ಸಾಧಕರಿಗೆ ಸೂಚನೆ ಮತ್ತು ಕೃತಿಶೀಲ ಧರ್ಮಾಭಿಮಾನಿಗಳಲ್ಲಿ ಸವಿನಯ ವಿನಂತಿ !

ಬ್ರಾಹ್ಮತೇಜ ಮತ್ತು ಕ್ಷಾತ್ರತೇಜಗಳ ವಿಶೇಷ ಸಂಗಮವಿರುವ ‘ಸನಾತನ ಪಂಚಾಂಗ’ವನ್ನು ಮನೆ ಮನೆಗೆ ತಲುಪಿಸಿ !
(ಸದ್ಗುರು) ಸೌ. ಬಿಂದಾ ಸಿಂಗಬಾಳ
‘ರಾಷ್ಟ್ರೀಯ ಗೌರವವನ್ನು ಹೆಚ್ಚಿಸುವ ಮತ್ತು ರಾಷ್ಟ್ರ ಹಿತದ ದೃಷ್ಟಿಕೋನವನ್ನು ನೀಡುವ ವಿಚಾರಧನವೆಂದು ಅನೇಕ ಧರ್ಮಪ್ರೇಮಿಗಳು ‘ಸನಾತನ ಪಂಚಾಂಗ’ ವನ್ನು ಶ್ಲಾಘಿಸಿದ್ದಾರೆ. ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ, ಧರ್ಮಶಿಕ್ಷಣದ ಕುರಿತು ಮಾರ್ಗದರ್ಶನ ಮಾಡುವ ಇದು ಏಕೈಕ ಸನಾತನ ಪಂಚಾಂಗವಾಗಿದೆ. ಪಂಚಾಂಗವು ತನ್ನಲ್ಲಿನ ಬಹುಮೂಲ್ಯವಾದ ಜ್ಞಾನದಿಂದಾಗಿ ಜಿಜ್ಞಾಸುಗಳಿಗೆ ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತಿದೆ. ಚೈತನ್ಯದ ಉಗಮಸ್ಥಾನವಾಗಿರುವ ಈ ಪಂಚಾಂಗವು ಬ್ರಾಹ್ಮತೇಜ ಮತ್ತು ಕ್ಷಾತ್ರತೇಜಗಳಿಂದ ಕೂಡಿದ ವಿಶೇಷ ಸಂಗಮವೇ ಆಗಿದೆ.
ಕನ್ನಡವಷ್ಟೇ ಅಲ್ಲದೇ ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ತೆಲುಗು, ಓಡಿಯಾ ಮತ್ತು ತಮಿಳು ಈ ೮ ಭಾಷೆಗಳಲ್ಲಿ ಪ್ರಸಿದ್ಧಿಯಾಗುತ್ತಿರುವ ‘ಸನಾತನ ಪಂಚಾಂಗ’ವನ್ನು ಅಧಿಕಾಧಿಕ ಹಿಂದೂಗಳ ವರೆಗೆ ಮುಟ್ಟಿಸುವುದು ಆವಶ್ಯಕವಿದೆ. ಎಲ್ಲೆಡೆಯ ಸಾಧಕರು ಮತ್ತು ಕೃತಿಶೀಲ ಧರ್ಮಾಭಿಮಾನಿಗಳು ಪಂಚಾಂಗದ ವಿತರಣೆಗಾಗಿ ಮುಂದಿನಂತೆ ಪ್ರಯತ್ನಿಸಬೇಕು.
೧. ಸಂಪರ್ಕದಲ್ಲಿರುವ ಹಿತಚಿಂತಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಪಂಚಾಂಗದ ವಿತರಣೆ ಮಾಡುವುದು
ಅ. ಹಿತಚಿಂತಕರು, ದಾನಿಗಳು, ಜಾಹೀರಾತುದಾರರು ಹಾಗೂ ಧರ್ಮಾಭಿಮಾನಿಗಳಿಗೆ ಪಂಚಾಂಗದ ಮಹತ್ವವನ್ನು ತಿಳಿಸಿ ಅದನ್ನು ಖರೀದಿಸಲು ವಿನಂತಿಸಬೇಕು. ಅವರಿಗೆ ತಮ್ಮ ಆಪ್ತರು, ಸ್ನೇಹಿತರು ಮುಂತಾದ ವರಿಗೂ ಪಂಚಾಂಗವನ್ನು ಖರೀದಿಸುವಂತೆ ಹೇಳಲು ಪ್ರೋತ್ಸಾಹ ನೀಡಬೇಕು.
ಆ. ಸಂಸ್ಥೆ ಮತ್ತು ಸಮಿತಿಯ ಕಾರ್ಯದೊಂದಿಗೆ ಜೋಡಿಸಲ್ಪಟ್ಟ ಅನೇಕ ಹಿಂದುತ್ವವಾದಿಗಳು ಸ್ವಯಂಪ್ರೇರಣೆಯಿಂದ ವಿವಿಧ ಅಭಿಯಾನಗಳಲ್ಲಿ ಸಹಭಾಗಿಯಾಗುತ್ತಿದ್ದಾರೆ. ಆ ಹಿಂದುತ್ವವಾದಿಗಳಿಗೂ ಪಂಚಾಂಗ ವಿತರಣೆ ಸೇವೆಯ ಮೂಲಕ ರಾಷ್ಟ್ರ-ಧರ್ಮದ ಕಾರ್ಯದಲ್ಲಿ ಸಹಭಾಗಿಯಾಗಿ ಈ ಅಳಿಲು ಸೇವೆಯಿಂದ ಲಾಭ ಪಡೆಯಲು ವಿನಂತಿಸಬೇಕು.
೨. ಸಾರ್ವಜನಿಕ ಸ್ಥಳಗಳಲ್ಲಿ ಪಂಚಾಂಗ ವಿತರಣೆ ಮಾಡುವುದು
ಅ. ಗಣೇಶೋತ್ಸವ ಮತ್ತು ನವರಾತ್ರೋತ್ಸವ ಮಂಡಳದ ಪ್ರಮುಖರನ್ನು ಭೇಟಿಯಾಗಿ ಸನಾತನ ಪಂಚಾಂಗವನ್ನು ತೋರಿಸಿ ಅದನ್ನು ಖರೀದಿಸಲು ವಿನಂತಿಸಬೇಕು. ಮಂಡಳಿಗೆ ವಿವಿಧ ಪ್ರಸಂಗದಲ್ಲಿ ಸಹಾಯ ಮಾಡುವ ಚಂದಾದಾರರಿಗೆ ಪಂಚಾಂಗವನ್ನು ಉಡುಗೊರೆಯಾಗಿ ನೀಡಬಹುದು ಮತ್ತು ಮಂಡಳಿಯಲ್ಲಿ ಏರ್ಪಡಿಸಲಾಗುವ ಸ್ಪರ್ಧೆ ಗಳಲ್ಲಿ ವಿಜೇತರಿಗೆ ಬಹುಮಾನವೆಂದು ಕೊಡಲು ಹೇಳಬಹುದು.
ಆ. ಸರಕಾರಿ ಕಾರ್ಯಾಲಯ, ಬ್ಯಾಂಕ್, ಸಹಕಾರಿ ಸಂಸ್ಥೆಗಳು, ಕಂಪನಿಗಳು ಮತ್ತು ಶಾಲೆಗಳಿಗೆ ಮಧ್ಯಾಹ್ನ ಭೋಜನದ ವಿರಾಮದ ಸಮಯದಲ್ಲಿ ಹೋಗಿ ಅಲ್ಲಿಯ ಸಿಬ್ಬಂದಿಗಳಿಗೆ ಪಂಚಾಂಗದ ಮಾಹಿತಿ ನೀಡುವ ಕುರಿತು ವ್ಯವಸ್ಥಾಪಕರ ಅನುಮತಿ ಪಡೆಯಬೇಕು ಮತ್ತು ಅಲ್ಲಿ ಪರಿಣಾಮಕಾರಿಯಾಗಿ ವಿಷಯವನ್ನು ಮಂಡಿಸಿ ಪಂಚಾಂಗ ವಿತರಣೆ ಮಾಡಬೇಕು.
