ಸರ್ವಪಿತ್ರೀ ಅಮಾವಾಸ್ಯೆ

ಪಿತೃಪಕ್ಷದ (ಭಾದ್ರಪದ ಮಾಸದ) ಅಮಾವಾಸ್ಯೆಗೆ ಸರ್ವಪಿತ್ರೀ ಅಮಾವಾಸ್ಯೆ ಎನ್ನುತ್ತಾರೆ. ಈ ತಿಥಿಗೆ ಕುಲದಲ್ಲಿನ ಎಲ್ಲ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ವನ್ನು ಮಾಡುತ್ತಾರೆ. ವರ್ಷವಿಡೀ ಯಾವಾಗಲೂ ಮಾಡುವ ಮತ್ತು ಪಿತೃಪಕ್ಷದ ಇತರ ತಿಥಿಗಳಲ್ಲಿ ಮಾಡುವ ಶ್ರಾದ್ಧವನ್ನು ಮಾಡಲು ಆಗದಿದ್ದರೆ ಈ ತಿಥಿಯಂದು ಎಲ್ಲರೂ ಶ್ರಾದ್ಧವನ್ನು ಮಾಡುವುದು ಅತ್ಯಾವಶ್ಯಕವಾಗಿದೆ. ಏಕೆಂದರೆ ಇದು ಪಿತೃಪಕ್ಷದಲ್ಲಿನ ಕೊನೆಯ ತಿಥಿಯಾಗಿದೆ. ಅದೇ ರೀತಿ ಅಮಾವಾಸ್ಯೆಯು ಶ್ರಾದ್ಧವನ್ನು ಮಾಡಲು ಹೆಚ್ಚು ಯೋಗ್ಯವಾದ ತಿಥಿಯಾಗಿದೆ, ಅದರಲ್ಲಿಯೂ ಪಿತೃಪಕ್ಷದಲ್ಲಿನ ಅಮಾವಾಸ್ಯೆಯು ಸರ್ವಶ್ರೇಷ್ಠ ತಿಥಿ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಈ ದಿನದಂದು ಸಾಧಾರಣ ಎಲ್ಲ ಮನೆಗಳಿಂದ ಕನಿಷ್ಠ ಒಬ್ಬ ಬ್ರಾಹ್ಮಣನನ್ನಾದರೂ ಭೋಜನಕ್ಕೆ ಕರೆಯುತ್ತಾರೆ. ಮೀನುಗಾರ, ಠಾಕೂರ, ಕಾತಕರೀ (ಒಂದು ಬಗೆಯ ಶೂದ್ರ ಜಾತಿಗಳು), ಒಕ್ಕಲಿಗ ಮುಂತಾದ ಜಾತಿಗಳಲ್ಲಿ ಪಿತೃಗಳನ್ನು ಉದ್ದೇಶಿಸಿ ಈ ದಿನ ಅನ್ನದ ಅಥವಾ ಹಿಟ್ಟಿನ (ಕಣಕದ) ಪಿಂಡವನ್ನು ಕೊಡುತ್ತಾರೆ ಮತ್ತು ತಮ್ಮ ಜಾತಿಯಲ್ಲಿನ ಕೆಲವು ಜನರಿಗೆ ಊಟ ಬಡಿಸುತ್ತಾರೆ. ಇವರಲ್ಲಿ ಈ ದಿನ ಬ್ರಾಹ್ಮಣರಿಗೆ ಅಡುಗೆಯ ಸಾಮಗ್ರಿಗಳನ್ನು ಕೊಡುವ ರೂಢಿಯೂ ಇದೆ.
ಶ್ರಾದ್ಧದಲ್ಲಿ ಮುಖ್ಯಪಿಂಡವು ಮೊದಲಿನ ಮೂರು ಪೀಳಿಗೆಗಾಗಿ ಇದ್ದರೂ, ಅವರಿಗಿಂತ ಮೊದಲಿನ ಪೀಳಿಗೆಯಲ್ಲಿನ ಯಾರಿಗಾದರೂ ಗತಿಯು ಸಿಗದೇ ಇದ್ದರೆ ಅವರಿಗಾಗಿ ಶ್ರಾದ್ಧದಲ್ಲಿ ಧರ್ಮಪಿಂಡವನ್ನು ನೀಡಲಾಗುತ್ತದೆ. ಹೀಗೆ ಶ್ರಾದ್ಧವು ಹಿಂದೂಧರ್ಮದಲ್ಲಿ ಹೇಳಲಾಗಿರುವ ಒಂದು ಪರಿಪೂರ್ಣ ವಿಧಿಯಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸರ್ವಪಿತ್ರೀ ಅಮಾವಾಸ್ಯೆ