ಧರ್ಮಶಿಕ್ಷಣ ನೀಡುವ ಮಾಲಿಕೆ !

ನಮ್ಮ ದಿನಚರಿ ಹೇಗಿರಬೇಕು ?
ನಮ್ಮ ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವ ಯೋಗ್ಯ ಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮ ಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆ ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ಮಕ್ಕಳಲ್ಲೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.

ಕೈಕಾಲುಗಳನ್ನು ತೊಳೆದುಕೊಳ್ಳುವುದಕ್ಕೆ ಸಂಬಂಧಿಸಿದ ಆಚಾರ
ಮೂತ್ರ ಮತ್ತು ಶೌಚವಿಧಿಯ ನಂತರ ದುರ್ಗಂಧ ಹೋಗುವವರೆಗೆ ಕೈಯನ್ನು ಬೂದಿ ಅಥವಾ ಮಣ್ಣಿನಿಂದ ತಿಕ್ಕಿ ತೊಳೆದುಕೊಳ್ಳಬೇಕು. (ಸಾಧ್ಯವಿಲ್ಲದಿದ್ದರೆ ಸಾಬೂನಿ ನಿಂದ ತೊಳೆದುಕೊಳ್ಳಬೇಕು) ಅನಂತರ ಕಾಲು ಗಳನ್ನು ತೊಳೆದುಕೊಂಡು ಬಾಯಿ ಮುಕ್ಕಳಿಸಬೇಕು. ಆಮೇಲೆ ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು ಮುಖ ಮತ್ತು ಕಣ್ಣುಗಳನ್ನು ತೊಳೆದುಕೊಳ್ಳಬೇಕು. ಕೊನೆಗೆ ಆಚಮನ ಮಾಡಿ ವಿಷ್ಣುಸ್ಮರಣೆ ಮಾಡಬೇಕು.
ಶಾಸ್ತ್ರ : ಕೈಕಾಲುಗಳನ್ನು ತೊಳೆದುಕೊಳ್ಳುವುದರಿಂದ ಬಾಹ್ಯ ಶುದ್ಧಿಯಾಗುತ್ತದೆ. ಶರೀರದ ಆಂತರಿಕ ಶುದ್ಧಿಯಾಗಲು ಬಾಯಿ ಮುಕ್ಕಳಿಸುವುದು, ಆಚಮನ ಮಾಡುವುದು ಮತ್ತು ವಿಷ್ಣು ಸ್ಮರಣೆ ಮಾಡುವುದು ಆವಶ್ಯಕವಾಗಿದೆ.
. ದುರ್ಗಂಧ ಹೋಗುವವರೆಗೆ ಕೈಯನ್ನು ಮಣ್ಣಿ ನಿಂದ ತಿಕ್ಕಿ ತೊಳೆದುಕೊಳ್ಳುವುದು : ಮಣ್ಣಿನಲ್ಲಿ ಪೃಥ್ವಿ ಮತ್ತು ಆಪತತ್ತ್ವಗಳಿಗೆ ಸಂಬಂಧಿಸಿದ ಗಂಧಯುಕ್ತ ಭೂಮಿಲಹರಿಗಳು ಸುಪ್ತಾವಸ್ಥೆಯಲ್ಲಿ ಇರುತ್ತವೆ. ಮೂತ್ರ ಮತ್ತು ಶೌಚವು ದೇಹದಲ್ಲಿನ ಪೃಥ್ವಿ ಮತ್ತು ಆಪತತ್ತ್ವಗಳಿಗೆ ಸಂಬಂಧಿಸಿದ ನಿರುಪಯುಕ್ತ ಗಂಧದ ಪ್ರಕ್ರಿಯೆಯಿಂದಲೇ ಉತ್ಪನ್ನವಾಗಿರುವುದರಿಂದ ಈ ನಿರುಪಯುಕ್ತ ಗಂಧದ (ವಾಸನೆಯ) ಲಹರಿಗಳನ್ನು ಹೊರಹಾಕಲು ಅಶುದ್ಧವಾದ ಕೈಯನ್ನು ಮಣ್ಣಿನಿಂದ ತಿಕ್ಕಿ ತೊಳೆದುಕೊಳ್ಳುತ್ತಾರೆ. ಕೈಗಳಿಗಾಗುವ ಮಣ್ಣಿನ ಘರ್ಷಣಾತ್ಮಕ ಸ್ಪರ್ಶದಿಂದ ನಿರುಪಯುಕ್ತ ಗಂಧಯುಕ್ತ ಲಹರಿಗಳು ಮಣ್ಣಿನಲ್ಲಿರುವ ಭೂಮಿ ತತ್ತ್ವಕ್ಕೆ ಸಂಬಂಧಿ ಸಿದ ಗಂಧಲಹರಿಗಳಿಂದ ಉಚ್ಚಾಟನೆಯಾಗುವುದರಿಂದ ಶರೀರಕ್ಕಾಗುವ ನಿರುಪಯುಕ್ತ ಗಂಧದರ್ಶಕ ಲಹರಿಗಳ ಸಂಪರ್ಕವು ಕಡಿಮೆಯಾಗಲು ಸಹಾಯವಾಗುತ್ತದೆ. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಹೆಸರಿನಲ್ಲಿ ಲೇಖನ ಬರೆಯುತ್ತಾರೆ, ೧೨.೧೨.೨೦೦೭, ಮಧ್ಯಾಹ್ನ ೨.೫೫)
ಅ ೧. ದುರ್ಗಂಧವನ್ನು ಹೋಗಲಾಡಿಸಲು ಪೃಥ್ವಿ ಅಥವಾ ಆಪತತ್ತ್ವದ
 ಪ್ರಾಬಲ್ಯ ಜಾಸ್ತಿಯಿರುವ ಘಟಕ ಗಳನ್ನು ಉಪಯೋಗಿಸುವುದರ ಹಿಂದಿನ ಶಾಸ್ತ್ರ
ಸಂಕಲನಕಾರರು : ಪೃಥ್ವಿತತ್ತ್ವಕ್ಕೆ ಸಂಬಂಧಿಸಿದ ನಿರುಪಯುಕ್ತ ಗಂಧದ ಉಚ್ಚಾಟನೆಯನ್ನು ಮಾಡಲು ಮಣ್ಣು, ಅಂದರೆ ಪೃಥ್ವಿತತ್ತ್ವವನ್ನು ಉಪಯೋಗಿಸುವುದಕ್ಕಿಂತ ನೀರು, ಅಂದರೆ ಆಪತತತ್ತ್ವವು ಏಕೆ ಪರಿಣಾಮಕಾರಿಯಾಗಿರುವುದಿಲ್ಲ ?

ಓರ್ವ ವಿದ್ವಾಂಸ : ನೀರಿನಿಂದ ಕೈಯನ್ನು ತೊಳೆದುಕೊಳ್ಳುವುದರಿಂದಲೂ ನಿರುಪಯುಕ್ತ ಗಂಧದ ಉಚ್ಚಾಟನೆಯಾಗುತ್ತದೆ; ಆದರೆ ಚರ್ಮದ ಮೇಲೆ ಸ್ಥೂಲಸ್ತರದಲ್ಲಿ ಘನೀಕೃತವಾಗಿರುವ ದುರ್ಗಂಧದ ಪರಿಣಾಮವನ್ನು ನಾಶಗೊಳಿಸಲು ಮಣ್ಣಿನಲ್ಲಿನ ಸ್ಥೂಲಗಂಧವನ್ನು ಉಪಯೋಗಿಸಿ ಹೊರಗಿನಿಂದಲೂ ಸಹ ಮಣ್ಣಿನ ಗಂಧದಿಂದ ಮನಸ್ಸನ್ನು ಪ್ರಸನ್ನಗೊಳಿಸುವ ಮಾನಸಿಕ ಸ್ತರದಲ್ಲಿನ ಉಪಾಯಯೋಜನೆಯನ್ನು ಈ ಪ್ರಕ್ರಿಯೆಯಿಂದ ಮಾಡಿರುವುದು ಕಂಡುಬರುತ್ತದೆ. ಮಣ್ಣಿನ ಘರ್ಷಣೆ ಯಿಂದ ಚರ್ಮದಲ್ಲಿ ಘನೀಕೃತವಾಗಿರುವ ಗಂಧದ ಪರಿಣಾಮವು ನಾಶವಾಗಿ ಚರ್ಮದಲ್ಲಿನ ಟೊಳ್ಳುಗಳು ಮೃತ್ತಿಕಾಗಂಧದಿಂದ ತುಂಬುತ್ತವೆ. ಇದರಿಂದ ಜೀವದ ಮನಸ್ಸಿಗಾಗುವ ದುರ್ಗಂಧದ ತಿರಸ್ಕಾರವು ನಾಶವಾಗಲು ಸಹಾಯವಾಗುತ್ತದೆ.
ಸ್ಥೂಲ ಜಡತ್ವದರ್ಶಕ ದುರ್ಗಂಧವನ್ನು ನಾಶಗೊಳಿಸಲು ಆದಷ್ಟು ಪೃಥ್ವಿತತ್ತ್ವದ ಪ್ರಾಬಲ್ಯ ಜಾಸ್ತಿಯಿರುವ ಘಟಕಗಳನ್ನು ಉಪಯೋಗಿಸುತ್ತಾರೆ ಮತ್ತು ನಿರುಪಯುಕ್ತ ವಾಯುಗಳಿಂದ ನಿರ್ಮಾಣವಾದ ಸೂಕ್ಷ ್ಮದುರ್ಗಂಧದ ಪರಿಣಾಮವನ್ನು ನಾಶಗೊಳಿಸಲು ಆದಷ್ಟು ಪೃಥ್ವಿತತ್ತ್ವದ ಆಚೆಗೆ ಹೋಗಿ ಆಪತತ್ತ್ವದ ಸಹಾಯವನ್ನು ತೆಗೆದುಕೊಳ್ಳುತ್ತಾರೆ.
- ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೨.೧೨.೨೦೦೭, ಮಧ್ಯಾಹ್ನ ೨.೫೫)
. ಕಾಲುಗಳನ್ನು ತೊಳೆದುಕೊಳ್ಳುವುದು :ಕಾಲುಗಳನ್ನು ತೊಳೆದುಕೊಳ್ಳುವುದರಿಂದ ಶೌಚ ಮತ್ತು ಮೂತ್ರಗಳಂತಹ ಕೃತಿಗಳನ್ನು ಮಾಡುವಾಗ ಕಾಲುಗಳ ಸಂಪರ್ಕಕ್ಕೆ ಬರುವ ರಜ- ತಮಾತ್ಮಕ ಲಹರಿಗಳು ನೀರಿನಲ್ಲಿ ವಿಸರ್ಜನೆಯಾಗಿ ದೇಹವು ಶುದ್ಧವಾಗಲು ಸಹಾಯವಾಗುತ್ತದೆ.’
- ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೧.೧೨.೨೦೦೭, ಮಧ್ಯಾಹ್ನ ೨.೩೪)

ಆ ೧. ಪಶ್ಚಿಮಕ್ಕೆ ಮುಖ ಮಾಡಿ ಕಾಲುಗಳನ್ನು ತೊಳೆದು ಕೊಳ್ಳಬೇಕು
ಪ್ರಾಂಡಮುಖೋನ್ನಾನಿ ಭುಂಜೀತ್ತೋಚ್ಚರೆದ್ದಕ್ಷಿಣಾಮುಖಃ
ಉದಂಡಮುಖೋ ಮೂತ್ರಂ ಕುರ್ಯಾತ್ಪ್ರಾಪ್ರತ್ಯಕ್ಪಾದಾವನೆಜನಮಿತಿ
- ಆಪಸ್ತಂಬಧರ್ಮಸೂತ್ರ, ಪ್ರಶ್ನೆ ೧, ಪಟಲ ೧೧, ಕಾಂಡಿಕ ೩೧, ಅಂಶ ೧
ಅರ್ಥ : ಪೂರ್ವಕ್ಕೆ ಮುಖ ಮಾಡಿ ಅನ್ನವನ್ನು ಸ್ವೀಕರಿಸಬೇಕು, ದಕ್ಷಿಣಕ್ಕೆ ಮುಖ ಮಾಡಿ ಮಲ ವಿಸರ್ಜನೆ, ಉತ್ತರಕ್ಕೆ ಮುಖ ಮಾಡಿ ಮೂತ್ರವಿಸರ್ಜನೆ ಮಾಡಬೇಕು ಮತ್ತು ಪಶ್ಚಿಮಕ್ಕೆ ಮುಖ ಮಾಡಿ ಕಾಲುಗಳನ್ನು ತೊಳೆದುಕೊಳ್ಳಬೇಕು.
