ಸನಾತನದ್ವೇಷದಿಂದ ನ್ಯಾಯಾಲಯದ ಆದೇಶಕ್ಕೂ ಬಗ್ಗದ ತನಿಖಾ ದಳ !

ಡಾ. ತಾವಡೆಯವರಿಗೆ ನ್ಯಾಯವಾದಿಗಳನ್ನು ಭೇಟಿಯಾಗಲು
ಬಿಡದಿರುವ ಬಗ್ಗೆ ನ್ಯಾಯಾಲಯವು ಪೊಲೀಸರಲ್ಲಿ ಸ್ಪಷ್ಟೀಕರಣ ಕೇಳಿತು !
ಕೊಲ್ಹಾಪುರ : ಡಾ. ತಾವಡೆಯವರ ವಿಚಾರಣೆಯ ಸಮಯದಲ್ಲಿ ಅವರ ನ್ಯಾಯವಾದಿಗಳಾದ ವಿರೇಂದ್ರ ಇಚಲಕರಂಜಿಕರ್ ಇವರು ಅಲ್ಲಿರುವಂತೆ ನ್ಯಾಯಾಲಯ ಅನುಮತಿ ನೀಡಿತ್ತು, ಆದರೂ ಸೆಪ್ಟೆಂಬರ್ ೪ ರಂದು ಒಮ್ಮೆ ಸಹ ಡಾ. ತಾವಡೆಯವರಿಗೆ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರರನ್ನು ಭೇಟಿಯಾಗಲು ಬಿಡಲಿಲ್ಲ. ಈ ವಿಷಯದಲ್ಲಿ ಪೊಲೀಸರಿಗೆ ಅರಿವು ಮಾಡಿಕೊಟ್ಟರೂ ಅವರು ದುರ್ಲಕ್ಷಿಸಿದ್ದರಿಂದ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಮತ್ತು ನ್ಯಾಯವಾದಿ ಸಮೀರ್ ಪಟವರ್ಧನ ಇವರು ಪ್ರಥಮವರ್ಗ ನ್ಯಾಯದಂಡಾಧಿಕಾರಿಯ ನ್ಯಾಯಾಲಯದಲ್ಲಿ ಅವಮಾನ ಅರ್ಜಿ ಸಲ್ಲಿಸಿದರು. ಅದಕ್ಕೆ ನ್ಯಾಯಾಲಯ ಡಾ. ತಾವಡೆಯವರಿಗೆ ನ್ಯಾಯವಾದಿಗಳನ್ನು ಭೇಟಿ ಯಾಗಲು ಬಿಡದಿರುವ ಬಗ್ಗೆ ಸಪ್ಟೆಂಬರ್ ೫ ರ ಸಾಯಂಕಾಲ ಪೊಲೀಸರಲ್ಲಿ ಸ್ಪಷ್ಟೀಕರಣ ಕೇಳಿದ್ದು ಸಪ್ಟೆಂಬರ್ ೬ ರಂದು ಅದರ ಆಲಿಕೆ ಆಗುವುದು.

ಡಾ. ತಾವಡೆಯವರ ವಿಚಾರಣೆಯಾಗುವಾಗ ಅವರ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರನ್ನು ಭೇಟಿಯಾಗಲು ಬಿಡದಿರಲು ನಿಜವಾದ ಕಾರಣವೇನೆಂದು ಪೊಲೀಸರು ಹೇಳಲಿಲ್ಲ. (ನ್ಯಾಯಾಲಯದ ಆದೇಶವಿದ್ದರೂ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರನ್ನು ಭೇಟಿ ಯಾಗಲು ಬಿಡದಿರುವ ಪೊಲೀಸರ ವಿರುದ್ಧ ವರಿಷ್ಠರು ಯೋಗ್ಯ ಕ್ರಮ ತೆಗೆದುಕೊಳ್ಳಬೇಕು ! - ಸಂಪಾದಕರು) ಈ ಬಗ್ಗೆ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರು ಅಪರ ಪೊಲೀಸ್ ಅಧೀಕ್ಷಕ ಸುಹೇಲ್ ಶರ್ಮಾ ಇವರಿಗೆ ದೂರವಾಣಿ ಕರೆ ಅವರು ದೂರವಾಣಿ ಸ್ವೀಕರಿಸಲಿಲ್ಲ. ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ್ ಇವರು ಇದಕ್ಕೆ ಸಂಬಂಧಿಸಿ ಸಿದ್ಧಪಡಿಸಿದ ವಿನಂತಿಪತ್ರ ವನ್ನೂ ಕೊಲ್ಹಾಪುರದ ಪೊಲೀಸರು ಸ್ವೀಕರಿಸಲು ನಿರಾಕರಿಸಿದರು. ಆದ್ದರಿಂದ ಕೊನೆಗೆ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಇವರು ಈ ವಿನಂತಿ ಪತ್ರವನ್ನು ಫ್ಯಾಕ್ಸ್ ಮಾಡಬೇಕಾಯಿತು. ಅದಕ್ಕೆ ಮತ್ತು ವಿ-ಅಂಚೆಗೆ ಉತ್ತರ ಸಿಗದಿರುವಾಗ ನ್ಯಾಯವಾದಿ ಶ್ರೀ. ವೀರೇಂದ್ರ ಇಚಲಕರಂಜಿಕರ್ ಮತ್ತು ನ್ಯಾಯವಾದಿ ಶ್ರೀ. ಸಮೀರ ಪಟವರ್ಧನ್‌ರವರು ಅವಮಾನ ಅರ್ಜಿಯ ಮೂಲಕ ಈ ವಿಷಯವನ್ನು ಪ್ರಥಮವರ್ಗ ನ್ಯಾಯದಂಡಾಧಿಕಾರಿಗಳ ಗಮನಕ್ಕೆ ತಂದರು. ಹಾಗಾಗಿ ಪೊಲೀಸರು ನ್ಯಾಯವಾದಿಗಳನ್ನು ಭೇಟಿಯಾಗಲು ಏಕೆ ಬಿಡಲಿಲ್ಲ , ಎಂದು ನ್ಯಾಯಾಲಯ ಪೊಲೀಸ ರಿಗೆ ಸ್ಪಷ್ಟೀಕರಣ ಕೇಳಿದೆ. ಆಗ ನ್ಯಾಯವಾದಿ ಶ್ರೀ. ಸಮೀರ ಪಟವರ್ಧನ್ ಮುಂದಿನಂತೆ ಹೇಳಿದರು, ಎರಡು ದಿನ ನ್ಯಾಯವಾದಿಗಳನ್ನು ಭೇಟಿಯಾಗಲು ಬಿಡದಿರುವುದರಿಂದ, ಆ ಸಮಯದಲ್ಲಿ ಡಾ. ತಾವಡೆ ಇವರನ್ನು ಪುನಃ ಥಳಿಸಿರಬಹುದು. ಆದ್ದರಿಂದ ಡಾ. ತಾವಡೆಯವರನ್ನು ಪುನಃ ನ್ಯಾಯಾಲಯದಲ್ಲಿ ನಿಲ್ಲಿಸಬೇಕು ಹಾಗೂ ಆವರ ಶಾರೀರಿಕ ಹಾಗೂ ವೈದ್ಯಕೀಯ ಪರೀಕ್ಷೆ ಮಾಡಬೇಕು. ಇದಕ್ಕೂ ಪೊಲೀಸರು ಉತ್ತರ ನೀಡಬೇಕಿದೆ.
(ಇದರ ಮುಂದಿನ ವಾರ್ತೆಯನ್ನು ಮುಂದಿನ ಸಂಚಿಕೆಯಲ್ಲಿ ಓದಿರಿ.)

ಡಾ. ತಾವಡೆ ಇವರಿಂದ ನಾಮಜಪದ ಮಾಲೆ ಕಸಿದುಕೊಂಡರು !
ಪೊಲೀಸ್ ಕಸ್ಟಡಿಯಲ್ಲಿ ಡಾ. ತಾವಡೆಯವರು ಜಪಮಾಲೆಯಿಂದ ನಾಮಜಪ ಮಾಡುತ್ತಿದ್ದರು. ಪೊಲೀಸರು ಈ ಮಾಲೆಯನ್ನು ಕಸಿದುಕೊಂಡರು. ಡಾ. ತಾವಡೆಯವರು ವಿನಂತಿಸಿದಾಗ ಪೊಲೀಸರು ಆ ಮಾಲೆಯನ್ನು ಹಿಂತಿರುಗಿಸಿದರು. ಡಾ. ತಾವಡೆಯವರು ನಾಮಜಪ ಮಾಡುತ್ತಿರುವುದರಿಂದ ಪೊಲೀಸರಿಗೆ ತಪಾಸಣೆಯಲ್ಲಿ ಅಡಚಣೆಯಾಗುತ್ತಿತ್ತು, ಎಂಬ ವಾರ್ತೆ ಕೆಲವು ದೈನಿಕದಲ್ಲಿ ಪ್ರಸಿದ್ಧವಾಗಿತ್ತು. (ವಾಸ್ತವದಲ್ಲಿ ದೇವತೆಯ ನಾಮಜಪ ಮಾಡುವುದು ಪ್ರತಿಯೊಬ್ಬರ ಮೂಲಭೂತ ಅಧಿಕಾರವಾಗಿದೆ. ಅದಲ್ಲದೆ ನಾಮಜಪ ಮಾಡಿದರೆ ತಪಾಸಣೆಯಲ್ಲಿ ಹೇಗೆ ಅಡಚಣೆಯಾಗುತ್ತದೆ ? ಪೊಲೀಸರು ಮುಲ್ಲಾ, ಮೌಲ್ವಿ ಅಥವಾ ಫಾದರ್ ಇವರೊಂದಿಗೆ ಹೀಗೆಯೇ ವರ್ತಿಸುತ್ತಿದ್ದರೇ ? - ಸಂಪಾದಕರು)

ಮಾಡಿದ ತನಿಖೆಯನ್ನೇ ಪದೇ ಪದೇ ಮಾಡಿ ಸಮಯ ವ್ಯರ್ಥಗೊಳಿಸುವ ತನಿಖಾ ದಳ !
ಡಾ. ತಾವಡೆಯವರನ್ನು ಸಿಬಿಐ ವಶಪಡಿಸಿಕೊಂಡ ನಂತರ ಅವರನ್ನು ಹಾಗೂ ಅವರಿಗೆ ಸಂಬಂಧಿಸಿದ ಪನವೇಲ್ ಆಶ್ರಮದ ಸಾಧಕರ ವಿಚಾರಣೆ ಮಾಡಿದ್ದರು. ಅನಂತರ ಈಗ ಎಸ್‌ಐಟಿ ಅವರನ್ನು ವಶಪಡಿಸಿಕೊಂಡಿದೆ. ಎಸ್‌ಐಟಿ ಅದರ ಮುಂದಿನ ತನಿಖೆ ಮಾಡಲಿಕ್ಕಿರುವಾಗ ಪುನಃ ಡಾ. ತಾವಡೆಯವರನ್ನು ಪನವೇಲ್ ಆಶ್ರಮಕ್ಕೆ ಕರೆತಂದು ಸಾಧಕರ ವಿಚಾರಣೆ ಮಾಡಿದರೆ ಏನು ಸಾಧಿಸಿದಂತಾಯಿತು ? - ಸಂಪಾದಕರು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ್ವೇಷದಿಂದ ನ್ಯಾಯಾಲಯದ ಆದೇಶಕ್ಕೂ ಬಗ್ಗದ ತನಿಖಾ ದಳ !