ಶ್ರಾದ್ಧ ವಿಧಿಗಳ ಬಗ್ಗೆ ಟೀಕಾತ್ಮಕ ವಿಚಾರ ಮತ್ತು ಖಂಡನೆ

ವಿಶ್ವದ ಆರಂಭದಿಂದ ಭೂಮಿಯ ಮೇಲಿರುವ ಸನಾತನ ವೈದಿಕ ಧರ್ಮ (ಹಿಂದೂ ಧರ್ಮ), ಹಿಂದೂಗಳ ಧರ್ಮಗ್ರಂಥಗಳು, ದೇವತೆಗಳು, ಧಾರ್ಮಿಕ ವಿಧಿಗಳು, ಅಧ್ಯಾತ್ಮ ಮುಂತಾದವುಗಳನ್ನು ಅನೇಕರು ಟೀಕಿಸುತ್ತಾರೆ. ಕೆಲವು ಜನರಿಗೆ ಈ ಟೀಕೆಗಳು ನಿಜವೆನಿಸುತ್ತವೆ ಮತ್ತು ಅನೇಕರಿಗೆ ‘ಈ ಟೀಕೆಗಳು ಸರಿಯಲ್ಲ’, ಎಂಬುದು ಗಮನಕ್ಕೆ ಬಂದರೂ ಟೀಕೆಗಳನ್ನು ಖಂಡಿಸಲು ಸಾಧ್ಯವಾಗುವುದಿಲ್ಲ. ಕೆಲವು ವಿದ್ವಾಂಸರಿಂದ ಅಥವಾ ಅಧ್ಯಯನಕಾರರಿಂದಲೂ ಅಜ್ಞಾನದಿಂದಾಗಿ ಅಯೋಗ್ಯ ವಿಚಾರಗಳನ್ನು ಮಂಡಿಸಲಾಗುತ್ತದೆ.
ಇಂತಹ ಎಲ್ಲ ಅಯೋಗ್ಯ ವಿಚಾರ ಮತ್ತು ಟೀಕೆಗಳಿಗೆ ಯೋಗ್ಯ ಪ್ರತ್ಯುತ್ತರವನ್ನು ನೀಡದಿರುವುದರಿಂದ ಹಿಂದೂಗಳ ಶ್ರದ್ಧೆಯು ಡೋಲಾಯಮಾನವಾಗುತ್ತದೆ. ಇದರಿಂದ ಧರ್ಮಹಾನಿಯಾಗುತ್ತದೆ. ಈ ಧರ್ಮಹಾನಿಯನ್ನು ತಡೆಗಟ್ಟಲು ಹಿಂದೂಗಳಿಗೆ ಬೌದ್ಧಿಕ ಬಲ ಸಿಗಬೇಕೆಂದು ಅಯೋಗ್ಯ ವಿಚಾರ ಮತ್ತು ಟೀಕೆಗಳ ಖಂಡನೆಯನ್ನು ಇಲ್ಲಿ ಕೊಡಲಾಗಿದೆ. ಇದರ ಹೆಚ್ಚಿನ ಮಾಹಿತಿಯನ್ನು ಸನಾತನದ ಗ್ರಂಥ ‘ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ’ ಇದರಲ್ಲಿ ನೀಡಲಾಗಿದೆ.

ಶ್ರಾದ್ಧ ಮಾಡುವುದು ಅನಾಗರಿಕವಾಗಿದೆ ಮತ್ತು ದಾನಕೊಡುವುದು ಅಥವಾ ಸಾಮಾಜಿಕ
ಸಂಸ್ಥೆಗಳಿಗೆ ದೇಣಿಗೆ ಕೊಡುವುದು ಯೋಗ್ಯವಾಗಿದೆ ಎಂದು ಟೀಕಿಸುವುದು !
ಟೀಕೆ : ಶ್ರಾದ್ಧವಿಧಿಯು ಅನಾಗರಿಕವಾಗಿದೆ. ತಂದೆ-ತಾಯಿಯರ ತಿಥಿಗೆ ಅವರ ಛಾಯಾಚಿತ್ರವನ್ನಿಟ್ಟು ಹೂವುಗಳನ್ನು ಅರ್ಪಿಸಿ ಧೂಪ-ದೀಪ ಹಚ್ಚುವುದು, ಹಾಗೆಯೇ ಆ ನಿಮಿತ್ತದಿಂದ ಯಾವುದಾದರೊಂದು ಸಾಮಾಜಿಕ ಸಂಸ್ಥೆ ಅಥವಾ ಅನಾಥಾಲಯಕ್ಕೆ ಧಾನ್ಯ ಮುಂತಾದವುಗಳನ್ನು ದಾನ ಕೊಡುವುದೇ ಯೋಗ್ಯವಾಗಿದೆ.
ಖಂಡನೆ : ಅ. ಶ್ರಾದ್ಧವಿಧಿಯು ಶಾಸ್ತ್ರೋಕ್ತ ಪದ್ಧತಿಯಿಂದ ಮಂತ್ರ ಸಹಿತ ಪೂರ್ಣಶ್ರದ್ಧೆಯಿಂದ ಮಾಡಿದ ವಿಧಿಯಾಗಿರುವುದರಿಂದ ಪಿತೃ ಗಳು ಪ್ರಸನ್ನರಾಗುತ್ತಾರೆ : ಶ್ರಾದ್ಧವಿಧಿಯೆಂದು ಕೇವಲ ದಾನಧರ್ಮ ಮಾಡುವುದನ್ನೇ, ಯೋಗ್ಯವೆಂದು ಭಾವಿಸುವುದೆಂದರೆ ‘ಯಾವುದಾದ ರೊಂದು ರೋಗಕ್ಕೆ ಮಾಡಬೇಕಾದ ನಿರ್ದಿಷ್ಟ ಉಪಚಾರವನ್ನು ಬಿಟ್ಟು ಬೇರೆ ಉಪಚಾರವನ್ನು ಮಾಡಿದಂತಾಗುವುದಿಲ್ಲವೇ ? ಶ್ರಾದ್ಧವಿಧಿಯೆಂದರೆ ಶಾಸ್ತ್ರೋಕ್ತ ಪದ್ಧತಿಯಿಂದ ಮಂತ್ರಸಹಿತ ಪೂರ್ಣ ಶ್ರದ್ಧೆಯಿಂದ ಮಾಡಿದ ವಿಧಿಯಾಗಿದೆ. ಶ್ರಾದ್ಧವನ್ನು ಮಾಡದೇ ಭಾವನೆಯಿಂದಾಗಿ ದಾನ ಮಾಡಿದರೆ, ಅದರಿಂದ ಪಿತೃಗಳು ಪ್ರಸನ್ನರಾಗುವುದಿಲ್ಲ; ಏಕೆಂದರೆ ಆ ದಾನದ ಫಲವು ಪಿತೃಗಳಿಗೆ ದೊರೆಯುವುದಿಲ್ಲ.
ಆ. ಶ್ರಾದ್ಧವಿಧಿಯನ್ನು ಮಾಡದಿದ್ದರೆ ಅತೃಪ್ತ ಪಿತೃಗಳು ರಕ್ತವನ್ನು ಕುಡಿಯುವುದರಿಂದ ಶಾರೀರಿಕ ದೋಷ ನಿರ್ಮಾಣವಾಗಿ ಅದು ಸಂತತಿಯ ಮೇಲೆ ಪರಿಣಾಮ ಬೀರುವುದು : ‘ಅತರ್ಪಿತಾಃ ಪಿತರಃ ರುಧಿರಂ ಪಿಬಂತಿ ’ ಅಂದರೆ ಯಾವನ ‘ಶ್ರಾದ್ಧವನ್ನು ಮಾಡುವುದಿಲ್ಲವೋ, ಅವನು ಶ್ರಾದ್ಧವಿಧಿ ಮಾಡದಿರುವವನ ರಕ್ತವನ್ನು ಕುಡಿಯುತ್ತಾನೆ.’ ರಕ್ತದ ಅಧಿಷ್ಠಾತ್ರಿ ದೇವತೆ ಪಿತೃಗಳಾಗಿದ್ದಾರೆ. ಶಾಸ್ತ್ರಕ್ಕನುಸಾರ ಶ್ರಾದ್ಧ ಇತ್ಯಾದಿ ವಿಧಿಗಳನ್ನು ಮಾಡದಿದ್ದರೆ, ಅವರು ರಕ್ತದಲ್ಲಿ ಅತೀ ಸೂಕದೋಷವನ್ನು ನಿರ್ಮಿಸುತ್ತಾರೆ. ರಕ್ತದೋಷದಿಂದಾಗಿ ವೀರ್ಯ ದುರ್ಬಲವಾಗುತ್ತದೆ, ಇದರಿಂದ ಸಂತತಿಯು ಶಕ್ತಿಹೀನ, ಅಂಗವಿಕಲ ಮತ್ತು ವಿವಿಧ ರೋಗ ಗಳಿಂದ ಕೂಡಿರುತ್ತದೆ.
ಇ. ಶ್ರಾದ್ಧಾದಿ ಶಾಸ್ತ್ರಕರ್ಮಗಳಿಂದ ಮೃತ ಪಿತೃಗಳಿಗೆ ಶಕ್ತಿ ಪ್ರಾಪ್ತವಾಗುವುದು : ಶ್ರಾದ್ಧಾದಿ ಶಾಸ್ತ್ರಕರ್ಮಗಳಿಂದ ಪಿತೃಗಳ ವಾಯುರೂಪ ಸೂಕದೇಹಕ್ಕೆ ಶಕ್ತಿ ಸಿಗುತ್ತದೆ. ಮೃತ್ಯುವಿನ ನಂತರ ಇನ್ನೊಂದು ದೇಹ ವನ್ನು (ಯಾತನಾದೇಹ) ಧರಿಸಿ ಜೀವವು ಪರಲೋಕಕ್ಕೆ ಹೋಗುತ್ತದೆ. ಅದು ಪ್ರೇತರೂಪಿ, ಅಶರೀರವಾಗಿರುತ್ತದೆ, ಅಂದರೆ ಅದಕ್ಕೆ ದೇಹ ವಿರುವುದಿಲ್ಲ. ಅದಕ್ಕೆ ಹೊಸ ದೇಹ ಪ್ರಾಪ್ತವಾಗಬೇಕೆಂದು ಶ್ರಾದ್ಧ ಮತ್ತು ಔರ್ಧ್ವಐಹಿಕ ಕ್ರಿಯೆಗಳು ಆವಶ್ಯಕವಾಗಿವೆ.’
ಇದರಿಂದ, ಶ್ರಾದ್ಧವಿಧಿಯೆಂದು ಕೇವಲ ದಾನಧರ್ಮ ಮಾಡುವುದು ಅಯೋಗ್ಯವಾಗಿದೆ, ಎಂಬುದು ಗಮನಕ್ಕೆ ಬಂದಿರಬಹುದು !
- ಗುರುದೇವ ಡಾ. ಕಾಟೆಸ್ವಾಮೀಜಿ (ಘನಗರ್ಜಿತ, ಡಿಸೆಂಬರ್ ೨೦೦೮ ಮತ್ತು ಜನವರಿ ೨೦೦೯)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರಾದ್ಧ ವಿಧಿಗಳ ಬಗ್ಗೆ ಟೀಕಾತ್ಮಕ ವಿಚಾರ ಮತ್ತು ಖಂಡನೆ