ಷಸರು ವಿಘ್ನತರುವ ಬಗ್ಗೆ ಅನೇಕ ಕಥೆಗಳು, ವೇದ- ಪುರಾಣಗಳಲ್ಲಿವೆ. ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿಗಳಿಗೆ ನಿರ್ಬಂಧ ಹಾಕಲು ಮಂತ್ರಗಳನ್ನು ಹೇಳಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಹರ್ಷಿಗಳು ಸಾಧಕರಿಗೆ ನೀಡಿದ ಸಂದೇಶ !