ಯಾದವೀ ಕಲಹದ ಮುನ್ಸೂಚನೆ ! - ಶ್ರೀ. ಭಾವೂ ತೋರಸೇಕರ್ ಶ್ರೀ. ಭಾವೂ ತೋರಸೇಕರ

ಶ್ರೀ. ಭಾವೂ ತೋರಸೇಕರ
೧. ಲಭಿಸಿದ ಸ್ವಾತಂತ್ರ್ಯದ ಆಧಾರದಲ್ಲಿ ಉಗ್ರಗಾಮಿಗಳಿಂದ ಫ್ರಾನ್ಸ್‌ನಲ್ಲಿ ಜಿಹಾದ್ !
ಒಂದು ಜಾತ್ಯತೀತ ದೇಶವಾಗಿದ್ದು ಅಲ್ಲಿನ ಯಾವುದೇ ನಾಗರಿಕರನ್ನು ಧರ್ಮಕ್ಕನುಸಾರವಾಗಿ ನೋಂದಣಿ ಮಾಡುವುದಿಲ್ಲ. ಆದುದರಿಂದ ಧರ್ಮಪಾಲನೆಯ ಸ್ವಾತಂತ್ರ್ಯವಿದ್ದರೂ ಧರ್ಮದ ಆಡಂಬರವನ್ನು ಮಾಡಲು ಅವಕಾಶವಿಲ್ಲ. ಆದುದರಿಂದ ಯಾರಿಗೂ ಧರ್ಮದ ಮುಖವಾಡವನ್ನು ತೊಟ್ಟು ಉಗ್ರವಾದವನ್ನು ಹಬ್ಬಿಸುವ ಸ್ವಾತಂತ್ರ್ಯವನ್ನು ಪಡೆಯಲೂ ಸಾಧ್ಯವಿಲ್ಲ. ವಿಚಿತ್ರವೆಂದರೆ ಆದರೂ ಅಲ್ಲಿ ಜಿಹಾದ್ ನಿಂತಿಲ್ಲ. ಲಭಿಸಿರುವ ಸ್ವಾತಂತ್ರ್ಯ ಮತ್ತು ಮುಕ್ತ ವಾತಾವರಣದ ಲಾಭವನ್ನು ಪಡೆಯುತ್ತಾ ಗೊಂದಲ ನಿರ್ಮಾಣ ಮಾಡುವುದೇ ಜಿಹಾದ್‌ನ ರಣನೀತಿಯಾಗಿರುತ್ತದೆ.
ಆದುದರಿಂದ ಇದುವರೆಗಿನ ಫ್ರೆಂಚ್ ಬಡಾವಣೆಯಲ್ಲಿಂದ ಬಂದಿರುವ ಮುಸಲ್ಮಾನರಿಗೆ ಫ್ರಾನ್ಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಆಶ್ರಯ ಮತ್ತು ನಾಗರಿಕತ್ವವನ್ನೂ ನೀಡಲಾಯಿತು. ಹೀಗೆಂದು ಆ ನಿರಾಶ್ರಿತರಿಗೆ ಅವರ ಧರ್ಮವನ್ನು ತ್ಯಜಿಸುವಂತೆ ಆಗ್ರಹಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಫ್ರಾನ್ಸ್‌ಗೆ ಪುನಃ ಪುನಃ ಜಿಹಾದಿ ಉಗ್ರರ ತೊಂದರೆಯನ್ನು ಅನುಭವಿಸುತ್ತಿದೆ.
೨. ಜಿಹಾದನ್ನು ಮುಗಿಸುವುದಕ್ಕಾಗಿ ಫ್ರಾನ್ಸ್ ಸರಕಾರದಿಂದ ೨೦೦ ಮಸೀದಿಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ !
ದೇಶಗಳಿಗಿಂತ ಫ್ರಾನ್ಸ್‌ನಲ್ಲಿ ಒಂದು ವ್ಯವಸ್ಥೆ ಚೆನ್ನಾಗಿದೆ. ಧರ್ಮಪಾಲನೆಗೆ ಸ್ವಾತಂತ್ರ್ಯವಿದ್ದರೂ, ಆ ಧರ್ಮವನ್ನು ರಾಜಕೀಯ ಉದ್ದೇಶಕ್ಕಾಗಿ ಬಹಿರಂಗವಾಗಿ ಉಪಯೋಗಿಸಲು ಅಲ್ಲಿ ಅವಕಾಶವಿರುವುದಿಲ್ಲ. ಸ್ವಾಭಾವಿಕವಾಗಿ ಮುಸಲ್ಮಾನರಿಗೂ ಫ್ರಾನ್ಸ್‌ನಲ್ಲಿ  ಯಾವುದೇ ಲಾಭ ಪಡೆಯುವ ಸಾಧ್ಯತೆಗಳಿಲ್ಲ. ಇದರಿಂದ ಅಲ್ಲಿ ಕಠೋರ ಕಾನೂನುಗಳನ್ನು ಉಪಯೋಗಿಸುವಾಗ ಅದರ ಲಾಭವಾಗುತ್ತದೆ. ಈಗಲೂ ಹೀಗೆಯೇ ನಡೆಯಿತು. ಕಳೆದ ತಿಂಗಳು ಅಲ್ಲಿ ದೊಡ್ಡ ರಕ್ತಪಾತಗಳಾಗಿ ೧೨೫ ಜನರು  ಬಲಿಯಾದ ನಂತರ ಕಠೋರ ಕಾರ್ಯಾಚರಣೆಗಳ ಆರಂಭವಾಯಿತು. ಅದರಲ್ಲಿ ಅಲ್ಲಿಯ ಮಸೀದಿ ಮತ್ತು ಇಸ್ಲಾಂ ಧರ್ಮಸ್ಥಾನಗಳ ಮೇಲೆ  ಒಂದರ ಹಿಂದೆ ಒಂದು ದಾಳಿ ನಡೆಸಲಾಯಿತು. ಆ ವಾರ್ತೆಗಳು ನಮ್ಮ ಕಡೆಗೆ ಎಲ್ಲಿಯೂ ಕಾಣಿಸಲಿಲ್ಲ; ಆದರೆ ಇಸ್ಲಾಂನ  ಅಥವಾ  ಧರ್ಮದ  ಸಹಾಯ ಪಡೆದು ಯಾರೂ ಆ ಆಕ್ರಮಣಗಳನ್ನು ತಡೆಯಲು ಮುಂದೆ ಬರಲಿಲ್ಲ . ೮ ತಿಂಗಳಲ್ಲಿ ಸುಮಾರು ೨೦೦ ಮಸೀದಿಗಳಿಗೆ ಮುತ್ತಿಗೆ ಹಾಕಲಾಯಿತು ಹಾಗೂ ನೂರಾರು ಮುಲ್ಲಾ-ಮೌಲ್ವಿಯವರನ್ನು ಬಂಧಿಸಲಾಯಿತು. ಕಳೆದ ವಾರದಲ್ಲಿ ಲ್ಯಾಗ್ನಿ ಮಾರ್ನೆ ಈ ನಗರದಲ್ಲಿ ಮಸೀದಿಯ ಮೇಲೆ ದಾಳಿ ನಡೆಸಿದಾಗ ಬೃಹತ್ಪ್ರಮಾಣದಲ್ಲಿ ರೈಫಲ್‌ನ ಸಿಡಿಮದ್ದಿನ ಶೇಖರಣೆಯು ಕಂಡುಬಂದಿತು. ಯುರೋಪಿಯನ್ ರಾಷ್ಟ್ರಗಳಲ್ಲಿ ಫ್ರಾನ್ಸ್ ಎಲ್ಲಕ್ಕಿಂತ ಹೆಚ್ಚು  ಮುಸ್ಲಿಂ ಜನಸಂಖ್ಯೆಯಿರುವ ದೇಶವಾಗಿದೆ. ಆದುದರಿಂದಲೇ ಅದರ ಕಾರ್ಯಾಚರಣೆಗೆ ಮಹತ್ವವಿದೆ.
೩. ಯುರೋಪಿನ ದಾಳಿಗಳು : ನಿರಾಶ್ರಿತ ಮುಸಲ್ಮಾನರಿಗೆ ಆಶ್ರಯ ನೀಡಿದ ಪರಿಣಾಮ !
 ಮಹಾಸಂಘವು ಸಿರಿಯಾದಿಂದ ಬಂದ ನಿರಾಶ್ರಿತರಿಗೆ ದೇಶಾಂತರ ಹೊಂದಿದವರೆಂದು ದೊಡ್ಡ ಪ್ರಮಾಣದಲ್ಲಿ ಆಶ್ರಯ ನೀಡಲು ಕಳೆದ ವರ್ಷ ನಿರ್ಧರಿಸಿತ್ತು. ನಿಜವಾಗಿ ಆಗಲೇ ಎಚ್ಚರಿಕೆಯಿಂದ ಇರಬೇಕಾಗಿತ್ತು. ಮುಖ್ಯವಾಗಿ ರಷ್ಯಾ ವಾಯುದಾಳಿ ಮಾಡಲು  ಆರಂಭಿಸಿದ ನಂತರ ಸಿರಿಯನ್ ನಿರಾಶ್ರಿತರ ಗುಂಪು ಬರಲು ಆರಂಭವಾಯಿತು ಮತ್ತು  ಅದೇ ಸಮಯದಲ್ಲಿ ಐಸಿಸ್ ಅವರ ಅನೇಕ ಯುವಕರನ್ನು ಅದರೊಳಗಿನಿಂದಲೇ ಯುರೋಪಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿತು. ಯಾವುದೇ ಕಾಗದಪತ್ರಗಳನ್ನು ಪರಿಶೀಲಿಸದೇ ಸಾವಿರಾರು ನಿರಾಶ್ರಿತ ಮುಸಲ್ಮಾನರನ್ನು ಯುರೋಪಿನಲ್ಲಿ ನುಗ್ಗಲು ಅವಕಾಶ ಮಾಡಿಕೊಡಲಾಯಿತು. ಅದರಲ್ಲಿ ಅನೇಕ ಜನರು ಸಿರಿಯನ್ ಇರಾಕಿನವರೂ ಇರುವುದಿಲ್ಲ. ಕೆಲವರು ಅಫ್ಘಾನಿ ಮತ್ತು ಪಾಕಿಸ್ತಾನಿಗಳಿರುವುದು ಕಂಡುಬಂದಿದೆ, ಅಂದರೆ ಐಸಿಸ್ ನೀಡಿದ ಎಚ್ಚರಿಕೆ ನಿಜವಾಯಿತು. ಆದರೆ ಈ ಸಂಕಟವನ್ನು ಯುರೋಪ್ ಸ್ವೀಕರಿಸಿತು ಮತ್ತು ೩ ತಿಂಗಳಲ್ಲಿ ಬಾಂಬ್‌ಸ್ಫೋಟದ ಮಾಲಿಕೆಯಿಂದ ಫ್ರಾನ್ಸ್ ಅದರ ದೊಡ್ಡ ಆಘಾತವನ್ನು ಅನುಭವಿಸಿತು. ತಕ್ಷಣವೇ ಅದರಲ್ಲಿನ ಅಪರಾಧಿಗಳನ್ನು ಹುಡುಕುವಾಗ ಪೊಲೀಸರು ಬೆಲ್ಜಿಯಂ ತಲುಪಿದರು ಮತ್ತು  ಆ ದೇಶಕ್ಕೂ ಪೆಟ್ಟು ಬಿತ್ತು; ಆದರೆ ಪ್ಯಾರಿಸ್‌ನ ಆಘಾತದಿಂದ ಪಾಠ ಕಲಿತ ಫ್ರೆಂಚ್ ಸರಕಾರವು ಜಿಹಾದಿ ಮಾನಸಿಕತೆಯ ಮತ್ತು ಅದರೊಂದಿಗೆ ಸಂಬಂಧವಿಟ್ಟುಕೊಂಡವರನ್ನು ಅಡಗಿದವರನ್ನು ಹುಡುಕಿ ತೆಗೆಯುವ ಅಭಿಯಾನವನ್ನು ನಿರಂತರವಾಗಿ ನಡೆಸುತ್ತಿದೆ. ಅದಕ್ಕಾಗಿ ಪ್ರತಿಯೊಂದು ಸಣ್ಣ  ಪುಟ್ಟ ನಗರದಲ್ಲಿನ  ವಸತಿ ಗಳಿಗೆ ಮುತ್ತಿಗೆ ಹಾಕಲಾಗುತ್ತಿದೆ ಮತ್ತು ಮುಖ್ಯವಾಗಿ ಮಸೀದಿ ಮತ್ತು ಮುಸಲ್ಮಾನರ ವಸತಿಗಳನ್ನು ಕೂಲಂಕುಶವಾಗಿ ನೋಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜಗತ್ತಿನ ಚಿತ್ರಣವು ಬದಲಾಗುತ್ತಿದೆ. ಅಮೇರಿಕಾದಲ್ಲೂ ಜಿಹಾದಿಯರನ್ನು ನೇರವಾಗಿ ಕೊಂಬಿನ ಮೇಲೇರಿಸಲು ಆತುರ ಪಡುತ್ತಿರುವ ಡೋನಾಲ್ಡ್ ಟ್ರಂಪ್ ಅವರಂತಹ ಮುಖಂಡರು ಅಧ್ಯಕ್ಷರ ಸ್ಥಾನದ ಅಭ್ಯರ್ಥಿಯಾಗಿ ಮುಂದೆ ಬಂದಿದ್ದಾರೆ. ಇದರಿಂದಾಗಿ ಜಗತ್ತಿನ ಚಿತ್ರಣವು ಬದಲಾಗುತ್ತಿರುವ ಲಕ್ಷಣಗಳು ಕಾಣುತ್ತಿವೆ. ಈ ಸ್ಥಿತಿ ಬರಲು ಕಾರಣವೇನು ? ಇಸ್ಲಾಂ ಶಾಂತಿಯ ಧರ್ಮವಾಗಿದೆ ಮುಂತಾದ ಗಾಳಿ ಮಾತುಗಳಿಗೆ ಜನರು ಬೇಸತ್ತಿರುವ ಲಕ್ಷಣಗಳಾಗಿವೆ; ಏಕೆಂದರೆ ಪ್ರತ್ಯಕ್ಷದಲ್ಲಿ ಜನರಿಗೆ ಜಿಹಾದಿ ಹಿಂಸಾಚಾರವನ್ನು ಎದುರಿಸಬೇಕಾಗುತ್ತಿದೆ. ಮೊನ್ನೆ ಮೊನ್ನೆಯೇ ಫ್ರಾನ್ಸ್‌ನ ನೀಸ ನಗರದಲ್ಲಿ ಒಬ್ಬ ಮುಸಲ್ಮಾನನು ಟ್ರಕ್ಕನ್ನು ನಾಗರಿಕರ ಜನಸಂದಣಿಯ ಮೇಲೆ ಹರಿಸಿ ೪೦ ಅಮಾಯಕರ ಜೀವ ತೆಗೆದದ್ದು ಕಣ್ಣ ಮುಂದೆಯೇ ಇದೆ.
೪. ಜಿಹಾದಿಗಳಿಂದ ಒಂದೇ ಪರ್ಯಾಯ ಇದೆ, ಸಾಯಿರಿ ಅಥವಾ ನಮ್ಮನ್ನು ಕೊಂದು ಜೀವಂತವಾಗಿರಿ !
ಮಾತಿನ ಸೂಕ್ಷ್ಮ ಅಭಿಪ್ರಾಯವನ್ನು ಗಮನಿಸಬೇಕು. ಉಗ್ರವಾದಕ್ಕೆ ಧರ್ಮ ಇರಲಿ ಅಥವಾ ಇಲ್ಲದಿರಲಿ, ಜಾಗತಿಕ ಸಂಘರ್ಷಕ್ಕೆ ಪರ್ಯಾಯವೇ ಇಲ್ಲ. ಜಿಹಾದಿಗಳು ಯಾವ ಇಸ್ಲಾಂಅನ್ನು ಜಗತ್ತಿನಾದ್ಯಂತ ಹೇರಲು ನೋಡುತ್ತಿದ್ದಾರೆಯೋ ಅವರು ನಿಮಗಾಗಿ ಬೇರೆ ಯಾವುದೇ ಪರ್ಯಾಯವನ್ನು ಬಾಕಿ ಇಟ್ಟಿಲ್ಲ. ನೀವು ಹೋರಾಡಬೇಕೋ ಅಥವಾ ಇಲ್ಲವೋ ಅಥವಾ ನಿಮಗೆ ಯಾವ ಧರ್ಮ ಬೇಕು ಅಥವಾ ಬೇಡ, ಎಂಬ ಪ್ರಶ್ನೆಯನ್ನೇ ಉಳಿಸಿಲ್ಲ. ಕೇವಲ ನಿಮಗೆ ಬದುಕಬೇಕೋ ಅಥವಾ ಇಲ್ಲವೋ ಎಂಬುದಷ್ಟೇ ಇರುತ್ತದೆ. ಬದುಕಬೇಕಿದ್ದರೆ ಜಿಹಾದಿಗಳು ಹೇಳಿದಂತೆಯೇ ಬದುಕಬೇಕಾಗುತ್ತದೆ. ಅದಕ್ಕೆ ಒಪ್ಪಿಗೆ ಇಲ್ಲದಿದ್ದರೆ, ಸಾಯಲು ಸಿದ್ಧವಾಗಬೇಕು. ಅದರಲ್ಲೂ ನಿಮಗೆ ಇಷ್ಟಬಂದಂತೆ ಬದುಕುವುದಿದ್ದರೆ, ನಿಮಗೆ ಜಿಹಾದಿಗಳೊಂದಿಗೆ ಕೈ ಎತ್ತಲು ಸಿದ್ಧವಾಗಬೇಕು. ಕೈ ಎತ್ತುವುದೆಂದರೆ ಹೋರಾಟ ಮತ್ತು ಪರಿಹಾರ ಎಂದಾಗುವುದಿಲ್ಲ. ಜಿಹಾದಿಗಳಿಗೆ ಬದುಕುವ ಆಸೆ ಇಲ್ಲ. ಸಾಯಲು ಅವರು ಯಾವತ್ತೂ ಸಿದ್ಧವಾಗಿರುತ್ತಾರೆ; ಏಕೆಂದರೆ ಸಾಯದಿದ್ದರೆ ಸ್ವರ್ಗವು ಕಾಣುವುದಿಲ್ಲ, ಎಂಬ ದೃಢ ಧರ್ಮಶ್ರದ್ಧೆ ಅವರಲ್ಲಿ ನಿರ್ಮಾಣವಾಗಿದೆ. ಆದರೂ ಒಬ್ಬನೇ  ಶಾಂತವಾಗಿ ಸಾಯಲು ಅವರಿಗೆ ಅವರ ಧರ್ಮಶಿಕ್ಷಣವು ಒಪ್ಪಿಗೆ ನೀಡುವುದಿಲ್ಲ. ಸಾಯುವಾಗ ಈಶ್ವರನ ಸಲುವಾಗಿ ಸಾಯಬೇಕು ಮತ್ತು ಈಶ್ವರನನ್ನು ನಿರಾಕರಿಸುವವರನ್ನು ಸಾಯಿಸಬೇಕು, ಎಂಬುದು ಅವರ ಶ್ರದ್ಧೆಯಾಗಿದೆ.
