ಕವಚಪಠಣ

ಕವಚವು ಮಂತ್ರವಿದ್ಯೆಯಲ್ಲಿನ ಒಂದು ವಿಧವಾಗಿದೆ. ಇದರಲ್ಲಿ ದೇವತೆಯು ನಮ್ಮ ದೇಹದ ರಕ್ಷಣೆಯನ್ನು ಮಾಡಬೇಕೆಂಬ ಪ್ರಾರ್ಥನೆಯಿರುತ್ತದೆ. ಅನೇಕ ವಿಧದ ಮಂತ್ರಗಳ ಸಹಾಯದಿಂದ ಮನುಷ್ಯನ ದೇಹದ ಮೇಲೆ ಮಂತ್ರಕವಚಗಳನ್ನು ನಿರ್ಮಿಸಬಹುದು. ಈ ಕವಚಗಳು ಸ್ಥೂಲ ಕವಚಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ. ಸ್ಥೂಲ ಕವಚಗಳು ತುಪಾಕಿಯ (ಬಂದೂಕಿನ) ಗುಂಡುಗಳಂತಹ ಸ್ಥೂಲ ಆಯುಧಗಳಿಂದ ರಕ್ಷಿಸುತ್ತವೆ, ಆದರೆ ಸೂಕ್ಷ ್ಮ ಕವಚಗಳು ಸ್ಥೂಲ ಹಾಗೂ ಭೂತ, ಮಾಟದಂತಹ ಸೂಕ್ಷ ್ಮ ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತವೆ. ದುರ್ಗಾಕವಚ, ಲಕ್ಷಿ ್ಮೀಕವಚ, ಮಹಾಕಾಲಿಕವಚ ಮುಂತಾದವುಗಳ ಪಠಣದಿಂದ ಶತ್ರು ಹಾಗೂ ಭೂತಬಾಧೆ, ಮಾಟದಂತಹ ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಸಹಾಯವಾಗುತ್ತದೆ.

ಪ್ರಾರ್ಥನೆ ಮತ್ತು ನಾಮಜಪ
ಶ್ರೀ ದುರ್ಗಾದೇವಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು
. ಹೇ ಶ್ರೀ ದುರ್ಗಾದೇವಿ, ನನಗೆ ಸದ್ಬುದ್ಧಿ ಕೊಡು. ನನ್ನ ಜೀವನ ದಲ್ಲಿ ಬರುವ ಸಂಕಟಗಳನ್ನು ನಿವಾರಿಸು.
. ಹೇ ದುರ್ಗಾಮಾತೆ, ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆಯ ಸೇವೆಯನ್ನು ನಾನು ‘ಸಾಧನೆ’ಯೆಂದು ಮಾಡುವಂತಾಗಲಿ.
. ಶ್ರೀ ದುರ್ಗಾಪೂಜೆ ಆರಂಭಿಸುವಾಗ ಮಾಡಬೇಕಾದ ಪ್ರಾರ್ಥನೆ
. ಹೇ ಶ್ರೀ ದುರ್ಗಾದೇವಿ, ಈ ಪೂಜಾವಿಧಿಯ ಮೂಲಕ ನನ್ನ ಅಂತಃಕರಣದಲ್ಲಿ ನಿನ್ನ ಬಗ್ಗೆ ಭಕ್ತಿಭಾವ ನಿರ್ಮಾಣವಾಗಲಿ.
. ಈ ಪೂಜಾವಿಧಿಯಿಂದ ಪ್ರಕ್ಷೇಪಿಸುವ ಚೈತನ್ಯವನ್ನು ನಾನು ಹೆಚ್ಚೆಚ್ಚು ಗ್ರಹಿಸುವಂತೆ ಕೃಪೆ ಮಾಡು.
. ನವರಾತ್ರೊ ್ಯೀತ್ಸವದ ಕಾಲದಲ್ಲಿ ಮಾಡಬೇಕಾದ ಪ್ರಾರ್ಥನೆ : ಹೇ ಶ್ರೀ ದುರ್ಗಾದೇವಿ, ನವರಾತ್ರ್ಯೋತ್ಸವದ ಕಾಲದಲ್ಲಿ ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಾಗಿರುವ ನಿನ್ನ ತತ್ತ್ವದಿಂದ ನನಗೆ ಹೆಚ್ಚೆಚ್ಚು ಲಾಭವಾಗಲಿ. (ಪ್ರಾರ್ಥನೆಯ ಬಗೆಗಿನ ವಿವರವಾದ ವಿವೇಚನೆಯನ್ನು ಸನಾತನ ಸಂಸ್ಥೆಯ ‘ಪ್ರಾರ್ಥನೆ (ಮಹತ್ವ ಮತ್ತು ಉದಾಹರಣೆಗಳು)’ ಎಂಬ ಕಿರುಗ್ರಂಥದಲ್ಲಿ ನೀಡಲಾಗಿದೆ.)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕವಚಪಠಣ