ದೈನಿಕ ‘ಸನಾತನ ಪ್ರಭಾತ’ದ ಸತ್ಯನಿಷ್ಠ ಪತ್ರಿಕೋದ್ಯಮವನ್ನು ಹತ್ತಿಕ್ಕಲು ಪೊಲೀಸರು ಕೊಡುತ್ತಿರುವ ಕಿರುಕುಳದ ಜ್ವಲಂತ ಉದಾಹರಣೆಗಳು !

ಸತ್ಯ ಘಟನೆಗಳ ವಾರ್ತೆಯನ್ನು ನೀಡುವ ‘ಸನಾತನ ಪ್ರಭಾತ’ದ
ಸುದ್ದಿಗಾರನನ್ನು ಬಂಧಿಸಿ ಕಿರುಕುಳ ಕೊಡುವ ರಝಾಕಾರಿ ಪೊಲೀಸರು !
ದೈನಿಕ ‘ ಸನಾತನ ಪ್ರಭಾತ’ದ ಸಾಂಗೋಲಾ (ಜಿ. ಸೋಲಾಪೂರ)ದ ಸುದ್ದಿಗಾರ ಶ್ರೀ. ಸಂತೋಷ ಪಾಟಣೆ ಅವರನ್ನು ಪೊಲೀಸರು ೧೪ ಆಗಸ್ಟ್ ೨೦೧೧ ರಂದು ಅರ್ಥಾತ್ ನೂಲು ಹುಣ್ಣಿಮೆ (ರಕ್ಷಾ ಬಂಧನ)ಯ ದಿನ ರಾತ್ರಿ ಬಂಧಿಸಿದರು. ‘೧೨ ಆಗಸ್ಟ್ ೨೦೧೧ ರಂದು ಸಾಂಗೋಲಾದಲ್ಲಿ ಸಂಭವಿಸಿದ ಹಿಂದೂಗಳು ಮತ್ತು ಮತಾಂಧರಲ್ಲಿನ ಗಲಭೆಯ ಸತ್ಯಘಟನೆಯ ವಾರ್ತೆಯು ಆಗಸ್ಟ್ ೧೩ ರಂದು ದೈನಿಕ ‘ಸನಾತನ ಪ್ರಭಾತ’ದಲ್ಲಿ ಮುದ್ರಣವಾಗಿತ್ತು. ‘ಈ ವಾರ್ತೆಯಿಂದ ಕೋಮುದ್ವೇಷ ನಿರ್ಮಾಣವಾಯಿತು’, ಎಂಬ ಕಾರಣವನ್ನು ಮುಂದೆ ಮಾಡಿ ಪೊಲೀಸರು ಶ್ರೀ. ಪಾಟಣೆಯವರ ವಿರುದ್ಧ ದೂರನ್ನು ದಾಖಲಿಸಿದ್ದರು. ಇದರಲ್ಲಿ ದೈನಿಕ ‘ಸನಾತನ ಪ್ರಭಾತ’ದ ಅಂದಿನ ಸಮೂಹ ಸಂಪಾದಕರಾದ ಪೂ. ಪೃಥ್ವಿರಾಜ ಹಜಾರೆ ಮತ್ತು ಅಂದಿನ ಸಲಹೆಗಾರ ಸಂಪಾದಕರಾದ ಶ್ರೀ. ಅರವಿಂದ ವಿಠ್ಠಲ ಕುಲಕರ್ಣಿಯವರನ್ನೂ ಸೇರಿಸಲಾಗಿತ್ತು. (ಒಂದು ಸತ್ಯಘಟನೆಯ ವಾರ್ತೆಯನ್ನು ಕೊಟ್ಟರೆ, ಅದರಲ್ಲಿ ತಪ್ಪೇನಿದೆ ? ದೈನಿಕ ‘ಸನಾತನ ಪ್ರಭಾತ’ವು ಯಾವತ್ತೂ ಸತ್ಯವನ್ನೇ ಮುದ್ರಿಸುತ್ತ ಬಂದಿದೆ. ಪೊಲೀಸರು ಅದರಿಂದ ಏಕೆ ಸಿಟ್ಟು ಮಾಡಿಕೊಳ್ಳುತ್ತಾರೆ ? ಪೊಲೀಸರು ಇಂತಹ ದೂರುಗಳನ್ನು ದಾಖಲಿಸಿ ಪತ್ರಿಕಾಸ್ವಾತಂತ್ರ್ಯವನ್ನು ಅದುಮಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಸಾಂಗೋಲಾ ಪೊಲೀಸರನ್ನು ಎಷ್ಟೇ ಖಂಡಿಸಿದರೂ ಕಡಿಮೆಯೇ ಆಗಿದೆ ! - ಸಂಪಾದಕರು)

ಸತ್ಯಸಂಗತಿಯನ್ನು ಬರೆಯುವ ಶ್ರೀ. ಪಾಟಣೆಯವರ ವಿರುದ್ಧ ವಿವಿಧ ಕಲಮುಗಳನ್ನು ಹಾಕಿ ಅವರನ್ನು ಬಂಧಿಸುವ ಪೊಲೀಸರು !
೨೦೧೦ ರಲ್ಲಿಯೂ ಶ್ರೀ. ಪಾಟಣೆ ಅವರಿಗೆ ಪೊಲೀಸರು ಕಿರುಕುಳ ನೀಡಿದ್ದರು. ಆಗ ಸಾಂಗೋಲಾ ದಲ್ಲಿ ಒಂದು ದೇವಸ್ಥಾನದಲ್ಲಿ ವಿಗ್ರಹವನ್ನು ಒಡೆ ದಿದ್ದರು. ಅದರ ಸುದ್ದಿಯು ದೈನಿಕ ‘ಸನಾತನ ಪ್ರಭಾತ’ದಲ್ಲಿ ಮುದ್ರಣವಾಗಿದ್ದರಿಂದ ಆಗ ಪೊಲೀಸ್ ನಿರೀಕ್ಷಕರು ಶ್ರೀ. ಪಾಟಣೆಯವರನ್ನು ಪೊಲೀಸ್ ಠಾಣೆಗೆ ಕರೆದು ೫ ಗಂಟೆಗಳ ಕಾಲ ಕಾಯುತ್ತ ಕೂಡಿಸಿಟ್ಟರು. ೧೪ ಆಗಸ್ಟ್ ೨೦೧೧ ರಂದು ಅರ್ಥಾತ್ ರಾಖಿ ಹುಣ್ಣಿಮೆಯಂದು ಇಬ್ಬರು ಪೊಲೀಸ್ ಹವಾಲ್ದಾರರು ಶ್ರೀ. ಪಾಟಣೆಯವರ ಮನೆಗೆ ಬಂದಿದ್ದರು. ಅವರು, ನಿಮಗೆ ಸಾಹೇಬರು ಬರಲು ಹೇಳಿದ್ದಾರೆ, ಆದರೆ ಏಕೆ ಎಂಬುದು ಗೊತ್ತಿಲ್ಲ, ಎಂದರು ಆಗ ನ್ಯಾಯವಾದಿಗಳು ಸಂಚಾರಿವಾಣಿಯ ಮೂಲಕ ‘‘ಇಂದು ರಾಖಿ ಹುಣ್ಣಿಮೆ ಇದೆ. ಆದುದರಿಂದ ಶ್ರೀ. ಪಾಟಣೆಯವರು ಸಾಯಂಕಾಲದ ನಂತರ ಪೊಲೀಸ್ ಠಾಣೆಗೆ ಬರುತ್ತಾರೆ ಎಂದು ಪೊಲೀಸರಿಗೆ ತಿಳಿಸಿದರು.’’ ಆದುದರಿಂದ ಹವಾಲ್ದಾರರು ದೈನಿಕ ‘ಸನಾತನ ಪ್ರಭಾತ’ದ ೧೩ ಆಗಸ್ಟ್‌ನ ಸಂಚಿಕೆಯನ್ನು ತೆಗೆದುಕೊಂಡು ಹೊರಟು ಹೋದರು. ಆಗಸ್ಟ್ ೧೪ ರಂದು ಶ್ರೀ.ಪಾಟಣೆಯವರಿಗೆ ರಾತ್ರಿ ಪೊಲೀಸರು ಠಾಣೆಗೆ ಬರಲು ಹೇಳಿದರು. ರಾತ್ರಿ ೯.೩೦ ಕ್ಕೆ ಪೊಲೀಸ್ ಠಾಣೆಗೆ ಹೋದನಂತರ ಪೊಲೀಸರು ಶ್ರೀ. ಪಾಟಣೆಯವರ ವಿರುದ್ಧ ದೂರು ದಾಖಲಿಸಲಾಗಿದ್ದು ಅವರನ್ನು ಬಂಧಿಸಲಾಗುತ್ತ್ತಿದೆ ಎಂದು ಹೇಳಿದರು. ಆಗ ಅವರ ವಿರುದ್ಧ ಪ್ರಥಮ ಮಾಹಿತಿ ವರದಿಯಲ್ಲಿ ಭಾ.ದಂ.ಸಂ. ೧೫೩(ಅ) (ಭಿನ್ನ ಮತೀಯರಲ್ಲಿ ಧರ್ಮದ ಆಧಾರದಲ್ಲಿ ಶತ್ರುತ್ವ/ ಉದ್ವಿಗ್ನತೆ ನಿರ್ಮಿಸಲು ಪ್ರಯತ್ನಿಸುವುದು), ೧೫೩ (ಬ) ರಾಷ್ಟ್ರದ ಐಕ್ಯತೆಯ ವಿರುದ್ಧ ಹೇಳಿಕೆ ನೀಡುವುದು) ಮತ್ತು ೫೦೫ (೧) (ಎರಡು ಸಮೂಹಗಳಲ್ಲಿ ಶತ್ರುತ್ವ ಹಬ್ಬಿಸುವುದು, ರಾಷ್ಟ್ರದ ವಿರುದ್ಧ ಶಾಂತಿ ಭಂಗ ಗೊಳಿಸುವ ಗಾಳಿಸುದ್ದಿಯನ್ನು ಹಬ್ಬಿಸುವುದು) ಈ ಕಲಂಗಳನ್ನು ನಮೂದಿಸಲಾಗಿದೆ.
ಅಸೂಯೆಯಿಂದಾಗಿ ಶ್ರೀ. ಪಾಟಣೆ ಅವರ ಮೇಲೆ ಕ್ರಮಕೈಗೊಳ್ಳುವ ಪೊಲೀಸರು !
ಶ್ರೀ. ಪಾಟಣೆಯವರಿಗೆ ನ್ಯಾಯಾಲಯವು ೨ ದಿನಗಳ ಪೊಲೀಸ್ ಕಸ್ಟಡಿಯ ಆದೇಶ ನೀಡಿತು. ಅನಂತರ ಆಗಸ್ಟ್ ೧೭ ರಂದು ಅವರಿಗೆ ಜಾಮೀನು ನೀಡಲಾಯಿತು; ಆದರೆ ಜಾಮೀನಿನ ಕಾಗದಪತ್ರಗಳನ್ನು ಪೂರ್ತಿಗೊಳಿಸಿದ ನಂತರ ಪೊಲೀಸರಿಗೆ ಅವರನ್ನು ಮತ್ತೊಮ್ಮೆ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಕಲಮು ೧೫೧ ಪ್ರಕಾರ ಪ್ರತಿಬಂಧಾತ್ಮಕವಾಗಿ ಬಂಧಿಸಲಾಯಿತು. ಇಷ್ಟೇ ಅಲ್ಲದೇ ಸಾಯಂಕಾಲ ಶ್ರೀ. ಪಾಟಣೆಯವರ ಮೇಲೆ ‘ಚಾಪ್ಟರ್ ಕೇಸ್’ ದಾಖಲಿಸಲಾಯಿತು. ನಂತರ ಅವರನ್ನು ಬಿಟ್ಟುಬಿಡಲಾಯಿತು.

