ಪವಿತ್ರತಮ ನದಿ ಗಂಗಾಮಾತೆ

. ಭಾರತದ ಏಳು ಪವಿತ್ರ ನದಿಗಳಲ್ಲಿ ಗಂಗಾ ಮೊದಲ, ಅಂದರೆ ಪವಿತ್ರತಮ ನದಿಯಾಗಿದೆ. ಯಾವ ಪದಾರ್ಥದಲ್ಲಿ ಅಲೌಕಿಕ ಸತ್‌ಶಕ್ತಿ ಅಥವಾ ಪುಣ್ಯವಿರುತ್ತದೆಯೋ, ಆ ಪದಾರ್ಥವು ಪವಿತ್ರವಾಗಿರುತ್ತದೆ. ಪವಿತ್ರ ಪದಾರ್ಥದ ಸ್ವಲ್ಪ ಅಂಶವನ್ನು ತೆಗೆದುಕೊಂಡರೂ, ಅದರಲ್ಲಿ ಸಂಪೂರ್ಣ ಪದಾರ್ಥದಷ್ಟೇ ಪಾವಿತ್ರ್ಯವಿರುತ್ತದೆ, ಉದಾ.ಗಂಗಾಜಲದ ಒಂದು ಹನಿಯು ಸಂಪೂರ್ಣ ಗಂಗೆಯಷ್ಟೇ ಪವಿತ್ರವಾಗಿರುತ್ತದೆ.

. ಗಂಗಾ ನದಿಯಲ್ಲಿ ಆಧ್ಯಾತ್ಮಿಕ ಗಂಗೆಯ ಅಂಶಾತ್ಮಕ ತತ್ತ್ವವಿರು ವುದರಿಂದ ಮಾಲಿನ್ಯದಿಂದ ಅದು ಸಾಕಷ್ಟು ಅಶುದ್ಧವಾದರೂ, ಅದರ ಪಾವಿತ್ರ್ಯವು ಚಿರಕಾಲ ಉಳಿಯುತ್ತದೆ; ಆದುದರಿಂದ ‘ವಿಶ್ವದಲ್ಲಿನ ಯಾವುದೇ ಜಲಕ್ಕೆ ಹೋಲಿಸಿದರೂ ಗಂಗಾಜಲವು ಎಲ್ಲಕ್ಕಿಂತ ಪವಿತ್ರವಾಗಿದೆ’ ಎಂಬುದು ಸೂಕ್ಷ ತಿಳಿಯುವವರಿಗೆ ಮಾತ್ರವಲ್ಲ, ವಿಜ್ಞಾನಿಗಳಿಗೂ ತಿಳಿಯುತ್ತದೆ.ತಾವೂ ಮನೆಯಲ್ಲಿ ಈ ಪ್ರಯೋಗವನ್ನು ಮಾಡಬಹುದು. ‘ಅಸ್ವಚ್ಛ’ ಮತ್ತು ‘ಅಪವಿತ್ರ’ ಇವು ಸಮಾನಾರ್ಥಕ ಶಬ್ದಗಳಾಗಿಲ್ಲ. ‘ಸ್ವಚ್ಛ’ ಮತ್ತು ‘ಅಸ್ವಚ್ಛ’ ಎಂಬ ಶಬ್ದಗಳು ಶರೀರ ಅಥವಾ ಭೌತಶಾಸ್ತ್ರದ ಸಂದರ್ಭದ್ದಾಗಿವೆ ಮತ್ತು ‘ಪವಿತ್ರ’ ಹಾಗೂ ‘ಅಪವಿತ್ರ’ ಶಬ್ದಗಳು ಅಧ್ಯಾತ್ಮಶಾಸ್ತ್ರದ ಸಂದರ್ಭದಲ್ಲಿನದ್ದಾಗಿವೆ. ಆದ್ದರಿಂದ ಯಾವುದಾದರೊಂದು ವಸ್ತುವು ಅಸ್ವಚ್ಛವಾಗಿದ್ದರೂ ಪವಿತ್ರವಾಗಿರಬಲ್ಲದು. ಸದ್ಯದ ಕಾಲದ ಗಂಗೆಯ ನೀರು ಈ ವಿಧದಲ್ಲಿ ಬರುತ್ತದೆ. ಆದ್ದರಿಂದ ಈ ನೀರಿನಿಂದ ರೋಗಗಳು ಬರಬಹುದು; ಆದರೆ ಅದರ ಸತ್ತ್ವಗುಣದ ಲಾಭವಾಗುತ್ತದೆ. ಆದರೂ ಸ್ವಚ್ಛ ಮತ್ತು ಪವಿತ್ರ ನೀರು ಸರ್ವೋತ್ತಮವಾಗಿದೆ.
. ಗಂಗೆಯ ನೀರು ಸ್ವತಃ ಪವಿತ್ರವಾಗಿದೆ ಮತ್ತು ಅದು ಇತರರನ್ನೂ ಪವಿತ್ರಗೊಳಿಸುತ್ತದೆ. ಗಂಗಾಜಲವನ್ನು ಯಾವುದೇ ವ್ಯಕ್ತಿ, ವಸ್ತು, ವಾಸ್ತು ಅಥವಾ ಸ್ಥಾನದ ಮೇಲೆ ಸಿಂಪಡಿಸಿದರೆ ಅದು ಪವಿತ್ರವಾಗುತ್ತದೆ.
ಟಿಪ್ಪಣಿ ೧ - ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯನ್ನು ಉಪಯೋಗಿಸದೇ ಯಾವುದಾದರೊಂದು ವಿಷಯ ತಿಳಿಯುವುದೆಂದರೆ ‘ಸೂಕ್ಷದ ವಿಷಯ ತಿಳಿಯುವುದು’. ಸಾಧನೆಯನ್ನು ಮಾಡುತ್ತಾ ಆಧ್ಯಾತ್ಮಿಕ ಮಟ್ಟ ಹೆಚ್ಚಾದಂತೆ ಸೂಕ್ಷವನ್ನು ತಿಳಿಯುವ ಕ್ಷಮತೆಯೂ ಹೆಚ್ಚಾಗುತ್ತದೆ.
ಸರ್ವಶ್ರೇಷ್ಠ ತೀರ್ಥ : ಗಂಗಾನದಿಯು ಪೃಥ್ವಿಯ ಮೇಲಿನ ಸರ್ವಶ್ರೇಷ್ಠ ತೀರ್ಥವಾಗಿದೆ.
. ಗಂಗಾಸದೃಶಂ ತೀರ್ಥಂ ನ ದೇವಃ ಕೇಶವಾತ್ ಪರಃ

ಬ್ರಾಹ್ಮಣೇಭ್ಯಃ ಪರಂ ನಾಸ್ತಿ ಏವಮಾಹ ಪಿತಾಮಹಃ ॥
- ಮಹಾಭಾರತ, ಪರ್ವ ೩, ಅಧ್ಯಾಯ ೮೩, ಶ್ಲೋಕ ೯೬
ಅರ್ಥ : ಗಂಗೆಯಂತಹ ತೀರ್ಥವಿಲ್ಲ, ವಿಷ್ಣುವಿನಂತಹ ದೇವರಿಲ್ಲ, ಬ್ರಾಹ್ಮಣರಿಗಿಂತ ಯಾರೂ ಶ್ರೇಷ್ಠರಿಲ್ಲ ಎಂದು ಬ್ರಹ್ಮದೇವನು ಹೇಳಿದ್ದಾನೆ.
. ‘ಸತ್ಯಯುಗದಲ್ಲಿ ಎಲ್ಲ ಸ್ಥಳಗಳು ಪವಿತ್ರವೇ ಆಗಿದ್ದವು. ತ್ರೇತಾಯುಗದಲ್ಲಿ ‘ಪುಷ್ಕರ’ ಮತ್ತು ದ್ವಾಪರಯುಗದಲ್ಲಿ ‘ಕುರುಕ್ಷೇತ್ರ’ವು ಎಲ್ಲಕ್ಕಿಂತ ಪವಿತ್ರ ತೀರ್ಥವಾಗಿತ್ತು ಮತ್ತು ಕಲಿಯುಗದಲ್ಲಿ ಗಂಗಾ ನದಿಯು ಪರಮಪವಿತ್ರ ತೀರ್ಥವಾಗಿದೆ.
. ಗಂಗೆಯಲ್ಲಿ ಎಲ್ಲಿ ಸ್ನಾನ ಮಾಡಿದರೂ ಗಂಗೆಯು ಕುರುಕ್ಷೇತ್ರಕ್ಕೆ ಸಮಾನ (ದ್ವಾಪರಯುಗದಲ್ಲಿ ಸರಸ್ವತಿ ನದಿಯ ತೀರದಲ್ಲಿ ಕುರುಕ್ಷೇತ್ರವೆಂಬ ಪವಿತ್ರ ತೀರ್ಥವಿತ್ತು.) ಪವಿತ್ರಳಾಗಿದ್ದಾಳೆ; ಆದರೆ ಹರಿದ್ವಾರದ ಕನಖಲ ತೀರ್ಥಕ್ಕೆ ಬೇರೆಯೇ ಆದ ಒಂದು ವೈಶಿಷ್ಟ್ಯವಿದೆ. ಪ್ರಯಾಗ ತೀರ್ಥದ ಮಹಿಮೆಯಂತೂ ಅದಕ್ಕಿಂತಲೂ ಹೆಚ್ಚಿದೆ. ನೂರಾರು ಪಾಪಕರ್ಮಗಳನ್ನು ಮಾಡಿದ ವ್ಯಕ್ತಿಯು ಕನಖಲ ತೀರ್ಥದಲ್ಲಿ ಗಂಗಾಜಲದಿಂದ ಸ್ನಾನ ಮಾಡಿದರೆ, ಅಗ್ನಿಯು ಇಂಧನವನ್ನು ನಾಶಗೊಳಿಸುವ ಹಾಗೆ ಗಂಗಾಜಲವು ಆ ವ್ಯಕ್ತಿಯ ಪಾಪಗಳನ್ನು ನಾಶಗೊಳಿಸುತ್ತದೆ.’ (ಮಹಾಭಾರತ, ಪರ್ವ ೩, ಅಧ್ಯಾಯ ೮೩)
(ಆಧಾರ ಗ್ರಂಥ : ಸನಾತನ ನಿರ್ಮಿತ ಗ್ರಂಥ ‘ಗಂಗಾಮಹಾತ್ಮೆ’)
ಮಹಾಪುರುಷರು ಮಾಡಿದ ಗಂಗೆಯ ಸ್ತುತಿ
. ವಾಲ್ಮೀಕಿಋಷಿಗಳು : ವಾಲ್ಮೀಕಿಋಷಿಗಳು ರಚಿಸಿದ ಗಂಗಾಷ್ಟಕ ಸ್ತೋತ್ರವು ಪ್ರಸಿದ್ಧವಾಗಿದೆ. ಸಂಸ್ಕ ೃತ ಬರುವ ಭಕ್ತರು ಸ್ನಾನದ ಸಮಯದಲ್ಲಿ ಅದನ್ನು ಪಠಿಸುತ್ತಾರೆ. ಆಗ ಅವರಿಗೆ ಗಂಗಾಸ್ನಾನ ಮಾಡಿದೆ, ಎಂಬ ಶ್ರದ್ಧೆಯಿರುತ್ತದೆ.
. ಆದಿಶಂಕರಾಚಾರ್ಯರು : ಇವರು ಗಂಗಾಸ್ತೋತ್ರವನ್ನು ರಚಿಸಿದ್ದಾರೆ. ಅದರಲ್ಲಿ ಅವರು ಹೇಳುತ್ತಾರೆ -
ವರಮಿಹ ನೀರೇ ಕಮಠೋ ಮೀನಃ ಕಿಂ ವಾ ತೀರೇ ಶರಟಃ ಕ್ಷೀಣಃ I
ಅಥವಾ ಶ್ವಪಚೋ ಮಲಿನೋ ದೀನಸ್ತವ ನ ಹಿ ದೂರೇ ನೃಪತಿಕುಲೀನಃ ॥ (ಶ್ಲೋಕ ೧೧)
ಅರ್ಥ : ಹೇ ಗಂಗೆ, ನಿನ್ನಿಂದ ದೂರ ಹೋಗಿ ಕುಲೀನ ರಾಜನಾಗುವ ಬದಲಿಗೆ ನಿನ್ನ ಈ ನೀರಿನಲ್ಲಿನ ಆಮೆ ಅಥವಾ ಮೀನಾಗುವುದು ಅಥವಾ ನಿನ್ನ ತೀರದಲ್ಲಿರುವ ಹರಿದಾಡುವ ಕ್ಷುದ್ರ ಪ್ರಾಾಣಿ ಅಥವಾ ದೀನ-ದುರ್ಬಲ ಚಾಂಡಾಲನಾಗುವುದು, ಎಂದಿಗೂ ಶ್ರೇಷ್ಠವಾಗಿದೆ.
. ಗೋಸ್ವಾಮಿ ತುಲಸೀದಾಸ : ಇವರು ಅವರ ಕವಿತಾವಲೀಯ ಉತ್ತರಕಾಂಡದಲ್ಲಿ ಮೂರು ಛಂದಸ್ಸುಗಳಲ್ಲಿ ಶ್ರೀಗಂಗಾ ಮಹಾತ್ಮೆಯನ್ನು ವರ್ಣಿಸಿದ್ದಾರೆ. ಅದರಲ್ಲಿ ಪ್ರಮುಖ ವಾಗಿ ಗಂಗಾದರ್ಶನ, ಗಂಗಾಸ್ನಾನ, ಗಂಗಾಜಲಸೇವನೆ ಮುಂತಾದವುಗಳ ಮಹತ್ವವನ್ನು ಹೇಳಿದ್ದಾರೆ. (ಆಧಾರ : ಸನಾತನ ನಿರ್ಮಿತ ಗ್ರಂಥ ಗಂಗಾಮಹಾತ್ಮೆ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪವಿತ್ರತಮ ನದಿ ಗಂಗಾಮಾತೆ