ಸಾಧಕರೇ, ಅಸೂಯೆಯ ವಿಚಾರದಿಂದಾಗಿ ತಮ್ಮ ಸಾಧನೆಯಲ್ಲಾಗುವ ಹಾನಿಯನ್ನು ತಡೆಗಟ್ಟಲು ಯೋಗ್ಯ ದೃಷ್ಟಿಕೋನದೊಂದಿಗೆ ಕಠೋರ ಪ್ರಯತ್ನವನ್ನು ಮಾಡಿರಿ !

ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ ಈ ಷಡ್ರಿಪುಗಳು ಪ್ರತಿಯೊಬ್ಬರಲ್ಲಿಯೂ ಹೆಚ್ಚು-ಕಡಿಮೆ ಪ್ರಮಾಣದಲ್ಲಿರುತ್ತವೆ. ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಅವುಗಳು ಪ್ರಮುಖ ಅಡಚಣೆಗಳಾಗಿರುವುದರಿಂದ ಅವುಗಳ ನಿರ್ಮೂಲನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಅಸೂಯೆಯು ಎಲ್ಲಕ್ಕಿಂತ ಅಪಾಯಕಾರಿ ರಿಪುವಾಗಿದೆ !
೧. ಅಸೂಯೆ ನಿರ್ಮಾಣವಾಗುವ ಕಾರಣಗಳು ಮತ್ತು ಅವುಗಳ ಲಕ್ಷಣಗಳು
ವ್ಯಕ್ತಿಯು ಒಬ್ಬಂಟಿ ಸ್ವಭಾವದವನಾಗಿದ್ದರೆ ಹಾಗೂ ಅವನಿಗೆ ಮನಸ್ಸುಬಿಚ್ಚಿ ಮಾತನಾಡುವ ಅಭ್ಯಾಸವಿಲ್ಲದಿದ್ದರೆ ಮತ್ಸರದ ವಿಚಾರಗಳು ಅಧಿಕವಿರುತ್ತದೆಯೆಂದು ಕಂಡುಬರುತ್ತದೆ. ಇತರರೊಂದಿಗೆ ತುಲನೆ ಯಾದಾಗ ವಿಚಾರಗಳಿಗೆ ಸರಿಯಾದ ದಿಶೆಯನ್ನು ನೀಡದಿದ್ದರೆ ಅಸೂಯೆಯ ವಿಚಾರಗಳು ಉದ್ಭವಿಸುತ್ತವೆ. ಇತರರಿಗೆ ಒಳ್ಳೆಯದಾದಲ್ಲಿ ಅಸೂಯೆ ಯುಂಟಾಗುವುದು ಅವರಿಗೆ ಮಾನ-ಸನ್ಮಾನಗಳು ದೊರೆತರೆ ತನ್ನ ಅಹಂಗೆ ಅಡ್ಡಿಯಾಗುವುದು. ಅವರ ಬಗ್ಗೆ ಅಸೂಯೆಯುಂಟಾಗುವುದು, ಅವರ ಬಗ್ಗೆ ಕೆಟ್ಟ ಯೋಚನೆ ಮಾಡುವುದು ಇವುಗಳೆಲ್ಲ ಅಸೂಯೆಯ ಲಕ್ಷಣಗಳಾಗಿವೆ.
೨. ಸಾಧಕರ ಮನಸ್ಸಿನಲ್ಲಿರುವ ಅಸೂಯೆಯನ್ನು ತೋರಿಸುವ ಕೆಲವು ವಿಚಾರಗಳು
೨ ಅ. ಅನೇಕ ದೋಷಗಳಿದ್ದರೂ ಈ ಸಾಧಕನು ಜನ್ಮ-ಮೃತ್ಯುವಿನ ಚಕ್ರದಿಂದ ಹೇಗೆ ಮುಕ್ತನಾದನು ?
೨ ಅ ೧. ಅಯೋಗ್ಯ ವಿಚಾರ : ಬಹಳಷ್ಟು ಸಾಧಕರ ಮನಸ್ಸಿನಲ್ಲಿ ಇಂತಹ ಸಾಧಕನಲ್ಲಿ ಅನೇಕ ಸ್ವಭಾವದೋಷಗಳು ಮತ್ತು ಅಹಂನ ಲಕ್ಷಣ ಗಳಿವೆ. ಆದರೂ ಅವನ ಪ್ರಗತಿ ಹೇಗಾಯಿತು ? ಎನ್ನುವ ವಿಚಾರಗಳು ಉದ್ಭವಿಸುತ್ತವೆ.
೨ ಅ ೨. ಯೋಗ್ಯ ದೃಷ್ಟಿಕೋನ : ತನ್ನನ್ನು ಬದಲಾಯಿಸಿಕೊಳ್ಳುವ ತಳಮಳ, ಕೇಳುವ ಮತ್ತು ಸ್ವೀಕರಿಸುವ ವೃತ್ತಿಯಿದ್ದರೆ, ಸಾಧಕರಿಗೆ ಸ್ವಭಾವದೋಷ ಮತ್ತು ಅಹಂಗಳ ಮೇಲೆ ಸಹಜವಾಗಿ ಹಿಡಿತವನ್ನು ಸಾಧಿಸಲು ಸಾಧ್ಯವಾಗುತ್ತದೆ. ಇಂತಹ ಸಾಧಕರಲ್ಲಿರುವ ವಿವಿಧ ಗುಣಗಳ ಆಧಾರದಲ್ಲಿ ಭಗವಂತನು ಅವರ ಪ್ರಗತಿಯನ್ನು ಮಾಡಿಸಿಕೊಳ್ಳುತ್ತಿದ್ದಾನೆ. ಇದರಿಂದ ಮೇಲೆ ನೀಡಿದಂತೆ ಬಹಿರ್ಮುಖತೆಯ ವಿಚಾರ ಮಾಡುವುದಕ್ಕಿಂತ ದೋಷ ಗಳಿರುವಾಗಲೂ ಅದನ್ನು ಹಿಡಿತದಲ್ಲಿಟ್ಟುಕೊಂಡು ಸಾಧಕನು ಯಾವ ರೀತಿ ಯಲ್ಲಿ ಪ್ರಗತಿಯನ್ನು ಹೊಂದಿದನು ? ಎನ್ನುವುದನ್ನು ಜಿಜ್ಞಾಸೆಯಿಂದ ತಿಳಿದುಕೊಳ್ಳಬೇಕು ಮತ್ತು ಆ ರೀತಿ ಪ್ರಯತ್ನಿಸಬೇಕು.
ಇಷ್ಟೊಂದು ತಪ್ಪುಗಳಾಗಿದ್ದರೂ ಕೆಲವು ಸಾಧಕರಿಗೆ ಸೇವೆಯ ಜವಾಬ್ದಾರಿಯನ್ನು ಏಕೆ ನೀಡಲಾಗಿದೆ ? ಎನ್ನುವ ವಿಚಾರ ಮನಸ್ಸಿನಲ್ಲಿ ಮೂಡುತ್ತಿದ್ದರೆ, ಮೇಲಿನ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಳ್ಳಬೇಕು.
೨ ಆ. ಯಾವುದೇ ಸೇವೆಯನ್ನು ಮಾಡದಿರುವ ಸಾಧಕರ ಆಧ್ಯಾತ್ಮಿಕ ಉನ್ನತಿ ಹೇಗಾಯಿತು ?

೨ ಆ ೧. ಅಯೋಗ್ಯ ವಿಚಾರ : ಬಹಳಷ್ಟು ಸಾಧಕರ ಮನಸ್ಸಿನಲ್ಲಿ ಆ ಸಾಧಕನು ಯಾವುದೇ ಸೇವೆ ಮಾಡುವುದಿಲ್ಲ. ಆದರೂ ಅವನ ಆಧ್ಯಾತ್ಮಿಕ ಉನ್ನತಿ ಹೇಗಾಯಿತು ? ಎನ್ನುವ ವಿಚಾರ ಮೂಡುತ್ತದೆ.
೨ ಆ ೨. ಯೋಗ್ಯ ದೃಷ್ಟಿಕೋನ : ಬಹಳಷ್ಟು ಸಾಧಕರಿಗೆ ತೀವ್ರ ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಯಿರುವುದರಿಂದ ಅವರಿಗೆ ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಅವರಲ್ಲಿ ಶ್ರೀ ಗುರುಗಳ ಬಗ್ಗೆ ಉತ್ಕಟ ಭಾವ, ಸೇವೆಯ ತಳಮಳ, ಸಾಧಕತ್ವ ಮತ್ತು ದೃಢ ಶ್ರದ್ಧೆಯಿರುವುದರಿಂದ ಅವರ ಅಂತರ್ಮನದಲ್ಲಿ ನಡೆಯುವ ಸಾಧನೆ ಗುರುಗಳಿಗೆ ತಲುಪುತ್ತದೆ ಮತ್ತು ಆ ಸ್ಥಿತಿಯಲ್ಲಿಯೂ ಅವರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ. ಕಾರ್ಯವಲ್ಲ, ಸಾಧಕರು ಮಾಡಿದ ಸಾಧನೆಯ ಪ್ರಯತ್ನವೇ ಅವರ ಪ್ರಗತಿಗೆ ಸಹಾಯಕವಾಗುತ್ತದೆ, ಪ.ಪೂ. ಗುರುಗಳ ವಚನದಂತೆ, ಬಾಹ್ಯ ಪರಿಸ್ಥಿತಿಯನ್ನು ನೋಡಿ ಇತರರ ಪ್ರಗತಿಯ ಮೌಲ್ಯಮಾಪನ ಮಾಡುವುದು ಅತ್ಯಂತ ಅಯೋಗ್ಯವಾಗಿದೆ. ಇಂತಹ ಅಸೂಯೆಯ ವಿಚಾರಗಳಲ್ಲಿ ಸಿಲುಕಿ ತಮ್ಮ ಸಾಧನೆಯ ಹಾನಿಯನ್ನು ಮಾಡಿಕೊಳ್ಳುವುದರ ಬದಲು ಆ ಸಾಧಕನಿಂದ ಕಲಿಯುವ ಸ್ಥಿತಿಯಲ್ಲಿರಬೇಕು. ಎದುರಿನ ಸಾಧಕರಿಂದ ಏನು ಕಲಿಯಬಹುದು, ಎನ್ನುವ ವಿಷಯದ ಬಗ್ಗೆ ಜವಾಬ್ದಾರ ಸಾಧಕರಿಂದ ಮಾರ್ಗದರ್ಶನ ಪಡೆಯಬೇಕು.
೨ ಇ. ಸಹಸಾಧಕರ ಪ್ರಗತಿಯಾದಾಗ ನನ್ನ ಪ್ರಗತಿಯಾಗಿಲ್ಲವೆಂದು ಅನಿಸುವುದು
೨ ಇ ೧. ಅಯೋಗ್ಯ ವಿಚಾರ : ಸಹಸಾಧಕರ ಪ್ರಗತಿಯಾದಾಗ ಬಹಳಷ್ಟು ಸಾಧಕರಿಗೆ ಈ ಸಾಧಕ ಮತ್ತು ನಾನು ಸಾಧನೆಗೆ ಒಟ್ಟಿಗೆ ಬಂದೆವು. ಅವನ ಪ್ರಗತಿಯಾಯಿತು, ಆದರೆ ನನ್ನ ಪ್ರಗತಿಯಾಗಲಿಲ್ಲ ಎನ್ನುವ ವಿಚಾರ ಮನಸ್ಸಿನಲ್ಲಿ ಮೂಡುತ್ತದೆ. ಇದರಿಂದ ಅವರು ಆ ಸಾಧಕರ ಪ್ರಗತಿಯ ಆನಂದವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.
೨ ಇ ೨. ಯೋಗ್ಯ ದೃಷ್ಟಿಕೋನ : ಪ್ರತಿಯೊಬ್ಬರದ್ದೂ ಅವರ ಹಿಂದಿನ ಜನ್ಮದ ಸಾಧನೆ, ಪ್ರಾರಬ್ಧ, ಕ್ರಿಯಾಮಾಣ ಕರ್ಮ ಬೇರೆ ಬೇರೆಯಾಗಿ ರುತ್ತದೆ. ಆದ್ದರಿಂದ ಇತರರೊಂದಿಗೆ ತುಲನೆ ಮಾಡುವುದು ಸಂಪೂರ್ಣ ಅಯೋಗ್ಯವಾಗಿದೆ. ಇತರರಲ್ಲಿರುವ ಯಾವ ಸದ್ಗುಣಗಳಿಂದ ಅವರ ಪ್ರಗತಿ ಯಾಗಿದೆಯೆಂದು ನಿರೀಕ್ಷಣೆ ಮಾಡಬೇಕು. ಅದು ಸಾಧ್ಯವಾಗದಿದ್ದರೆ, ಕೆಲವು ವರ್ಷಗಳ ಹಿಂದೆ ನಾನು ಹೇಗಿದ್ದೆನು ಮತ್ತು ಸಾಧನೆ ಮಾಡಲು ಆರಂಭಿಸಿದ ನಂತರ ನನ್ನಲ್ಲಿ ಯಾವ ಬದಲಾವಣೆಗಳಾಗಿವೆ ? ಎಂದು ನೆನಪಿಸಿಕೊಳ್ಳಬೇಕು. ಇದರಿಂದ ಮನಸ್ಸಿಗೆ ಸಕಾರಾತ್ಮಕ ವಿಚಾರ ಹೆಚ್ಚಾಗಿ ಪ್ರಯತ್ನಿಸುವ ಉತ್ಸಾಹ ನಿರ್ಮಾಣವಾಗುತ್ತದೆ.
ಎದುರಿಗಿರುವವನ ಪ್ರಗತಿಯಾಯಿತೆಂದರೆ ನನ್ನದೂ ಆಗುವುದು ಎನ್ನುವ ಶ್ರದ್ಧೆಯೊಂದಿಗೆ ಸಾಧನೆಯಲ್ಲಿ ನಿರತರಾದಲ್ಲಿ ಇತರರ ಪ್ರಗತಿಯ ಆನಂದವನ್ನು ಅನುಭವಿಸಲು ಏಕೆ ಸಾಧ್ಯವಾಗುವುದಿಲ್ಲ ?
೨ ಇ. ಇತರರನ್ನು ಪ್ರಶಂಸಿಸಿದಾಗ ಅವರಲ್ಲಿರುವ ದೋಷಗಳು ನೆನಪಾಗುವುದು
೨ ಇ ೧. ಅಯೋಗ್ಯ ವಿಚಾರ : ಜವಾಬ್ದಾರ ಸಾಧಕರು ಒಬ್ಬ ಸಾಧಕನನ್ನು ಹೊಗಳಿದರೆ ಬಹಳಷ್ಟು ಸಾಧಕರಿಗೆ ಅವನಲ್ಲಿರುವ ದೋಷಗಳು ನೆನಪಾಗುತ್ತವೆ.
೨ ಇ ೨. ಯೋಗ್ಯ ದೃಷ್ಟಿಕೋನ : ಭಗವಂತನು ನನ್ನಲ್ಲಿ ಯಾವ ಗುಣವನ್ನು ನೀಡಿದ್ದಾನೆ, ಎನ್ನುವುದನ್ನು ನೆನಪಿಸಿಕೊಂಡರೆ ಇಂತಹ ವಿಚಾರ ಗಳನ್ನು ಹೊಡೆದೋಡಿಸಲು ಸುಲಭವಾಗುವುದು. ಅದಕ್ಕಾಗಿ ಸಾಧಕರು ಮುಂದೆ ತಿಳಿಸಿದಂತೆ ಗುಣಗಳ ಸೂಚನೆಯನ್ನು ನೀಡಬೇಕು.
ಅ. ಮಾನಸಿಕ ಸ್ತರದಲ್ಲಿ ಸೂಚನೆ : ನನ್ನಲ್ಲಿ ...... ಈ ಶಾರೀರಿಕ ...... ಈ ಮಾನಸಿಕ ...... ಈ ಬೌದ್ಧಿಕ ...... ಮತ್ತು ...... ಈ ಆಧ್ಯಾತ್ಮಿಕ ಗುಣಗಳಿವೆ. ಈ ಗುಣಗಳ ಆಧಾರದಲ್ಲಿ ನಾನು ನನ್ನ ಜೀವನವನ್ನು ಯಶಸ್ವಿ ಗೊಳಿಸಲು ಪ್ರಯತ್ನಿಸುತ್ತೇನೆ.
ಆ. ಆಧ್ಯಾತ್ಮಿಕ ಸ್ತರದಲ್ಲಿ ಸೂಚನೆ : ನನಗೆ ದೇವರು ...... ಈ ಶಾರೀರಿಕ ...... ಈ ಮಾನಸಿಕ ...... ಈ ಬೌದ್ಧಿಕ ...... ಮತ್ತು ...... ಈ ಆಧ್ಯಾತ್ಮಿಕ ಗುಣಗಳನ್ನು ನೀಡಿದ್ದಾನೆ. ಅದಕ್ಕಾಗಿ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸು ತ್ತೇನೆ. ಈ ಗುಣಗಳ ಮೂಲಕ ನನ್ನ ಜೀವನವನ್ನು ಸಾರ್ಥಕಗೊಳಿಸಲು ಈಶ್ವರನ ಚರಣಗಳಲ್ಲಿ ಅಥವಾ ಗುರುಚರಣಗಳಲ್ಲಿ ಪ್ರಾರ್ಥಿಸುತ್ತೇನೆ.
ಇತರರನ್ನು ಹೊಗಳಿದಾಗ ಅದನ್ನು ಆನಂದದಿಂದ ಸ್ವೀಕರಿಸಲು ಸಾಧ್ಯ ವಾದರೆ ನಮ್ಮ ಪ್ರಗತಿಯೂ ಶೀಘ್ರವಾಗಿ ಆಗುವುದು ಎಂದು ಪ.ಪೂ. ಡಾಕ್ಟರರ ವಚನವಿದೆ. ಆದುದರಿಂದ ಮೇಲಿನ ಅಯೋಗ್ಯ ವಿಚಾರ ಸರಣಿ ಯಿಂದ ಆದಷ್ಟು ಬೇಗ ಹೊರಬರಲು ಪ್ರಯತ್ನಿಸಬೇಕು.
೨ ಉ. ಇತರರ ಪ್ರಯತ್ನ ಕಡಿಮೆಯಾದ ಕೂಡಲೇ ಮನಸ್ಸಿಗೆ ಒಳ್ಳೆಯದೆನಿಸುವುದು
೨ ಉ ೧. ಅಯೋಗ್ಯ ವಿಚಾರ : ಜವಾಬ್ದಾರ ಸಾಧಕರು ಇತರ ಸಾಧಕರಿಗೆ ಅವರಿಂದಾದ ತಪ್ಪುಗಳನ್ನು ಗಮನಕ್ಕೆ ತಂದುಕೊಟ್ಟಾಗ ಅಥವಾ ಸಹಸಾಧಕರ ಸಾಧನೆಯಲ್ಲಿ ಪ್ರಯತ್ನಗಳು ಕಡಿಮೆಯಾದಾಗ ಮನಸ್ಸಿಗೆ ಒಳ್ಳೆಯದೆನಿಸುತ್ತದೆಯೆಂದು ಕೆಲವು ಸಾಧಕರು ಹೇಳುತ್ತಾರೆ.
೨ ಉ ೨. ಯೋಗ್ಯ ದೃಷ್ಟಿಕೋನ : ಇತರರ ವಿಷಯದಲ್ಲಿ ವಿರುದ್ಧ ಘಟನೆ ನಡೆದಾಗ ಒಳ್ಳೆಯದೆನಿಸುವುದು ತೀವ್ರ ಅಸೂಯೆಯ ದ್ಯೋತಕವಾಗಿದೆ. ಅದನ್ನು ಹೊಡೆದೋಡಿಸಲು ಸ್ವಯಂಸೂಚನಾ ಸತ್ರವನ್ನು ನೀಡಬೇಕು. ತಪ್ಪಾದಾಗ ಸಹಸಾಧಕರಿಗೆ ನಾನು ಸಾಧನೆಯಲ್ಲಿ ಹೇಗೆ ಸಹಾಯ ಮಾಡಬಹುದು ಎನ್ನುವ ವಿಚಾರವನ್ನಿಟ್ಟುಕೊಂಡು ಅಂತರ್ಮುಖತೆಯಿಂದ ಸಹಾಯ ಮಾಡಬೇಕು.
೨ ಊ. ಸಹಸಾಧಕರಿಗೆ ವಿವಿಧ ಸೇವೆಗಳು ದೊರೆತಾಗ ಅಸೂಯೆಯೆನಿಸುವುದು
೨ ಊ ೧. ಅಯೋಗ್ಯ ವಿಚಾರ : ಇತರರಿಗೆ ಬೇರೆ ಬೇರೆ ರೀತಿಯ ಸೇವೆಗಳನ್ನು ನೀಡಲಾಗುತ್ತದೆ; ಆದರೆ ನನಗೆ ನೀಡುವುದಿಲ್ಲ ಎಂಬ ವಿಚಾರದಿಂದ ಬಹಳಷ್ಟು ಸಾಧಕರಿಗೆ ಅಸೂಯೆಯುಂಟಾಗುತ್ತದೆ.
