ಭಾರತದ್ವೇಷಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್ !

ಶ್ರೀ. ಶಿರೀಷ ದೇಶಮುಖ್
೧. ದೇಶದ್ರೋಹದ ಆರೋಪವಿರುವ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಘಟನೆ ! 
ಕಳೆದ ಕೆಲವು ದಿನಗಳಿಂದ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಹೆಸರಿನ ಅಂತರರಾಷ್ಟ್ರೀಯ (ತಥಾಕಥಿತ) ಸೇವಾಭಾವಿ ಸಂಸ್ಥೆ (ಎನ್.ಜಿ.ಓ.) ಚರ್ಚೆಯಲ್ಲಿದೆ. ಈ ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಲಾದ ಒಂದು ವಿಚಾರ ಸಂಕೀರ್ಣದಲ್ಲಿ ಕಾಶ್ಮೀರದ ಜಿಹಾದಿಗಳ ಕುಟುಂಬದವರನ್ನು ಆಮಂತ್ರಿಸಿ ಅವರ ಮೇಲಾದ ತಥಾಕಥಿತ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ಭಾರತದ ವಿರುದ್ಧ ವಿಷ ಕಾರಿತು. ಈ ವಿಚಾರ ಸಂಕೀರ್ಣದಲ್ಲಿ ದೇಶದ್ರೋಹಿ ಘೋಷಣೆ ಕೂಗಿದರು ಹಾಗೂ ಅದರ ವಿರುದ್ಧ ಅಭಾವಿಪನ ಕಾರ್ಯಕರ್ತರು ಆಂದೋಲನ ಸಹ ಮಾಡಿದ್ದರು. ಕೊನೆಗೆ ಪೊಲೀಸರು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ವಿರುದ್ಧ ದೇಶದ್ರೋಹದ ಆರೋಪದಲ್ಲಿ ಅಪರಾಧವನ್ನು ದಾಖಲಿಸಿ ತನಿಖೆ ನಡೆಸಲು ಪ್ರಾರಂಭಿಸಿದರು.
ಪರಿಣಾಮವಾಗಿ ಈ ಸಂಸ್ಥೆಯು ತನ್ನ ಬೆಂಗಳೂರಿನ ಕಛೇರಿಗೆ ಬೀಗ ಜಡಿಯಿತು. ಈ ಸಂಸ್ಥೆಯ ಬಗ್ಗೆ ಮಾಹಿತಿ ಹಾಗೂ ಭಾರತದಲ್ಲಿ ಅದರ ಅಗತ್ಯವೇನಿದೆ, ಎಂಬುದನ್ನು ಈ ಲೇಖನದ ಮೂಲಕ ವಿಶ್ಲೇಷಿಸಲಾಗಿದೆ
೨. ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಇತಿಹಾಸ !
 ೧೯೬೦ ರಲ್ಲಿ ಲಂಡನ್ನಿನ ನ್ಯಾಯವಾದಿ ಪೀಟರ್ ಬೆನ್ಸನ್‌ರವರು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆಯನ್ನು ಸ್ಥಾಪಿಸಿದರು. ಪೋರ್ಚುಗಲ್‌ನ ಸರ್ವಾಧಿಕಾರಿಯಾದ ಸಾಲಾಝರ್‌ನು ತನ್ನ ರಾಜಕೀಯ ವಿರೋಧಕರನ್ನು ಹಿಂಸಿಸುತ್ತಿದ್ದನು, ಆಗ ಸಂಸ್ಥೆಯು ಮೊದಲ ಬಾರಿ ಅವನ ವಿರುದ್ಧ ಧ್ವನಿಯೆತ್ತಿತು. ಅಮ್ನೆಸ್ಟಿ ಎಂಬ ಶಬ್ದವು ಮೂಲ ಕ್ರೈಸ್ತ ಧರ್ಮದಿಂದ ಬಂದಿದ್ದು ಅದರ ಅರ್ಥ (ರಾಜಕೀಯ ಕಾರ್ಯಕರ್ತರ) ಸಾರ್ವತ್ರಿಕ ಕ್ಷಮೆಯಾಗಿತ್ತು. ಈ ಸಂಸ್ಥೆಯು ಮಾನವಾಧಿಕಾರಗಳ ಗಂಭೀರ ಉಲ್ಲಂಘನೆಯ ಘಟನೆಯ ಬಗ್ಗೆ ಸಂಶೋಧನೆ ನಡೆಸಿ ಅದನ್ನು ನಿಲ್ಲಿಸುವ ಸಲುವಾಗಿ ಹಾಗೂ ಪೀಡಿತರಿಗೆ ನ್ಯಾಯ ಒದಗಿಸಲು ಕೃತಿ ಮಾಡುವುದೇ ಅದರ ಉದ್ದೇಶವಾಗಿತ್ತು. ಭಾರತದಲ್ಲಿ ಈ ಸಂಸ್ಥೆಯ ಮುಖ್ಯಾಲಯವು ಬೆಂಗಳೂರಿನಲ್ಲಿದ್ದು ಅದರ ಶಾಖೆಗಳು ಪ್ರಮುಖ ನಗರಗಳಲ್ಲಿವೆ. ಈ ಸಂಸ್ಥೆಗೆ ವಿದೇಶದ ವಿವಾದಿತ ಮೂಲಗಳಿಂದ ಹಣಕಾಸು ಪೂರೈಕೆಯಾಗುತ್ತದೆ. ಈ ಬಗ್ಗೆ ಭಾರತ ಸರಕಾರವು ತನಿಖೆ ನಡೆಸುತ್ತಿದೆ.
೩. ಭಾರತದ ಸಂವಿಧಾನವು ಅತ್ಯಧಿಕ ಉದಾರ ಹಾಗೂ ಅತಿಸಹಿಷ್ಣು ಆಗಿರುವುದು
ಜಗತ್ತಿನಲ್ಲೇ ಅತಿದೊಡ್ಡ ಪ್ರಜಾತಂತ್ರವಾಗಿರುವ ಭಾರತದ ಸಂವಿಧಾನವು ಉದಾರವಾದಿ, ಸಹಿಷ್ಣು ಹಾಗೂ ಸರ್ವವ್ಯಾಪಕವಾಗಿದೆ. ಈ ಸಂವಿಧಾನದ ರಚನೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಉದಾರ ಹಾಗೂ ಸಹಿಷ್ಣುತೆ ಇದೆ, ಎಂಬುದು ಹಲವರ ಅಭಿಪ್ರಾಯ. ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಕೆಲವು ಅಧಿಕಾರಗಳನ್ನು (ಹಕ್ಕು) ನೀಡಲಾಗಿದೆ. ಅದರಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ, ವಿಚಾರ, ಅಭಿಪ್ರಾಯ, ಧರ್ಮ, ಶ್ರದ್ಧೆ (ಹಸು ಹಾಗೂ ಮೂರ್ತಿ) ಪೂಜೆ ಇತ್ಯಾದಿ ಸ್ವಾತಂತ್ರ್ಯ; ಮಟ್ಟ ಹಾಗೂ ಅವಕಾಶದಲ್ಲಿ ಸಮಾನತೆ ಹಾಗೂ ಬಂಧುಭಾವವು ಒಳಗೊಂಡಿದೆ. ಶ್ರೀಮತಿ ಇಂದಿರಾ ಗಾಂಧಿಯವರು ಅದರಲ್ಲಿ ಸಮಾಜವಾದ ಹಾಗೂ ಜಾತ್ಯತೀತ ಎಂಬ ಎರಡು ವಿಷಯ ಗಳನ್ನು ಸೇರಿಸಿದರು. (ಅಂದರೆ ಈ ೨ ಶಬ್ದಗಳ ಸರಿಯಾದ ಅರ್ಥವನ್ನು ಭಾರತದಲ್ಲಿನ ಬುದ್ಧಿಜೀವಿಗಳು ಹಾಗೂ ಪುರೋಗಾಮಿಗಳು ಬೇರೆ ಬೇರೆಯಾಗಿ ಹಾಗೂ ಅವರಿಗೆ ಬೇಕಾದಂತೆ ಬಳಸುತ್ತಾರೆ, ಎಂಬುದು ಬೇರೆ ವಿಷಯವಾಗಿದೆ !)
೪. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಭಾರತಕ್ಕೆ ಅಗತ್ಯವಿಲ್ಲ !
ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆಯ ಸಂವಿಧಾನದಲ್ಲಿ ಉಲ್ಲೇಖಿಸಿರುವ ಉದ್ದೇಶ ಹಾಗೂ ಭಾರತದ ಸಂವಿಧಾನದಲ್ಲಿ ನೀಡಿರುವ ಅಧಿಕಾರವನ್ನು ಹೋಲಿಸಿದರೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆಯ ಉದ್ದೇಶ ತುಂಬ ನಗಣ್ಯವೆನಿಸುತ್ತದೆ. ಅದರೊಂದಿಗೆ ಭಾರತದ ಸಂವಿಧಾನದ ಉದ್ದೇಶವು ಉಲ್ಲಂಘನೆಯಾಗುವುದು ಬೇಡವೆಂದು ಈ ದೇಶದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ಸಮಂಜಸಕ್ಕಿಂತ ಎಚ್ಚರಿಕೆಯಿಂದಿರುವ ಪ್ರಸಾರ ಮಾಧ್ಯಮಗಳಿವೆ. ಹೀಗಿರುವಾಗ ಆಮ್ನೆಸ್ಟಿ ಇಂಟರ್ ನ್ಯಾಶನಲ್ ಸಂಸ್ಥೆಯು ಭಾರತಕ್ಕೆ ಅಗತ್ಯವಿಲ್ಲ, ಎಂಬುದು ಸ್ಪಷ್ಟವಾಗುತ್ತದೆ.
೫. ಸರ್ವಾಧಿಕಾರ, ಸೇನಾಸರ್ವಾಧಿಕಾರ ಅಥವಾ ಸಾಮ್ಯವಾದಕ್ಕೆ
ಮಾನ್ಯತೆ ನೀಡುವ ದೇಶಗಳಲ್ಲಿಅಮ್ನೆಸ್ಟಿ ಇಂಟರ್‌ನಾಶನಲ್ ಅಗತ್ಯವಿದೆ !
ಯಾವ ದೇಶಗಳಲ್ಲಿ ಸರ್ವಾಧಿಕಾರ, ಸೇನಾಸರ್ವಾಧಿಕಾರ, ಸಾಮ್ಯವಾದಿಯಂತಹ ಏಕಾಧಿಕಾರ ಪಕ್ಷಗಳ ಅಧಿಕಾರವಿದೆಯೋ ಅಥವಾ ಪ್ರಜಾತಂತ್ರವಿದ್ದರೂ ಅದನ್ನು ಬಹಿರಂಗವಾಗಿ ಅದುಮಿ ಹಾಕಲಾಗುತ್ತದೋ, ಅಂತಹ ದೇಶಗಳಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಕಾರ್ಯ ಇರಬಹುದು. ಅಲ್ಲಿನ ರಾಜ್ಯಾಡಳಿತವನ್ನು ಶಾಂತಿಯುತವಾಗಿ ವಿರೋಧಿಸುವ ರಾಜಕೀಯ ಕಾರ್ಯಕರ್ತರನ್ನು ಕಾರಾಗೃಹಕ್ಕೆ ತಳ್ಳಿ ಹಿಂಸಿಸಲಾಗುತ್ತದೆ. ಅಂತಹವರಿಗೆ ನ್ಯಾಯ ದೊರಕಿಸಿಕೊಟ್ಟು ಅವರಿಗೆ ಸಾರ್ವತ್ರಿಕ ಕ್ಷಮೆ ಸಿಗಲಿ, ಎಂಬುದಕ್ಕಾಗಿ ಈ ಸಂಸ್ಥೆ ಕಾರ್ಯನಿರತವಾಗಿದೆ. ಭಾರತದಲ್ಲಿ ಯಾರಿಗಾದರೂ ಕಾನೂನುಬದ್ಧ ಮಾರ್ಗ ಅವಲಂಬಿಸಿ ವಿರೋಧ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸಂಪೂರ್ಣ ಅಧಿಕಾರವಿದೆ. ಜೊತೆಗೆ ಯಾರಾದರೂ ಒಬ್ಬ ರಾಜಕೀಯ ಕಾರ್ಯಕರ್ತನನ್ನು ಕಾರಾಗೃಹಕ್ಕೆ ಕಳುಹಿಸುವ ಮುನ್ನ ಅವರ ಮೇಲೆ ಖಟ್ಲೆ ದಾಖಲಿಸಲಾಗುತ್ತದೆ ಹಾಗೂ ನಿಷ್ಪಕ್ಷ ನ್ಯಾಯವ್ಯವಸ್ಥೆಯು ಅವನನ್ನು ಆರೋಪಿಯೆಂದು ತೀರ್ಮಾನಿಸಿದ ಬಳಿಕ ಅವನನ್ನು ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಈ ರೀತಿ ಸಮಾನ ನ್ಯಾಯ ಸಿಕ್ಕಿದ ನಂತರವೂ ಆ ಆರೋಪಿಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗುವ ಸ್ವಾತಂತ್ರ್ಯವಿರುತ್ತದೆ. ಸರ್ವಾಧಿಕಾರ, ಸೇನಾಧಿಕಾರ ಅಥವಾ ಸಾಮ್ಯವಾದಿ ಸರಕಾರವಿರುವ ದೇಶಗಳಲ್ಲಿ ಈ ಅಧಿಕಾರವಿರುವುದಿಲ್ಲ. ಅಲ್ಲಿ ಸರ್ವಾಧಿಕಾರಿ ಹೇಳಿದ್ದೇ ಕಾನೂನು ಎಂಬ ಪರಿಸ್ಥಿತಿ ಇರುತ್ತದೆ. ಆದ್ದರಿಂದ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಎಂಬ ಸಂಸ್ಥೆಯು ತನ್ನ ಕಾರ್ಯಕ್ಕಾಗಿ ಭಾರತವನ್ನು ಆಯ್ಕೆ ಮಾಡಿರುವುದು ಮೇಲುಮೇಲು ಆಶ್ಚರ್ಯವನ್ನುಂಟು ಮಾಡಿದರೂ ಅದರ ಹಿಂದಿನ ನಿಜವಾದ ಮರ್ಮ ತಿಳಿಯಬೇಕು.
೬. ವಿದೇಶಿ ಗುಪ್ತಚರರಿಂದ ತುಂಬಿರುವುದು
ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಎಂಬ ಸಂಸ್ಥೆಯ ಸ್ಥಾಪನೆಯಾದ ಬಳಿಕ ಹಲವಾರು ಹಿತೈಷಿಗಳು ಹಾಗೂ ವಿದೇಶದಲ್ಲಿನ ಗುಪ್ತಚರ ಸಂಸ್ಥೆಗಳು ಸಂಸ್ಥೆಯ ಹಿಂದಿನ ಬಾಗಿಲಿನಿಂದ ಪ್ರವೇಶಿಸಿದರು. ಇವರ ವರ್ಚಸ್ಸು ಎಷ್ಟು ಬೆಳೆಯಿತೆಂದರೆ, ಸಂಸ್ಥೆಯ ಸಂಸ್ಥಾಪಕರಾದ ನ್ಯಾಯವಾದಿ ಪೀಟರ್ ಬೆನ್ಸೆನ್ ಬೇಸತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.
೭. ಭಾರತದ ವಿಕಾಸಕ್ಕೆ ಅಡ್ಡಿ ಪಡಿಸುವುದು
ಮೋದಿ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಗ್ರೀನ್ ಪೀಸ್ ನಂತಹ ಸೇವಾಭಾವಿ ಸಂಸ್ಥೆಯು ದೇಶದ ವಿಕಾಸ ಕಾರ್ಯಕ್ಕೆ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪವಾಯಿತು. ಈ ಸೇವಾ ಭಾವೀ ಸಂಸ್ಥೆಗೆ ಕಾನೂನುಬಾಹಿರವಾಗಿ ವಿದೇಶದಲ್ಲಿರುವ ಹಿತೈಷಿ ಸಂಸ್ಥೆಗಳಿಂದ ನಿಧಿ ಸಿಗುತ್ತಿತ್ತು. ಈಗ ಅದರ ತನಿಖೆ ನಡೆಯುತ್ತಿದ್ದು ಇಂತಹ ಸಂಸ್ಥೆಗಳಿಗೆ ಸಿಗುವ ವಿದೇಶಿ ನಿಧಿಯ ಮೇಲೆ ನಿರ್ಬಂಧ ಹೇರಲಾಗಿದೆ. ಈ ರೀತಿಯ ಕಾರ್ಯಾಚರಣೆಯನ್ನು ಅಮ್ನೆಸ್ಟಿ ಇಂಟರ್‌ನಾಶನಲ್ ಎಂಬ ಸಂಸ್ಥೆಯ ಮೇಲೆಯೂ ನಡೆಯಲಿ ಎಂದು ದೇಶಪ್ರೇಮಿಗಳು ಆಗ್ರಹಿಸಲಿ. ಏಕೆಂದರೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಭಾರತವು ಮಾನವಾಧಿಕಾರವನ್ನು ಉಲ್ಲಂಘಿಸುವ ದೇಶವಾಗಿದೆ, ಎಂಬ ಚಿತ್ರಣವನ್ನು ಜಗತ್ತಿನ ಮುಂದೆ ನಿರ್ಮಿಸಲು ಪ್ರಯತ್ನಿಸುತ್ತಿದೆ. ಇದರ ಪರಿಣಾಮವು ಭಾರತದಲ್ಲಿನ ವಿದೇಶಿ ಬಂಡವಾಳ ಹೂಡಿಕೆಯ ಮೇಲಾಗಬಹುದು. ಅಂದರೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಎಂಬ ಸಂಸ್ಥೆಯ ಕಾರ್ಯವು ಭಾರತದ ವಿಕಾಸ ಕಾರ್ಯಕ್ಕೆ ಅಡ್ಡ ಬರುತ್ತದೆ. ಆದ್ದರಿಂದ ಸರಕಾರವು ಈ ಸಂಸ್ಥೆಯ ಮೇಲೆ ನಿಗಾ ಇಡುವುದು ಅಗತ್ಯವಾಗಿದೆ.
೮. ಜಿಹಾದಿ ಉಗ್ರರ ಹಿತಕ್ಕೆ ಸಂಬಂಧಪಟ್ಟಿರುವುದು
ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆಯು ಹಲವಾರು ಜಿಹಾದಿ ಉಗ್ರರೊಂದಿಗೆ ಹಾಗೂ ಅವರ ಸಂಘಟನೆಗಳೊಂದಿಗೆ ಆತ್ಮೀಯ ಸಂಬಂಧವನ್ನಿಟ್ಟುಕೊಂಡಿದೆ. ಅವರ ಪೈಕಿ ಅಮೇರಿಕಾದ ಕಾರಾಗೃಹದಲ್ಲಿರುವ ಜಿಹಾದಿ ಮೊಝಾಮ್ ಬೇಗ್ ಕೂಡ ಒಬ್ಬನು ! ಭಾರತೀಯ ವಂಶದ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಓರ್ವ ವರಿಷ್ಠ ಅಧಿಕಾರಿ ಶ್ರೀಮತಿ ಗೀತಾ ಸಹಗಲ್ (ಇವರು ಖ್ಯಾತ ಸಾಹಿತಿ ನಯನತಾರಾ ಸಹಗಲ್‌ರವರ ಪುತ್ರಿ ಹಾಗೂ ಪಂಡಿತ್ ಜವಾಹರಲಾಲ್ ನೆಹರೂರವರ ಮೊಮ್ಮೊಗಳಾಗಿದ್ದಾರೆ)ರವರು ಈ ಸಂಸ್ಥೆಗೆ ಉಗ್ರವಾದಿಗಳೊಡನೆ ಇರುವ ಸಂಬಂಧವನ್ನು ವಿರೋಧಿಸಿ ರಾಜೀನಾಮೆ ಸಲ್ಲಿಸಿದ್ದಾರೆ. ಗೀತಾ ಸಹಗಲ್ ರವರು ಆಂಗ್ಲ ವಾರ್ತಾಪತ್ರಿಕೆಗೆ ನೀಡಿದ ಸಂದರ್ಶನದಂತೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಮೇಲೆ ನಡೆಯುವ ಕಾರ್ಯಾಚರಣೆಗೆ ಭಾರತವೇ ಹೊಣೆ ಎಂದು ನಿರ್ಧರಿಸುತ್ತದೆ. ಆದರೆ ಪಾಕ್‌ನಿಂದ ಆಗುವ ಜಿಹಾದಿ ಉಗ್ರರ ನುಸುಳಿಕೆಯ ಬಗ್ಗೆ ಚಕಾರ ಎತ್ತುವುದಿಲ್ಲ. ಇದೇ ಅಸೂಯೆಯನ್ನು ಇಸ್ರೇಲ್ ದೇಶದ ಬಗ್ಗೆಯೂ ತೋರಿಸಲಾಗುತ್ತದೆ. ಇವೆಲ್ಲ ಹಿನ್ನೆಲೆಯನ್ನು ನೋಡಿದರೆ ಭಾರತ ಸರಕಾರವು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ ಅನ್ನು ಭಾರತದಿಂದ ಹೊರದೂಡಲಿ ಹಾಗೂ ಸಂಸ್ಥೆಯು ವಿದೇಶದಲ್ಲಿ ಭಾರತದ ಬಗ್ಗೆ ಮಾಡುವ ತೇಜೋವಧೆಯನ್ನು ಮಟ್ಟ ಹಾಕಲಿ ಎಂದು ಹೇಳಿದರು. - ಶ್ರೀ. ಶಿರೀಷ ದೇಶಮುಖ್, ಸನಾತನ ಆಶ್ರಮ, ರಾಮನಾಥಿ, ಗೋವ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದ್ವೇಷಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್ !