ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
೧. ಹಿಂದೂಗಳೇ, ಸಂಘಟಿತ ಶಕ್ತಿಯ ಮಹತ್ವವನ್ನು ಅರಿತುಕೊಳ್ಳಿರಿ !
ಓಲಾ ಎಂಬ ಭಾರತೀಯ ಸಂಸ್ಥೆಯು ಸಾರಿಗೆಗಾಗಿ ಮೊಬೈಲ್ ಆ್ಯಪ್‌ಅನ್ನು ಬಳಸುತ್ತಿದ್ದು ತನ್ನ ಬ್ಲಾಗ್‌ನಲ್ಲಿ ಒಂದು ಪೋಸ್ಟ್‌ನ ಮೂಲಕ, ಗಣೇಶಚತುರ್ಥಿಯಂದು ಓಲಾ ಕ್ಯಾಬ್ಸ್ ಛಾವಣಿಯ (ರೂಫ್) ಮೇಲಿನಿಂದ ಶ್ರೀ ಗಣೇಶನು ಮನೆಗೆ ಬರುತ್ತಿರುವಂತೆ ತೋರಿಸಿದೆ. ಧರ್ಮಾಭಿಮಾನಿಗಳ ತೀವ್ರ ವಿರೋಧದಿಂದಾಗಿ ಈ ಚಿತ್ರವನ್ನು ಬ್ಲಾಗ್‌ನಿಂದ ತೆಗೆದು ಹಾಕಲಾಗಿದೆ.
೨. ಕಮ್ಯೂನಿಸ್ಟ್‌ನವರಿಗಿರುವ ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ದ್ವೇಷವನ್ನು ಅರಿತುಕೊಳ್ಳಿ !
ನಮ್ಮ ಸಂವಿಧಾನಕ್ಕೆ ಯಾವುದೇ ಧರ್ಮವಿಲ್ಲ. ಆದ್ದರಿಂದ ಸರಕಾರಿ ಕಾರ್ಯಾಲಯಗಳು ಅಥವಾ ಶಾಲಾ ಕಾರ್ಯಕ್ರಮಗಳಲ್ಲಿ ದೀಪಪ್ರಜ್ವಲನೆ ಮಾಡುವುದು ಹಾಗೂ ಧಾರ್ಮಿಕ ಸ್ತೋತ್ರಗಳನ್ನು ಪಠಿಸುವ ಅಗತ್ಯವಿಲ್ಲ, ಎಂದು ಕೇರಳದ ಸಾರ್ವಜನಿಕ ಕಾಮಗಾರಿ ಮಂತ್ರಿಗಳಾದ ಜಿ. ಸುಧಾಕರನ್‌ರವರು ಹೇಳಿದ್ದಾರೆ.

೩. ಕಾರಾಗೃಹದಲ್ಲಿರುವ ನಿರಪರಾಧಿ ಹಿಂದುತ್ವನಿಷ್ಠರ ವಿಷಯದಲ್ಲಿಯೂ ಈ ರೀತಿ ಆಗ್ರಹಿಸಿ !
ಐಸಿಸ್‌ನ ಸಂಪರ್ಕವಿಟ್ಟುಕೊಂಡಿರುವ ಆರೋಪದಲ್ಲಿ ಭಯೋತ್ಪಾದನಾ ನಿಗ್ರಹ ದಳವು ಮುಸಲ್ಮಾನ ಯುವಕರನ್ನು ದೊಡ್ಡ ಪ್ರಮಾಣದಲ್ಲಿ ಬಂಧಿಸುತ್ತಿದ್ದು ದಳದ ಅಧಿಕಾರಿಗಳು ಅವರ ಮೇಲೆ ದೌರ್ಜನ್ಯವನ್ನು ನಡೆಸುತ್ತಿದ್ದಾರೆ, ಆದ್ದರಿಂದ ಸರಕಾರವು ಈ ದಳದ ಕಾರ್ಯಾಚರಣೆಯ ಬಗ್ಗೆ ಸ್ವತಂತ್ರವಾಗಿ ವಿಚಾರಣೆಯನ್ನು ನಡೆಸಲಿ, ಎಂದು ಶರದ್ ಪವಾರ್ ಆಗ್ರಹಿಸಿದ್ದಾರೆ.
೪. ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳ ಹಬ್ಬ-ಉತ್ಸವಗಳ ಮೇಲೆ ನಿರ್ಬಂಧವೇಕೆ ?
ಬಂಗಾಳದ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿಯವರು ಮೊಹರಂ ಹಿನ್ನೆಲೆಯಲ್ಲಿ ದುರ್ಗಾದೇವಿಯ ಮೂರ್ತಿ ವಿಸರ್ಜನೆಯನ್ನು ಅಕ್ಟೋಬರ್ ೧೧ ರಂದು ಮಧ್ಯಾಹ್ನ ೪ ಗಂಟೆಯೊಳಗೆ ಅಥವಾ ಅಕ್ಟೋಬರ್ ೧೩ ರಂದು ಮಾಡಲಿ, ಎಂದು ಆದೇಶಿಸಿದ್ದಾರೆ.
೫. ಕಾಶ್ಮೀರ ಸಮಸ್ಯೆಯನ್ನು ನಿವಾರಿಸಲು ಏಕೈಕ ಉಪಾಯ !
ಭಾರತವು ತಥಾಕಥಿತ ನೈತಿಕತೆಯನ್ನು ಕಾಪಾಡಿಕೊಳ್ಳುವ ಬದಲು ಸೇನಾಬಲದಿಂದ ಸಮಸ್ಯೆಯನ್ನು ಬಗೆಹರಿಸುವ ಪರ್ಯಾಯವನ್ನು ಆರಿಸಿಕೊಂಡಿರುತ್ತಿದ್ದರೆ ಪಾಕ್ ಆಕ್ರಮಿತ ಕಾಶ್ಮೀರವು ಇಂದು ಭಾರತದ ಭಾಗವಾಗಿರುತ್ತಿತ್ತು, ಎಂದು ವಾಯುದಳ ಪ್ರಮುಖರಾದ ಅರೂಪ್ ರಾಹಾರವರು ಪ್ರತಿಪಾದಿಸಿದ್ದಾರೆ.
೬. ಕೇರಳದಲ್ಲಿನ ಕಮ್ಯುನಿಸ್ಟರು ಎಷ್ಟು ಹಿಂದುತ್ವನಿಷ್ಠರನ್ನು ಕೊಲೆ ಮಾಡಿದ್ದಾರೆ, ಎಂಬುದನ್ನು ಹೇಳಲಿ !
ರಾ.ಸ್ವ. ಸಂಘದವರು ದೇವಸ್ಥಾನಗಳನ್ನು ಶಸ್ತ್ರಾಸ್ತ್ರಗಳ ಸಂಗ್ರಹಕ್ಕಾಗಿ ಉಪಯೋಗಿಸುತ್ತಿದ್ದಾರೆ ಹಾಗೂ ಅಲ್ಲಿ ಶಸ್ತ್ರಾಸ್ತ್ರ ತರಬೇತಿಯನ್ನು ಸಹ ನೀಡಲಾಗುತ್ತದೆ, ಎಂದು ಕೇರಳದ ಕಮ್ಯೂನಿಸ್ಟ್ ಸರಕಾರದ ಮಂತ್ರಿಗಳಾದ ಕಡಕಾಂಪಲ್ಲೆ ಸುರೇಂದ್ರಮ್ ಹೇಳಿದ್ದಾರೆ.
೭. ಪೊಲೀಸರಿಗೆ ಮತಾಂಧ ಆರೋಪಿಗಳ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವ ಧೈರ್ಯವಿದೆಯೇ ?
ಕಾ. ಪಾನ್ಸರೆ ಇವರ ಹತ್ಯೆಯ ಪ್ರಕರಣದಲ್ಲಿ ವಿಶೇಷ ತನಿಖಾ ದಳದ ಕೈಯಲ್ಲಿರುವ ಸನಾತನದ ಸಾಧಕರಾದ ಡಾ. ವಿರೇಂದ್ರಸಿಂಹ ತಾವಡೆ ಇವರರಿಗೆ ಅಮಾನವೀಯವಾಗಿ ಹಿಂಸಿಸುತ್ತಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಡಾ. ತಾವಡೆಯವರು ಜಪದ ಮಾಲೆ ಹಿಡಿದುಕೊಂಡು ನಾಮಜಪ ಮಾಡುತ್ತಿದ್ದರು. ಈ ಮಾಲೆಯನ್ನು ಪೊಲೀಸರು ಕಸಿದುಕೊಂಡರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !