ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿಗಳು ಮಾಡಿದ ಯುಕ್ತಿವಾದ !

ಒಬ್ಬನ ಬಗ್ಗೆ ಕೇವಲ ಪೊಲೀಸರಿಗೆ ಸಂಶಯವಿದೆ ಎಂದು ಅವನನ್ನು ಬಂಧಿಸಲಾಗುವುದಿಲ್ಲ !
 - ನ್ಯಾಯವಾದಿ ಶ್ರೀ. ವೀರೇಂದ್ರ ಇಚಲಕರಂಜೀಕರ್
ಯುಕ್ತಿವಾದದ ಸಮಯದಲ್ಲಿ ನ್ಯಾಯವಾದಿ ಶ್ರೀ. ವೀರೇಂದ್ರ ಇಚಲಕರಂಜೀಕರರು ಮಂಡಿಸಿದ ಅಂಶಗಳು
೧. ಯಾವ ವ್ಯಕ್ತಿಯ ಮೇಲೆ ಕೊಲೆಯ ಆರೋಪ ಮಾಡಲಾಗುತ್ತಿದೆಯೋ, ಆ ವ್ಯಕ್ತಿಯು ಒಬ್ಬ ಸಾಮಾನ್ಯ ವ್ಯಕ್ತಿಯಾಗಿರದೇ ಎಮ್‌ಡಿ ಆಗಿರುವ ಓರ್ವ ಖ್ಯಾತ ಡಾಕ್ಟರ್ ಆಗಿದ್ದಾರೆ.
೨. ಕೇಂದ್ರೀಯ ತನಿಖಾ ದಳವು ಅವರ ವಿಚಾರಣೆ ಮಾಡಿದಾಗ ಅವರು ಸಂಪೂರ್ಣ ಸಹಕಾರ ನೀಡಿದರು. ಡಾ. ತಾವಡೆಯವರನ್ನು ಕೇಂದ್ರೀಯ ತನಿಖಾ ದಳದವರು ೧೦ ದಿನ ವಿಚಾರಣೆ ನಡೆಸಿದ್ದರು. ಆ ಸಮಯದಲ್ಲಿ ಡಾಕ್ಟರರು ಎಲ್ಲಿಯೂ ಪಲಾಯನ ಗೈಯಲಿಲ್ಲ.

೩. ನ್ಯಾಯಾಲಯವು ಡಾ. ವೀರೇಂದ್ರಸಿಂಹ ತಾವಡೆಯವರನ್ನು ಎಸ್‌ಐಟಿಯವರು ವಶಕ್ಕೆ ತೆಗೆದು ಕೊಳ್ಳಲು ಜೂನ್ ೨೦ ರಂದು ಅನುಮತಿ ನೀಡಿದ್ದರೂ ಕಳೆದ ೭೫ ದಿನಗಳಾದರೂ ಎಸ್‌ಐಟಿಯು ಅವರನ್ನು ಏಕೆ ವಶಕ್ಕೆ ತೆಗೆದುಕೊಳ್ಳಲಿಲ್ಲ ?
೪. ಈ ಪ್ರಕರಣದಲ್ಲಿ ಪೊಲೀಸರು ಏನನ್ನೂ ಮಂಡಿಸಲಿಲ್ಲ. ಕೇವಲ ಪೊಲೀಸರಿಗೆ ಇಚ್ಛೆ ಇದೆ ಮತ್ತು ಕೇವಲ ಅವರಿಗೆ ಸಂಶಯವೆನಿಸುತ್ತದೆ ಎಂದು ಒಬ್ಬ ನಿರಪರಾಧಿಯನ್ನು ಖಟ್ಲೆಯ ಹೆಸರಿನಲ್ಲಿ ಎಷ್ಟು ದಿನ ಪೊಲೀಸ್ ಕಸ್ಟಡಿಯಲ್ಲಿಡುತ್ತೀರಿ ?
೫. ಡಾ. ತಾವಡೆಯವರಿಗೆ ಡಾ. ದಾಭೋಳಕರ ಮತ್ತು ಕಾ. ಪಾನ್ಸಾರೆ ಕೊಲೆಯ ಪ್ರಕರಣದೊಂದಿಗೆ ಸಂಬಂಧವಿದೆ ಎಂಬ ಭ್ರಮೆಯನ್ನು ನಿರ್ಮಿಸಲಾಗು ತ್ತಿದೆ. ಕಳೆದ ೧ ವರ್ಷದಾದ್ಯಂತ ಪೊಲೀಸರು ಯಾವುದೇ ಪ್ರಕರಣದ ಸಬಲ ಪುರಾವೆಯನ್ನು ಇನ್ನೂ ಪ್ರಸ್ತುತ ಪಡಿಸಲಿಲ್ಲ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿಗಳು ಮಾಡಿದ ಯುಕ್ತಿವಾದ !