ಪಾಕ್ ಕಲಾವಿದರನ್ನು ದೇಶದಿಂದ ಹೊರದಬ್ಬಿ !

ಕಾಶ್ಮೀರದ ಉರಿಯಲ್ಲಿನ ಸೇನಾ ನೆಲೆಯ ಮೇಲೆ ನಡೆದ ದಾಳಿಯ ನಂತರ ಭಾರತದಲ್ಲಿ, ಎಲ್ಲ ಹಂತಗಳಲ್ಲಿಯೂ ಖಂಡನೆ ವ್ಯಕ್ತವಾಗುತ್ತಿದೆ. ಪ್ರತಿಭಟನಾ ಮೆರವಣಿಗೆ, ಆಂದೋಲನ, ಘೋಷಣೆ, ಪ್ರತಿಕೃತಿ ದಹನದೊಂದಿಗೆ ಸಾಮಾಜಿಕ ಜಾಲತಾಣದಲ್ಲಿಯೂ ಪಾಕಿಸ್ತಾನದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಟ್ವಿಟರ್‌ನಲ್ಲಿ ‘ಬ್ಯಾನ್ ಪಾಕ್ ಆರ್ಟಿಸ್ಟ್’ ಹಾಗೂ ‘ಸೇ  ನೋ  ಟು ಪಾಕ್ ಆರ್ಟಿಸ್ಟ್’ ಎಂಬ ಹ್ಯಾಷ್ ಟ್ಯಾಗ್ ಬಳಸಿ ದೊಡ್ಡ ಪ್ರಮಾಣದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಇನ್ನು ಜನಸಾಮಾನ್ಯರು ತಮಗೆ ಸಾಧ್ಯವಿರುವ ಮಾರ್ಗದಿಂದ ನಿಷೇಧಿಸುತ್ತಿದ್ದಾರೆ. ಅದರಲ್ಲಿನ ಒಂದು ಅಂಶವೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಪಾಕಿಸ್ತಾನದ ಚಲನಚಿತ್ರ ಹಾಗೂ ಕಲಾವಿದರನ್ನು ಭಾರತದಿಂದ ಹೊರಗೆ ದಬ್ಬಲು ಆಗ್ರಹಿಸಿದೆ. ವಾಸ್ತವದಲ್ಲಿ ಪ್ರತಿದಿನ ಗಡಿಯಲ್ಲಿ ಕಿತಾಪತಿ ನಡೆಸುತ್ತಿರುವ, ಭಾರತೀಯ ಸೈನಿಕರನ್ನು ಕೊಲ್ಲುತ್ತಿರುವ, ಮೇಲಿಂದ ಮೇಲೆ ಪಾಕ್ ಪುರಸ್ಕೃತ ಉಗ್ರರನ್ನು ಕಳುಹಿಸಿ ಭಾರತದಲ್ಲಿ ಅಶಾಂತಿ ಹಬ್ಬಿಸುತ್ತಿರುವ ಪಾಕಿಸ್ತಾನದಂತಹ ಶತ್ರುರಾಷ್ಟ್ರದ ಗಾಯಕರಿಗೆ ಹಾಗೂ ಕಲಾವಿದರಿಗೆ ಭಾರತದಲ್ಲಿ ಕೆಲಸ ಮಾಡಲು ಅನುಮತಿ ನೀಡುವುದು ರಾಷ್ಟ್ರದ್ರೋಹವೇ ಆಗಿದೆ.
ಭಾರತದಲ್ಲಿ ಕೆಲವರಿಗೆ ಪಾಕಿಸ್ತಾನದ ಮೇಲೆ ಅನುಕಂಪ !
 ಒಂದು ಕಡೆ ಪಾಕ್ ಕಲಾವಿದರಿಗೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವಿರೋಧವಾಗುತ್ತಿರುವಾಗ ಮಹೇಶ್ ಭಟ್, ಕರಣ್ ಜೋಹರ್, ಶಾಹರೂಖ್ ಖಾನ್, ಕಮಾಲ್ ಖಾನ್‌ರಂತಹವರಿಗೆ ಮಾತ್ರ ಪಾಕಿಸ್ತಾನದ ಮೇಲೆ ಯಾವಾಗಲೂ ಅನುಕಂಪವಿದೆ. ಇಂತಹ ಪಾಕ್‌ಪ್ರೇಮಿಗಳು ಯಾವಾಗಲೂ ಫವಾದ್ ಖಾನ್, ಮಾಹಿರಾ ಖಾನ್‌ನಂತಹ ನಟರಿಗೆ ಹಾಗೂ ಗುಲಾಮ್ ಅಲಿ, ರಾಹತ್ ಫತೇಹ ಅಲಿ ಖಾನ್, ಆತೀಫ್ ಅಸ್ಲಮ್‌ರಂತಹ ಗಾಯಕರಿಗೆ ಮೇಲಿಂದ ಮೇಲೆ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶ ನೀಡುತ್ತಾರೆ ! ಭಾರತದಲ್ಲಿ ಪಾಕ್ ಕಲಾವಿದರಿಗೆ ಗೌರವ ಸಿಗುತ್ತದೆ, ಬದಲಾಗಿ ಪಾಕ್ ಕಲಾವಿದರರು ಮಾತ್ರ ಭಾರತದ್ವೇಷವನ್ನು ಪ್ರಕಟಿಸಲು ಒಂದು ಅವಕಾಶವನ್ನೂ ಬಿಡುವುದಿಲ್ಲ. ನಿನ್ನೆಯಷ್ಟೇ ಪಾಕಿಸ್ತಾನಿ ಕಲಾವಿದನಾದ ಹಮಜಾ ಅಲಿ ಅಬ್ಬಾಸಿ, ಭಾರತದ ಸೇನೆ ಕಾಶ್ಮೀರ ರಾಜ್ಯದಲ್ಲಿ ಕೊಂದ ೧೧೭ ಜನರ ಬಗ್ಗೆ ದುಃಖ ವ್ಯಕ್ತ ಪಡಿಸಿದಾಗಲೇ ನಾನು ಹುತಾತ್ಮರಾದ ೧೮ ಸೈನಿಕರ ಬಗ್ಗೆ ದುಃಖ ವ್ಯಕ್ತಪಡಿಸುವೆನು, ಎಂದು ಉದ್ರೇಕಕಾರಿ ಹೇಳಿಕೆ ನೀಡಿದ್ದಾನೆ.
ಅಪರಾಧಿವೃತ್ತಿಯ ಪಾಕಿಸ್ತಾನಿ ಕಲಾವಿದರು !
  ಪಾಕಿಸ್ತಾನಿ ಗಾಯಕರು ಸಹಜವಾಗಿ ಅವರ ಕಲೆಯನ್ನು ಭಾರತದಲ್ಲಿ ತೋರಿಸುತ್ತಾರೆ, ತದ್ವಿರುದ್ಧವಾಗಿ ಭಾರತೀಯ ಗಾಯಕರಿಗೆ ಪಾಕಿಸ್ತಾನದಲ್ಲಿ ತಮ್ಮ ಸಂಗೀತವನ್ನು ಪ್ರದರ್ಶಿಸಲು ನಿರ್ಬಂಧವಿದೆ. ಕಲಾವಿದರ ವಿಷಯದಲ್ಲಿಯೂ ಇದೇ ನಡೆಯುತ್ತಿದೆ. ಪಾಕಿಸ್ತಾನಿ ಕಲಾವಿದರು ಭಾರತಕ್ಕೆ ಬಂದು ದೊಡ್ಡ ಪ್ರಮಾಣದಲ್ಲಿ ಪ್ರಸಿದ್ಧಿ ಹಾಗೂ ಕೋಟಿಗಟ್ಟಲೆ ರೂಪಾಯಿಗಳನ್ನು ಸಂಪಾದಿಸುತ್ತಾರೆ ಹಾಗೂ ಭಾರತೀಯ ಕಲಾವಿದರ ಹೊಟ್ಟೆಗೆ ಒದೆಯುತ್ತಾರೆ. ಈ ಕಲಾವಿದರು ಕೇವಲ ಭಾರತಕ್ಕೆ ಬರುವುದು ಮಾತ್ರವಲ್ಲ, ಜೊತೆಗೆ ಹಲವಾರು ಕಲಾವಿದರು ತಮ್ಮ ಪಾಸ್‌ಪೋರ್ಟ್ ಅವಧಿ ಮುಗಿದ ಬಳಿಕವೂ ಕಾನೂನುಬಾಹಿರವಾಗಿ ಭಾರತದಲ್ಲಿ ನೆಲೆಸಿದ್ದಾರೆ. ಕೆಲವರ ಮೇಲೆ ಮೋಸ ಹಾಗೂ ಇತರ ಅಪರಾಧಗಳನ್ನು ದಾಖಲಿಸಲಾಗಿದೆ.  ಇಷ್ಟೆಲ್ಲಾ ಆದರೂ ಶತ್ರುರಾಷ್ಟ್ರವಾಗಿರುವ ಪಾಕಿಸ್ತಾನಿ ಕಲಾವಿದರ ಬಗ್ಗೆ ಭಾರತ ಸರಕಾರವು ಮಾತ್ರ ಸೌಮ್ಯ ಭೂಮಿಕೆ ವಹಿಸುತ್ತಿದೆ ! ಇತ್ತೀಚೆಗೆ ಕೆಲವು ತಿಂಗಳ ಹಿಂದೆ ಪಾಕ್ ಗಾಯಕನಾದ ಆದಾನ್ ಸಾಮಿ ಮೇಲೆ ಅಪರಾಧ ದಾಖಲಾಗಿದ್ದರೂ ಅವನಿಗೆ ಭಾರತದ ನಾಗರಿಕತ್ವ ವನ್ನು ನೀಡಲಾಯಿತು.
ಪಾಕ್ ಕಲಾವಿದರಿಗೆ ಅನುವು ಮಾಡಿಕೊಡುವರನ್ನು ಬಹಿಷ್ಕರಿಸಿ !
ಕಲಾವಿದರ ನಡುವೆ ರಾಜೂ ಶ್ರೀವಾಸ್ತವರಂತಹ ಕೆಲವು ದೇಶಪ್ರೇಮಿ ಕಲಾವಿದರು ಸಹ ಇದ್ದಾರೆ. ಅವರು, ‘ನನ್ನನ್ನು ಪಾಕಿಸ್ತಾನದಲ್ಲಿ ಹಾಸ್ಯ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ; ಆದರೆ ಯಾವ ದೇಶದ ಜನರು ನನ್ನ ಸೈನಿಕರ ಕೊಲೆಗೆ ಜವಾಬ್ದಾರರಾಗಿದ್ದಾರೆಯೋ, ಆ ದೇಶದ ಜನರಿಗೆ ನಾನೇಕೆ ಮನೋರಂಜನೆ ನೀಡಬೇಕು ?’ ಎಂದು ಹೇಳಿದರು. ಇವರಂತವರಿಂದ ಕರಣ್ ಜೋಹರ್‌ರಂತಹವರಿಗೆ ಕಪಾಳಮೋಕ್ಷವಾಗಿದೆ. ಮುಂಬರುವ ದೀಪಾವಳಿಯಂದು ಜೋಹರ್ ನಿರ್ದೇಶನದಲ್ಲಿ ಹಾಗೂ ಪಾಕ್ ಕಲಾವಿದ ಫವಾದ್ ಖಾನ್ ಅಭಿನಯಿಸಿದ ‘ಏ ದಿಲ್ ಹೈ ಮುಶ್ಕಿಲ್ ಮೆ’ ಚಲನಚಿತ್ರವು ಬಿಡುಗಡೆಯಾಗಲಿದ್ದು ಅದಕ್ಕೆ ಈಗಿನಿಂದಲೇ ದೊಡ್ಡ ಪ್ರಮಾಣದಲ್ಲಿ ವಿರೋಧವಾಗುತ್ತಿದೆ. ಈಗಿನ ಸ್ಥಿತಿಯಲ್ಲಿ ಭಾರತ ಸರಕಾರವು ಪಾಕ್ ಕಲಾವಿದರ ವಿಷಯದಲ್ಲಿ ಏನಾದರೂ ಮಾಡುವುದೆಂಬ ಅಪೇಕ್ಷೆಯಿಟ್ಟುಕೊಳ್ಳದೆ ಪಾಕಿಸ್ತಾನಿ ಗಾಯಕರು ಹಾಗೂ ಕಲಾವಿದರನ್ನು ತಕ್ಷಣ ಭಾರತದಿಂದ ಹೊರದಬ್ಬಬೇಕು ಹಾಗೂ ಅವರ ಮೇಲೆ ಶಾಶ್ವತವಾಗಿ ನಿಷೇಧ ಹೇರಲಿ, ಎಂಬ ಬೇಡಿಕೆಯನ್ನು ನಾಗರಿಕರೇ ಎತ್ತಿ ಹಿಡಿಯಬೇಕು !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕ್ ಕಲಾವಿದರನ್ನು ದೇಶದಿಂದ ಹೊರದಬ್ಬಿ !