ಆ ೧ ಅ. ಪಶ್ಚಿಮಕ್ಕೆ ಮುಖ ಮಾಡಿ ಕಾಲುಗಳನ್ನು ತೊಳೆದುಕೊಳ್ಳುವುದರ ಹಿಂದಿನ ಶಾಸ್ತ್ರ : ಧರ್ಮಾಚರಣೆಯಂತೆ ಆಯಾ ದಿಕ್ಕಿಗೆ ಆಯಾ ವಾಯುಮಂಡಲದಲ್ಲಿ ಆಯಾ ಕೃತಿಗಳನ್ನು ಮಾಡುವುದರಿಂದ ವಾಯುಮಂಡಲದ ಸ್ವಾಸ್ಥ ್ಯವು ಹಾಳಾಗದೇ ಬ್ರಹ್ಮಾಂಡದಲ್ಲಿನ ಆಯಾ ಶಕ್ತಿರೂಪೀ ಗತಿಲಹರಿಗಳಲ್ಲಿ ಯೋಗ್ಯ ಸಮತೋಲನವನ್ನು ಕಾಪಾಡಬಹುದು. ಪಶ್ಚಿಮ ದಿಕ್ಕು ವಿಚಾರಗಳ ರಜೋಗುಣಿ ಕ್ರಿಯೆಗಳನ್ನು (ಕರ್ಮಗಳನ್ನು) ಆಮಂತ್ರಿಸುವಂತಹದ್ದಾಗಿರುವುದರಿಂದ ಪಶ್ಚಿಮಕ್ಕೆ ಮುಖ ಮಾಡಿ ಕಾಲುಗಳನ್ನು ತೊಳೆದುಕೊಂಡು ಶುದ್ಧೀಕರಣ ಮಾಡಿಕೊಳ್ಳುವುದರಿಂದ ಜೀವದ ಮನಸ್ಸಿನಲ್ಲಿ ಆಯಾ ವಿಚಾರಗಳ ಗತಿಗೆ ಪೂರಕ ಚಕ್ರಗಳು ತಯಾರಾಗಿ ಭವಿಷ್ಯದಲ್ಲಿನ ಕೃತಿಗಳ ಸೂಕ್ಷಮ ವಿಚಾರಗಳಿಗೆ ವೇಗವು ಸಿಗಲು ಸಹಾಯವಾಗುತ್ತದೆ.
ಆಯಾ ದಿಕ್ಕಿಗೆ ಮುಖ ಮಾಡಿ ಆಯಾ ಲಹರಿಗಳ ಸ್ಪರ್ಶದಿಂದ ಆಯಾ ಕರ್ಮಗಳನ್ನು ಮಾಡುವುದರಿಂದ ಪಾಪದ ಪರಿಮಾರ್ಜನೆ ಮತ್ತು ಪುಣ್ಯ ಪ್ರಾಪ್ತವಾಗಲು ಸಹಾಯವಾಗುತ್ತದೆ. - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ..೨೦೦೭,
ಮಧ್ಯಾಹ್ನ ೧.೫೯) (ಆಧಾರ : ಸನಾತನ ನಿರ್ಮಿತ ಗ್ರಂಥ ‘ಸ್ನಾನದ ಮೊದಲಿನ ಆಚಾರಗಳಶಾಸ್ತ್ರ’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಶಿಕ್ಷಣ ನೀಡುವ ಮಾಲಿಕೆ !