ಸ್ವಾಭಾವಿಕವಾಗಿ ಅವರಿಗೆ ಧರ್ಮದ ಪಾಲನೆ ಮಾಡಬೇಕಾದರೆ, ನಿಮ್ಮನ್ನು ಸಾಯಿಸುವುದೇ ಅವರ ಕರ್ತವ್ಯವಾಗಿರುತ್ತದೆ. ಅಂದರೆ ನಿಮಗೆ ಅವರನ್ನು ತಡೆಯದೇ ಬೇರೆ ದಾರಿಯೇ ಇಲ್ಲ. ತಡೆಯುವುದು ಎಂದರೇನು ? ಕಸಾಬ ಅಥವಾ ಬುರಹಾನ ವಾನಿ ಇವರನ್ನು ತಡೆಯಲು ಪ್ರಯತ್ನಗಳಾಗಲಿಲ್ಲವೇ ? ಆದರೆ ಅದರ ಪ್ರಯೋಜನವಿಲ್ಲ. ಸಾಯಿರಿ ಅಥವಾ ನಮ್ಮನ್ನು ಸಾಯಿಸಿ ನೀವು ಜೀವಂತವಾಗಿರಿ, ಇಷ್ಟೇ ಪರ್ಯಾಯವನ್ನು ನಿಮಗೆ ಬಾಕಿ ಇಟ್ಟಿರುತ್ತಾರೆ.  ಈಗ ಪ್ರಭಾವಿಯಾಗಿ  ಅದರ ಅರಿವಾಗುತ್ತಿದ್ದರಿಂದಾಗಿ ಜಿಹಾದ್ ವಿರುದ್ಧದ ಕೂಗು ಜಾಗತಿಕ ಮಟ್ಟದ್ದಲ್ಲಿ ಪ್ರಭಾವ ಬೀರುತ್ತಿದೆ. ಫ್ರಾನ್ಸ್‌ನ ಕಠೋರ ಕಾರ್ಯಾಚರಣೆ ಮತ್ತು ಅಭಿಯಾನಗಳು ಅದರ ಪರಿಣಾಮಗಳಾಗಿವೆ ಮತ್ತು ಡೋನಾಲ್ಡ್ ಟ್ರಂಪ್ ಅವರ ಹೆಚ್ಚುತ್ತಿರುವ ಜನಪ್ರಿಯತೆಯು ಅದರ ಅರಿವಿನ ಪರಿಣಾಮವಾಗಿದೆ. ಭಾರತದಲ್ಲಿ ಝಾಕೀರ ನಾಯಿಕ್ ವಿರುದ್ಧ ಎದ್ದಿರುವ ಬಿರುಗಾಳಿಯು ಅದರ ಪರಿಣಾಮವೇ ಆಗಿದೆ. ಜಿಹಾದಿಗಳು ಇಡೀ ಜಗತ್ತನ್ನೇ ಮೂರನೇ ಮಹಾಯುದ್ಧದ ಕಡೆಗೆ ಎಳೆದುಕೊಂಡು ಹೊರಟಿದ್ದಾರೆ.
೫. ಜಿಹಾದ್ ವಿರುದ್ಧ ವಿಶ್ವಸಂಸ್ಥೆಯ ಸೌಮ್ಯ ನಿಲುವು !
 ಮಹಾಯುದ್ಧವಾಗಬಾರದೆಂದು ಸ್ಥಾಪನೆಯಾದ ವಿಶ್ವ ಸಂಸ್ಥೆಯ ಪಾಪದಿಂದಾಗಿಯೇ ಇಂದು ಮೂರನೇ ಮಹಾಯುದ್ಧಕ್ಕೆ ಪೂರಕ ಪರಿಸ್ಥಿತಿಯು ನಿರ್ಮಾಣವಾಗುತ್ತಿದೆ. ಕಠಿಣ ಕಾನೂನುಗಳ ಸಹಾಯದಿಂದ ಯಾವ ಹಿಂಸಾಚಾರಗಳನ್ನು ಹತ್ತಿಕ್ಕಲಾಗುತ್ತಿತ್ತೋ, ಅದನ್ನು  ನಿರ್ಭಯವಾಗಿ ಸುತ್ತಾಡುವ ಸ್ವಾತಂತ್ರ್ಯವನ್ನು ಈಗ ವಿಶ್ವ ಸಂಸ್ಥೆಯ ವಿವಿಧ ಉಗ್ರಗಾಮಿ ಕಾನೂನುಗಳಿಂದ ನೀಡಲಾಗಿರುತ್ತದೆ. ಅದರ ಲಾಭವನ್ನು ಪಡೆಯುತ್ತ ಜಿಹಾದ್‌ವು ಉಕ್ಕಿ ಬಂದಿದೆ. ಅದರಲ್ಲೂ ಇಂತಹ ಮುಸಲ್ಮಾನರು ದೇಶದಲ್ಲಿನ ಹುಕುಂಶಾಹಿಗಳನ್ನು ತೆಗೆದುಹಾಕಿ ಅಲ್ಲಿ ಪ್ರಜಾಪ್ರಭುತ್ವದ ಆಡಳಿತವನ್ನು ತರುವ ಅಧಿಕ ಪ್ರಸಂಗವಾಯಿತು. ಆದುದರಿಂದ ಅಲ್ಲಿ ಉಕ್ಕಿನ ಹಿಮ್ಮಡಿಯ ಕೆಳಗೆ ಒತ್ತಿಡಲಾಗಿದ್ದ ಈ ಜಿಹಾದಿ ಮಾನಸಿಕತೆಯು ಮುಚ್ಚಿಟ್ಟ ಸೀಸೆಯೊಳಗಿನ ದೆವ್ವಗಳಂತೆ ಹೊರಬಿದ್ದಿವೆ. ಅದಕ್ಕೆ ಬಗ್ಗುಬಡಿಯುವಷ್ಟು ಸೈನ್ಯವು ಪ್ರತಿಯೊಂದು ದೇಶದೊಡನೆ ಇದ್ದರೂ, ಅವರ ಕಾನೂನುಗಳೇ ಆ ಸೈನ್ಯದ ಕೈಕಾಲುಗಳನ್ನು ಕಟ್ಟಿ ಇಟ್ಟಿದೆ. ಇದರಿಂದಾಗಿ ಜನರಿಗೆ ಕಾನೂನು ಪ್ರಕಾರ ದೊರಕುವ ಸಂರಕ್ಷಣೆಯ ಮೇಲೆ ವಿಶ್ವಾಸವು ಕಡಿಮೆಯಾಗುತ್ತಾ ಹೊರಟಿದ್ದು ಅನೇಕ ದೇಶಗಳು ಮೂರನೇ  ಮಹಾಯುದ್ಧದ ಬಾಗಿಲಲ್ಲಿ ಬಂದು ನಿಂತಿವೆ.
೬. ಸಂಪೂರ್ಣ ಜಗತ್ತು  ಜಿಹಾದ್ ವಿರುದ್ಧ  ಇತರರು ಎಂಬ ಮಹಾಯುದ್ಧದಲ್ಲಿ  ಎಳೆಯಲ್ಪಡುವುದು, ಖಚಿತ !
ಅನೇಕ ದೇಶಗಳಲ್ಲಿ ಗಲಭೆಗಳು ನಡೆಯುತ್ತಿದ್ದು ದಿನೇದಿನೇ  ಸ್ಥಳೀಯ ಮುಸಲ್ಮಾನರ ವಿರುದ್ಧ  ವಾತಾವರಣವು ಕಾವೇರುತ್ತಿದೆ. ಇದರಿಂದಾಗಿ ಜಗತ್ತಿನ ವಿಭಜನೆಯು ಜಿಹಾದಿ ಇಸ್ಲಾಂ ವಿರುದ್ಧ ಉಳಿದೆಲ್ಲ ಜಗತ್ತು, ಹೀಗೆ ನಿರ್ಮಾಣವಾಗುತ್ತ ಹೊರಟಿದೆ. ಆದುದರಿಂದ ಬಹುಬೇಗನೆ ಜಗತ್ತಿನ ಮುಖಂಡರಿಗೆ ತಮ್ಮ ತಮ್ಮ ಕಾನೂನು ಮತ್ತು ರಾಜಕೀಯ ಧೋರಣೆಯನ್ನು ಸುತ್ತಿಟ್ಟು ಜಿಹಾದ್ ವಿರುದ್ಧ ರಣಾಂಗಣಕ್ಕೆ ಇಳಿಯಲೇಬೇಕು; ಆದರೆ ಜಿಹಾದಿ ಸೈನ್ಯವು ಯಾವುದಾದರೊಂದು ದೇಶದಲ್ಲಿ ಇರುವುದಿಲ್ಲ ಅಥವಾ ಪ್ರದೇಶದಲ್ಲಿ  ನೆಲೆಯೂರಿ ಕುಳಿತಿರುವುದಿಲ್ಲ. ಜಗತ್ತಿನ ಪ್ರತಿಯೊಂದು ದೇಶದಲ್ಲಿ  ಮತ್ತು  ವಸತಿಯಲ್ಲಿ ಈ ಪ್ರವೃತ್ತಿಯು ಕೈಚಾಚಿ ಕುಳಿತಿದೆ. ಅಲ್ಲಿ ಹೋಗಿ ಮಟ್ಟಹಾಕುವುದು ಅನಿವಾರ್ಯವಾಗಿದೆ.
ಆ ಕಾರ್ಯವು ಪೊಲೀಸರು ಮತ್ತು ಸಾಮಾನ್ಯ ಸೈನಿಕರಿಂದಲೂ ಆಗುವ ಸಾಧ್ಯತೆ ಇಲ್ಲ. ಇಂತಹ ವಸತಿ ಮತ್ತು ಬೀಡುಗಳಲ್ಲಿ  ಕಾಳಗವಾಗುವ ದೊಡ್ಡ ಸಾಧ್ಯತೆಗಳಿದ್ದು ನೀಸ ಮತ್ತು ಆರಲ್ಯಾನ್ಡೊ ನಗರದಲ್ಲಿನ ಚಟುವಟಿಕೆಗಳನ್ನು ನೋಡಿದರೆ, ಆ ಮಹಾಯುದ್ಧದ ಪ್ರಸಂಗವನ್ನು ಜಿಹಾದಿಗಳೇ ತರಲಿದ್ದಾರೆ, ಎಂಬುದು ಸ್ಪಷ್ಟವಾಗುತ್ತದೆ. ಕೆಲವು ವರ್ಷಗಳಲ್ಲಿ ಸಂಪೂರ್ಣ ಜಗತ್ತು ಜಿಹಾದಿನ ವಿರುದ್ಧ ಇತರರು ಎಂಬ  ಮಹಾಯುದ್ಧದಲ್ಲಿ ಎಳೆಯಲ್ಪಡುವುದು ಖಚಿತವಾಗಿದೆ.
- ಶ್ರೀ. ಭಾವೂ ತೋರಸೇಕರ, ಹಿರಿಯ ಪತ್ರಕರ್ತರು, ಮುಂಬಯಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಯಾದವೀ ಕಲಹದ ಮುನ್ಸೂಚನೆ ! - ಶ್ರೀ. ಭಾವೂ ತೋರಸೇಕರ್ ಶ್ರೀ. ಭಾವೂ ತೋರಸೇಕರ