ದುರ್ಗಾ

ವ್ಯತ್ಪತ್ತಿ ಮತ್ತು ಅರ್ಥ
ದೈತ್ಯನಾಶಾರ್ಥವಚನೋ ದಕಾರಃ ಪರಿಕೀರ್ತಿತಃ
ಉಕಾರೋ ವಿಘ್ನನಾಶಸ್ಯ ವಾಚಕೋ ವೇದಸಮ್ಮತಃ
ರೇಫೋ ರೋಗಘ್ನವಚನೋ ಗಶ್ಚ ಪಾಪಘ್ನವಾಚಕಃ
ಭಯಶತ್ರುಘ್ನವಚನಶ್ಚಾಕಾರಃ ಪರಿಕೀರ್ತಿತಃ ॥ - ಬ್ರಹ್ಮವೈವರ್ತಪುರಾಣ, ೨೭.೧೮, ೧೯
ಅರ್ಥ : ದುರ್ಗಾ ಶಬ್ದದಲ್ಲಿನ ದ ಕಾರವು ದೈತ್ಯರ ನಾಶ ಎಂಬ ಅರ್ಥವನ್ನು ಸೂಚಿಸುತ್ತದೆ. ಉಕಾರವು ವಿಘ್ನನಾಶಕದ ವಾಚಕವಾಗಿದೆ ಎಂಬುದನ್ನು ವೇದಗಳು ಮನ್ನಿಸಿವೆ. ರಫಾರ (ಗಾ ಮೇಲಿನ ರಫಾರ, ದೇವನಾಗರಿ ಲಿಪಿಯಲ್ಲಿನ ಅಕ್ಷರ ಔಓಓ್ಘ) ಎಂದರೆ ರೋಗಹರಣ, ಗ ಎಂದರೆ ಪಾಪನಾಶನ ಮತ್ತು ಆ ಎಂದರೆ ಭಯ ಮತ್ತು ಶತ್ರುಗಳ ಹನನ ಎಂಬ ಅರ್ಥವನ್ನು ಹೇಳಲಾಗಿದೆ.

. ದುರ್ಗ ಎಂಬ ಹೆಸರಿನ ದೈತ್ಯನನ್ನು ವಧಿಸಿದ್ದನ್ನು ನೋಡಿ ಜನರು ಅವಳಿಗೆ ದುರ್ಗಾ ಎನ್ನತೊಡಗಿದರು.
. ದುರ್ಗಾದಲ್ಲಿನ ದುರ್ ಎಂದರೆ ಕೆಟ್ಟದು ಮತ್ತು ಗ ಎಂದರೆ ಗಮನ ಮಾಡುವವಳು, ಇಲ್ಲದಂತಾಗಿಸುವವಳು. ಕೆಟ್ಟದ್ದನ್ನು ನಾಶ ಮಾಡುವವಳೇ ದುರ್ಗಾ.
. ಮೂಲ ರೂಪ ದುರ್ಗಾ : ಹಿಂದಿನ ಕಾಲದಲ್ಲಿ ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ದೇವಿಯರನ್ನು ಅನೇಕ ಹೆಸರುಗಳಿಂದ ಪೂಜಿಸಲಾಗುತ್ತಿತ್ತು. ಪುರಾಣಕಾರರು ಈ ಎಲ್ಲ ದೇವಿಯರನ್ನು ದುರ್ಗೆಯಲ್ಲಿ ಏಕರೂಪಗೊಳಿಸಿದರು ಮತ್ತು ಅವಳನ್ನು ಶಿವನ ಪತ್ನಿಯ ಸ್ಥಾನದಲ್ಲಿರಿಸಿದರು.
ಅಭಯ ನೀಡುವುದು
ಮಹಿಷಾಸುರ, ಚಂಡ-ಮುಂಡ ಮತ್ತು ಶುಂಭ-ನಿಶುಂಭ ಈ ಬಲಶಾಲಿ ದೈತ್ಯರನ್ನು ವಧಿಸಿ ಶ್ರೀ ದುರ್ಗಾದೇವಿಯು ಮಹಾಶಕ್ತಿಯೆಂದು ಸಿದ್ಧಳಾದಳು ಮತ್ತು ಅವಳು ಎಲ್ಲ ದೇವತೆಗಳಿಗೆ ಮತ್ತು ಮಾನವರಿಗೆ ಅಭಯವನ್ನು ನೀಡಿದಳು.
(ಆಧಾರ : ಸನಾತನ ನಿರ್ಮಿತ ಗ್ರಂಥ ಶಕ್ತಿ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದುರ್ಗಾ