ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯವು ಇಟ್ಟಿರುವ ದಿಟ್ಟ ಹೆಜ್ಜೆ !

೧. ಕರ್ನಾಟಕದ ನೂರಾರು ಸಾಧಕರು ಜೀವನ ಮುಕ್ತರಾದರು!
‘ಭಾವವಿದ್ದಲ್ಲಿ ದೇವರು’ ಈ ವಚನಕ್ಕನುಸಾರ ಭಾವವಿರುವ ಸಾಧಕರ ಮೇಲೆ ಭಗವಂತನ ಕೃಪಾದೃಷ್ಟಿ ಸತತ ಇದ್ದೇ ಇರುತ್ತದೆ. ಶ್ರೀ ಗುರುಗಳ ಬಗ್ಗೆ ಮುಗ್ಧಭಾವ ಮತ್ತು ಸಾಧಕರ ಬಗ್ಗೆ ಪ್ರೇಮಭಾವವಿರುವ ಕರ್ನಾಟಕದ ಸಾಧಕರು ಶ್ರೀ ಗುರುಗಳ ಕೃಪೆಯನ್ನು ಸಂಪಾದಿಸಲು ಚಡಪಡಿಸುತ್ತಿರುವುದರಿಂದ ಭಗವಂತನು ಸಹ ಅವರ ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಸಿ ಕೊಳ್ಳುತ್ತಾನೆ.
ಕರ್ನಾಟಕದ ೨೮೫ ಕ್ಕಿಂತಲೂ ಹೆಚ್ಚು ಸಾಧಕರು ಶೇ. ೬೦ ಮತ್ತು ಅದಕ್ಕಿಂತಲೂ ಹೆಚ್ಚಿನ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆ ಹಾಗೂ ೪ ಸಾಧಕರು ಸಂತಪದವಿಗೇರಿದ್ದಾರೆ. ಕರ್ನಾಟಕದ ವೈಶಿಷ್ಯವೆಂದರೆ ಸಾಧಕರು ಜೋಡಿಸಿರುವ ಸಮಾಜದ ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೂ ಭಾವದ ಪ್ರತಿಬಿಂಬ ಬೀಳುತ್ತಿದೆ.
ಸಾಧನೆಯಲ್ಲಿ ಹೊಸಬರಾಗಿದ್ದರೂ ಅವರಲ್ಲಿ ಮೂಲತಃ ಸಾಧಕತ್ವವಿರುವ ಕಾರಣ ಅವರನ್ನು ಭೇಟಿಯಾದಾಗ ಸಾಧಕರನ್ನು ಭೇಟಿಯಾದಂತಹ ಅನುಭವವಾಗುತ್ತದೆ. ಆದ್ದರಿಂದಲೇ ೨೦ ಕ್ಕಿಂತಲೂ ಹೆಚ್ಚು ವಾಚಕರು, ಹಿತಚಿಂತಕರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿ ಸನಾತನದ ಬೋಧನೆ ಎಷ್ಟು ಅಮೂಲ್ಯವಾಗಿದೆ, ಎಂಬುದನ್ನು ಸಿದ್ಧಪಡಿಸಿದ್ದಾರೆ.
೨. ಕರ್ನಾಟಕದ ಸಮಷ್ಟಿ ಕಾರ್ಯದ ಪ್ರಯತ್ನವೂ ಉಲ್ಲೇಖನೀಯವಾಗಿರುವುದು !
ಸೇವೆಯತ್ತ ನೋಡುವ ಸಕಾರಾತ್ಮಕ ದೃಷ್ಟಿಕೋನ, ಉತ್ಸಾಹಪೂರ್ಣ ಕೃತಿಶೀಲತೆ ಮತ್ತು ಸೇವೆಯ ತಳಮಳವಿರುವುದರಿಂದ ಸಾಧಕರು ಎಲ್ಲ ಸೇವೆಗಳನ್ನು ಪರಿಪೂರ್ಣಗೊಳಿಸುತ್ತಾರೆ. ತಪ್ಪುಗಳಾದರೆ ಅವುಗಳನ್ನು ಸುಧಾರಿಸಲು ತಳಮಳದಿಂದ ಪ್ರಯತ್ನಿಸುತ್ತಾರೆ. ಸಂಘಟಿತ ಭಾವದಿಂದಾಗಿ ಅವರ ಸೇವೆಯ ಫಲಶುೃತಿಯೂ ಹೆಚ್ಚಿದೆ. ಕರ್ನಾಟಕದಲ್ಲಿ ರಾಷ್ಟ್ರ ಹಾಗೂ ಧರ್ಮ ಕಾರ್ಯಕ್ಕೆ ಅಪ್ರತಿಮ ಪ್ರೋತ್ಸಾಹ ಲಭಿಸುತ್ತಿದ್ದು ಅನೇಕ ಧರ್ಮಪ್ರೇಮಿಗಳು ಸಾಧನೆ ಮತ್ತು ಸೇವೆ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳನ್ನು ಹಿಂದೆ ಸರಿಸಿ ಕರ್ನಾಟಕ ರಾಜ್ಯ ಈಗ ಸಮಷ್ಟಿ ಕಾರ್ಯದಲ್ಲಿಯೂ ಮುಂಚೂಣಿಯಲ್ಲಿದೆ. 
೩. ಸಾಧಕರ ವಿಹಂಗಮ ಪ್ರಗತಿಯಲ್ಲಿ ಪ್ರಸಾರಸೇವಕರಾದ ಶ್ರೀ. ರಮಾನಂದ ಗೌಡರವರ ಅಮೂಲ್ಯ ಕೊಡುಗೆ !
ತತ್ಪರತೆ, ಸೇವೆಯ ತೀವ್ರ ತಳಮಳ ಮತ್ತು ಗುರುಗಳ ಬಗ್ಗೆ ಉತ್ಕಟ ಭಾವ ಇತ್ಯಾದಿ ಗುಣಗಳಿರುವ ಶ್ರೀ. ರಮಾನಂದ ಗೌಡರವರು ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆ. ತೀವ್ರ ಶಾರೀರಿಕ ತೊಂದರೆಯಾಗುತ್ತಿದ್ದರೂ ಅವರು ಸೇವಾನಿರತರಾಗಿರುತ್ತಾರೆ. ಕೆಲವೊಮ್ಮೆ ಸಾಧಕರ ಮೇಲೆ ಪ್ರೇಮವನ್ನು ತೋರಿಸಿ, ಕೆಲವೊಮ್ಮೆ ಅವರಿಗೆ ಪಿತೃಶಾಹಿಯಿಂದ ಶಿಸ್ತು ಕಲಿಸಿ ಅವರು ಎಲ್ಲ ಜವಾಬ್ದಾರ ಸಾಧಕರ ಮುಂದೆ ಆದರ್ಶವನ್ನು ನಿರ್ಮಾಣ ಮಾಡಿದ್ದಾರೆ. ‘ಯಥಾ ರಾಜಾ ತಥಾ ಪ್ರಜಾ’ ಎಂಬ ವಚನಕ್ಕನುಸಾರ ಸಾಧಕರ ಯಶಸ್ವೀ ಪ್ರಯತ್ನದಲ್ಲಿ ಅವರದ್ದು ಸಿಂಹಪಾಲಿದೆ. ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಲ್ಲಿ ಉಚ್ಚ ಸ್ಥಾನಕ್ಕೇರಿದ ಕರ್ನಾಟಕ ರಾಜ್ಯವು ಎಲ್ಲ ರಾಜ್ಯಗಳಿಗೆ ಎಲ್ಲ ರೀತಿಯಿಂದಲೂ ಆದರ್ಶವಾಗಿದೆ ! ಇತರೆಡೆಯ ಸಾಧಕರಿಗೂ ಸಾಧನೆಯಲ್ಲಿ ಪ್ರಯತ್ನವನ್ನು ಹೆಚ್ಚಿಸಲು ಬುದ್ಧಿ ಬರಲಿ, ಎಂದು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ !’ - (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೯.೮.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದ ಇತರ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯವು ಇಟ್ಟಿರುವ ದಿಟ್ಟ ಹೆಜ್ಜೆ !