ಶ್ರೀ ತುಳಜಾಭವಾನಿ ಮಂದಿರದ ಅಮೂಲ್ಯವಾದ ವಸ್ತುಗಳು ಮತ್ತು ಹಣವನ್ನು ಮಂದಿರ ಸಂಸ್ಥಾನದಿಂದ ಅಪಹರಣ : ೪೨ ಜನರ ಮೇಲೆ ದೋಷಾರೋಪ !

 ಮಹಾರಾಷ್ಟ್ರ ರಾಜ್ಯ ಅಪರಾಧ ತನಿಖಾ ದಳದ ವರದಿ
ಜನಪ್ರತಿನಿಧಿಗಳು ಮತ್ತು ಆಡಳಿತಾಧಿಕಾರಿಗಳು ಒತ್ತಡ ಹೇರಿ ವರದಿಯಲ್ಲಿ ಬದಲಾವಣೆ !
 ದೇವಸ್ಥಾನ ಸರಕಾರೀಕರಣದ ದುಷ್ಪರಿಣಾಮ ! ದೇವಸ್ಥಾನಗಳು ಸರಕಾರದ ವಶಕ್ಕೆ ಹೋದರೆ ಆ ದೇವಸ್ಥಾನಗಳಲ್ಲಿ ಭ್ರಷ್ಟಾಚಾರವೇ ನಡೆಯುತ್ತದೆ, ಎಂಬುದು ಇಂದಿನ ವರೆಗಿನ ಉದಾಹರಣೆಗಳಿಂದ ಸಿದ್ಧವಾಗಿದೆ. ಹಗರಣಕೋರರ ಮೇಲೆ ಕಠಿಣ ಕ್ರಮಕೈಗೊಂಡು ಮತ್ತು  ದೇವಸ್ಥಾನಗಳು ಸರಕಾರದ ವಶದಿಂದ ಭಕ್ತರ ವಶವಾಗಲು ಹಿಂದೂ ರಾಷ್ಟ್ರ ಸ್ಥಾಪನೆ ಅನಿವಾರ್ಯವಾಗಿದೆ !
ತುಳಜಾಪುರ : ಮಹಾರಾಷ್ಟ್ರದ ಕುಲದೇವಿ ಶ್ರೀ ತುಳಜಾ ಭವಾನಿಮಾತೆಯ ಚರಣಗಳಲ್ಲಿ ಭಕ್ತರು ಶ್ರದ್ಧೆಯಿಂದ ಅರ್ಪಿಸಿದ ಅಮೂಲ್ಯ ವಸ್ತುಗಳು ಮತ್ತು ನಗದು ಹಣವನ್ನು ಮಂದಿರ ಸಂಸ್ಥಾನವು ಅಪಹರಿಸಿದೆ. ಇದರಲ್ಲಿ ೩೯ ಕಿಲೋ ಚಿನ್ನ ಮತ್ತು ೬೦೮ ಕಿಲೋ ಬೆಳ್ಳಿಯನ್ನು ಕೊಳ್ಳೆಹೊಡೆಯಲಾಗಿದ್ದು ೪೨ ಜನರ ವಿರುದ್ಧ ಕ್ರಿಮಿನಲ್ ಅಪರಾಧವನ್ನು ದಾಖಲಿಸಲು ರಾಜ್ಯ ಅಪರಾಧ ತನಿಖಾ ವಿಭಾಗವು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಬೆಳಕಿಗೆ ಬಂದಿದೆ.
ಅದಕ್ಕನುಸಾರ ತನಿಖಾ ವಿಭಾಗವು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್ ಅಪರಾಧವನ್ನು ದಾಖಲಿಸಿದೆ. ಅದರಲ್ಲಿ ೧೧ ಜಿಲ್ಲಾಧಿಕಾರಿಗಳು ಮತ್ತು ೮ ನಗರಾಧ್ಯಕ್ಷರ ಮೇಲೆ ದೋಷಾರೋಪಣೆ ಮಾಡಲಾಗಿದೆ. ಅದರೊಂದಿಗೆ ತನಿಖಾ ವಿಭಾಗದ ವಿಚಾರಣೆಯ ವರದಿಯಲ್ಲಿ ಜನಪ್ರತಿನಿಧಿ ಮತ್ತು ಆಡಳಿತಾಧಿಕಾರಿಗಳು ಒತ್ತಡ ಹೇರಿ ಬದಲಾವಣೆ ಮಾಡುವಂತೆ ಮಾಡಲಾಗಿದೆ, ಎಂಬುದು ಸ್ಪಷ್ಟವಾಗಿದೆ. (ಇದರಿಂದ ತನಿಖಾ ದಳವು ಈ ಜನಪ್ರತಿನಿಧಿಗಳು ಮತ್ತು ಆಡಳಿತಾಧಿಕಾರಿಗಳ ಕೈಗೊಂಬೆಗಳಾಗಿದ್ದಾರೆ, ಎಂಬುದು ಸ್ಪಷ್ಟವಾಗುತ್ತದೆ. ತನಿಖಾ ದಳದಿಂದ ನಿಷ್ಪಕ್ಷವಾಗಿ ತನಿಖೆ ಆಗಲು ರಾಜ್ಯ ಸರಕಾರ ಹೇಗೆ ಪ್ರಯತ್ನಿಸುವುದು ? - ಸಂಪಾದಕರು)
ತುಳಜಾಪುರ ದೇವಸ್ಥಾನ ಹಗರಣದಲ್ಲಿ ಆಡಳಿತಾಧಿಕಾರಿಗಳಿಗೇಕೆ ವಿನಾಯಿತಿ ?
- ಶ್ರೀ ತುಳಜಾಭವಾನಿ ದೇವಸ್ಥಾನ ಸಂರಕ್ಷಕ ಕೃತಿ ಸಮಿತಿ
‘ತುಳಜಾಪುರ ದೇವಸ್ಥಾನ ಸಮಿತಿಯ ಹಗರಣದ ಪ್ರಕರಣದಲ್ಲಿ ರಾಜ್ಯಅಪರಾಧ ತನಿಖಾ ವಿಭಾಗದ (ಸಿಐಡಿ) ತನಿಖೆಯ ವರದಿ ಬಹಿರಂಗವಾಗಿರುವ ವಿಷಯವು ಅನೇಕ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಈ ಹಗರಣದ ಪ್ರಕರಣದಲ್ಲಿ ಹಿಂದೂ ವಿಧಿಜ್ಞ ಪರಿಷತ್ತು ದಾಖಲಿಸಿದ ಅರ್ಜಿಯಲ್ಲಿ ಉಚ್ಚ ನ್ಯಾಯಾಲಯದ ಸಂಭಾಜಿ ನಗರದ ವಿಭಾಗೀಯ ಪೀಠವು ತನಿಖೆಯ ವಿಷಯದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಈ ಹಗರಣದಲ್ಲಿ ೪೨ ಸರಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಭಾಗವಿದೆ, ಎಂಬುದು ಬೆಳಕಿಗೆ ಬಂದಿದೆ. ಇದರಲ್ಲಿ ಆಘಾತಕಾರಿ ವಿಷಯವೆಂದರೆ, ಈ ಪ್ರಕರಣದಲ್ಲಿ ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಶಿಫಾರಸ್ಸು ಮಾಡುವಾಗ ರಾಜ್ಯ ಅಪರಾಧ ತನಿಖಾ ವಿಭಾಗವು ದೇವಸ್ಥಾನದ ಅಧ್ಯಕ್ಷರ ಹುದ್ದೆ ಇರುವವರ ಮೇಲೆ ಮಾತ್ರ ಖಾತೆಯ ಮೂಲಕ ಕ್ರಮಕೈಗೊಳ್ಳಲು ಶಿಫಾರಸ್ಸು ಮಾಡಿ ಜಾರಿಕೊಂಡಿದೆ. ದೇವಸ್ಥಾನದ ಪ್ರತಿಯೊಂದು ಘಟನೆಯ ಜವಾಬ್ದಾರಿ ಇರುವ ೧೧ ಹಿರಿಯ ಐಎಎಸ್ ಅಧಿಕಾರಿಗಳನ್ನು ಸಿಐಡಿ ರಕ್ಷಿಸುತ್ತಿರುವ ಹಾಗಿದೆ. ಭಕ್ತರ ಹಣವನ್ನು ಕಬಳಿಸುವ ಯಾರಿಗೂ ಕಾರ್ಯಾಚರಣೆಯಿಂದ ವಿನಾಯಿತಿ ನೀಡಲು ದೇವೀ ಭಕ್ತರು ಎಂದಿಗೂ ಬಿಡುವುದಿಲ್ಲ, ಎಂದು ಶ್ರೀ ತುಳಜಾಭವಾನಿ ದೇವಸ್ಥಾನ ಸಂರಕ್ಷಕ ಕೃತಿ ಸಮಿತಿ ಹೇಳಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀ ತುಳಜಾಭವಾನಿ ಮಂದಿರದ ಅಮೂಲ್ಯವಾದ ವಸ್ತುಗಳು ಮತ್ತು ಹಣವನ್ನು ಮಂದಿರ ಸಂಸ್ಥಾನದಿಂದ ಅಪಹರಣ : ೪೨ ಜನರ ಮೇಲೆ ದೋಷಾರೋಪ !