ಭದ್ರತೆಯ ಹೆಸರಿನಲ್ಲಿ ಪೊಲೀಸರ ಅತಿರೇಕ !

ವಕೀಲ ವೀರೇಂದ್ರ ಇಚಲಕರಂಜಿಕರ್ ಇವರು ತಮ್ಮ ಜೊತೆಗೆ ಕಾರ್ಯಾಲಯದ ಕೆಲಸಕ್ಕಾಗಿ ಒಬ್ಬ ಆಪ್ತ ಸಹಾಯಕನನ್ನು ಕರೆದುಕೊಂಡು ಹೋಗಿದ್ದರು. ಪ್ರಾರಂಭದಲ್ಲಿ ಅವರನ್ನು ಸಹ ಪೊಲೀಸರು ಹೊರಗೆ ಹೋಗಲು ಹೇಳಿದರು. ವಕೀಲ ವೀರೇಂದ್ರ ಇಚಲಕರಂಜಿಕರ್ ಇವರು ‘ನೀವು ಪತ್ರಕರ್ತರನ್ನು ಕುಳಿತುಕೊಳ್ಳಲು ಬಿಡುತ್ತೀರಿ, ನನ್ನ ಸಹಾಯಕನನ್ನು ಕುಳಿತುಕೊಳ್ಳಲು ಬಿಡುವುದಿಲ್ಲ, ನನಗೆ ಸಹಾಯ ಬೇಕಿದ್ದರೆ ನಾನು ಯಾರಿಗೆ ಕೇಳುವುದು ?’, ಎಂದು ಕೇಳಿದರು. ಅನಂತರ ಅವರನ್ನು ಒಳಗೆ ಕುಳಿತುಕೊಳ್ಳಲು ಬಿಟ್ಟರು.
ನ್ಯಾಯಾಲಯದ ಆದೇಶವನ್ನು ಪಾಲಿಸದಿರುವ ಕಾನೂನುದ್ರೋಹಿ ಪೊಲೀಸ್ !
ನ್ಯಾಯಾಲಯದ ಆದೇಶವಿದ್ದರೂ ಸೆಪ್ಟೆಂಬರ್ ೪ ರಂದು ಅಂದರೆ ರವಿವಾರ ಡಾ. ತಾವಡೆಯವರಿಗೆ ಅವರ ವಕೀಲರನ್ನು ಭೇಟಿಯಾಗಲು ಬಿಡಲಿಲ್ಲ. ವಕೀಲ ವೀರೇಂದ್ರ ಇಚಲಕರಂಜಿಕರ್ ಇವರು ಪೊಲೀಸ್ ಮುಖ್ಯಾಲಯದಲ್ಲಿ ೨ ಗಂಟೆ ನಿಂತಿದ್ದರು. ಅಲ್ಲಿ ಅವರನ್ನು ಯಾರೂ ಪರಿಗಣಿಸಲಿಲ್ಲ.
ಆಗ ಸುಹೇಲ ಶರ್ಮಾ ಇವರನ್ನು ಸಂಪರ್ಕ ಮಾಡಿದರೆ ಅವರು ಸಹ ಪ್ರತಿಕ್ರಿಯೆ ನೀಡದ ಕಾರಣ ಕೊನೆಗೆ ಅವರು ಡಾ. ತಾವಡೆಯವರನ್ನು ಭೇಟಿಯಾಗುವ ಬಗ್ಗೆ ಜಿಲ್ಲಾ ಅಧೀಕ್ಷಕರಿಗೆ ವಿ-ಅಂಚೆ ಮತ್ತು ಫ್ಯಾಕ್ಸ್ ಮೂಲಕ ಮನವಿಪತ್ರವನ್ನು ಕಳುಹಿಸಿದರು. ನಿಮ್ಮ ಅನುಕೂಲಕರ ಸಮಯವನ್ನು ತಿಳಿಸಿರಿ, ನಾನು ಭೇಟಿಯಾಗಲು ಬರುತ್ತೇನೆ, ಎಂದು ಸಹ ತಿಳಿಸಿದರು. ಆದರೂ ಅವರನ್ನು ಭೇಟಿಯಾಗಲು ಬಿಡಲಿಲ್ಲ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭದ್ರತೆಯ ಹೆಸರಿನಲ್ಲಿ ಪೊಲೀಸರ ಅತಿರೇಕ !