ಸತ್ಯಶೋಧನೆ, ನಿರ್ಭಯತೆ ಮುಂತಾದ ವೈಶಿಷ್ಯಗಳಿರುವ ಸನಾತನ ಪ್ರಭಾತದ ಮೇಲಿರುವ ವಾಚಕರ ಪ್ರೇಮ ಮತ್ತು ನಿಷ್ಠೆ !

ಸದ್ಗುರು  ಬಿಂದಾ ಸಿಂಗಬಾಳ
‘ವಾಚಕವೃದ್ಧಿ ಅಭಿಯಾನ’ದ ನಿಮಿತ್ತ...
‘ನಿಯತಕಾಲಿಕೆ ಸನಾತನ ಪ್ರಭಾತವೆಂದರೆ ವಾಚಕರಿಗೆ ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮ ಮುಂತಾದ ವಿಷಯಗಳ ಬಗ್ಗೆ ಯೋಗ್ಯ ಮಾರ್ಗದರ್ಶನ ಮಾಡುವ ದೀಪಸ್ತಂಭ ! ರಾಷ್ಟ್ರಪ್ರೇಮಿ ಹಾಗೂ ಧರ್ಮ ಪ್ರೇಮಿಗಳಿಂದ ಬಹಳಷ್ಟು ಪ್ರೋತ್ಸಾಹ ಪಡೆದಿರುವುದರ  ಜೊತೆಗೇ ಈಗ ಈ ನಿಯತಕಾಲಿಕೆಯು ವಾಚಕರಿಂದ ಅಪಾರ ಪ್ರೇಮ ಮತ್ತು ನಿಷ್ಠೆಯನ್ನೂ ಅನುಭವಿಸುತ್ತಿದೆ.  
೧. ವಾಚಕರಲ್ಲಿ ಸನಾತನ ಪ್ರಭಾತದ
ವಿಷಯದಲ್ಲಿರುವ ವಿಶ್ವಾಸಾರ್ಹತೆಯನ್ನು ತೋರಿಸುವ ಪ್ರಸಂಗ !
ಓರ್ವ ಜಿಜ್ಞಾಸು ಮಾಸಿಕ ಸನಾತನ ಪ್ರಭಾತದ ಚಂದಾದಾರರಾಗುವ ಇಚ್ಛೆ ವ್ಯಕ್ತಪಡಿಸಿದರು. ಆಗ ಸಾಧಕರು ‘ನಿಮ್ಮ ಎಲ್ಲ ಪತ್ರವ್ಯವಹಾರ ನಡೆಯುವ ವಿಳಾಸವನ್ನು ನಮಗೆ ಕೊಡಿ. ನಾವು ಆ ವಿಳಾಸಕ್ಕೆ ಸಂಚಿಕೆಯನ್ನು ಕಳುಹಿಸುವೆವು’, ಎಂದು ಹೇಳಿದರು. ಆಗ ಆ ಜಿಜ್ಞಾಸು, ‘ನಿಮ್ಮ ಮಾಸಿಕ ನನಗೆ ಸಿಗದಿದ್ದರೂ ಅಡ್ಡಿಯಿಲ್ಲ. ನಾನು ಒಂದು ಒಳ್ಳೆಯ ಸಂಘಟನೆಗೆ ಮಾಸಿಕದ ಶುಲ್ಕವನ್ನು ನೀಡಿದ್ದೇನೆ, ಎಂಬ ಸಮಾಧಾನ ನನ್ನ ಮನಸ್ಸಿನಲ್ಲಿ ಇರುತ್ತದೆ’ ಎಂದು ಹೇಳಿದರು.
೨. ‘ದೈನಿಕ ತಡವಾಗಿ ತಲುಪಿದರೂ ನಮಗೆ ಅದೇ ಬೇಕು’, ಎಂದು ಆಗ್ರಹಿಸುವ ಕೆಲವು ವಾಚಕರು !
ಮಹಾರಾಷ್ಟ್ರದ ೨-೩ ಜಿಲ್ಲೆಗಳಲ್ಲಿ ಸಾರಿಗೆ ವ್ಯವಸ್ಥೆಯ ಅಭಾವದಿಂದ ದೈನಿಕ ತಡವಾಗಿ ತಲುಪುತ್ತದೆ. ಪ್ರತಿದಿನ ಸಾಯಂಕಾಲ ಅಥವಾ ಮರುದಿನ ಬೆಳಗ್ಗೆ ವಾಚಕರಿಗೆ ಸಿಗುತ್ತದೆ. ಇಂತಹ ಅಡಚಣೆಗಳಾದರೂ ಅಲ್ಲಿನ ವಾಚಕರು ‘ದೈನಿಕ ತಡವಾಗಿ ಸಿಕ್ಕಿದರೂ ಪರವಾಗಿಲ್ಲ, ಆದರೆ ನಮಗೆ ದೈನಿಕ ಬೇಕು. ಅದರ ಮೂಲಕ ನಮಗೆ ಅಮೂಲ್ಯವಾದ ಮಾರ್ಗದರ್ಶನ ಸಿಗುತ್ತಿದೆ’, ಎಂದು ಹೇಳಿದರು.
೩. ಸನಾತನ ಪ್ರಭಾತವನ್ನು ಚಾತಕಪಕ್ಷಿಯಂತೆ ದಾರಿಕಾಯುವ ವಾಚಕರು !
ಓರ್ವ ವಾಚಕರು, ‘ದೈನಿಕ ಓದದೆ ನನಗೆ ಸಮಾಧಾನವೆನಿಸುವುದಿಲ್ಲ. ಕೆಲವೊಮ್ಮೆ ದೈನಿಕ ಸಿಗಲು ತಡವಾದರೆ ನನಗೆ ಕಸಿವಿಸಿಯಾಗುತ್ತದೆ; ಇಂದು ಏಕೆ ತಡವಾಯಿತು ? ಎಂದು ತಕ್ಷಣ ವಿಚಾರಿಸುತ್ತೇನೆ’ ಎಂದರು.
೪. ಕೇವಲ ಸನಾತನ ಪ್ರಭಾತದ ವಾಚನ ಮಾಡುವುದು
ಓರ್ವ ಜಿಜ್ಞಾಸು ಅಭಿಮಾನದಿಂದ, ‘ನಾವು ಬೇರೆ ನಿಯತಕಾಲಿಕೆಗಳನ್ನು ನಿಲ್ಲಿಸಿ ಕೇವಲ ದೈನಿಕ ಸನಾತನ ಪ್ರಭಾತವನ್ನು ಆರಂಭಿಸಿದ್ದೇವೆ. ಈ ಪತ್ರಿಕೆಯಿಂದಲೇ ನಮಗೆ ಮುಂದಿನ ದೃಷ್ಟಿಕೋನ ಮತ್ತು ಮಾರ್ಗದರ್ಶನ ಸಿಗುತ್ತದೆ’ ಎಂದರು.
೫. ‘ಸನಾತನ ಪ್ರಭಾತದ ಲೇಖನವೇ ಸಾಕ್ಷಿಯಾಗಿದೆ’, ಎಂದು ಓರ್ವ ವಾಚಕರು ಹೇಳುವುದು
ಓರ್ವ ವಕೀಲರಾಗಿರುವ ವಾಚಕರು ‘ಸನಾತನ ಪ್ರಭಾತದಲ್ಲಿನ ಲೇಖನಗಳು ನಮಗೆ ಇಷ್ಟವಾಗುತ್ತವೆ’ ಎಂದು ಹೇಳಿದರು. ಆ ಲೇಖನಗಳ ಆಧಾರದಲ್ಲಿ ನಾವು ನಮ್ಮ ಅಭಿಪ್ರಾಯವನ್ನು ನಿರ್ಧರಿಸುತ್ತೇವೆ. ಲೇಖನಗಳಲ್ಲಿನ ವಿವಿಧ ವಿಷಯಗಳ ವಿಶ್ಲೇಷಣೆಗಳು ಎಲ್ಲರಿಗೂ ತಿಳಿಯುವಂತೆ ಇರುತ್ತವೆ. ನಾನು ವಕೀಲನಾಗಿರುವುದರಿಂದ ನನ್ನಲ್ಲಿಗೆ ಅನೇಕ ಜನರು ವಿವಿಧ ವಿಷಯಗಳಿಗೆ ಸಂಬಂಧಿಸಿದ ಸಾಕ್ಷಿಗಳನ್ನು ಕೇಳಲು ಬರುತ್ತಾರೆ. ಇಂತಹ ಪ್ರಸಂಗಗಳಲ್ಲಿ ನಾನು ಅವರಿಗೆ ಆಯಾ ವಿಷಯಗಳಿಗೆ ಸಂಬಂಧಿಸಿದ ‘ಸನಾತನ ಪ್ರಭಾತ’ದಲ್ಲಿ ಪ್ರಸಿದ್ಧವಾದ ಲೇಖನಗಳನ್ನು ಸಾಕ್ಷಿಯೆಂದು ತೋರಿಸುತ್ತೇನೆ’ ಎಂದರು.
