ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಸಮಸ್ತ ಹಿಂದೂ ಸಂಘಟನೆಗಳಿಂದ ಪತ್ರಿಕಾಗೋಷ್ಠಿ

ಹುಬ್ಬಳ್ಳಿ
ಪೂರ್ವಾಗ್ರಹದಿಂದ ತನಿಖೆ ಮಾಡುವ ಮಹಾರಾಷ್ಟ್ರದ ಪೊಲೀಸರಂತೆ ಕರ್ನಾಟಕ ರಾಜ್ಯದ
ಪೊಲೀಸರು ವರ್ತಿಸಬಾರದು ! - ಶ್ರೀ. ಗುರುಪ್ರಸಾದ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
(ಎಡದಿಂದ)  ಶ್ರೀ. ಗುರುಪ್ರಸಾದ, ಶ್ರೀ. ಗಂಗಾಧರ ಕುಲಕರ್ಣಿ,
ಶ್ರೀ. ವೆಂಕಟರಮಣ ನಾಯ್ಕ
ಹುಬ್ಬಳ್ಳಿ : ರಾಜ್ಯದ ಪೊಲೀಸರು ಹಂಪಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಕಲ್ಬುರ್ಗಿಯವರ ಹತ್ಯೆಯ ಅನೇಕ ಸಾಧ್ಯತೆಗಳನ್ನು ಅಭ್ಯಾಸ ಮಾಡಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕೆಂದು ಒಂದು ಹಿಂದೂ ಸಂಘಟನೆಯಾಗಿ ನಮ್ಮದೂ ನಿಲುವಾಗಿದೆ. ಆದರೆ ನಿಜವಾದ ಆರೋಪಿ ಸಿಗುತ್ತಿಲ್ಲವೆಂದು ಸನಾತನ ಸಂಸ್ಥೆಯ ಸಾಧಕರ ಅಥವಾ ಯಾವುದೇ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಲಿಪಶು ಮಾಡುವ ಪ್ರಯತ್ನವಾಗಬಾರದು. ಮಹಾರಾಷ್ಟ್ರದ ನಾಸ್ತಿಕ ನಾಯಕ ಡಾ. ದಾಬೋಲ್ಕರ್ ಮತ್ತು ಕಾ. ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರದ ಪೊಲೀಸರು ದಾಬೋಲ್ಕರ್-ಪಾನ್ಸರೆ ಇವರ ಕುಟುಂಬದವರ ಒತ್ತಡಕ್ಕೆ ಮಣಿದು ಪೂರ್ವಾಗ್ರಹದಿಂದ ತನಿಖೆ ಮಾಡುತ್ತಿದ್ದಾರೆ.
ಕರ್ನಾಟಕ ಪೊಲೀಸರು ಇದುವರೆಗೆ ಡಾ. ಕಲ್ಬುರ್ಗಿ ಪ್ರಕರಣದಲ್ಲಿ ಒಳ್ಳೆಯ ರೀತಿಯಲ್ಲಿ ತನಿಖೆ ಮಾಡಿದ್ದಾರೆ. ಆದರೆ ಪುರೋಗಾಮಿಗಳ ಒತ್ತಡಕ್ಕೆ ಮಣಿದು ಈ ಪ್ರಕರಣದಲ್ಲಿ ಹಿಂದೂ ಸಂಘಟನೆಗಳನ್ನು ಬಲಿಪಶು ಮಾಡಬಾರದೆಂದು ನಮ್ಮ ಆಗ್ರಹವಾಗಿದೆ, ಎಂದು ಹಿಂದೂ ಜನ ಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಗುರುಪ್ರಸಾದರವರು ಪ್ರತಿಪಾದಿಸಿದರು.
ಅವರು ಸೆಪ್ಟೆಂಬರ್ ೨೪ ರಂದು ಹುಬ್ಬಳ್ಳಿಯ ಪತ್ರಿಕಾಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಶ್ರೀ. ಗಂಗಾಧರ ಕುಲಕರ್ಣಿ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವೆಂಕಟರಮಣ ನಾಯ್ಕ್‌ರವರು ಉಪಸ್ಥಿತರಿದ್ದರು.
ಒಂದಂತೂ ಸತ್ಯ, ದಾಬೋಲ್ಕರ್-ಪಾನ್ಸರೆ ಹತ್ಯೆ ನಂತರ ಇಂದು ಅವರ ಅನೇಕ ವಿಷಯಗಳು ಸಮಾಜದೆದುರು ಬಯಲಾಗುತ್ತಿವೆ. ದಾಬೋಲ್ಕರರ ಟ್ರಸ್ಟಿನ ಹಗರಣಗಳು, ಅವರಿಗೆ ನಕ್ಸಲ್‌ವಾದಿಗಳೊಂದಿಗಿದ್ದ ಸಂಬಂಧ, ಪಾನ್ಸರೆಯವರ ಕುಟುಂಬದವರೊಂದಿಗಿರುವ ವಿಪರೀತವಾದ, ಅವರ ಟೋಲ್ ವಿರೋಧಿ ಆಂದೋಲನದ ವಿರೋಧಿಗಳು ಇವೆಲ್ಲ ಸಾಧ್ಯತೆಗಳ ಬಗ್ಗೆ ಮಹಾರಾಷ್ಟ್ರದ ಪೊಲೀಸರು ತನಿಖೆ ಮಾಡದಿರುವುದು ಮತ್ತು ಸನಾತನದ ಸಾಧಕರಿಗೆ ಕಿರುಕುಳ ನೀಡುತ್ತಿರುವುದು ದುರದೃಷ್ಟಕರವಾಗಿದೆ. ಹೀಗಿದ್ದರೂ ಇವೆಲ್ಲ ಪ್ರಕರಣಗಳಿಂದ ಸನಾತನದ ನಿರಪರಾಧಿತನ ಸಿದ್ಧವಾಗುವುದೆಂದು ಖಚಿತವಿದೆ. ಅಲ್ಲದೇ ಸಮಾಜವು ಪ್ರಜ್ಞಾವಂತವಾಗಿರುವುದರಿಂದ ಈ ತಥಾಕಥಿತ ವಿಚಾರವಂತರ ವೈಚಾರಿಕ ಭಯೋತ್ಪಾದನೆಗೆ ಬಲಿಯಾಗುವುದಿಲ್ಲ ಎಂಬ ವಿಶ್ವಾಸವೂ ನಮಗಿದೆ, ಎಂದು ಶ್ರೀ. ಗುರುಪ್ರಸಾದರವರು ಕೊನೆಯಲ್ಲಿ ಹೇಳಿದರು.
ದಾಭೋಲ್ಕರ್ ಮತ್ತು ಪಾನ್ಸರೆ ಕುಟುಂಬದ ಮೇಲಿರುವ ವಿವಾದಿತ ವಿಷಯದ ಬಗ್ಗೆ
ತನಿಖೆಯಾಗಲಿ ! - ಶ್ರೀ. ಗಂಗಾಧರ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ, ಶ್ರೀರಾಮ ಸೇನೆ
ದಾಭೋಲ್ಕರ್ ಮತ್ತು ಪಾನ್ಸರೆ ಕುಟುಂಬದ ಮೇಲಿರುವ ವಿವಾದಿತ ವಿಷಯಗಳ ಬಗ್ಗೆ ಶೀಘ್ರವೇ ತನಿಖೆಯಾಗಬೇಕು. ನಕ್ಸಲರೊಂದಿಗಿದ್ದ ಅವರ ಹಣದ ವ್ಯವಹಾರದ ಬಗ್ಗೆ ಇಲ್ಲಿಯ ವರೆಗೆ ತನಿಖೆಯಾಗದಿರುವುದು ಖಂಡನೀಯವಾಗಿದೆ. ಅವರ ಅವ್ಯವಹಾರದ ಬಗ್ಗೆ ಅಂಕಿ ಅಂಶಸಮೇತವಾಗಿ ಬಹಿರಂಗಗೊಳಿಸಿದರೂ ಅದರ ಬಗ್ಗೆ ಯಾವುದೇ ಅಧಿಕಾರಿಗಳು ಮಾತನಾಡದಿರುವುದು ಸಂಶಯಾಶ್ಪದವಾಗಿದೆ, ಎಂದು ಶ್ರೀರಾಮ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ. ಗಂಗಾಧರ ಕುಲಕರ್ಣಿ ಹೇಳಿದ್ದಾರೆ.
............................................................................................................................................................................
ಡಾ. ಕಲ್ಬುರ್ಗಿಯವರು ಸಕ್ರಿಯವಿದ್ದ ಸಂಸ್ಥೆಗಳ ಆರ್ಥಿಕ ವ್ಯವಹಾರಗಳ ತನಿಖೆಯಾಗಲಿ ! - ಶ್ರೀ. ಗುರುಪ್ರಸಾದ
ಡಾ. ಕಲ್ಬುರ್ಗಿ ಹತ್ಯೆ ಸಂದರ್ಭದಲ್ಲಿ ಇಂದು ಅನೇಕ ವಿಷಯಗಳನ್ನು ಮಂಡಿಸಲಾಗುತ್ತಿದೆ. ಅವರು ಮೃತ್ಯುವಿನ ಮೊದಲು ೨ ಟ್ರಸ್ಟ್‌ಗಳಿಗೆ ರಾಜೀನಾಮೆ ನೀಡಿದ್ದರು. ಒಬ್ಬ ಉಚ್ಚ ಪದವೀಧರ ವ್ಯಕ್ತಿ ರಾಜೀನಾಮೆ ನೀಡಿದಾಗ ಅದರ ಹಿಂದೆ ಒಂದೋ ಅವನ ಸ್ವಾಭಿಮಾನಕ್ಕೆ ಧಕ್ಕೆಯಾಗಿರುತ್ತದೆ ಅಥವಾ ಅಲ್ಲಿನ ಭ್ರಷ್ಟ ಕಾರುಬಾರು ಅಸಹನೀಯವಾಗಿರುತ್ತದೆ, ಈ ಬಗ್ಗೆ ತನಿಖೆಯಾಗಬೇಕು. ಹಾಗಾಗಿ ರಾಜ್ಯದ ಪೊಲೀಸರು ಡಾ. ಕಲ್ಬುರ್ಗಿ ಹತ್ಯೆ ಬಗ್ಗೆ ಕೇವಲ ಪುರೋಗಾಮಿಗಳು ಆರೋಪಿಸುತ್ತಾರೆಂದು ಒಮ್ಮುಖ ತನಿಖೆ ಮಾಡದೇ ಅವರು ಎಲ್ಲ ಸಾಧ್ಯತೆಗಳ ಬಗ್ಗೆ ವಿಚಾರ ಮಾಡಿ ಮಾಡಬೇಕು, ಎಂದೂ ಶ್ರೀ. ಗುರುಪ್ರಸಾದರವರು ಹೇಳಿದರು.
....................................................................................................................................................................................
ಬೆಳಗಾವಿ
‘ಹಿಂದುತ್ವನಿಷ್ಠ ಸಂಘಟನೆಗಳು ಸನಾತನದ ಜೊತೆಗಿವೆ’ ಎಂಬುದನ್ನು ಸನಾತನಕ್ಕೆ ವಿನಾಕಾರಣ
ತೊಂದರೆ ಕೊಡುವವರು ಮರೆಯಬಾರದು ! - ನ್ಯಾಯವಾದಿ ಚೇತನ್ ಮಣೇರಿಕರ್, ಹಿಂದೂ ವಿಧಿಜ್ಞ ಪರಿಷತ್ತು  
(ಎಡದಿಂದ) ಶ್ರೀ. ಮನೋಜ ಖಾಡ್ಯೆ, ನ್ಯಾಯವಾದಿ
ಶ್ರೀ. ಶರದಚಂದ್ರ ಮುಂಡರಗಿಶ್ರೀ. ಅಭಯ ವರ್ತಕ್, ನ್ಯಾಯವಾದಿ
ಶ್ರೀ. ಚೇತನ ಮಣೇರಿಕರ್,ಶ್ರೀ. ವೆಂಕಟೇಶ ಶಿಂದೆ
ಬೆಳಗಾವಿ: ಡಾ. ನರೇಂದ್ರ ದಾಬೋಲಕರ್ ಮತ್ತು ಕಾ. ಪಾನ್ಸರೆ ಹತ್ಯೆ ಸಂದರ್ಭದಲ್ಲಿ  ಮಹಾರಾಷ್ಟ್ರದ ತನಿಖಾ ಸಂಸ್ಥೆಗಳು ಪುರೋಗಾಮಿ ಮತ್ತು ಹಿಂದೂದ್ರೋಹಿಗಳ ಒತ್ತಡಕ್ಕೆ ಮಣಿದು ಸನಾತನ ಸಂಸ್ಥೆಯ ಸಾಧಕರನ್ನು ಬಂಧಿಸಿ ವಿನಾಕಾರಣ ಕಿರುಕುಳ ನೀಡುತ್ತಿವೆ. ಸನಾತನಕ್ಕೆ ಈ ಹತ್ಯೆಯೊಂದಿಗೆ ಯಾವುದೇ ಸಂಬಂಧವಿಲ್ಲದಿರುವಾಗ ಮತ್ತು ತನಿಖೆಯಿಂದ ಯಾವುದೇ ಫಲಶ್ರುತಿ ಇಲ್ಲದಿರುವಾಗ ಸಮೀರ ಗಾಯಕ್ವಾಡ್‌ರನ್ನು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಮತ್ತು ಡಾ. ವೀರೇಂದ್ರ ತಾವಡೆಯವರನ್ನು ಸಹ ಬಂಧಿಸಿ ಅವರಿಗೆ ಕಿರುಕುಳ ಕೊಡಲಾಗುತ್ತಿದೆ. ಕರ್ನಾಟಕದ ಪೊಲೀಸರು ಪೊ. ಕಲ್ಬುರ್ಗಿಯವರ ಹತ್ಯೆಯ ಎಲ್ಲ ಸಾಧ್ಯತೆಗಳ ಬಗ್ಗೆ ಸಂಪೂರ್ಣ ವಿಚಾರ ಮಾಡಿ ನಿಷ್ಪಕ್ಷಪಾತದಿಂದ ತನಿಖೆ ಮಾಡಬೇಕು. ಕೇವಲ ಒತ್ತಡದಿಂದ ಸನಾತನಕ್ಕೆ ವಿನಾಕಾರಣ ತೊಂದರೆ ಕೊಡುವವರು, ಸನಾತನದೊಂದಿಗೆ    ಸಮಸ್ತ ಹಿಂದೂ ಸಂಘಟನೆಗಳಿವೆ ಎಂಬುದನ್ನು ಮರೆಯಬಾರದು, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಶ್ರೀ. ಚೇತನ ಮಣೇರಿಕರ್ ಸ್ಪಷ್ಟಪಡಿಸಿದರು. ಅವರು ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಅಭಯ ವರ್ತಕ್, ಬೆಳಗಾವಿಯ ಖ್ಯಾತ ನ್ಯಾಯವಾದಿ ಮತ್ತು ಭಾರತೀಯ ಸೇನಾ ದಳದ ನಿವೃತ್ತ ಕ್ಯಾಪ್ಟನ್ ಶ್ರೀ. ಶರದಚಂದ್ರ ಮುಂಡರಗಿ, ಅಭಿನವ ಹಿಂದೂ ರಾಷ್ಟ್ರ ಸಂಘಟನೆಯ ಶ್ರೀ. ವೆಂಕಟೇಶ ಶಿಂದೆ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮನೋಜ ಖಾಡ್ಯೆ ಉಪಸ್ಥಿತರಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಸಮಸ್ತ ಹಿಂದೂ ಸಂಘಟನೆಗಳಿಂದ ಪತ್ರಿಕಾಗೋಷ್ಠಿ