ಸರಕಾರಿ ಪಕ್ಷದ ಯುಕ್ತಿವಾದವನ್ನು ಹಿಂಡಿ-ಹಿಪ್ಪೆ ಮಾಡಿದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ !

ಯುಕ್ತಿವಾದದ ಸಮಯದಲ್ಲಿ ನ್ಯಾಯವಾದಿ ಶ್ರೀ. ವೀರೇಂದ್ರ ಇಚಲಕರಂಜಿಕರ್ ಇವರು ಮಂಡಿಸಿದ ವಿಷಯಗಳು

 ನ್ಯಾಯವಾದಿ ವೀರೇಂದ್ರ
ಇಚಲಕರಂಜಿಕರ್
ನ್ಯಾಯವಾದಿ ಸಮೀರ
ಪಟವರ್ಧನ್
 ೧. ಇಂದು ಪೊಲೀಸರು ಏನಾದರೂ ಸತ್ಯಸಂಗತಿಯನ್ನು ತಂದಿರಬಹುದೆಂದು ಅನಿಸಿತ್ತು; ಆದರೆ ಪೊಲೀಸರು ಪುನಃ ಅದೇ ಹಳೆಯ ಸಾಕ್ಷಿದಾರರನ್ನು ತಂದಿದ್ದಾರೆ. ದಾಭೋಲಕರ ಕೊಲೆ ಪ್ರಕರಣದಲ್ಲಿ ಸಿಬಿಐ ಸಾಡವಿಲಕರ್ ಇವರ ಸಾಕ್ಷಿಯನ್ನು ತೆಗೆದುಕೊಂಡಿದೆ. ಅದು ಜಗಜ್ಜಾಹೀರಾಗಿದೆ. ಕೊಲ್ಹಾಪುರ ಪೊಲೀಸ್ ಮತ್ತು ಸಿಬಿಐ ಇವೆರಡೂ ನಾವು ಪರಸ್ಪರ ಸಹಕಾರ ದಿಂದ ತನಿಖೆ ಮಾಡುತ್ತಿದ್ದೇವೆ, ಇದನ್ನು ಮಾನ್ಯ ಉಚ್ಚ ನ್ಯಾಯಾಲಯದ ಮುಂದೆ ಅನೇಕ ವೇಳೆ ಒಪ್ಪಿ ಕೊಂಡಿವೆ. (ಉಚ್ಚ ನ್ಯಾಯಾಲಯದ ಆದೇಶವನ್ನು ಓದಿ ಹೇಳಿದರು) ನಿಜವಾಗಿ ನೋಡಿದರೆ ಕೊಲ್ಹಾಪುರ ಪೊಲೀಸರು ಇಲ್ಲಿಂದ ಆರಂಭಿಸಬೇಕಿತ್ತು; ಆದರೆ ಅವರು ಇದನ್ನು ಅಡಗಿಸಿದ್ದಾರೆ. ಯಾವ ವ್ಯಕ್ತಿಯ ಹೇಳಿಕೆಯನ್ನು ಈ ಮೊದಲೇ ನೋಂದಣಿ ಮಾಡಲಾಗಿದೆ ಮತ್ತು ಎರಡೂ ವಿಭಾಗಗಳು ಜಂಟಿಯಾಗಿ ತನಿಖೆ ಮಾಡಿವೆಯೋ, ಅದೇ ವ್ಯಕ್ತಿಯಿಂದ ಈಗ ಹೊಸತಾಗಿ ಏನು ನೋಂದಣಿ ಮಾಡಲಾಗಿದೆ, ಎಂಬುದನ್ನು ಪೊಲೀಸರು ಇಂದು ನಿಜವಾಗಿಯೂ ಮಂಡಿಸಬೇಕಿತ್ತು. ಅವರು ಮಂಡಿಸಲಿಲ್ಲ.

೨. ಸಾಡವಿಲಕರ್ ಇವರ ಸಾಕ್ಷಿಯ ಆಧಾರದಲ್ಲಿ ಸಿಬಿಐ ತನಿಖೆ ಮಾಡಿತು. ಅವರು ಅನಿರೀಕ್ಷಿತವಾಗಿ ಪನವೇಲ್‌ನಲ್ಲಿರುವ ಡಾ. ತಾವಡೆಯವರ ಮನೆಗೆ ದಾಳಿ ಸಹ ಮಾಡಿದರು. ಡಾ. ತಾವಡೆಯವರ ಭೂಮಿಕೆ ಸಹಕರಿಸುವುದಾಗಿತ್ತು. ನಿಜವಾಗಿ ನೋಡಿ ದರೆ, ಸಿಬಿಐಯ ಸರ್ಚ್‌ವಾರಂಟ್ ತಪ್ಪಾಗಿತ್ತು; ಆದರೆ ಡಾ. ತಾವಡೆ ಹೇಳಿದರು, ಅವರಿಗೆ ಅನಿರೀಕ್ಷಿತ ದಾಳಿ ಮಾಡಲಿಕ್ಕಿದ್ದರೆ, ಮಾಡಲಿ, ನಾವು ಸಹಾಯ ಮಾಡೋಣ. ಇಂತಹ ದಾಳಿಯಲ್ಲಿ ಸಿಬಿಐಗೆ ಏನು ಸಿಕ್ಕಿತು ? ಯಾವುದರ ಆಧಾರದಲ್ಲಿ ಕೊಲೆಯಾಗಿಲ್ಲವೋ ಅಂತಹ ಕೆಲವು ಕಾಗದಗಳು, ಡೈರಿಗಳು, ಸಂಚಾರಿ ವಾಣಿಗಳಲ್ಲಿ ಸಿಬಿಐಗೆ ಗಂಭೀರವಾದ ವಿಷಯವೇನೂ ಸಿಗಲಿಲ್ಲ.