೬. ಸನಾತನ ಪ್ರಭಾತದಲ್ಲಿ ಸತ್ಯ ವಿಷಯಗಳೇ ಪ್ರಸಿದ್ಧವಾಗುತ್ತಿರುವ ಬಗ್ಗೆ ವಾಚಕರಿಗಿರುವ ದೃಢವಿಶ್ವಾಸ !
ಸಿವಿಲ್ ಇಂಜಿನೀಯರ್ ಆಗಿರುವ ಸನಾತನದ ಓರ್ವ ಹಿತಚಿಂತಕರ ಗುಣವೈಶಿಷ್ಯಗಳ ಲೇಖನವು ದೈನಿಕದಲ್ಲಿ ಪ್ರಸಿದ್ಧವಾಗಿತ್ತು. ಅದನ್ನು ಓದಿ ದೈನಿಕದ ವಾಚಕರೊಬ್ಬರು ಆ ಹಿತಚಿಂತಕರನ್ನು ಭೇಟಿಯಾಗಲು ಹೋಗಿ ‘ನಿಮಗೆ ನನ್ನ ಪರಿಚಯವಿಲ್ಲ; ಆದರೆ ನಿಮ್ಮ ಬಗ್ಗೆ ನಾನು ಸನಾತನ ಪ್ರಭಾತದಲ್ಲಿ ಓದಿದ್ದೇನೆ. ನನಗೆ ಮನೆ ಕಟ್ಟಲಿಕ್ಕಿದೆ, ಅದರ ‘ಡಿಝಾಯಿನ್’ ನೀವೇ ಮಾಡಬೇಕು’, ಎಂದು ನನಗೆ ತೀವ್ರ ಇಚ್ಛೆ ಇದೆ. ಅದಕ್ಕಾಗಿ ನಾನು ನಿಮ್ಮನ್ನು ಭೇಟಿಯಾಗಲು ಬಂದಿದ್ದೇನೆ, ಎಂದು ಹೇಳಿದರು. ‘ದೈನಿಕದಲ್ಲಿ ಪ್ರಸಿದ್ಧವಾಗುವ ಪ್ರತಿಯೊಂದು ವಾರ್ತೆ, ಲೇಖನಗಳು ಸತ್ಯವನ್ನೇ ಆಧರಿಸಿರುವುದರಿಂದ ನೀವು ನಿಜವಾಗಿಯೂ ಪ್ರಾಮಾಣಿಕರಾಗಿರಬಹುದು, ಎಂದು ನನಗೆ ವಿಶ್ವಾಸವಿದೆ’ ಎಂದರು.
೭. ಸನಾತನ ಪ್ರಭಾತದ ವಿಷಯದಲ್ಲಿ ವಾಚಕರಿಗೆ ಈ ರೀತಿಯಲ್ಲಿಯೂ ಆತ್ಮೀಯತೆಯೆನಿಸುವುದು
ಒಂದು ಊರಿನ ಓರ್ವ ಜಿಜ್ಞಾಸು ಸಾಪ್ತಾಹಿಕ ಸನಾತನ ಪ್ರಭಾತವನ್ನು ನಿಯಮಿತವಾಗಿ ಓದುತ್ತಾರೆ. ಸನಾತನ ಸಂಸ್ಥೆಯ ಕಾರ್ಯ ಅವರಿಗೆ ಬಹಳ ಇಷ್ಟವಾಗುತ್ತದೆ. ಅವರ ವೈಶಿಷ್ಯವೆಂದರೆ ಅವರು ಸಾಪ್ತಾಹಿಕದಲ್ಲಿನ ಪ್ರತಿಯೊಂದು ಸಾಲನ್ನು ಅಭ್ಯಾಸಪೂರ್ಣವಾಗಿ ಓದುತ್ತಾರೆ. ಏನಾದರೂ ವೈಶಿಷ್ಯಪೂರ್ಣ ವಿಷಯಗಳು ಗಮನಕ್ಕೆ ಬಂದರೆ ಅವುಗಳನ್ನು ಬರೆದಿಡುತ್ತಾರೆ ಹಾಗೂ ಯಾವ ವಿಷಯ ಅಯೋಗ್ಯವೆನಿಸಿತೋ, ಆ ವಿಷಯವನ್ನು ಸ್ಥಳೀಯ ಸಾಧಕರಿಗೆ ತಿಳಿಸುತ್ತಾರೆ. 
೮. ವಾಚಕರು ಹಳೆಯ ಸಂಚಿಕೆಗಳನ್ನು ಸಂಗ್ರಹಿಸಿಡುವುದು
‘ಸನಾತನ ಪ್ರಭಾತವೆಂದರೆ, ರದ್ದಿಯಲ್ಲ, ಅದು ಸಂಗ್ರಹಿಸಿಡುವಂತಹ ಒಂದು ಭಂಡಾರವಾಗಿದೆ’, ಎಂದು ಅನೇಕ ವಾಚಕರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ‘ಕೆಲವರು ಸನಾತನದ ಹಳೆಯ ಸಂಚಿಕೆಗಳನ್ನು ಸಂಗ್ರಹಿ ಸಿಟ್ಟುಕೊಂಡು ಅದರಲ್ಲಿನ ಅಮೂಲ್ಯವಾದ ವಿಷಯಗಳನ್ನು ಸಮಯ ಸಿಕ್ಕಿದಾಗ ಓದುತ್ತಾರೆ’, ಎಂಬುದೂ ಅರಿವಿಗೆ ಬಂದಿದೆ. 
೯. ಪ್ರತಿಯೊಬ್ಬ ಹಿಂದೂವಿನವರೆಗೆ ಸಂಚಿಕೆಯನ್ನು ತಲುಪಿಸಲು ವಾಚಕರೂ ಪ್ರಯತ್ನಿಸಿರುವುದು !
‘ಬೇರೆ ಯಾವುದೇ ವರ್ತಮಾನಪತ್ರಿಕೆ ಮಾಡದಿರುವ ಧರ್ಮ
‘ನಮ್ಮ ನಗರದಲ್ಲಿ ಸನಾತನ ಪ್ರಭಾತದ ವಾಚಕರಿದ್ದರೆ ನಾನು ಅವರಿಗೆ ಸಂಚಿಕೆಯನ್ನು ವಿತರಣೆ ಮಾಡಲು ಪ್ರಯತ್ನಿಸುತ್ತೇನೆ’, ಎಂದು ಓರ್ವ ವಾಚಕರು ಉತ್ಸಾಹದಿಂದ ಹೇಳಿದರು. ಧರ್ಮಪ್ರಸಾರ ಮಾಡುವಾಗ ಈ ಮೇಲಿನಂತೆ ವೈಶಿಷ್ಯಪೂರ್ಣ ಅನುಭವ ಬಂದಿದ್ದರೆ ಸಾಧಕರು ಅದನ್ನು ಪ್ರಸಾರಸೇವಕರಿಗೆ ಮತ್ತು dharmatej೨೦೨೩@gmail.com ಈ ವಿ-ಅಂಚೆ ವಿಳಾಸಕ್ಕೆ ಕಳುಹಿಸಬೇಕು.’
-(ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೩.೮.೨೦೧೬)
ಜಾಗೃತಿಯ ಕಾರ್ಯವನ್ನು ಕೇವಲ ‘ಸನಾತನ ಪ್ರಭಾತ’ ಮಾಡುತ್ತಿದೆ. ಈ ಸಂಚಿಕೆಯನ್ನು ಪ್ರತಿಯೊಬ್ಬ ಹಿಂದುವೂ ಓದಬೇಕು. ಸಂಚಿಕೆಯನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಲು ನಿಮಗೆ ಏನಾದರೂ ಸಹಾಯ ಬೇಕಿದ್ದರೆ ನಾನು ಮಾಡುತ್ತೇನೆ’, ಎಂದು ಸಹ ಅನೇಕ ವಾಚಕರು ಹೇಳುತ್ತಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸತ್ಯಶೋಧನೆ, ನಿರ್ಭಯತೆ ಮುಂತಾದ ವೈಶಿಷ್ಯಗಳಿರುವ ಸನಾತನ ಪ್ರಭಾತದ ಮೇಲಿರುವ ವಾಚಕರ ಪ್ರೇಮ ಮತ್ತು ನಿಷ್ಠೆ !