ಸನಾತನದ ಒಂದು ಸೇವಾಕೇಂದ್ರದಲ್ಲಿ ಪೊಲೀಸರಿಂದ ಸಾಧಕರ ವಿಚಾರಣೆ !

ರಾಷ್ಟ್ರ ಮತ್ತು ಧರ್ಮಕ್ಕಾಗಿ ನಿಃಸ್ವಾರ್ಥ ವೃತ್ತಿಯಿಂದ ಕಾರ್ಯ ಮಾಡುತ್ತಿರುವ ಸನಾತನದ ಸೇವಾಕೇಂದ್ರದ ಬಗ್ಗೆ ಪದೇಪದೇ ವಿಚಾರಣೆ ನಡೆಸುವ ಮತ್ತು ಸಾಧಕರಿಗೆ ವಿಚಾರಣೆಯ ಹೆಸರಿನಲ್ಲಿ ಅನಾವಶ್ಯಕವಾಗಿ ತೊಂದರೆಕೊಡುವ ಪೊಲೀಸರು ಇತರ ಧರ್ಮದವರ ವಿಷಯದಲ್ಲಿ ಎಂದಾದರೂ ಈ ರೀತಿ ವರ್ತಿಸುತ್ತಾರೆಯೇ ?
ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಹಿಂದೂಗಳೆಂದು ಬದುಕುವುದು ದಿನದಿಂದದಿನಕ್ಕೆ ಕಠಿಣವಾಗುತ್ತಾ ಹೋಗುತ್ತಿದೆ. ದೇಶದಲ್ಲಿ ಆಡಳಿತವನ್ನು ನಡೆಸುವವರು ಯಾರೇ ಆಗಿದ್ದರೂ ಸಹ ಹಿಂದೂಗಳಿಗೆ ನೀಡುವ ಹಿಂಸೆ ತಪ್ಪಿದ್ದಲ್ಲ ! ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟೀಷ್ ಪೊಲೀಸರು ಕ್ರಾಂತಿಕಾರರಿಗೆ ಒಳಗಿಂದೊಳಗೆ ಪೀಡಿಸುತ್ತಿದ್ದ ಕಥೆಯನ್ನು ತಾವೆಲ್ಲರೂ ಓದಿರಬಹುದು.
ಇಂದು ಆ ಕ್ರಾಂತಿಕಾರರ ಸ್ಥಾನದಲ್ಲಿ ನಿರ್ದೊಷಿ ಹಿಂದೂಗಳಿದ್ದಾರೆ ಹಾಗೂ ಬ್ರಿಟೀಷ್ ಪೊಲೀಸರ ಸ್ಥಾನದಲ್ಲಿ ಅವರ ವಂಶಜರು ಅಂದರೆ ಇಂದಿನ ಪೊಲೀಸರಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಧರ್ಮನಿಷ್ಠ ಸನಾತನದಂತಹ ಹಿಂದುತ್ವನಿಷ್ಠ ಸಂಘಟನೆಯನ್ನು ಮುಗಿಸುವ ಷಡ್ಯಂತ್ರ್ಯ ಅತ್ಯಂತ ಶಾಂತ ರೀತಿಯಲ್ಲಿ ನಡೆಯುತ್ತಿದೆ. ಇದರದ್ದೇ ಒಂದು ಭಾಗವೆಂದು ಪೊಲೀಸರಿಂದ ಸನಾತನದ ಸಾಧಕರಿಗೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ವಿವಿಧ ಪ್ರಕರಣಗಳೊಂದಿಗೆ ಸಂಬಂಧವನ್ನು ಕಲ್ಪಿಸಿ ಅದರ ವಿಚಾರಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ವಿವರಿಸುವ ಈ ಲೇಖನ !
ಇತ್ತೀಚೆಗಷ್ಟೇ ಪೊಲೀಸರೊಬ್ಬರು ವಿಚಾರಣೆಯ ನಿಮಿತ್ತ ಒಂದು ಸೇವಾಕೇಂದ್ರಕ್ಕೆ ಬಂದಿದ್ದರು. ಆ ಸಮಯದಲ್ಲಿ ಪೊಲೀಸರು ಸಂಪೂರ್ಣ ಸೇವಾಕೇಂದ್ರ ವನ್ನು ಪರಿಶೀಲಿಸಿದರು ಮತ್ತು ಅಲ್ಲಿಯ ಒಬ್ಬ ಸಾಧಕಿಗೆ ಇಲ್ಲಿ ಎಷ್ಟು ಜನರಿರುತ್ತಾರೆ ? ಹೊರಗಿನ ಜನರು ಬರುತ್ತಾರೆಯೇ ? ಎಂದು ವಿಚಾರಿಸಿದರು. ಆ ಸಮಯದಲ್ಲಿ ಸಾಧಕಿಯು ಸೇವಾಕೇಂದ್ರದಲ್ಲಿ ವಾಸಿಸುತ್ತಿರುವ ಸಾಧಕರ ಸಂಖ್ಯೆಯನ್ನು ತಿಳಿಸಿದರು ಹಾಗೂ ಹೊರ ಗಿನವರು ಯಾರೂ ಬರುವುದಿಲ್ಲವೆಂದು ಹೇಳಿದರು.
ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹೋಗುವಾಗ ಜೊತೆಯಲ್ಲಿ ಸನಾತನ ಪ್ರಭಾತ ದಿನಪತ್ರಿಕೆ ಅಥವಾ ಸನಾತನದ ಗ್ರಂಥವನ್ನು ತೆಗೆದುಕೊಂಡು ಹೋಗಿ !
ವಿವಿಧ ಪ್ರಕರಣಗಳ ವಿಚಾರಣೆಯ ಸಮಯದಲ್ಲಿ ಪೊಲೀಸರು ಸಾಧಕರು ಅಥವಾ ಹಿಂದುತ್ವನಿಷ್ಠರನ್ನು ಠಾಣೆಗೆ ಕರೆಸಿಕೊಳ್ಳುತ್ತಾರೆ ಹಾಗೂ ಅನೇಕ ಗಂಟೆಗಳ ವರೆಗೆ ಅಲ್ಲಿ ಅನಾವಶ್ಯಕ ಕಾಯಿಸುತ್ತಾರೆ. ಇದರಿಂದ ಆ ಸಮಯವು ವ್ಯರ್ಥವಾಗುತ್ತದೆ. ಈ ಸಮಯದ ಸದುಪಯೋಗವಾಗಲು ಪೊಲೀಸ್ ಠಾಣೆಗೆ ಹೋಗುವಾಗ ಜೊತೆಯಲ್ಲಿ ಸನಾತನ ಪ್ರಭಾತ ಅಥವಾ ಸನಾತನದ ಗ್ರಂಥವನ್ನು ತೆಗೆದುಕೊಂಡು ಹೋಗಿ ಅದನ್ನು ಓದಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ಒಂದು ಸೇವಾಕೇಂದ್ರದಲ್ಲಿ ಪೊಲೀಸರಿಂದ ಸಾಧಕರ ವಿಚಾರಣೆ !