೩. ಜೂನ್ ೧ ರಂದು ಹೀಗೆ ದಾಳಿ ಮಾಡಿದ ನಂತರ ಜೂನ್ ೧ ರಿಂದ ೧೦ ರ ವರೆಗೆ ಸಿಬಿಐ ಡಾ. ತಾವಡೆಯವರನ್ನು ಪ್ರತಿದಿನ ಅವರ ಕಾರ್ಯಾಲಯಕ್ಕೆ ವಿಚಾರಣೆಗಾಗಿ ಕರೆಯಿತು. ಡಾ. ತಾವಡೆಯವರು ಓಡಿ ಹೋಗಲಿಲ್ಲ. ಅವರು ಪ್ರತಿದಿನ ತನಿಖೆ ಯನ್ನು ಎದುರಿಸಿದರು. ಪ್ರತಿದಿನ ಬೆಳಗ್ಗೆ ಸಿಬಿಐ ಕಾರ್ಯಾಲಯಕ್ಕೆ ಹೋಗುತ್ತಿದ್ದರು. ಅನಂತರ ಜೂನ್ ೧೦ ರಂದು ಅವರನ್ನು ಬಂಧಿಸಿದರು. ಸಿಬಿಐ ನ್ಯಾಯಾಲಯವು ೧೦ ದಿನಗಳ ನಂತರ ಅಂದರೆ ಜೂನ್ ೨೦ ರಂದು ಅವರನ್ನು ಸಿಬಿಐಯ ವಶದಿಂದ ಬಿಡಿಸಿಕೊಂಡಿತು. (ಸಿಬಿಐ ಕಸ್ಟಡಿಯ ಬೇಡಿಕೆಯನ್ನು ತಳ್ಳಿ ಹಾಕಿತು. ಆ ಅವಧಿಯಲ್ಲಿ ಏನೆಲ್ಲ ತನಿಖೆಯಾಗಿದೆ ?
ಸಿಬಿಐಗೆ ಅವರ ಮನೆಯಲ್ಲಿ ಏನೂ ಸಿಕ್ಕಿಲ್ಲ, ಅವರ ವಿಚಾರಣೆಯಲ್ಲಿ ಏನೂ ಸಿಕ್ಕಿಲ್ಲ, ಹಾಗಾದರೆ ಅದೇ ಹಳೇ ಸಾಕ್ಷಿದಾರನನ್ನು ಜೊತೆಗಿಟ್ಟುಕೊಂಡು ಪೊಲೀಸರು ಏನು ಮಾಡುತ್ತಿದ್ದಾರೆ ? ಅವರ ತನಿಖೆ ಯೋಗ್ಯವಿಲ್ಲ, ಬಂಧನದ ಕಾರಣವೂ ಯೋಗ್ಯವಿಲ್ಲ.
೪. ಜೂನ್ ೨೦ ರಂದು ಸಿಬಿಐ ನ್ಯಾಯಾಲಯವು ಡಾ. ತಾವಡೆಯವರನ್ನು ವಶಪಡಿಸಿಕೊಳ್ಳಲು ಕೊಲ್ಹಾಪುರ ಪೊಲೀಸರಿಗೆ ಅನುಮತಿ ನೀಡಿತ್ತು. ಆಗ ಅವರನ್ನು ಏಕೆ ವಶಪಡಿಸಿಕೊಳ್ಳಲಿಲ್ಲ ? ಆಗ ಅಪರಾಧ ಮಹತ್ವದ್ದಾಗಿರಲಿಲ್ಲವೇ ? ಆಗ ತನಿಖೆ ಆವಶ್ಯಕವಾಗಿರಲಿಲ್ಲವೇ ? ೭೫ ದಿನಗಳ ನಂತರ ಈಗ ಅಪರಾಧ ಮಹತ್ವದ್ದಾಯಿತೇ ? ಇಷ್ಟು ದಿನ ಮಲಗಿದ್ದರೇ ? ಆದ್ದರಿಂದ ಸಾಡವಿಲಕರ್ ಇವರ ಸಾಕ್ಷಿಗೆ ಏನೂ ಅರ್ಥವಿಲ್ಲ. ಈ ವ್ಯಕ್ತಿ ಸ್ವತಃ ಅಪರಾಧಿಯಾಗಿದ್ದಾನೆ ಎಂಬುದು ಅವರ ವಿರುದ್ಧ ದೇವಸ್ಥಾನದ ಬೆಳ್ಳಿಯ ರಥದ ಭ್ರಷ್ಟಾಚಾರ ಮಾಡಿರುವ ಆರೋಪದಿಂದ ತಿಳಿಯುತ್ತದೆ. ಪೊಲೀಸರು ನ್ಯಾಯಾಲಯದ ಮುಂದೆ ಅರೆಬರೆ ಮಾಹಿತಿಯನ್ನು ನೀಡಬಾರದು.
೫. ಪೊಲೀಸರ ಮೇಲೆ ಗಣೇಶೋತ್ಸವ ಭದ್ರತೆಯ ಒತ್ತಡವಿದ್ದರೆ, ಡಾ. ತಾವಡೆಯವರನ್ನು ಮೊದಲೇ ವಶಪಡಿಸಿಕೊಳ್ಳಬೇಕಿತ್ತು. ಅವರನ್ನು ತಡವಾಗಿ ವಶಪಡಿಸಿಕೊಂಡು ಈಗ ಭದ್ರತೆಯ ಕಾರಣಗಳನ್ನು ತೋರಿಸಿ ಆರೋಪಿಯನ್ನು ಕೊಳೆಯಲು ಬಿಡುವುದು, ಪೊಲೀಸರ ಈ ಕಾರ್ಯಪದ್ಧತಿ ತಪ್ಪಾಗಿದೆ. ವರಿಷ್ಠ ನ್ಯಾಯಾಲಯವು ಭದ್ರತೆಯ ಕಾರಣವನ್ನು ನೀಡಿ ಆರೋಪಿಯ ಮೂಲಭೂತ ಹಕ್ಕನ್ನು ಹತ್ತಿಕ್ಕುವುದು ತಪ್ಪಾಗುತ್ತದೆ, ಎಂಬುದನ್ನು ಮೊದಲೇ ಹೇಳಲಾಗಿದೆ. ಈ ನಿರ್ಣಯವನ್ನು ಪಾಲಿಸಬೇಕು.
ನ್ಯಾಯವಾದಿ ಸಮೀರ ಪಟವರ್ಧನ್ ಮತ್ತು ವೀರೇಂದ್ರ ಇಚಲಕರಂಜಿಕರ್ ಇವರ ಅಭ್ಯಾಸಪೂರ್ಣ ಯುಕ್ತಿವಾದ !
ನ್ಯಾಯವಾದಿ ಸಮೀರ ಪಟವರ್ಧನ್ ಮತ್ತು ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರ ನ್ಯಾಯಾಲಯ ದಲ್ಲಿನ ಯುಕ್ತಿವಾದ ಅತ್ಯಂತ ಅಭ್ಯಾಸ ಪೂರ್ಣ, ಖಂಡತುಂಡ, ಸೂತ್ರಬದ್ಧ ಹಾಗೂ ಸತ್ಯಾನ್ವೇಷಿ ಆಗಿತ್ತು. ತದ್ವಿರುದ್ಧ ಸರಕಾರಿ ನ್ಯಾಯವಾದಿ ಮತ್ತು ಪೊಲೀಸರಲ್ಲಿ ಇಂತಹ ಯಾವುದೇ ವಿಶೇಷ ವಿಷಯ ಇರಲಿಲ್ಲ. ಈ ಬಗ್ಗೆ ಪತ್ರಕರ್ತರಲ್ಲೂ ಚರ್ಚೆ ನಡೆಯುತ್ತಿತ್ತು.


No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸರಕಾರಿ ಪಕ್ಷದ ಯುಕ್ತಿವಾದವನ್ನು ಹಿಂಡಿ-ಹಿಪ್ಪೆ ಮಾಡಿದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ !