ಶ್ರಾದ್ಧವನ್ನು ಎಲ್ಲಿ ಮಾಡಬೇಕು ?

ಅ. ಶ್ರಾದ್ಧವನ್ನು ಮಾಡಲು ಯೋಗ್ಯಸ್ಥಳ (ಶ್ರಾದ್ಧದೇಶ)
೧. ‘ದಕ್ಷಿಣ ದಿಕ್ಕಿನಲ್ಲಿನ ಇಳಿಜಾರು ಸ್ಥಳವು ಶ್ರಾದ್ಧಕ್ಕೆ ಅನುಕೂಲವಾಗಿರುತ್ತದೆ.
೧ ಅ. ದಕ್ಷಿಣ ದಿಕ್ಕಿನಲ್ಲಿರುವ ಇಳಿಜಾರು ಪ್ರದೇಶವು ಶ್ರಾದ್ಧಾದಿ ವಿಧಿಗಳಿಗೆ ಅನುಕೂಲಕರವೆಂದು ಏಕೆ ಹೇಳುತ್ತಾರೆ ? : ದಕ್ಷಿಣ ದಿಕ್ಕಿನಲ್ಲಿ ಹೆಚ್ಚಿಗೆ ಕಾರ್ಯನಿರತ ವಾಗಿರುವ ಯಮ ಲಹರಿಗಳು ಭೂಮಿಯ ಜೊತೆಗೆ ಹೊಂದಿಕೊಂಡಿರುವುದರಿಂದ, ಹೆಚ್ಚು ಒತ್ತಡದ ಇಳಿಜಾರಿನ ಜಾಗದಲ್ಲಿ ಶ್ರಾದ್ಧಾದಿ ವಿಧಿಗಳನ್ನು ಮಾಡಿದರೆ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ಯಮ ಲಹರಿಗಳನ್ನು ಪಿತೃಗಳಿಗೆ ಹೆಚ್ಚು ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ಈ ಯಮ ಲಹರಿಗಳ ಸಹಾಯದಿಂದ ಪಿತೃಗಳಿಗೆ ಅರ್ಪಿಸಿದ ಹವಿರ್ಭಾಗವು ಅವರಿಗೆ ಬೇಗನೇ ದೊರಕಿ ಅವರು ಸಂತುಷ್ಟರಾಗುತ್ತಾರೆ. ಆದುದರಿಂದ ದಕ್ಷಿಣ ದಿಕ್ಕಿನಲ್ಲಿ ರುವ ಇಳಿಜಾರಾಗಿರುವ ಜಾಗವು ಶ್ರಾದ್ಧಾದಿ ವಿಧಿಗಳಿಗೆ ಅನುಕೂಲಕರವಾಗಿದೆ ಎಂದು ಹೇಳುತ್ತಾರೆ.’

- ಓರ್ವ ವಿದ್ವಾಂಸ ((ಸದ್ಗುರು) ಸೌ. ಅಂಜಲಿ ಗಾಡಗೀಳರವರು ‘ಓರ್ವ ವಿದ್ವಾಂಸ’ ಈ ಅಂಕಿತನಾಮದಿಂದ ಬರೆಯುತ್ತಾರೆ. ೧೩.೮.೨೦೦೬, ಮಧ್ಯಾಹ್ನ ೧.೫೯)
೨. ಗೋಮಯದಿಂದ ಸಾರಿಸಿದ, ಹಾಗೆಯೇ ಕೀಟ ಇತ್ಯಾದಿ ಪ್ರಾಣಿಗಳು ಮತ್ತು ಅಪವಿತ್ರ ವಸ್ತುಗಳಿಲ್ಲದ ಜಾಗವು ಶ್ರಾದ್ಧಕ್ಕೆ ಯೋಗ್ಯವಾಗಿದೆ.
೩. ವನದಲ್ಲಿ, ಪುಣ್ಯಸ್ಥಾನದಲ್ಲಿ ಮತ್ತು ಸಾಧ್ಯವಿದ್ದಲ್ಲಿ ತಮ್ಮ ಮನೆಯಲ್ಲಿನ ತಳ ಅಂತಸ್ತಿನಲ್ಲಿ ಶ್ರಾದ್ಧವನ್ನು ಮಾಡಬೇಕು. ತಮ್ಮ ಮನೆಯಲ್ಲಿಯೇ ಶ್ರಾದ್ಧವನ್ನು ಮಾಡಿದರೆ ತೀರ್ಥಕ್ಷೇತ್ರದಲ್ಲಿ ಶ್ರಾದ್ಧ ಮಾಡಿದುದರ ೮ ಪಟ್ಟು ಹೆಚ್ಚು ಪುಣ್ಯವು ಸಿಗುತ್ತದೆ. ಪ್ರಸಂಗ ಬಂದರೆ ಬೇರೆಯವರ ಮನೆಯಲ್ಲಿ ಅವರ ಅನುಮತಿಯನ್ನು ಪಡೆದು ಅಥವಾ ಬಾಡಿಗೆ ನೀಡಿ ಶ್ರಾದ್ಧಕ್ಕಾಗಿ ಜಾಗ ವನ್ನು ಪಡೆಯಬೇಕು.
೩ ಅ. ನಮ್ಮ ಮನೆಗಳಲ್ಲಿ ಶ್ರಾದ್ಧವನ್ನು ಮಾಡಿದರೆ ತೀರ್ಥಕ್ಷೇತ್ರಗಳಲ್ಲಿ
 ಶ್ರಾದ್ಧ ಮಾಡಿದುದಕ್ಕಿಂತ ೮ ಪಟ್ಟು ಹೆಚ್ಚು ಪುಣ್ಯ ಪ್ರಾಪ್ತವಾಗುತ್ತದೆ ಎಂದು ಏಕೆ ಹೇಳು ತ್ತಾರೆ ?
ಸಾಮಾನ್ಯವಾಗಿ ಶೇ. ೫೦ ರಷ್ಟು ಪಿತೃಗಳು ಸಾಧನೆಯನ್ನು ಮಾಡಿರುವುದಿಲ್ಲ ಮತ್ತು ಅವರಲ್ಲಿ ವಾಸನೆಗಳೂ ತುಂಬಾ ಇರುತ್ತವೆ. ಆದುದರಿಂದ ಅವರಲ್ಲಿ ಜಡತ್ವವು ನಿರ್ಮಾಣವಾಗಿ ಅವರಿಗೆ ಚಲಿಸಲು ಆಗದೇ ಇರುವುದರಿಂದ ಅವರ ವಾಸ್ತವ್ಯವು ಅವರ ಮನೆಗಳಲ್ಲಿಯೇ ಇರುತ್ತದೆ. ಮನೆಗಳಲ್ಲಿಯೇ ಶ್ರಾದ್ಧಾದಿ ವಿಧಿಗಳನ್ನು ಮಾಡಿದರೆ ಪಿತೃಗಳಿಗೆ ಹವಿರ್ಭಾಗವನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ಇದರಿಂದ ಹೆಚ್ಚಿನ ಪಿತೃಗಳು ಸಂತುಷ್ಟರಾಗಿ ತಮ್ಮ ವಂಶಜರಿಗೆ ಆಶೀರ್ವಾದವನ್ನು ಕೊಡುತ್ತಾರೆ. ಆದುದರಿಂದ ‘ಮನೆಗಳಲ್ಲಿ ಶ್ರಾದ್ಧವಿಧಿಗಳನ್ನು ಮಾಡಿದರೆ ತೀರ್ಥಕ್ಷೇತ್ರಕ್ಕಿಂತ ೮ ಪಟ್ಟು ಹೆಚ್ಚು ಪುಣ್ಯವು ಸಿಗುತ್ತದೆ’ ಎಂದು ಹೇಳುತ್ತಾರೆ. ಅಲ್ಲದೇ ಈ ವಿಧಿಯಿಂದ ಪಿತೃಗಳ ವಾಸ್ತುವಿನೊಂದಿಗಿರುವ ಸಂಬಂಧವೂ ಕಡಿಮೆಯಾಗಿ ಅವರಿಗೆ ಮರ್ತ್ಯಲೋಕವನ್ನು ಪ್ರವೇಶಿಸಲು ಶಕ್ತಿಯು ಪ್ರಾಪ್ತವಾಗುತ್ತದೆ ಮತ್ತು ಭೂಲೋಕದಲ್ಲಿ ಒಂದೇ ಜಾಗದಲ್ಲಿ ಇರುವುದರಿಂದ ಆಗುವ ಯಾತನೆಗಳ ಪ್ರಮಾಣವೂ ಕಡಿಮೆಯಾಗುತ್ತದೆ.’
- ಓರ್ವ ವಿದ್ವಾಂಸ ((ಸದ್ಗುರು) ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೩.೮.೨೦೦೬, ಮಧ್ಯಾಹ್ನ ೧.೫೯)
೪. ಯಾರ ಅಧೀನದಲ್ಲಿಯೂ ಇರದ ಸ್ಥಳ
ಗಳಲ್ಲಿ ಅಂದರೆ ಅರಣ್ಯ, ಪರ್ವತ, ನದಿ, ತೀರ್ಥಕ್ಷೇತ್ರ ಗಳು, ಸರೋವರ, ದೇವಾಲಯಗಳಂತಹ ಜಾಗಗಳಲ್ಲಿ ಶ್ರಾದ್ಧವನ್ನು ಮಾಡಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರಾದ್ಧವನ್ನು ಎಲ್ಲಿ ಮಾಡಬೇಕು ?