ಪೂ. ಸಂದೀಪ ಆಳಶಿಯವರು ಮಂತ್ರಜಪದ ಮಹತ್ವವನ್ನು ಮನದಟ್ಟು ಮಾಡಿಸುವುದು

ಪೂ. ಸಂದೀಪ ಆಳಶಿ
೨೭.೭.೨೦೧೬ ರಂದು ನನಗೆ ಪೂ. ಸಂದೀಪ ಆಳಶಿಯವರ ಭೇಟಿಯಾಯಿತು. ಅವರು ನನಗೆ ನನಗಾಗುವ ತೊಂದರೆಯ ಬಗ್ಗೆ ವಿಚಾರಿಸಿದರು. ಆಗ ನಮ್ಮಿಬ್ಬರಲ್ಲಿ ಮುಂದಿನ ಸಂಭಾಷಣೆ ಜರುಗಿತು.
ಪೂ. ದಾದಾ : ತೊಂದರೆಗೆ ಉಪಾಯವೆಂದು ಮಂತ್ರಜಪವನ್ನು ಮಾಡುತ್ತಿದ್ದೀರಾ?
ನಾನು : ಮಂತ್ರಜಪವನ್ನು ಮಾಡಲು ಬಹಳ ಸಮಯ ಬೇಕಾಗುತ್ತದೆ. ಆದ್ದರಿಂದ ನಾನು ಅದನ್ನು ಮಾಡುವುದಿಲ್ಲ.
ಪೂ. ದಾದಾ : ನಿಮಗೆ ಮಂತ್ರಜಪ ಮಾಡುವಾಗ ಏನು ಅಡಚಣೆ ಎದುರಾಗುತ್ತದೆ ?
ನಾನು : ನನ್ನ ಮನಸ್ಸಿನಲ್ಲಿ ಅನೇಕ ವಿಚಾರಗಳು ಬರುತ್ತವೆ. ನಾವು ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುತ್ತೇವೆ. ಹೀಗಿರುವಾಗ ನನ್ನ ವೈಯಕ್ತಿಕ ಅನಾರೋಗ್ಯದಿಂದ ಗುಣಮುಖಳಾಗಲು ಮಂತ್ರಜಪವನ್ನು ಮಾಡಿ ಸಕಾಮ ಸಾಧನೆಯನ್ನು ಹೇಗೆ ಮಾಡುವುದು ? ನನ್ನ ಮನಸ್ಸಿಗೆ ಅದು ಸರಿಯೆನಿಸದ್ದರಿಂದ ನಾನು ದೇವರಿಗೆ ಎಂದಿಗೂ ನನ್ನನ್ನು ಗುಣಮುಖಗೊಳಿಸು ಎಂದು ಪ್ರಾರ್ಥಿಸಿಲ್ಲ. ‘ನನಗೆ ಈ ಅನಾರೋಗ್ಯವನ್ನು ಸಹಿಸುವ ಶಕ್ತಿಯನ್ನು ನೀಡು ಮತ್ತು ತೊಂದರೆದಾಯಕ ಶಕ್ತಿಗಳಿಂದ ನನ್ನ ಸಾಧನೆಯಲ್ಲಿ ಎದುರಾಗುವ ತೊಂದರೆಗಳನ್ನು ದೂರಗೊಳಿಸು’ ಎಂದೇ ಪ್ರಾರ್ಥಿಸುತ್ತೇನೆ.
ಪೂ. ದಾದಾ : ನಾವು ಮಾಡುವ ಜಪದ ಉದ್ದೇಶವು ಮಹತ್ವದ್ದಾಗಿರುತ್ತದೆ. ನಾವು ರೋಗಪೀಡಿತರಾಗಿದ್ದರೆ ನಮ್ಮ ಶರೀರ ಮತ್ತು ಮನಸ್ಸು ಅಸ್ವಸ್ಥವಾಗುತ್ತದೆ. ಇದರಿಂದ ನಾವು ಮಲಗಿಯೇ ಇರುತ್ತೇವೆ. ಆಗ ನಮ್ಮ ಸಾಧನೆಯ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ. ಆ ಸಮಯದಲ್ಲಿ ನಾವು ಬೇಗ ಗುಣಮುಖರಾಗಲು ಪ್ರಾರ್ಥನೆ ಮತ್ತು ಜಪವನ್ನು ಮಾಡಿದರೆ, ನಾವು ಬೇಗ ಗುಣಮುಖರಾಗಿ ಸಾಧನೆಯನ್ನು ಮಾಡಲು ಸಮಯ ದೊರೆಯುತ್ತದೆ. ಆದುದರಿಂದ ಇದು ಸಕಾಮ ಸಾಧನೆಯಾಗುವುದಿಲ್ಲ. ಮಂತ್ರಜಪದಿಂದ ನಮ್ಮ ಮೇಲೆ ಆ ದೇವತೆಗಳು ಪ್ರಸನ್ನರಾಗಿ ಅವರ ಆಶೀರ್ವಾದ ದೊರೆಯುತ್ತದೆ. ದೇವರ ಆಶೀರ್ವಾದ ದೊರೆತ ನಂತರ ನಮಗೆ ಯಾವುದಾದರೂ ವಿಷಯ ಅಸಾಧ್ಯವೇ ? ಮಂತ್ರಜಪದಿಂದ ಮಂತ್ರಕ್ಕೆ ಸಂಬಂಧಿಸಿದ ದೇವತೆಯ ಶಕ್ತಿ ಮತ್ತು ಆಶೀರ್ವಾದ ದೊರೆತು ಲಾಭವೇ ಆಗುತ್ತದೆ. ಆದರೆ ಮಂತ್ರಜಪವನ್ನು ನಿಯಮಿತವಾಗಿ ಮಾಡುವುದು ಆವಶ್ಯಕವಿದೆ. ಇದಕ್ಕಾಗಿ ಬಹಳ ಸಮಯ ತಗಲುವುದಿಲ್ಲ. ಅಲೋಪಥಿ ಔಷಧೋಪಚಾರ ಪದ್ಧತಿಯು ಇಂದಿನ ಕಾಲದ್ದಾಗಿದೆ. ಆದರೆ ಮಂತ್ರಜಪವು ಸಾವಿರಾರು ವರ್ಷಗಳಿಂದ ಋಷಿಮುನಿಗಳು ಉಪಾಸನೆಯನ್ನು ಮಾಡಿ ಕಂಡುಹಿಡಿದ ಪದ್ಧತಿಯಾಗಿದೆ. ಅದನ್ನು ಶ್ರದ್ಧೆಯಿಂದ ಮಾಡಿದರೆ ನಮಗೆ ಬಹಳ ಲಾಭವಾಗುತ್ತದೆ. ಒಂದು ಸಂಸ್ಕೃತ ಶ್ಲೋಕವಿದೆ. ಅದರ ಅರ್ಥ ಶ್ರದ್ಧೆಯಿಂದ ಕುರುಡನು ನೋಡಬಲ್ಲನು ಮತ್ತು ಕುಂಟನು ಓಡಬಲ್ಲನು. ಶ್ರದ್ಧೆಯ ಪರಿಣಾಮ ಹೀಗೆಯೇ ಇರುತ್ತದೆ.
 ಪ.ಪೂ. ಡಾಕ್ಟರ್, ತಮ್ಮ ಕೃಪೆಯಿಂದಲೇ ಪೂ. ಸಂದೀಪದಾದಾರವರ ಸತ್ಸಂಗ  ದೊರಕಿತು. ಮತ್ತು ಮಂತ್ರಜಪದ ಮಹತ್ವ ತಿಳಿಯಿತು. ಆದಕ್ಕಾಗಿ ತಮ್ಮ ಮತ್ತು ಪೂ. ಸಂದೀಪದಾದಾರವರ ಚರಣಗಳಲ್ಲಿ ಅತ್ಯಂತ ಕೃತಜ್ಞಳಾಗಿದ್ದೇನೆ. ನೀವೇ ನನ್ನಿಂದ ಭಾವಪೂರ್ಣ ಮತ್ತು ನಿಯಮಿತವಾಗಿ ಮಂತ್ರಜಪವನ್ನು ಮಾಡಿಸಿಕೊಳ್ಳಿರಿ, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ.
- ಕು. ರೂಪಾಲಿ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪೂ. ಸಂದೀಪ ಆಳಶಿಯವರು ಮಂತ್ರಜಪದ ಮಹತ್ವವನ್ನು ಮನದಟ್ಟು ಮಾಡಿಸುವುದು