ವಿಚಾರವಂತರ ಸತ್ತ್ವಪರೀಕ್ಷೆ !

ಬಹುಪತ್ನಿತ್ವ ಮತ್ತು ತ್ರಿವಳಿ ತಲಾಕ್ ಶಬ್ದವನ್ನು ಉಚ್ಚರಿಸಿ ವಿವಾಹ
ವಿಚ್ಛೇದನೆ ಮಾಡುವುದನ್ನು ರದ್ದುಗೊಳಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಭಾರತದಲ್ಲಿ ಮುಸಲ್ಮಾನರ ತಥಾಕಥಿತ ರಕ್ಷಣೆಯ ಗುತ್ತಿಗೆಯನ್ನು ವಹಿಸಿಕೊಂಡಿರುವ ಮುಸ್ಲಿಂ ಪರ್ಸ್‌ನಲ್ ಲಾ ಬೋರ್ಡ್ ಇದಕ್ಕೆ ಪ್ರಾಣವನ್ನು ಒತ್ತೆಯಿಟ್ಟು ವಿರೋಧಿಸುತ್ತಿದೆ. ಬಹುಪತ್ನಿತ್ವ ಮತ್ತು ತಲಾಕ್ ಇವುಗಳನ್ನು ವಿರೋಧಿಸುವುದು ಇಸ್ಲಾಂ ಖತ್‌ರೆಮೆ ಎನ್ನುವ ಹಾಗಿದೆ ಎಂದು ಬೋರ್ಡ್‌ಗೆ ಅನಿಸುತ್ತದೆ. ಈ ಬೋರ್ಡ್‌ನ ಪದಾಧಿಕಾರಿಗಳು ಬಹುಶಃ ಅವರು ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದೇವೆ ಎಂಬ ಹಗಲುಗನಸು ಕಾಣುತ್ತಿದ್ದಾರೆ. ಆದ್ದರಿಂದ ಭಾರತೀಯ ಕಾನೂನನ್ನು ಒಪ್ಪಲು ತಯಾರಿಲ್ಲ. ‘ಹಮ್ ದೋ ಹಮಾರೆ ದೋ’ಎಂಬುದು ಅವರಿಗೆ ಒಪ್ಪಿಗೆಯಿಲ್ಲ. ಈ ಬೋರ್ಡ್‌ನ ದೌರ್ಭಾಗ್ಯ ವೆಂದರೆ, ಭಾರತದಲ್ಲಿ ನ್ಯಾಯವ್ಯವಸ್ಥೆ ಅಸ್ತಿತ್ವದಲ್ಲಿದೆ ! ಆದ್ದರಿಂದ ನ್ಯಾಯ ದೇವತೆಯ ಮುಂದೆ ಬಹುಪತ್ನಿತ್ವದ ವಿಷಯದಲ್ಲಿ ತಮ್ಮ ಸ್ವಂತದ ಪರವಾಗಿ ಮಾತನಾಡುವುದು ಬೋರ್ಡ್‌ಗೆ ಅನಿವಾರ್ಯವಾಗಿದೆ. ಬಹುಪತ್ನಿತ್ವವನ್ನು ರದ್ದುಪಡಿಸಿದರೆ, ‘ಹಮ್ ಚಾರ್ ಹಮಾರೆ ಚಾಲೀಸ್’ ಎಂದು ಮುಸಲ್ಮಾನರು ಅಂಗೀಕರಿಸಿದ ವ್ರತವನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ; ಆದ್ದರಿಂದ ಬೋರ್ಡ್ ಹೌಹಾರುತ್ತಿದೆ. ಬಹುಪತ್ನಿತ್ವದ ವಿಷಯವನ್ನು ಮುಂದೆ ತಳ್ಳಲು ಬೋರ್ಡ್‌ನ ಪದಾಧಿಕಾರಿಗಳು ನೈತಿಕತೆಯ ಆಧಾರವನ್ನು ಅವಲಂಬಿಸಲು ಆರಂಭಿಸಿದ್ದಾರೆ. ಬಹುಪತ್ನಿತ್ವವನ್ನು ನಿಷೇಧಿಸಿದರೆ ಸಮಾಜದಲ್ಲಿ ವ್ಯಭಿಚಾರ ಮಿತಿಮೀರುವುದು, ಎಂಬುದು ಅವರ ತರ್ಕವಾಗಿದೆ. ಬಹುಪತ್ನಿತ್ವದಿಂದ ಸಾಮಾಜಿಕ ಹಾಗೂ ನೈತಿಕ ಅವಶ್ಯಕತೆಯನ್ನು ಪೂರ್ತಿಗೊಳಿಸುವುದರೊಂದಿಗೆ ಅದರ ಹಿಂದೆ ಮಹಿಳೆಯರ ಆರೈಕೆ ಮಾಡುವುದು, ಅವರ ಮೇಲೆ ಸಹಾನುಭೂತಿ ತೋರಿಸುವುದು ಇತ್ಯಾದಿ ಉದ್ದೇಶವಿದೆ, ಎಂದು ಬೋರ್ಡ್ ನ್ಯಾಯಾಲಯದಲ್ಲಿ ಪ್ರಮಾಣಪತ್ರದ ಮೂಲಕ ನುಡಿಮುತ್ತುಗಳನ್ನು ಉದುರಿಸಿದೆ. ಈಗಲೂ ನಾಲ್ಕು ನಿಕಾಹ ಮಾಡಿ ಈ ಸಮಾಜದಲ್ಲಿನ ಮತಾಂಧರು ನೀತಿಯಿಂದ ವರ್ತಿಸುತ್ತಾರೆಂದು ಹೇಳುವ ಹಾಗಿಲ್ಲ.
ಲೈಂಗಿಕ ಶೋಷಣೆಯ ಅನೇಕ ಅಪರಾಧಗಳು ಈ ಸಮೂಹದ ವಾಸನಾಂಧರ ವಿರುದ್ಧ ದಾಖಲಿಸಿರುವುದನ್ನು ಮರೆಯುವಂತಿಲ್ಲ. ಇಂದು ಸಹ ಹಿಂದೂ ಯುವತಿಯರನ್ನು ಅಪಹರಿಸುವ ಮತಾಂಧರಲ್ಲಿ ಹೆಚ್ಚಿನವರು ವಿವಾಹಿತರೇ ಆಗಿರುತ್ತಾರೆ. ಹೀಗಿರುವಾಗ ಸಮಾಜದಲ್ಲಿನ ಒಂದು ಘಟಕದ ವಾಸನಾಂಧತೆಯನ್ನು ತಣಿಸಲು ಬಹುಪತ್ನಿತ್ವದ ಬಗ್ಗೆ ಮಾಡಿದ ಅಯೋಗ್ಯ ಬೆಂಬಲವು ಆಕ್ರೋಶಕಾರಿಯಾಗಿದೆ. ಇನ್ನೊಂದು ವಿಷಯವೆಂದರೆ ಬಹುಪತ್ನಿತ್ವವು ಮುಸಲ್ಮಾನ ಮಹಿಳೆಯರ ಕಲ್ಯಾಣ ಕ್ಕಾಗಿ ಇದೆ ಎಂದಾದರೆ, ಮುಸಲ್ಮಾನ ಮಹಿಳೆಯರೇ ಈ ರೂಢಿಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ಬೇಡುವ ಅವಶ್ಯಕತೆ ಇರುತ್ತಿರಲಿಲ್ಲ. ಇಷ್ಟು ಸರಳ ವಿಷಯವೂ ಪರ್ಸ್‌ನಲ್ ಲಾ ಬೋರ್ಡ್‌ಗೆ ಅರ್ಥವಾಗುವುದಿಲ್ಲವೆಂದರೆ, ಆಶ್ಚರ್ಯವೆನಿಸುತ್ತದೆ. ಇವೆಲ್ಲ ವಿಷಯ ಗಳನ್ನು ಗಮನಿಸುವಾಗ ಈಗ ಈ ಬೋರ್ಡನ್ನು ಸರಿದಾರಿಗೆ ತರುವುದು ಆವಶ್ಯಕವಾಗಿದೆ. ಈ ಸತ್ಕಾರ್ಯವನ್ನು ಮಾಡುವ ಹೊಣೆಯನ್ನು ಮುಸಲ್ಮಾನ ವಿಚಾರವಂತರು ಸ್ವೀಕರಿಸುವರೇ ?