೨ ಊ ೨. ಯೋಗ್ಯ ದೃಷ್ಟಿಕೋನ : ಸಾಧಕರಿಗೆ ಇಷ್ಟವಾಗುವ ಸೇವೆಯನ್ನು ನೀಡಿದರೆ ಅವರಿಂದ ಆ ಸೇವೆಯು ಮನಃಪೂರ್ವಕವಾಗಿ ಆಗುತ್ತದೆ ಮತ್ತು ಅದರಿಂದ ಅವರ ಪ್ರಗತಿಯಾಗುತ್ತದೆ. ಆದುದರಿಂದ ಸಾಧಕರಿಗೆ ಸಾಧ್ಯವಾದಷ್ಟು ಅವರಿಗೆ ಇಷ್ಟವಾಗುವ ಸೇವೆಯನ್ನು ನೀಡಲಾಗುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ಸಾಧಕರ ಕ್ಷಮತೆ, ಕೌಶಲ್ಯ ಮತ್ತು ಸೇವೆಯ ಅವಶ್ಯಕತೆ ಇವುಗಳನ್ನು ಪರಾಮರ್ಶಿಸಿ ಅದಕ್ಕನುಸಾರವಾಗಿ ಅವರಿಗೆ ಇತರ ಸೇವೆಯನ್ನು ನೀಡಬೇಕಾಗುತ್ತದೆ. ಯಾವುದಾದರೂ ಸಾಧಕನಲ್ಲಿ ವಿಶೇಷವಾದ ಸೇವೆಯ ಕೌಶಲ್ಯತೆಯಿದ್ದರೆ ಮತ್ತು ಅವನ ಆಸಕ್ತಿಯು ಬೇರೆ ಸೇವೆಯಲ್ಲಿದ್ದರೆ ಅವನ ಆಸಕ್ತಿಯ ಸೇವೆಯನ್ನು ಕಲಿಸಿ, ಅದನ್ನು ಮಾಡಿಸಿಕೊಳ್ಳುವುದು ಪ್ರತೀಸಲ ಸಾಧ್ಯವಾಗುವುದಿಲ್ಲ. ಆದುದರಿಂದ ಯಾವ ಸೇವೆಯಲ್ಲಿ ಅವರ ಕೌಶಲ್ಯವಿದೆಯೋ, ಅದನ್ನು ಆಯಾ ಸಾಧಕರಿಗೆ ನೀಡಲಾಗುತ್ತದೆ.
ನನಗೆ ಇದೇ ಸೇವೆ ದೊರೆಯಬೇಕು ಎನ್ನುವುದು ಸ್ವೇಚ್ಛೆಯಾಗಿದೆ. ನನ್ನ ಪ್ರಗತಿಗೆ ಯಾವುದು ಅವಶ್ಯಕವಿದೆಯೆನ್ನುವುದು ನನಗಿಂತ ಹೆಚ್ಚು ಭಗವಂತನಿಗೆ ತಿಳಿದಿದೆ ಎನ್ನುವುದನ್ನು ಗಮದಲ್ಲಿಟ್ಟುಕೊಂಡು ಆನಂದದಿಂದ ಪರಿಸ್ಥಿತಿಯನ್ನು ಸ್ವೀಕರಿಸಬೇಕು ಮತ್ತು ನೀಡಿರುವ ಸೇವೆಯನ್ನು ಸಾಧ್ಯವಾದಷ್ಟು ಅಧಿಕ ಪರಿಪೂರ್ಣವಾಗಿ ಮಾಡಲು ಪ್ರಯತ್ನಿಸಬೇಕು.
೨ ಎ. ತನ್ನ ತುಲನೆಯನ್ನು ಇತರರೊಂದಿಗೆ ಮಾಡಿಕೊಂಡು ಅಸೂಯೆ ಪಡುವುದು
೨ ಎ ೧. ಅಯೋಗ್ಯ ವಿಚಾರ : ಇತರ ಸಾಧಕರು ಅಧಿಕ ಸಮಯ ಸೇವೆ ಮಾಡುತ್ತಾರೆ ಮತ್ತು ನಾನೂ ಮಾಡಬೇಕು ಎಂದು ಕೆಲವು ಸಾಧಕರಿಗೆ ಅನಿಸುತ್ತದೆ. ಆದರೆ ಹಾಗೆ ಮಾಡಲು ಸಾಧ್ಯವಾಗದಿದ್ದಲ್ಲಿ ಅವರಿಗೆ ನಿರಾಶೆಯಾಗುತ್ತದೆ.
೨ ಎ ೨. ಯೋಗ್ಯ ದೃಷ್ಟಿಕೋನ : ಸಾಧಕರಲ್ಲಿ ಇರುವುದನ್ನು ಅವರು ಸಮರ್ಪಿತಭಾವದಿಂದ ಗುರುಚರಣಗಳಿಗೆ ಅರ್ಪಿಸುವುದೇ ನಿಜವಾದ ಸಾಧನೆಯಾಗಿದೆ. ಇದರಿಂದ ಸಾಧಕರು ಅವರ ಗುಣ, ಕ್ಷಮತೆಯನ್ನು ಸಮರ್ಪಕವಾಗಿ ಉಪಯೋಗಿಸಿ ಪರಿಪೂರ್ಣ ಸೇವೆಯನ್ನು ಮಾಡಿದರೆ ಖಂಡಿತವಾಗಿಯೂ ಅದರಿಂದ ಅವರ ಸಾಧನೆಯಾಗುತ್ತದೆ. ಇದರಿಂದ ಇತರರೊಂದಿಗೆ ತುಲನೆಯನ್ನು ಮಾಡದೇ ನಾನು ನನ್ನ ಶಾರೀರಿಕ ಕ್ಷಮತೆ, ಆಧ್ಯಾತ್ಮಿಕ ತೊಂದರೆ, ಕೌಶಲ್ಯಗಳ ಅಧ್ಯಯನ ಮಾಡಿ ಸಾಧ್ಯವಾದಷ್ಟು ಸಮಯವನ್ನು ಸೇವೆಗೆ ನೀಡುತ್ತಿದ್ದೇನೆಯೇ ? ಎಂದು ನೋಡಬೇಕು.
೩. ಅಸೂಯೆಯ ವಿಚಾರಗಳಿಂದಾಗಿ ಆಗುವ ಹಾನಿಯನ್ನು ಗಮನಿಸಿರಿ !
೩ ಅ. ಶಾರೀರಿಕ ಸ್ತರದಲ್ಲಿ
೧. ಅಧಿಕ ರಕ್ತದೊತ್ತಡ, ಮಲಬದ್ಧತೆ, ಹೃದ್ರೋಗ, ವೇಗವಾಗಿ ಶ್ವಾಸೋಚ್ಛಾಸವಾಗುವುದು, ದಮ್ಮು ಮತ್ತು ಶ್ವಾಸಕೋಶದ ಇತರ ರೋಗಗಳು ಬರುವುದು. ಹೃದಯ ಬಡಿತ ಹೆಚ್ಚಾಗುವುದು, ಹಸಿವು ಕಡಿಮೆಯಾಗುವುದು, ಮಧುಮೇಹ ಮುಂತಾದ ಶಾರೀರಿಕ ತೊಂದರೆ ಗಳು ಬರುತ್ತವೆ.
೩ ಆ. ಮಾನಸಿಕ ಸ್ತರದಲ್ಲಿ
೧. ತನ್ನ ಬಗ್ಗೆ ನಕಾರಾತ್ಮಕ ವಿಚಾರಗಳಿಂದ ಮನಸ್ಸಿನಲ್ಲಿ ಅಶಾಂತಿ ಹೆಚ್ಚುವುದು
೨. ಇತರರೊಂದಿಗೆ ತುಲನೆ ಮತ್ತು ಸ್ಪರ್ಧೆ ಮಾಡುವುದು. ಇದರಿಂದ ಸಾಧನೆಯ ಪ್ರಯತ್ನದಲ್ಲಿ ಸಮಾಧಾನ ದೊರೆಯುವುದಿಲ್ಲ.
೩ ಇ. ಆಧ್ಯಾತ್ಮಿಕ ಸ್ತರದಲ್ಲಿ
೧. ಸಾಧನೆಗಾಗಿ ಎಲ್ಲಕ್ಕಿಂತ ಮಹತ್ವವಾಗಿರುವ ನಿರ್ಮಲತೆಯೆಂಬ ಗುಣ ನಿರ್ಮಾಣವಾಗದಿರುವುದು.
೨. ಯಾರ ವಿಷಯದಲ್ಲಿ ಅಸೂಯೆಯುಂಟಾಗುತ್ತದೆಯೋ, ಅವರಲ್ಲಿರುವ ಗುಣಗಳನ್ನು ನೋಡಲು ಸಾಧ್ಯವಾಗದಿರುವುದು ಮತ್ತು ಆತ್ಮೀಯತೆ ಸಾಧಿಸಲು ಸಾಧ್ಯವಾಗದಿರುವುದು. (ಕೆಟ್ಟಶಕ್ತಿಗಳು ಸಹ ಈ ಸ್ವಭಾವದೋಷದ ಲಾಭವನ್ನು ಪಡೆದುಕೊಳ್ಳಬಹುದು)
೩. ನೇತೃತ್ವ ವಹಿಸಿ ಸೇವೆಯನ್ನು ಮಾಡಲು ಅಹಂ ಅಡ್ಡಿಯಾಗುವುದು

೪. ಸೇವೆಯ ಏಕಾಗ್ರತೆ ಕಡಿಮೆಯಾಗಿ ಫಲನಿಷ್ಪತ್ತಿಯು ಕಡಿಮೆ ಯಾಗುವುದು. ಅದರ ವಿಪರೀತ ಪರಿಣಾಮವು ಆಧ್ಯಾತ್ಮಿಕ ಪ್ರಗತಿಯ ಮೇಲಾಗುತ್ತದೆ.
೪. ಅಸೂಯೆ ಸಂದರ್ಭದಲ್ಲಿ ಸಮರ್ಥ ರಾಮದಾಸ ಸ್ವಾಮಿಗಳು ಮಾಡಿರುವ ಮಾರ್ಗದರ್ಶನ
ಅಭಿಮಾನನೆ ಉಠೆ ಮತ್ಸರ ಮತ್ಸರೆ ಯೆ ತಿರಸ್ಕಾರ ॥
ಪುಢೆ ಕ್ರೋಧಾಚಾ ವಿಕಾರ ಪ್ರಬಳೆ ಬಳೆ ॥
- ದಾಸಬೋಧ, ದಶಕ- ೧, ಸಮಾಸ-೧ ಓವಿ-೨೩
ಅರ್ಥ : ವ್ಯರ್ಥ ಅಹಂಕಾರದಿಂದಾಗಿ ಅಸೂಯೆಯುಂಟಾಗುತ್ತದೆ ಮತ್ತು ಅಸೂಯೆಯಿಂದ ತಿರಸ್ಕಾರ ಉತ್ಪನ್ನಗೊಂಡು ಆ ಸ್ಥಳದಲ್ಲಿ ಅತ್ಯಂತ ಪ್ರಬಲವಾದ ಸಿಟ್ಟಿನ ವಿಕಾರವು ತನ್ನ ಪ್ರಭಾವವನ್ನು ಬೀರುತ್ತದೆ.
೫. ಸಾಧಕರೇ, ಅಸೂಯೆಯ ವಿಚಾರವನ್ನು ತಳಮಳದಿಂದ ಕಿತ್ತೊಗೆಯಿರಿ !
ಅಸೂಯೆಯು ಅನೇಕ ಸಾಧಕರ ಪ್ರಗತಿಯ ಪ್ರಮುಖ ಅಡಚಣೆ ಯಾಗಿದೆ. ಮನಸ್ಸಿನ ಕೀಳರಿಮೆ ಹಾಗೆಯೇ ಅಹಂನ ಒಂದು ವಿಚಾರ ಸಹ ಇತರರ ಬಗ್ಗೆ ತಿರಸ್ಕಾರ ಮತ್ತು ಸಿಟ್ಟು ಹೆಚ್ಚಾಗುವಂತೆ ಮಾಡುತ್ತದೆ. ಆದುದರಿಂದ ಈ ವಿಚಾರಗಳನ್ನು ಹೊಡೆದೋಡಿಸಲು ಸಾಧಕರು ಜವಾಬ್ದಾರ ಸಾಧಕರ ಮಾರ್ಗದರ್ಶನಕ್ಕನುಸಾರ ತಳಮಳದಿಂದ ಪ್ರಯತ್ನಿಸಬೇಕು. ವಿಚಾರಗಳ ತೀವ್ರತೆ ಅಧಿಕವಿದ್ದರೆ ಸ್ವಯಂಸೂಚನೆಯ ಸತ್ರವನ್ನು ನೀಡಬೇಕು. ಮನಸ್ಸಿನಲ್ಲಿ ಮೂಡುವ ವಿಚಾರಗಳನ್ನು ಆಧ್ಯಾತ್ಮಿಕ ಮಿತ್ರರಿಗೆ ಆಯಾ ಸಮಯದಲ್ಲಿ ಹೇಳಬೇಕು. ಹೀಗೆ ಮಾಡುವುದರಿಂದ ಆ ವಿಚಾರಗಳಲ್ಲಿಯೇ ಮುಳುಗಿ ಸಾಧನೆಯ ಪ್ರಯತ್ನಗಳ ಮೇಲೆ ವಿಪರೀತ ಪರಿಣಾಮವಾಗದೇ ಶೀಘ್ರಗತಿಯಲ್ಲಿ ಆಧ್ಯಾತ್ಮಿಕ ಉನ್ನತಿಯಾಗುವುದು !
- (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೭.೮.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರೇ, ಅಸೂಯೆಯ ವಿಚಾರದಿಂದಾಗಿ ತಮ್ಮ ಸಾಧನೆಯಲ್ಲಾಗುವ ಹಾನಿಯನ್ನು ತಡೆಗಟ್ಟಲು ಯೋಗ್ಯ ದೃಷ್ಟಿಕೋನದೊಂದಿಗೆ ಕಠೋರ ಪ್ರಯತ್ನವನ್ನು ಮಾಡಿರಿ !