ಆದಿವಾಸಿ ಉಡುಪು ಧರಿಸಿರುವ ವರ್ಜಿನ ಮೇರಿಯ ಮೂರ್ತಿಯನ್ನು ತೆಗೆಯುವಂತೆ ಆದಿವಾಸಿ ಗುಂಪಿನ ಬೇಡಿಕೆ !

ಮತಾಂತರಕ್ಕಾಗಿ ಕ್ರೈಸ್ತರಿಂದ ಮೂರ್ತಿಯ ಬಳಕೆ
ರಾಂಚಿ : ಝಾರಖಂಡ್‌ನ ಸಿಂಗಪೂರದ ಚರ್ಚಿನ ಆವರಣದಲ್ಲಿ ನಿಲ್ಲಿಸಿರುವ ಆದಿವಾಸಿ ಉಡುಪಿನ ವರ್ಜಿನ ಮೇರಿಯ ಮೂರ್ತಿಯನ್ನು ತೆಗೆಯುವಂತೆ ಸಾರನಾ ಆದಿವಾಸಿ ಸಮುದಾಯದ ವಿವಿಧ ಗುಂಪುಗಳು ಪ್ರತಿಭಟನೆ ನಡೆಸಿದರು. ವರ್ಜಿನ ಮೇರಿಯನ್ನು ಆದಿವಾಸಿಗಳ ಪಾರಂಪಾರಿಕ ಕೆಂಪು ಮತ್ತು ಬಿಳಿ ಸೀರೆಯಲ್ಲಿ ತೋರಿಸಲಾಗಿದೆ. ಹಾಗೆಯೇ ಆದಿವಾಸಿ ಮಹಿಳೆಯಂತೆ ಕೂದಲಿನ ಶೈಲಿ ಮಾಡಲಾಗಿದೆ.  ಕೈಯಲ್ಲಿ ಬಳೆಗಳನ್ನು ಹಾಕಲಾಗಿದ್ದು ಮತ್ತು ಸೆರಗಿನಲ್ಲಿ ಬಾಲಕನನ್ನು ತೋರಿಸಲಾಗಿದೆ. ಈ ರೀತಿಯ ವೇಷಭೂಷಣವು ಸಾರನಾ ಸಮುದಾಯದ ಮಹಿಳೆಯದಾಗಿದ್ದು, ವರ್ಜಿನ ಮೇರಿಯ ಮೂರ್ತಿಯನ್ನು ಅದೇ ರೀತಿ ತಯಾರಿಸಲಾಗಿದೆಯೆಂದು ಸಾರನಾ ಸಮುದಾಯದ ಕೆಲವು ಧಾರ್ಮಿಕ ಮುಖಂಡರು ಹೇಳಿದರು. (ಮತಾಂಧ ಕ್ರೈಸ್ತರ ಧೂರ್ತತೆ!- ಸಂಪಾದಕರು). ಚರ್ಚಿನೆಡೆಗೆ ನಡೆದಿದ್ದ  ಆದಿವಾಸಿಗಳ ಪ್ರತಿಭಟನೆಯನ್ನು ಪೊಲೀಸರು ತಡೆದರು ಮತ್ತು ಸಿಂಗಪುರ ಪ್ರದೇಶದಲ್ಲಿ ೧೪೪ ಕಲಂ ಜಾರಿಗೊಳಿಸಲಾಗಿದೆ. (ಮತಾಂಧ ಕ್ರೈಸ್ತರ ವಿರುದ್ಧ ನ್ಯಾಯೋಚಿತ ಮಾರ್ಗದಲ್ಲಿ ಕ್ರಮ ಕೈಕೊಂಡಿರುವ ಸಾರನಾ ಆದಿವಾಸಿಗಳಿಗೆ ಅಭಿನಂದನೆ !-ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆದಿವಾಸಿ ಉಡುಪು ಧರಿಸಿರುವ ವರ್ಜಿನ ಮೇರಿಯ ಮೂರ್ತಿಯನ್ನು ತೆಗೆಯುವಂತೆ ಆದಿವಾಸಿ ಗುಂಪಿನ ಬೇಡಿಕೆ !