೪೫ ದಿನಗಳಲ್ಲಿ ೩,೫೦೦ ಕೋಟಿ ರೂಪಾಯಿ ನಷ್ಟ !

ಹಿಂಸಾಚಾರದಿಂದಾದ ರಾಜ್ಯದ ಹಾನಿಯನ್ನು ದೇಶದ್ರೋಹಿ
ಸಂಘಟನೆಗಳು ಮತ್ತು ಆಂದೋಲನಕಾರರಿಂದ ವಸೂಲು ಮಾಡಿರಿ ! 
ಕಾಶ್ಮೀರದಲ್ಲಿ ಹಿಂಸಾಚಾರ

ಕಾಶ್ಮೀರದಲ್ಲಾದ ಹಿಂಸಾಚಾರದಲ್ಲಿ
ಕಲ್ಲುತೂರಾಟ ಮಾಡುತ್ತಿರುವ ಉಗ್ರರು

ಜಮ್ಮು-ಕಾಶ್ಮೀರದಲ್ಲಿ ಕಳೆದ ೪೫ ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಿಂದ ಜಮ್ಮು-ಕಾಶ್ಮೀರದ ವ್ಯಾಪಾರಿಗಳಿಗೆ ೩,೫೦೦ ಕೋಟಿ ರೂಪಾಯಿಗಳ ನಷ್ಟ ಸಂಭವಿಸಿದೆ. ಇದರಲ್ಲಿ ಜಮ್ಮುವಿನ ವ್ಯಾಪಾರಿಗಳು ಕಾಶ್ಮೀರದ ವ್ಯಾಪಾರಿಗಳಿಗೆ ಮುಂಗಡ ನೀಡಿದ ೧ ಸಾವಿರ ಕೋಟಿ ರೂಪಾಯಿಗಳ ಸಮಾವೇಶವಿದೆ. ‘ಚೇಂಬರ್ಸ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ’ಯ ಅಧ್ಯಕ್ಷ ರಾಕೇಶ ಗುಪ್ತಾ ಇವರ ಹೇಳಿಕೆಗನುಸಾರ ಹಣ್ಣುಗಳು ಮತ್ತು ಡ್ರೈಫ್ರುಟ್ಸ್ ಇತ್ಯಾದಿಗಳ ಬೆಳೆ ಸಿದ್ಧವಾದ ತಕ್ಷಣ ಅವುಗಳನ್ನು ಪೂರೈಸಲು ಕಾಶ್ಮೀರದ ವ್ಯಾಪಾರಿಗಳಿಗೆ ಜಮ್ಮುವಿನ ವ್ಯಾಪಾರಿಗಳಿಂದ ಮುಂಗಡ ಹಣ ನೀಡಲಾಗಿತ್ತು. ಕಾಶ್ಮೀರದ ಪರಿಸ್ಥಿತಿಯಿಂದಾಗಿ ವಸ್ತುಗಳ ಕೊಡುಕೊಳ್ಳುವಿಕೆ ನಿಂತು ಹೋಗಿದೆ. ಕಾಶ್ಮೀರದ ಪರಿಸ್ಥಿತಿಯನ್ನು ಶಾಂತಿಯ ಮಾರ್ಗದಲ್ಲಿ ಪರಿಹರಿಸಬೇಕೆಂದು ಗುಪ್ತಾ ಸೂಚನೆ ನೀಡಿದ್ದಾರೆ. 
No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
೪೫ ದಿನಗಳಲ್ಲಿ ೩,೫೦೦ ಕೋಟಿ ರೂಪಾಯಿ ನಷ್ಟ !