ಪಿಂಡದಾನ

ಶ್ರಾದ್ಧದಲ್ಲಿ ಅನ್ನದ ಪಿಂಡದಾನವನ್ನು ಏಕೆ ಮಾಡುತ್ತಾರೆ ?
ಅನ್ನವನ್ನು ಮಾಡಲು ಉಪಯೋಗಿಸುವ ಅಕ್ಕಿಯು ಸರ್ವಸಮಾವೇಶಕವಾಗಿದೆ. ಅಕ್ಕಿಯಿಂದ ಅನ್ನವನ್ನು ಮಾಡಿದ ಮೇಲೆ ಅಕ್ಕಿಯಲ್ಲಿರುವ ಪೃಥ್ವಿತತ್ತ್ವದ ಪ್ರಮಾಣವು ಕಡಿಮೆಯಾಗಿ ಆಪತತ್ತ್ವದ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಅದರಲ್ಲಿನ ರಜೋಗುಣವೂ ಹೆಚ್ಚಾಗುತ್ತದೆ. ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ (ಆಪತತ್ತ್ವದಿಂದಾಗಿ) ತೇವಾಂಶವು ಹೆಚ್ಚಿಗೆ ಇರುತ್ತದೆ. ಯಾವಾಗ ೧೦ ನೆಯ ದಿನ ಅನ್ನದ ಉಂಡೆಯನ್ನು ಮಾಡಿ, ಅದರ ಮೇಲೆ ಸಂಸ್ಕಾರಗಳನ್ನು ಮಾಡಿ, ಮೃತದೇಹಕ್ಕೆ ಆವಾಹನೆಯನ್ನು ಮಾಡಲಾಗುತ್ತದೆಯೋ ಆಗ ಅದು ಪಿಂಡದಲ್ಲಿ ರೂಪಾಂತರವಾಗುತ್ತದೆ. ಅನ್ನದ ಸುತ್ತಲೂ ನಿರ್ಮಾಣವಾದ ತೇವಾಂಶದ ಪ್ರಭಾವಳಿಯ ಮೇಲೆ (ವಾಯುಮಂಡಲದಲ್ಲಿರುವ) ಲಿಂಗ ದೇಹದಿಂದ ಪ್ರಕ್ಷೇಪಿತವಾಗುವ ರಜ-ತಮಲಹರಿಗಳ ಸಂಸ್ಕರಣವಾಗುತ್ತದೆ. ಆದುದರಿಂದ ಅನ್ನದ ಈ ಪ್ರತಿಕೃತಿಯು ಲಿಂಗದೇಹದ ಪಿಂಡದಂತೆ ಅಂದರೆ ಪ್ರಕೃತಿಯಂತೆ ಭಾಸವಾಗುತ್ತದೆ. ಆದುದರಿಂದ ಅದಕ್ಕೆ ‘ಅನ್ನದ ಪಿಂಡ’ ಎಂದು ಕರೆಯುತ್ತಾರೆ. ಲಿಂಗದೇಹಗಳಿಗೆ ಈ ರಜೋಗುಣಿ ಪಿಂಡದ ವಾತಾವರಣದಲ್ಲಿ ಪ್ರವೇಶಿಸಲು ಸುಲಭವಾಗುತ್ತದೆ. ಪಿಂಡದ ವಾತಾವರಣವು ಮಂತ್ರೋಚ್ಛಾರದಿಂದ ಯುಕ್ತಸಂಪನ್ನ ವಾಗಿರುತ್ತದೆ. ಲಿಂಗದೇಹಗಳಿಗೆ ಮಂತ್ರೋಚ್ಚಾರದಿಂದ ಯುಕ್ತ ಸಂಪನ್ನವಾದ ವಾಯುಮಂಡಲದ ಲಾಭವಾಗಿ ಅವುಗಳಿಗೆ ಸೂಕಬಲವು ಪ್ರಾಪ್ತವಾಗುತ್ತದೆ ಮತ್ತು ಅವುಗಳ ಮುಂದಿನ ಮಾರ್ಗಕ್ರಮಣವು ಸುಲಭವಾಗುತ್ತದೆ.
- ಓರ್ವ ವಿದ್ವಾಂಸ (ಪೂ. (ಸೌ.) ಅಂಜಲಿ ಗಾಡಗೀಳರು ಓರ್ವ ವಿದ್ವಾಂಸ ಎಂಬ ಅಂಕಿತನಾಮದಿಂದ ಲೇಖನ ಬರೆಯುತ್ತಾರೆ, ೨೬.೬.೨೦೦೫, ಮಧ್ಯಾಹ್ನ ೨.೨೫)

ಪಿಂಡಕ್ಕಾಗಿ ಅನ್ನದಲ್ಲಿನ ಎಲ್ಲ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪ ತೆಗೆದುಕೊಳ್ಳುವುದರ ಹಿಂದಿನ ಶಾಸ್ತ್ರವೇನು ?
‘ಪಿಂಡವು ಲಿಂಗದೇಹದ ಪ್ರತಿರೂಪವಾಗಿದೆ. ಯಾವಾಗ ಲಿಂಗದೇಹವು ಸ್ಥೂಲದೇಹದಿಂದ ಬೇರೆ ಯಾಗುತ್ತದೆಯೋ, ಆಗ ಅದು ಮನಸ್ಸಿನಲ್ಲಿನ ಅನೇಕ ಸಂಸ್ಕಾರಗಳನ್ನು ತೆಗೆದುಕೊಂಡು ವಾಯುಮಂಡಲದಲ್ಲಿ ಬರುತ್ತದೆ. ಎಲ್ಲ ಆಸಕ್ತಿಗಳಲ್ಲಿ ಅನ್ನದ ಆಸಕ್ತಿಯು ಎಲ್ಲಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅನ್ನದ ಬಗ್ಗೆ ಪ್ರತಿಯೊಂದು ಜೀವದ ಬೇಕುಬೇಡಗಳೂ ಸಹ ಬೇರೆ ಬೇರೆಯಾಗಿರುತ್ತವೆ. ಆದುದರಿಂದ ಸಿಹಿ, ಖಾರ ಮುಂತಾದ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಅದರಿಂದ ಪಿಂಡವನ್ನು ತಯಾರು ಮಾಡಿ ಶ್ರಾದ್ಧಸ್ಥಳದಲ್ಲಿ ಇಡುತ್ತಾರೆ. ಶ್ರಾದ್ಧದಲ್ಲಿ ಮಾಡಲಾಗುವ ಮಂತ್ರೋಚ್ಚಾರದ ಸಂಕಲ್ಪಶಕ್ತಿಯಿಂದಾಗಿ (ವಿಧಿ ಯಿಂದ) ಪಿಂಡದ ಮೇಲೆ ಸಂಸ್ಕರಣವಾಗಿ ಆಯಾ ಪದಾರ್ಥಗಳಲ್ಲಿನ ಸೂಕವಾಯುವು ಕಾರ್ಯ
ನಿರತವಾಗುತ್ತದೆ ಮತ್ತು ಬಾಹ್ಯವಾಯು ಮಂಡಲದಲ್ಲಿ ಪ್ರಕ್ಷೇಪಿತವಾಗುತ್ತದೆ. ಶ್ರಾದ್ಧದಲ್ಲಿ ಮಾಡಲಾಗುವ ಸಂಕಲ್ಪದಿಂದ ಶ್ರಾದ್ಧದ ಸ್ಥಳಕ್ಕೆ ಬಂದ ಲಿಂಗದೇಹಗಳಿಗೆ ಸೂಕವಾಯುವಿನ ಮೂಲಕ ಆಯಾ ಅನ್ನದ ಹವಿರ್ಭಾಗವು ಸಿಗುವುದರಿಂದ ಲಿಂಗದೇಹಗಳು ಸಂತುಷ್ಟವಾಗುತ್ತವೆ. ಲಿಂಗದೇಹಗಳಿಗೆ ಆಯಾ ಪದಾರ್ಥಗಳು ಸಿಗುವುದರಿಂದ ಅವುಗಳ ಆಸಕ್ತಿಯು ಕಡಿಮೆಯಾಗುತ್ತದೆ ಮತ್ತು ಇದರಿಂದ ಲಿಂಗದೇಹಗಳು ಭೂಲೋಕದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಯೂ ಕಡಿಮೆಯಾಗುತ್ತದೆ.’ - ಓರ್ವ ವಿದ್ವಾಂಸ ((ಪೂ.) ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೭.೧೨. ೨೦೦೫, ಮಧ್ಯಾಹ್ನ ೧೨.೨೨ )
ಪಿಂಡವನ್ನು ಜೇನುತುಪ್ಪದೊಂದಿಗೆ ಏಕೆ ಕೊಡಬೇಕು ?
ಮಧುವಿನ ರಸದಿಂದ (ಜೇನುತುಪ್ಪದಿಂದ) ಪ್ರಕ್ಷೇಪಿತವಾಗುವ ಆಹ್ಲಾದಕರ ಮತ್ತು ತಂಪು ಲಹರಿಗಳ ಕಡೆಗೆ ಪಿತೃಲಹರಿಗಳು ಬೇಗನೇ ಆಕರ್ಷಿತವಾಗಿ ಪಿಂಡ ದಲ್ಲಿ ಬದ್ಧವಾಗುತ್ತವೆ. ಜೇನುತುಪ್ಪದಲ್ಲಿ ಪೃಥ್ವಿ ಮತ್ತು ಆಪತತ್ತ್ವಕ್ಕೆ ಸಂಬಂಧಿಸಿದ ಪಿತೃಲಹರಿ ಗಳನ್ನು ತನ್ನ ಮಧುರ ಸುಗಂಧದಿಂದ ಪ್ರಸನ್ನಗೊಳಿಸುವ ಮತ್ತು ಪಿಂಡದಲ್ಲಿಯೇ ಬದ್ಧಗೊಳಿಸುವ ಸಾಮರ್ಥ್ಯವಿರುತ್ತದೆ. ಪಿಂಡವನ್ನು ಜೇನುತುಪ್ಪದೊಂದಿಗೆ ಕೊಡುವುದರಿಂದ ಪಿಂಡದಲ್ಲಿ ಪಿತೃಲಹರಿಗಳು ದೀರ್ಘಕಾಲ ಉಳಿದುಕೊಳ್ಳುತ್ತವೆ’.
- ಓರ್ವ ವಿದ್ವಾಂಸ ((ಪೂ.) ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೬.೮.೨೦೦೬, ರಾತ್ರಿ ೮.೨೯)
ಪಿತೃಗಳಿಗೆ ಪಿಂಡರೂಪೀ ಅನ್ನವನ್ನು ಅರ್ಪಣೆ ಮಾಡುವಾಗ ದರ್ಭೆಯ ಮೇಲೆ ಏಕೆ ಅರ್ಪಿಸುತ್ತಾರೆ ?
ಶ್ರಾದ್ಧದಲ್ಲಿ ಮಾಡಿರುವ ಆವಾಹನಾತ್ಮಕ ಮಂತ್ರೋಚ್ಚಾರದಿಂದ ದರ್ಭೆಯಲ್ಲಿ ಸುಪ್ತವಾಗಿರುವ ತೇಜತತ್ತ್ವಯುಕ್ತ ವಾಯುಲಹರಿಗಳು ಕಾರ್ಯನಿರತವಾಗುತ್ತವೆ. ದರ್ಭೆಯಲ್ಲಿರುವ ಸೂಕತೇಜ ತತ್ತ್ವ ಯುಕ್ತ ವಾಯುವು ವಾತಾವರಣದಲ್ಲಿನ ಪೃಥ್ವಿ ಮತ್ತು ಆಪತತ್ತ್ವಗಳ ಕಣಗಳ ಸಂಯೋಗದಿಂದ ಸೂಕ ಉಷ್ಣಜ್ವಾಲೆಗಳನ್ನು ನಿರ್ಮಿಸುತ್ತದೆ. ಈ ಜ್ವಾಲೆಗಳು ಲಿಂಗದೇಹದ ಸುತ್ತಲಿರುವ ಪೃಥ್ವಿ ಮತ್ತು ಆಪತತ್ತ್ವದ ಕಣಗಳ ಸಂಯೋಗದಿಂದ ನಿರ್ಮಾಣವಾದ ವಾಸನಾತ್ಮಕ ಕಪ್ಪು ಲಹರಿಗಳನ್ನು ವಿಘಟನೆ ಮಾಡಿ ಲಿಂಗದೇಹವನ್ನು ಮುಕ್ತಗೊಳಿಸುತ್ತವೆ. ಈ ಅವಸ್ಥೆ ಯಲ್ಲಿ ಲಿಂಗದೇಹವು ತನ್ನ ಕೋಶಸಹಿತ ಅಂದರೆ ಹಗುರವಾದ ತೊಂದರೆರಹಿತ ಅವಸ್ಥೆಯಲ್ಲಿ ಅನ್ನದಲ್ಲಿನ ಸೂಕವಾಯವನ್ನು ಸಹಜ ಗ್ರಹಿಸಬಲ್ಲದು. ಪಿತೃಗಳು ಕೆಟ್ಟ ಶಕ್ತಿಗಳ ತ್ರಾಸದಾಯಕ ಸ್ಪಂದನಗಳಿಂದ ಮುಕ್ತವಾಗಬೇಕು ಮತ್ತು ಅನ್ನದಿಂದ ಪ್ರಕ್ಷೇಪಿತವಾಗುವ ವಾಯುವನ್ನು ಸಂಪೂರ್ಣ ಸೇವಿಸಿ ತೃಪ್ತ ರಾಗಬೇಕೆಂದು ಪಿತೃಗಳಿಗೆ ಅನ್ನವನ್ನು ಮಂತ್ರೋಚ್ಚಾರಯುಕ್ತ ದರ್ಭೆಯ ಮೇಲೆ ಅರ್ಪಿಸಲಾಗುತ್ತದೆ.
- ಓರ್ವ ವಿದ್ವಾಂಸ ((ಪೂ.) ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೪.೯.೨೦೦೫, ಸಾಯಂಕಾಲ ೬.೨೦)
(ಶಾಸ್ತ್ರಕ್ಕನುಸಾರ ಅನ್ನವನ್ನು ದರ್ಭೆಯ ಮೇಲೆ ಅರ್ಪಿಸಬೇಕು. ಆದರೆ ಇತ್ತೀಚೆಗೆ ಇದಕ್ಕಾಗಿ ಪತ್ರಾವಳಿಗಳನ್ನು ಉಪಯೋಗಿಸುತ್ತಿದ್ದಾರೆ. - ಸಂಕಲನಕಾರರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಿಂಡದಾನ