ಚಂಡೀವಿಧಾನ (ಪಠಣ ಮತ್ತು ಹವನ)

ಚಂಡಿ ಎಂಬುದು ದುರ್ಗೆಯ ಒಂದು ಹೆಸರಾಗಿದೆ. ಮಾರ್ಕಂಡೇಯ ಪುರಾಣದಲ್ಲಿ ಚಂಡೀದೇವಿಯ ಮಹಾತ್ಮೆಯನ್ನು ಹೇಳಲಾಗಿದ್ದು, ಅದರಲ್ಲಿ ಅವಳ ಅವತಾರಗಳ ಹಾಗೂ ಪರಾಕ್ರಮಗಳ ಸವಿಸ್ತಾರ ವರ್ಣನೆಯಿದೆ. ಅದರಲ್ಲಿನ ಸುಮಾರು ಏಳು ನೂರು ಶ್ಲೋಕಗಳನ್ನು ಸೇರಿಸಿ ಶ್ರೀ ಸಪ್ತಶತಿ ಹೆಸರಿನ ಗ್ರಂಥವೊಂದನ್ನು ದೇವಿಯ ಉಪಾಸನೆಗೆಂದು ಬೇರ್ಪಡಿಸ ಲಾಗಿದೆ. ಸುಖ, ಲಾಭ, ಜಯ ಇತ್ಯಾದಿ ಹಲವಾರು ಕಾಮನೆಗಳ ಪೂರ್ತಿಗಾಗಿ ಈ ಸಪ್ತಶತಿಯ ಪಠಣ ಮಾಡಬೇಕು ಎಂದು ಹೇಳಲಾಗಿದೆ. ಈ ಪಠಣವನ್ನು ವಿಶೇಷವಾಗಿ ಆಶ್ವಯುಜ ನವರಾತ್ರಿಿಯಲ್ಲಿ ಮಾಡುತ್ತಾರೆ. ಕೆಲವು ಮನೆತನಗಳಲ್ಲಿ ಅಂತಹ ಕುಲಾಚಾರವೂ ಇರುತ್ತದೆ. ಪಠಿಸಿದ ನಂತರ ಹವನ ಮಾಡುವುದಿ ರುತ್ತದೆ. ಇದೆಲ್ಲವನ್ನೂ ಸೇರಿಸಿ ಚಂಡೀವಿಧಾನ ಎನ್ನುತ್ತಾರೆ.

. ನವಚಂಡಿ : ಒಂಭತ್ತು ದಿನ ಪ್ರತಿನಿತ್ಯ ಸಪ್ತಶತಿಯ ಪಠಣ ಮತ್ತು ಅದರ ದಶಾಂಶದ ಪ್ರಮಾಣದಲ್ಲಿ ಹವನ ಮಾಡುತ್ತಾರೆ, ಇದಕ್ಕೆ ನವಚಂಡಿ ಎನ್ನುತ್ತಾರೆ. ಅನುಷ್ಠಾನದ ಅಂಗವಾಗಿ ಒಂಭತ್ತ್ತು ದಿನ ಒಬ್ಬ ಕುಮಾರಿಯ ಪೂಜೆ ಮಾಡುತ್ತಾರೆ; ಅಥವಾ ಮೊದಲನೇ ದಿನ ಒಬ್ಬಳು, ಎರಡನೇ ದಿನ ಇಬ್ಬರು ಹೀಗೆ ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಕುಮಾರಿಯರ ಪೂಜೆಯನ್ನು ಮಾಡುತ್ತಾರೆ.
. ಶತಚಂಡಿ : ಈ ವಿಧಾನದಲ್ಲಿ ಸಪ್ತಶತಿಯ ನೂರು ಪಠಣ ಮಾಡುತ್ತಾರೆ. ಪಠಣದ ಆದಿ ಹಾಗೂ ಅಂತ್ಯದಲ್ಲಿ ನವಾರ್ಣ ಮಂತ್ರವನ್ನು ನೂರು ಬಾರಿ ಜಪಿಸುತ್ತಾರೆ. ಈ ರೀತಿಯ ಪಠಣವನ್ನು ಸಂಪುಟಿತ ಪಠಣ ಎನ್ನುತ್ತಾರೆ. ಮೊದಲನೆಯ ದಿನ ಒಂದು, ಎರಡನೆಯ ದಿನ ಎರಡು, ಮೂರನೆಯ ದಿನ ಮೂರು ಮತ್ತು ನಾಲ್ಕನೆಯ ದಿನ ನಾಲ್ಕು ಹೀಗೆ ಹೆಚ್ಚುವ ಕ್ರಮದಲ್ಲಿ ಹತ್ತು ಬ್ರಾಾಹ್ಮಣರು ಪಠಣ ಮಾಡಿದರೆ ನೂರು ಚಂಡಿ ಪಠಣಗಳು ಪೂರ್ಣವಾಗುತ್ತವೆ. ಇವು ಪೂರ್ಣವಾದ ನಂತರ ಐದನೆಯ ದಿನದಂದು ಅದರ ದಶಾಂಶ ಪ್ರಮಾಣದಲ್ಲಿ ಹವನ ಮಾಡುತ್ತಾರೆ.
. ಸಹಸ್ರಚಂಡಿ : ರಾಜ್ಯನಾಶ, ಮಹಾಉತ್ಪಾತ, ಮಹಾಭಯ, ಮಹಾಮಾರಿ, ಶತ್ರು ಭಯ, ರೋಗಭಯ ಮುಂತಾದ ಸಂಕಟಗಳಿಂದ ಪಾರಾಗಲು ಸಹಸ್ರಚಂಡಿ ವಿಧಾನವನ್ನು ಮಾಡುತ್ತಾರೆ. ಇದರಲ್ಲಿ ಸಪ್ತಶತಿಯ ಒಂದು ಸಾವಿರ ಪಠಣಗಳನ್ನು ಮಾಡಬೇಕಾಗಿರುತ್ತದೆ. ಇದಕ್ಕಾಗಿ ನೂರು ಬ್ರಾಾಹ್ಮಣರನ್ನು ಆಮಂತ್ರಿಿಸುತ್ತಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಚಂಡೀವಿಧಾನ (ಪಠಣ ಮತ್ತು ಹವನ)