ನಿಜವಾಗಿಯೂ ಭಾರತದಲ್ಲಿ ಮುಸಲ್ಮಾನ ವಿಚಾರವಂತರು ಇದ್ದಾರೆಯೇ ?
ತಲಾಕ್ ಪದ್ಧತಿ ಮತ್ತು ಬಹುಪತ್ನಿತ್ವ ಈ ಸಮಸ್ಯೆಗಳ ವಿರುದ್ಧ ಭಾರತದಲ್ಲಿ ಕೆಲವು ಮುಸಲ್ಮಾನ ಮಹಿಳಾ ಸಂಘಟನೆಗಳು ಧ್ವನಿಯೆತ್ತಿವೆ. ಫರಹಾ ಫೈಝ್ ಇವರಂತಹ ಮುಸಲ್ಮಾನ ಮಹಿಳಾ ವಕೀಲೆಯರು ಇದರ ವಿರುದ್ಧ ನ್ಯಾಯಾಂಗ ಹೋರಾಟ ನಡೆಸುತ್ತಿದ್ದಾರೆ. ‘ಮುಸ್ಲಿಂ ಪರ್ಸ್‌ನಲ್ ಲಾ ಬೋರ್ಡ್’ನ ಈ ಪಾಶವೀ ಭೂಮಿಕೆಯ ವಿಷಯದಲ್ಲಿ ಇತ್ತೀಚೆಗಷ್ಟೇ ಜಾವೇದ ಅಖ್ತರ್ ಧ್ವನಿಯೆತ್ತಿದ್ದರು; ಆದರೆ ಇಂತಹ ಕೆಲವು ಉದಾಹರಣೆಗಳು ಬೆರಳೆಣಿಕೆಯಷ್ಟೇ ಇವೆ. ಇನ್ನಿತರ ಪ್ರಸಂಗಗಳಲ್ಲಿ ಹಿಂದೂಗಳನ್ನು ಅಸಹಿಷ್ಣುಗಳೆಂದು ಹೀಯಾಳಿಸುವ, ಅವರನ್ನು ಮೂಲ ತತ್ತ್ವವಾದಿಗಳೆಂದು ಹೇಳಿ ಅವರ ಕಾಲೆಳೆಯವ ಖಾನ್‌ಗಳು ಮಾತ್ರ ಈಗೇಕೆ ಸುಮ್ಮನಿದ್ದಾರೆ ? ಧರ್ಮದಲ್ಲಿ ಹೇಳಿರುವ ವಿಷಯವನ್ನು ವಿರೋಧಿಸಲಿ ಕ್ಕಿಲ್ಲ; ಏಕೆಂದರೆ ಅವುಗಳು ಸತ್ಯವಾಗಿವೆ, ಎಂಬುದು ಈ ತಥಾಕಥಿತ ಮುಸಲ್ಮಾನ ವಿಚಾರವಂತರ ನಿಲುವಾಗಿದೆ. ಆದ್ದರಿಂದ ಮುಸಲ್ಮಾನ ಮಹಿಳಾ ಸಂಘಟನೆಗಳು ಹಮ್ಮಿಕೊಂಡಿರುವ ಆಂದೋಲನಕ್ಕೆ ಸಾಕಷ್ಟು ಪ್ರೋತ್ಸಾಹ ಸಿಗುವುದಿಲ್ಲ. ಭಾರತದ ಸ್ತ್ರೀ ಸಂಘಟನೆಗಳ, ಪುರೋಗಾಮಿಗಳ, ಸುಧಾರಣವಾದಿಗಳ ಮತ್ತು ನಿಧರ್ಮಿವಾದಿಗಳ ಸಂಘಟಿತ ಪಕ್ಷವು ಸದ್ಯ ಭಾರತದಲ್ಲಿ ಕಾರ್ಯನಿರತವಾಗಿದ್ದು ಹಿಂದೂ ಧರ್ಮದಲ್ಲಿ ಏನೇನು ಹೇಳಲಾಗಿದೆಯೋ, ಅದೆಲ್ಲ ಹೇಗೆ ಬುರುಸು ಹಿಡಿದಿದೆ ಹಾಗೂ ಸಮಾಜ ವಿರೋಧಿಯಾಗಿದೆ, ಎಂದು ಹೇಳುವ ಸಲುವಾಗಿ ಆಕಾಶ-ಪಾತಾಳ ಒಂದು ಮಾಡುವುದು ಕಾಣಿಸುತ್ತಿದೆ. ತನ್ನ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ಕ್ಷಮತೆಯನ್ನು ಹಿಂದೂವಿರೋಧಿ ಕಾರ್ಯಾಚರಣೆಗಾಗಿ ಉಪಯೋಗಿ ಸುವ ಮಹಾಶಯರು ಈ ಶಕ್ತಿಯನ್ನು ಮುಸಲ್ಮಾನ ಮಹಿಳೆಯರಿಗೆ ನ್ಯಾಯ ದೊರಕಿಸಲು ಉಪಯೋಗಿಸುತ್ತಿದ್ದರೆ, ಅವರಿಗೆ ನಿಜವಾಗಿಯೂ ನ್ಯಾಯ ಸಿಗುತ್ತಿತ್ತು. ಇವೆಲ್ಲ ವಿಷಯಗಳ ಬಗ್ಗೆ ವಿಚಾರ ಮಾಡುವಾಗ ಭಾರತದಲ್ಲಿ ವಿಚಾರವಂತರು ಈ ವಿಷಯದಲ್ಲಿ ಸಂಪೂರ್ಣ ವಿಫಲರಾಗಿದ್ದು ಅವರ ವೈಚಾರಿಕ ಹುಳುಕು ಬಹಿರಂಗವಾಗಿದೆ, ಎಂಬುದು ತಿಳಿಯುತ್ತದೆ.
ಸಮಾನ ನಾಗರಿಕ ಕಾನೂನನ್ನು ಅನ್ವಯಿಸಿ !
ಭಾರತದಲ್ಲಿ ಹಿಂದೂ ಮತ್ತು ಮುಸಲ್ಮಾನರಲ್ಲಿರುವ ಪರಾಕೋಟಿಯ ಭೇದವನ್ನು ಕಡಿಮೆಗೊಳಿಸಲಿಕ್ಕಿದ್ದರೆ, ಸಮಾನ ನಾಗರಿಕ ಕಾನೂನು ಅನ್ವಯಿಸುವುದು ಆವಶ್ಯಕವಾಗಿದೆ. ವಾಸ್ತವದಲ್ಲಿ ‘ಮುಸ್ಲಿಂ ಪರ್ಸ್‌ನಲ್ ಲಾ ಬೋರ್ಡ್’ ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನರ ಕಾನೂನಿ ನಲ್ಲಿ ಹಸ್ತಕ್ಷೇಪ ಮಾಡಬಾರದು, ಎಂದು ಬೆದರಿಕೆ ಹಾಕಿದಾಗ ಸರಕಾರ ಈ ಬೋರ್ಡನ್ನು ವಿಸರ್ಜಿಸಿ ಕಾನೂನುದ್ರೋಹ ಪ್ರಕರಣದಲ್ಲಿ ಈ ಬೋರ್ಡ್‌ನಲ್ಲಿನ ಮತಾಂಧರನ್ನು ಸೆರೆಮನೆಗೆ ಅಟ್ಟಬೇಕಿತ್ತು. ದೌರ್ಭಾಗ್ಯದಿಂದ ಹಾಗೆ ಆಗಲಿಲ್ಲ. ರಾಜಕೀಯ ಪಕ್ಷ ಮತ್ತು ಸಮಾಜದಲ್ಲಿನ ತಥಾಕಥಿತ ಪುರೋಗಾಮಿಗಳ ಗುಂಪು ಮುಸಲ್ಮಾನರನ್ನು ವರ್ಷಗಟ್ಟಲೆ ಕಾಲದಿಂದ ಮುದ್ದು ಮಾಡಿರುವುದರ ಪರಿಣಾಮ ಇದಾಗಿದೆ. ಭಾರತೀಯ ನ್ಯಾಯವ್ಯವಸ್ಥೆಗೆ ಮಣಿಯದವರು ಭವಿಷ್ಯದಲ್ಲಿ ಅಲ್ಲಲ್ಲಿ ಶರಿಯತ್ ನ್ಯಾಯಾಲಯವನ್ನು ಸ್ಥಾಪಿಸಿ ಸ್ವತಂತ್ರ ನ್ಯಾಯದಾನ ಮಾಡಲು ಆರಂಭಿಸಿದರೆ ಆಶ್ಚರ್ಯವೆನಿಸಲಿಕ್ಕಿಲ್ಲ. ಪ್ರಕರಣ ಕೈಮೀರಿ ಹೋಗದಂತೆ ನೋಡಿಕೊಳ್ಳುವ ಹೊಣೆ ಈಗ ಸರಕಾರದ ಮೇಲಿದೆ. ಹಿಂದೂಗಳಿಗೇ ಮತಾಂಧರ ಉದ್ಧಟತನದ ಬಿಸಿ ತಟ್ಟುತ್ತಿದೆ. ಆದ್ದರಿಂದ ಮುಂಬರುವ ಕಾಲದಲ್ಲಿ ಹಿಂದೂಗಳ ನಿಲುವೂ ಮಹತ್ವಪೂರ್ಣವಾಗಲಿದೆ. ಬಹುಪತ್ನಿತ್ವ ಮತ್ತು ತಲಾಕ್ ಸಮಸ್ಯೆಯ ಬಗ್ಗೆ ಸರಕಾರ ಯೋಗ್ಯ ನಿಲುವನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ ಹಿಂದೂಗಳು ಕಾನೂನುಮಾರ್ಗದಲ್ಲಿ ಸರಕಾರದ ಮೇಲೆ ಒತ್ತಡ ಹೇರಬೇಕು. ಅದಕ್ಕಾಗಿ ಹಿಂದೂಗಳು ಸಮಾನ ನಾಗರಿಕ ಕಾನೂನು ಅನ್ವಯಿಸಬೇಕೆಂದು ಕಾನೂನುಮಾರ್ಗದಲ್ಲಿ ಆಂದೋಲನ ಮಾಡುವುದು ಆವಶ್ಯಕವಾಗಿದೆ. ಅನೇಕ ಯುಗಗಳಿಂದ ಸಾಮಾಜಿಕ ಉತ್ಕರ್ಷದ ಹೊಣೆಯನ್ನು ಹಿಂದೂಗಳು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈಗಲೂ ಅವರೇ ನಿರ್ವಹಿಸುವುದು ಈಶ್ವರನ ಇಚ್ಛೆಯಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಿಚಾರವಂತರ ಸತ್ತ್ವಪರೀಕ್ಷೆ !