ಮಾಜಿ ಸುದ್ದಿಗಾರ ಶ್ರೀ. ಆನಂದ ಜಾಖೋಟಿಯಾರವರು ಅನುಭವಿಸಿದ ಪೊಲೀಸರ ದರ್ಪಶಾಹಿ !
೨೭.೨.೨೦೦೮ ರಂದು ಸಾಂಗ್ಲಿಯ ಶಿವತೀರ್ಥದಲ್ಲಿ ಸಭೆ ತೆಗೆದುಕೊಳ್ಳು ವಾಗ ಶ್ರೀ ಶಿವಪ್ರತಿಷ್ಠಾನದ ಸಂಸ್ಥಾಪಕರಾದ ಪೂ. ಸಂಭಾಜಿರಾವ್ ಭಿಡೆ ಗುರೂಜಿಯವರು ಮತ್ತು ಅವರ ಕಾರ್ಯಕರ್ತರ ಮೇಲೆ ಪೊಲೀಸರು ಅಮಾನವೀಯವಾಗಿ ಲಾಠಿ ಪ್ರಹಾರ ಮಾಡಿದರು. ಅನಂತರ ಹಿಂದುತ್ವನಿಷ್ಠರು ಮತ್ತು ಪೊಲೀಸರಲ್ಲಾದ ಸಂಘರ್ಷದಲ್ಲಿ ಪೊಲೀಸರು ಅನೇಕಬಾರಿ ಲಾಠಿ ಪ್ರಹಾರ ಮಾಡಿದರು. ಪೊಲೀಸರ ಈ ದರ್ಪಶಾಹಿಯನ್ನು ಈ ಸಮಯದಲ್ಲಿ ವಾರ್ತೆ ಮಾಡಲು ತೆರಳಿದ್ದ ದೈನಿಕ ‘ಸನಾತನ ಪ್ರಭಾತ’ದ ಸುದ್ದಿಗಾರ ಶ್ರೀ. ಆನಂದ ಜಾಖೋಟಿಯಾ ಇವರೂ ಅನುಭವಿಸಿದರು. ಪೊಲೀಸರ ಕೆಲವು ಲಾಠಿ ಏಟು ಅವರ ಕೈ, ಬೆನ್ನಿಗೆ ಮತ್ತು ಕಾಲುಗಳಿಗೆ ತಗಲಿದವು.


ಇದು ವರೆಗೆ ನಮ್ಮ ಅನೇಕ ಸುದ್ದಿಗಾರ ಸಾಧಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಒಂದು ಸತ್ಯಘಟನೆಯ ಲೇಖನವನ್ನು ಪ್ರಕಟಿಸಿದ ಪ್ರಕರಣದಲ್ಲಿ ಸನಾತನ ಪ್ರಭಾತನ ಸಂಪಾದಕರು ಇದುವರೆಗೆ ೩ ಬಾರಿ ಬಂಧನಕ್ಕೊಳಗಾಗಿದ್ದಾರೆ. ಸನಾತನ ಪ್ರಭಾತದ ಮುದ್ರಣಾಲಯದಲ್ಲಿಯೂ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸನಾತನದ ರಾಷ್ಟ್ರನಿಷ್ಠೆಯನ್ನು ಹತ್ತಿಕ್ಕುವ ಸಲುವಾಗಿಯೇ ಇವೆಲ್ಲ ಪ್ರಯತ್ನಗಳು ಆಗುತ್ತಿವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೈನಿಕ ‘ಸನಾತನ ಪ್ರಭಾತ’ದ ಸತ್ಯನಿಷ್ಠ ಪತ್ರಿಕೋದ್ಯಮವನ್ನು ಹತ್ತಿಕ್ಕಲು ಪೊಲೀಸರು ಕೊಡುತ್ತಿರುವ ಕಿರುಕುಳದ ಜ್ವಲಂತ ಉದಾಹರಣೆಗಳು !