ಹಿಂದುತ್ವನಿಷ್ಠ : ಒಂದು ‘ಸಾಫ್ಟ್ ಟಾರ್ಗೆಟ್’!

ಕಲಿಯುಗಾಂತರ್ಗತ ೭ ನೇ ಕಲಿಯುಗದ ಅಂತಿಮ ಸಮಯ ನಡೆ ಯುತ್ತಿರುವಾಗ ಹಿಂದೂಗಳು ರಾಷ್ಟ್ರ ಹಾಗೂ ಧರ್ಮ ನಿಷ್ಠರಾಗಿರುವುದು, ಒಂದು ದೊಡ್ಡ ಅಪರಾಧವಾಗಿದೆ. ಸಹಿಷು, ಸತ್‌ಶೀಲ, ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಹಿಂದೂಗಳು ಅನಾದಿಕಾಲದಿಂದಲೂ ಎಲ್ಲರ ‘ಗುರಿ’ಯಾಗಿ ಬಿಟ್ಟಿದ್ದಾರೆ. ಈಗಲೂ ಹಿಂದುತ್ವನಿಷ್ಠರನ್ನು ಗುರಿ ಮಾಡುವವರ ಪೈಕಿ ಒಂದು ಘಟಕವೆಂದರೆ ಕಾನೂನು ಸುವ್ಯಸ್ಥೆಯನ್ನು ಕಾಪಾಡುವ ಸಲುವಾಗಿ ಕಾರ್ಯನಿರತವಾಗಿರುವ ‘ಪೊಲೀಸ್’ ಆಡಳಿತ !

ಹಿಂದೂಗಳನ್ನು ಹತ್ತಿಕ್ಕುವ ಪೊಲೀಸರ ಮನೋವೃತ್ತಿ !
ನೌಖಾಲಿ ಗಲಭೆಯಿಂದ ನಿನ್ನೆಮೊನ್ನೆಯ ಆಝಾದ್ ಮೈದಾನದ ಗಲಭೆಯ ತನಕ ಪ್ರತಿಯೊಂದು ಗಲಭೆಯಲ್ಲಿ ಏನಾಯಿತು ? ಗೋರಕ್ಷಕರ ಪ್ರಕರಣದಲ್ಲಿ ಏನಾಯಿತು ? ಅಥವಾ ‘ಲವ್ ಜಿಹಾದ್’ ಪ್ರಕರಣವೇ ಇರಲಿ, ಎಲ್ಲೆಲ್ಲಿ ಹಿಂದೂಗಳ ‘ಹಿಂದೂ’ ಎಂಬ ಭಾವನೆ ಜಾಗೃತವಾಯಿತೋ, ಅಲ್ಲಲ್ಲಿ ಅವರನ್ನು ದೊಡ್ಡ ಪ್ರಮಾಣದಲ್ಲಿ ಹತ್ತಿಕ್ಕಿ, ಪೀಡಿಸಿ ಪೂರ್ಣವಾಗಿ ದುರ್ಬಲಗೊಳಿಸುವುದೇ ಪೊಲೀಸರ ಧ್ಯೇಯವಾಗಿರುತ್ತದೆ. ಸರ್ವ ಸಾಮಾನ್ಯ ಹಿಂದೂಗಳು ಸಹಜವಾಗಿ ಯಾರ ಮೇಲೆಯೂ ಪ್ರತೀಕಾರ ಮಾಡುವುದಿಲ್ಲ; ಆದರೆ ಮತಾಂಧರು ಗಲಭೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟ, ಹೊಡೆದಾಟ, ಬಲಾತ್ಕಾರ ಹಾಗೂ ಬೆಂಕಿ ಹಚ್ಚುವಂತಹ ಕೃತ್ಯಗಳನ್ನು ಮಾಡುತ್ತಿರುವಾಗ ಪೊಲೀಸರು ಕೇವಲ ವೀಕ್ಷಕರಾಗಿರುವುದನ್ನು ನೋಡಿ ಹಿಂದೂಗಳು ಪ್ರತೀಕಾರ ಮಾಡಲು ಕೈ ಎತ್ತಿದರೆ, ಆಗ ಮಾತ್ರ ಪೊಲೀಸರು ಅವರನ್ನು ಬಂಧಿಸುತ್ತಾರೆ, ಅವರ ಮೇಲೆ ಅಪರಾಧ ದಾಖಲಿಸುತ್ತಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೆಸರಿನಲ್ಲಿ ಹಿಂದೂಗಳಲ್ಲಿ ಭಯ ಹುಟ್ಟಿಸಿ ಅವರನ್ನು ಕುಗ್ಗಿಸುತ್ತಾರೆ; ಮತಾಂಧರನ್ನು ಸುಮ್ಮನೆ ಬಿಟ್ಟು ಹಿಂದೂಗಳ ಆಯುಷ್ಯವನ್ನೇ ಹಾಳು ಮಾಡುವಂತಹ ಸುಳ್ಳು ಅಪರಾಧವನ್ನು ದಾಖಲಿಸುತ್ತಾರೆ; ಅತ್ಯಂತ ಸುಳ್ಳು ಆರೋಪ ಮಾಡಿ, ಅವರನ್ನು ಬಂಧಿಸಿ ಕಾರಾಗೃಹದಲ್ಲಿ ಕೊಳೆಯುವಂತೆ ಮಾಡುವ ಅಹಿತಕರ ಮನೋವೃತ್ತಿ ನಿರ್ಮಾಣವಾಗಿದೆ.
ಹಿಂದೂಗಳನ್ನು ದುರ್ಬಲರನ್ನಾಗಿ ಮಾಡಿ ಅವರನ್ನು ಮುಗಿಸುವ ಇಚ್ಛೆ !
ಹಿಂದೂಗಳನ್ನು ಹೊಸಕಿ ಹಾಕುವ ತರಬೇತಿ ಪಡೆದುಕೊಂದಿದ್ದಾರೇನೋ ಎಂಬ ಅನುಮಾನ ಮೂಡುವಂತೆ ಹಿಂದೂದ್ವೇಷಿ ಕುಕೃತ್ಯವನ್ನು ಮಾಡುತ್ತಿದ್ದಾರೆ. ಪೊಲೀಸರು ಹಿಂದೂಗಳ ಸರ್ವೋಚ್ಛ ಧರ್ಮಗುರು ಶಂಕರಾಚಾರ್ಯರನ್ನು ದೀಪಾವಳಿಯಂದೇ ಬಂಧಿಸಿದರು, ಪೂಜ್ಯಪಾದ ಸಂತಶ್ರೀ ಆಸಾರಾಮಬಾಪೂರವರಿಗೆ ಸರಿಯಾಗಿ ಔಷಧಿಗಳನ್ನು ಹಾಗೂ ಒಳ್ಳೆಯ ಊಟ ಸಹ ನೀಡುವುದಿಲ್ಲ. ಸಾಧ್ವಿ ಪ್ರಜ್ಞಾ ಸಿಂಗ್‌ರಿಗೆ ಗೋಮಾಂಸ ಉಣಬಡಿಸುವುದು, ಮಂಡಿಯ ಮೇಲೆ ಪುರುಷ ಪೋಲೀಸರು ಹೊಡೆಯುವುದು, ಈ ರೀತಿ ಅಪರಿಮಿತ ಕಿರುಕುಳ ನೀಡಿ ಮರಣೋನ್ಮುಖ ಸ್ಥಿತಿಗೆ ತಂದಿಟ್ಟಿದ್ದಾರೆ. ಇದೆಲ್ಲ ಏಕೆ ? ನಾವು ಹಿಂದೂಗಳನ್ನು ಬಂಧಿಸಿ ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡುತ್ತಿದ್ದೇವೆ ಹಾಗೂ ಅಪರಾಧವನ್ನು ತನಿಖೆ ಮಾಡುತ್ತಿದ್ದೇವೆ, ಸರ್ವಧರ್ಮಸಮಭಾವವನ್ನು ಕಾಪಾಡುತ್ತಿದ್ದೇವೆ, ಎಂಬುದನ್ನು ತೋರಿಸುವುದಕ್ಕಾಗಿಯೇ !
ಪೂ. ಭಿಡೆ ಗುರುಜೀಯವರನ್ನು ಥಳಿಸಿದ ಪೊಲೀಸ್ ಅಧಿಕಾರಿ ಕೃಷ್ಣಪ್ರಕಾಶಗೆ ಪದಕವನ್ನು ನೀಡಲಾಯಿತು, ಅದೇ ರೀತಿ ಮಡಗಾಂವ್ ಪ್ರಕರಣದಲ್ಲಿ ನಿರಪರಾಧಿ ಸಾಧಕರಿಗೆ ಥಳಿಸಿದ ಗೋವಾದ ಪೊಲೀಸ್ ನಿರೀಕ್ಷಕರಾದ ಪಾಟೀಲರಿಗೆ ಅದೇ ವರ್ಷ ರಾಷ್ಟ್ರಪತಿ ಪದಕವನ್ನು ನೀಡಲಾಯಿತು. ಪ್ರಖರ ಹಿಂದುತ್ವನಿಷ್ಠರಿಗೆ ಘಾಸಿ ಮಾಡಿದರೆ, ಪೊಲೀಸರಿಗೆ ಸರಕಾರವು ಸನ್ಮಾನಿಸುತ್ತದೆ, ನಿಧರ್ಮಿಗಳು ಆರಾಮಾಗಿ ಉಸಿರಾಡುತ್ತಾರೆ, ಮತಾಂಧರು ಸಂತೋಷ ಪಡುತ್ತಾರೆ, ಪುರೋಗಾಮಿಗಳಿಗೆ ಸುಖ ಸಿಗುತ್ತದೆ, ಸಾಮ್ಯವಾದಿಗಳ ಮುಖ ಅರಳುತ್ತದೆ, ಮಾನವತಾವಾದಿಗಳಿಗೆ ನ್ಯಾಯ ಸಿಕ್ಕಂತೆ ಅನಿಸುತ್ತದೆ ಹಾಗೂ ಸರಕಾರಕ್ಕೆ ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಿರುವ ಶ್ರೇಯಸ್ಸು ಸಿಗುತ್ತದೆ. ಆದ್ದರಿಂದ ಹಿಂದುತ್ವನಿಷ್ಠರನ್ನು ನಾಮಾವಶೇಷಗೊಳಿಸಲು ಪೊಲೀಸರ ಮೇಲೆ ಎಲ್ಲೆಲ್ಲಿಂದ ಒತ್ತಡವಿದೆ ಎಂಬುದು ಗಮನಕ್ಕೆ ಬರುತ್ತದೆ.
‘ಸನಾತನ’ವನ್ನು ಹೂಳುವ (ವಿಫಲ) ಪ್ರಯತ್ನ !
ಒಂದೆಡೆ ಕಾಶ್ಮೀರದಲ್ಲಿ ಉಗ್ರರೊಂದಿಗೆ ಚರ್ಚೆ ನಡೆಸುವ ನಿಯೋಗ, ಮಹಾರಾಷ್ಟ್ರದಲ್ಲಿ ಐಸಿಸ್‌ನ ಸಂಪರ್ಕದಲ್ಲಿರುವ ಉಗ್ರರೊಂದಿಗೆ ಆಪ್ತ ಸಲಹಾವರ್ಗ ಹಾಗೂ ಮತ್ತೊಂದೆಡೆ ಸಮಾಜ, ರಾಷ್ಟ್ರ ಹಾಗೂ ಧರ್ಮಕ್ಕಾಗಿ ಸರ್ವಸ್ವದ ತ್ಯಾಗ ಮಾಡಿರುವ ಸನಾತನದ ಸಾಧಕರನ್ನು ಸುಳ್ಳು ಆರೋಪದಲ್ಲಿ ಬಂಧಿಸಿ, ಕಾರಾಗೃಹವಾಸ ಹಾಗೂ ಹೊಡೆದಾಟ !
ಪುರೋಗಾಮಿಗಳ ಒತ್ತಡದಿಂದ ಸಮೀರ್ ಗಾಯಕ್ವಾಡ್‌ರನ್ನು ಬಂಧಿಸಿ ಜಗತ್ತನ್ನೇ ಗೆದ್ದ ಆವೇಶದಲ್ಲಿ ಪತ್ರಕರ್ತ ಪರಿಷತ್ತನ್ನು ತೆಗೆದುಕೊಳ್ಳುವ ತನಿಖಾ ತಂಡ ಭಾರತದೆಲ್ಲೆಡೆ ಎಷ್ಟೋ ಉಗ್ರರನ್ನು ಬಂಧಿಸುತ್ತಿರುತ್ತದೆ; ಆದರೆ ಅದನ್ನು ಈ ರೀತಿಯಲ್ಲಿ ಬೊಬ್ಬೆ ಹೊಡೆದು ಹೇಳುವುದಿಲ್ಲ. ಶಾಸಕ ಫೌಜಿಯಾ ಖಾನ್ ಇವರ ಕೋಣೆಯಲ್ಲಿ ಉಗ್ರರು ಉಳಿದುಕೊಂಡಿದ್ದರು ಎಂಬ ಬಗ್ಗೆ ಪೊಲೀಸರು ಎಂದು ಹೌಹಾರುವುದಿಲ್ಲ. ಹಿಂದೂಗಳು ಏನೂ ಮಾಡಿಲ್ಲ, ಎಂಬುದು ಪೊಲೀಸರಿಗೆ ಚೆನ್ನಾಗಿ ತಿಳಿದಿರುತ್ತದೆ. ಅವರನ್ನು ಹಿಡಿದು ಹಿಂದೂದ್ವೇಷಿಗಳ ಬಾಯಿ ಮುಚ್ಚಬೇಕು, ಅವರ ಮೇಲೆ ಆರೋಪಪತ್ರವನ್ನು ದಾಖಲಿಸದೇ ತಾಂತ್ರಿಕ ಅಡಚಣೆ ತಂದು ಅವರು ಕಾರಾಗೃಹದಲ್ಲಿ ಕೊಳೆಯುವಂತೆ ಮಾಡಬೇಕು, ಈ ರೀತಿ ಒಂದರಹಿಂದೊಂದು ಹಿಂದುತ್ವನಿಷ್ಠರ ಆಯುಷ್ಯವನ್ನು ನಾಶಮಾಡಿ ಸಾಮಾನ್ಯ ಹಿಂದೂಗಳನ್ನು ಹೊಸಕಿ ಹಾಕುವ ಹೊಸ ಷಡ್ಯಂತ್ರವನ್ನು ಪೊಲೀಸರು ರೂಪಿಸುತ್ತಿದ್ದಾರೆ. ಸನಾತನಕ್ಕೆ ಯಾವುದೇ ರಾಜಕೀಯ ಬೆಂಬಲವಿಲ್ಲ, ಎಂಬುದು ತಿಳಿದಿರುವುದರಿಂದ ಸನಾತನ ಸಾಧಕರನ್ನೇ ‘ಗುರಿ’ ಮಾಡಿ ‘ಕರ್ತವ್ಯವನ್ನು ನಿರ್ವಹಿಸಿದೆವು’ ಎಂದು ತೋರ್ಪಡಿಸುತ್ತಾ ಕರ್ತವ್ಯವನ್ನು ಪಾಲಿಸದೇ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಭಾರತದ ವಿವಿಧ ಶಾಖೆಯ ಪೊಲೀಸರು ಸನಾತನದ ೮೦೦ಕ್ಕೂ ಹೆಚ್ಚು ಸಾಧಕರ ವಿಚಾರಣೆ ನಡೆಸಿದರು, ಸನಾತನ ಆಶ್ರಮವನ್ನು ತಪಾಸಣೆ ಮಾಡಿದರು. ಸನಾತನದ ಸಾಧಕರನ್ನು ಪೊಲೀಸರು ಚೆನ್ನಾಗಿಯೇ ಅರಿತಿದ್ದಾರೆ ಹಾಗೂ ಸನಾತನದ ಸಾಧಕರು ಎಷ್ಟು ಸತ್ಯನಿಷ್ಠರು ಹಾಗೂ ಸಜ್ಜನರಾಗಿದ್ದಾರೆ, ಎಂಬುದು ಅವರ ಗಮನಕ್ಕೆ ಬಂದಿದೆ, ಆದರೂ ಅವರಿಗೆ ಹಿಂಸೆ ನೀಡುವುದೇನು ನಿಲ್ಲಲಿಲ್ಲ. ಇದು ಸಹ ಕಡಿಮೆಯೆನ್ನುವಂತೆ ಡಾ. ತಾವಡೆಯವರ ಪ್ರಕರಣದಲ್ಲಿ ಯಾವ ವಿಷಯವನ್ನು ಗುಪ್ತವಾಗಿರಿ ಸಬೇಕಿತ್ತೋ, ಆ ವಿಷಯದ ಬಗ್ಗೆ ಯೋಜನೆ ರೂಪಿಸಿ ಪ್ರಸಿದ್ಧಿ ಮಾಧ್ಯಮ ಗಳಿಗೆ ಏನೇನೋ ಹೇಳಿ ಪೊಲೀಸರು ಸನಾತನವನ್ನು ತಮಗಿಷ್ಟ ಬಂದಂತೆ ತೇಜೋವಧೆ ಮಾಡಿದರು ಹಾಗೂ ಏನೋ ಒಂದು ದೊಡ್ಡ ಅಪರಾಧವನ್ನು ಮಾಡಿದಂತೆ ತೋರಿಸಿ ಎಲ್ಲರ ದಿಕ್ಕು ತಪ್ಪಿಸಿದರು.
ಡಾ. ತಾವಡೆಯವರನ್ನು ಬಂಧಿಸಿ ೯೦ ದಿನಗಳಾದರೂ ಅವರ ಮೇಲೆ ಯಾವುದೇ ರೀತಿಯ ಆರೋಪಪತ್ರವನ್ನು ದಾಖಲಿಸಲು ಆಗಲಿಲ್ಲ. ಅದು ಪೂರ್ತಿಯಾದ ಬಳಿಕ ಮುಂದಿನ ೯೦ ದಿನಗಳ ತನಕ ಅವರನ್ನು ಬಂಧನದಲ್ಲಿರಿಸಲು ಮಹಾರಾಷ್ಟ್ರ ಪೊಲೀಸರು ವಿಶೇಷ ತನಿಖಾ ವಿಭಾಗಕ್ಕೆ ಒಪ್ಪಿಸಿದ್ದಾರೆ; ಪ್ರತ್ಯಕ್ಷವಾಗಿ ಈ ನಿರ್ಣಯವನ್ನು ಕೆಲವು ದಿನಗಳ ಹಿಂದೆಯೇ ತೆಗೆದುಕೊಳ್ಳಲಾಯಿತು. ಸನಾತನದ ಸಾಧಕರಿಗೆ ತೊಂದರೆ ನೀಡುವ ಸಲುವಾಗಿ ಈ ಒಳಸಂಚು ಒಂದು ಕುಟಿಲ ತಂತ್ರವಾಗಿದೆ. ಮತಾಂಧರು ಪೊಲೀಸರ ಜೀವಹಿಂಡುತ್ತಿದ್ದಾರೆ, ಮಹಾರಾಷ್ಟ್ರ ಎಂಬುದು ಭಿವಂಡಿಯ ಗಲಭೆ, ಆಝಾದ್ ಮೈದಾನ ಗಲಭೆ ಹಾಗೂ ಇತ್ತೀಚೆಗಷ್ಟೇ ನಡೆದ ಪೊಲೀಸ್ ಪೇದೆ ಶಿಂದೆ ಕೊಲೆ ಪ್ರಕರಣದಿಂದ ಆಗಾಗ ಸಿದ್ಧವಾಗುತ್ತಿದ್ದರೂ ಅವರಿಗೆ ಸಮಾಜದ ಶತ್ರು ಯಾರು, ಎಂಬ ಬಗ್ಗೆ ಅರಿವಿರುವುದಿಲ್ಲ. ಪೊಲೀಸ್ ದಳದಲ್ಲಿ ಅಥವಾ ತನಿಖಾ ಇಲಾಖೆಯಲ್ಲಿ ಕರ್ತವ್ಯದಕ, ನಿಷ್ಪಕ್ಷವಾಗಿ ಸೇವೆ ಮಾಡುವ ಅಧಿಕಾರಿಗಳು ಸಹ ಇದ್ದಾರೆ; ಆದರೆ ಅವರ ಸಂಖ್ಯೆ ಅತ್ಯಲ್ಪವಾಗಿದೆ. ಅದೇ ರೀತಿ ಅವರು ಭ್ರಷ್ಟಾಚಾರಿ, ಕಪಟಿಯಾಗಿರುವ ಅಧಿಕಾರಿಗಳ ಒತ್ತಡದಲ್ಲಿದ್ದಾರೆ. ‘ಧರ್ಮವನ್ನು ರಕ್ಷಿಸುವವರನ್ನು ನಾನು ರಕ್ಷಿಸುತ್ತೇನೆ’, ಎಂದು ಸಾಕ್ಷಾತ್ ಭಗವಂತನೇ ಹೇಳಿದ್ದಾನೆ. ಪೊಲೀಸರು ಹಾಗೂ ತನಿಖಾಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಲಿ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದುತ್ವನಿಷ್ಠ : ಒಂದು ‘ಸಾಫ್ಟ್ ಟಾರ್ಗೆಟ್’!