ಪ.ಪೂ. ಪಾಂಡೆ ಮಹಾರಾಜರ ಅಮೂಲ್ಯ ವಿಚಾರಧನ !

ನಮಗೆ ಬೇರೆಯವರ ದೋಷಗಳ ಬಗ್ಗೆ ಸಿಟ್ಟು ಬಂದಾಗ ನಾವು ಅವರನ್ನು 
ಬಾಹ್ಯದಿಂದ ನೋಡದೆ ಅವರ ಅಂತರಾತ್ಮದ ಕಡೆಗೆ ಗಮನ ನೀಡುವುದು ಅವಶ್ಯಕವಿರುವುದು
ಯಾವಾಗ ನಮಗೆ ಬೇರೆಯವರ ದೋಷದ ಬಗ್ಗೆ ಸಿಟ್ಟು ಬರುತ್ತದೆಯೋ, ಆಗ ನಾವು ನಮ್ಮ ಮೇಲಿರುವ ಆವರಣದ ಕಡೆಗೆ ಗಮನ ನೀಡುತ್ತಿರುತ್ತೇವೆ; ಆದರೆ ನಾವು ಅವರ ಅಂತರಾಳದಲ್ಲಿ ಕಾರ್ಯ ಮಾಡುತ್ತಿರುವ ಭಗವಂತನ ಕಡೆಗೆ ಗಮನ ಕೊಡುವುದಿಲ್ಲ. ನಾವು ಅವರ ದೋಷಗಳೊಂದಿಗೆ ಏಕರೂಪವಾಗದೆ ಅವರ ಸ್ಥಿತಿಗೆ ಹೋಗಿ ಅದನ್ನು ನಿವಾರಿಸಲು ಅವರಿಗೆ ಯಾವ ರೀತಿ ಯಲ್ಲಿ ಸಹಾಯ ಮಾಡಬಹುದು ? ಎಂದು ವಿಚಾರ ಮಾಡಬೇಕು. ನಾವು ಅವರನ್ನು ಕೇವಲ ಬಾಹ್ಯವಾಗಿ ನೋಡದೆ ಅವರ ಅಂತರಾತ್ಮದ ಕಡೆಗೆ ಗಮನ ನೀಡಬೇಕು. - ಪ.ಪೂ. ಪಾಂಡೆ ಮಹಾರಾಜರು
(ಸಂಗ್ರಹ - ಡಾ. ಮಂಗಲಕುಮಾರ್ ಕುಲಕರ್ಣಿ, ಸನಾತನ ಆಶ್ರಮ, ದೇವದ್, ಪನವೇಲ್ (೨೫.೫.೨೦೧೫))

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ.ಪೂ. ಪಾಂಡೆ ಮಹಾರಾಜರ ಅಮೂಲ್ಯ ವಿಚಾರಧನ !