ಇ. ಆಸ್ಪತೆ, ಉಪಾಹಾರಗೃಹ ಇತ್ಯಾದಿ ಜನಸಂದಣಿಯ ಸ್ಥಳಗಳಲ್ಲಿ, ನ್ಯಾಯವಾದಿಗಳು, ವೈದ್ಯರು, ಲೆಕ್ಕಪರಿಶೋಧಕರು (ಸಿ.ಎ.) ಈ ಉದ್ಯೋಗಿಗಳಲ್ಲಿ ಹಾಗೆಯೇ ಕ್ಷೌರದಂಗಡಿಗಳು, ಸೌಂದರ್ಯ ವರ್ಧನಾಲಯಗಳು (ಬ್ಯೂಟಿ ಪಾರ್ಲರ್), ಟ್ಯೂಶನ್ ಇತ್ಯಾದಿ ಕಡೆಗಳಲ್ಲಿ ಪಂಚಾಂಗ ಖರೀದಿಸಲು ವಿನಂತಿಸಬಹುದು.
ಈ. ದೀಪಾವಳಿ, ದಸರಾ ಮುಂತಾದ ಹಬ್ಬಗಳ ನಿಮಿತ್ತ ಚಿನ್ನದಂಗಡಿ ಯವರು, ಬಟ್ಟೆ ವ್ಯಾಪಾರಿಗಳು, ಕಾರ್ಖಾನೆಗಳು ಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ಉಡುಗೊರೆ ನೀಡುತ್ತಾರೆ. ಅವರಿಗೆ, ಸನಾತನ ಪಂಚಾಂಗವನ್ನು ಉಡುಗೊರೆಯಾಗಿ ನೀಡಲು ಪ್ರಾಯೋಜಕರಾಗಲು ಉದ್ಯುಕ್ತ ಗೊಳಿಸಬೇಕು. ಅಂಗಡಿಗಳಲ್ಲಿ ಪಂಚಾಂಗಗಳನ್ನು ಮಾರಾಟ ಮಾಡಲು ಇಡುವಂತೆ ಹೇಳಬಹುದು.
ಉ. ಶಾಲೆ, ಮಹಾವಿದ್ಯಾಲಯಗಳೊಂದಿಗೆ ಸರಕಾರಿ ಮತ್ತು ಖಾಸಗಿ ವಾಚನಾಲಯಗಳಲ್ಲಿ ಪಂಚಾಂಗವನ್ನು ವಿತರಣೆ ಮಾಡಬಹುದು.
ಊ. ವಿವಿಧ ಸಂಘಟನೆಗಳ ಮೂಲಕ ಹಿರಿಯ ನಾಗರಿಕರು ಮತ್ತು ಮಹಿಳೆಯರು ಪ್ರತಿದಿನ ಭೇಟಿಯಾಗುತ್ತಿರುತ್ತಾರೆ. ಅವರಿಗೆ ಪಂಚಾಂಗ ಖರೀದಿಸಲು ಪ್ರವೃತ್ತಗೊಳಿಸಬೇಕು.
೩. ಪಂಚಾಂಗಗಳ ಮಾರಾಟ ಮಳಿಗೆಗಳನ್ನು ಹಾಕಲು ಏರ್ಪಾಡು ಮಾಡಿರಿ !
ಸಾಧ್ಯವಿರುವಲ್ಲಿ ಪಂಚಾಂಗದ ವೈಶಿಷ್ಯಗಳನ್ನು ಹೇಳುವ ‘ಸನಾತನ ಪಂಚಾಂಗ ಮಳಿಗೆ’ಗಳನ್ನು ಹಾಕಬೇಕು. ಈ ಮಳಿಗೆಯನ್ನು ಹಾಕಬಹು ದಾದ ಕೆಲವು ಸ್ಥಳಗಳನ್ನು ಮುಂದೆ ಕೊಡಲಾಗಿದೆ.
ಅ. ಜನಸಂದಣಿಯಿರುವ ದೇವಸ್ಥಾನಗಳ ಪರಿಸರ, ಬಸ್ ನಿಲ್ದಾಣ, ನಗರದ ಮುಖ್ಯ ವೃತ್ತಗಳು, ದೊಡ್ಡ ಉದ್ಯಾನಗಳು, ಇತ್ಯಾದಿ ಸಾರ್ವಜನಿಕ ಸ್ಥಳಗಳು.
ಆ. ಗಣೇಶಚತುರ್ಥಿ, ನವರಾತಿ, ದೀಪಾವಳಿ ಅಥವಾ ನಿಯಮಿತ ಗ್ರಂಥ ಪ್ರದರ್ಶನದ ಸ್ಥಳಗಳು
ಇ. ಸಾಧಕರು, ಧರ್ಮಾಭಿಮಾನಿಗಳು ಹಾಗೂ ಸಂಪರ್ಕದಲ್ಲಿರುವ ಹಿಂದುತ್ವವಾದಿಗಳ ಮನೆಗಳಲ್ಲಿ ನೆರವೇರುವ ಶುಭಕಾರ್ಯಗಳು
ಈ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು ಮುಂತಾದ ಮಹಾನಗರಗಳಲ್ಲಿ ದೀಪಾವಳಿಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇಂತಹ ಸ್ಥಳಗಳಲ್ಲಿ ಪಂಚಾಂಗಗಳ ವಿತರಣೆಯನ್ನು ಮಾಡಿದರೆ ಉತ್ತಮ ಬೆಂಬಲ ಸಿಗಬಹುದು.
೪. ಧರ್ಮಪ್ರಸಾರದ ಅಂತರ್ಗತ ವಿವಿಧ ಕಾರ್ಯಕ್ರಮಗಳ ಮೂಲಕ ಪಂಚಾಂಗದ ಕುರಿತು ಜಾಗೃತಿ ಮಾಡುವುದು
ಅ. ಎಲ್ಲ ಧರ್ಮಶಿಕ್ಷಣವರ್ಗಗಳಲ್ಲಿ ಸನಾತನ ಪಂಚಾಂಗದ ಮಹತ್ವವನ್ನು ಹೇಳುವ ವಿಷಯವನ್ನು ಮಂಡಿಸಿ ಧರ್ಮಾಭಿಮಾನಿಗಳಿಗೆ ಪಂಚಾಂಗಗಳನ್ನು ಖರೀದಿಸಲು ಪ್ರವೃತ್ತಗೊಳಿಸಬೇಕು.
ಆ. ಹಿಂದೂ ಸಂಘಟನಾ ಮೇಳ, ಹಿಂದೂ ಧರ್ಮಜಾಗೃತಿ ಸಭೆ, ಅಧಿವೇಶನಗಳು ಇತ್ಯಾದಿ ಕಾರ್ಯಕ್ರಮಗಳಲ್ಲಿ ಪಂಚಾಂಗ ವಿತರಣೆಗಾಗಿ ಸ್ವತಂತ್ರವಾದ ಮಳಿಗೆಯನ್ನು ಹಾಕಿ ಪಂಚಾಂಗ ವಿತರಣೆ ಮಾಡಬೇಕು.
೫. ಬಸ್ ನಿಲ್ದಾಣ, ರೈಲು ನಿಲ್ದಾಣ ಮುಂತಾದ ಕಡೆಗಳಲ್ಲಿ ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸುವಾಗ ಜೊತೆಯಲ್ಲಿ ಪಂಚಾಂಗಗಳನ್ನಿಟ್ಟು ಕೊಳ್ಳಬೇಕು ಮತ್ತು ಸಹ ಪ್ರಯಾಣಿಕರಿಗೆ ವಿತರಣೆ ಮಾಡಬೇಕು.
೬. ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಾಭಿಮಾನಿ ಗಳು ತಮ್ಮ ಸಂಬಂಧಿಕರಿಗೆ, ಆಪ್ತ-ಸ್ನೇಹಿತರಿಗೆ ಹುಟ್ಟುಹಬ್ಬಗಳಲ್ಲಿ, ಮದುವೆ ಸಮಾರಂಭಗಳಲ್ಲಿ, ವಾಸ್ತು ಶಾಂತಿ ಮುಂತಾದ ಶುಭ ಪ್ರಸಂಗಗಳಲ್ಲಿ ಸನಾತನ ನಿರ್ಮಿತ ಸಾತ್ತ್ವಿಕ ಪಂಚಾಂಗಗಳನ್ನು ಉಡುಗೊರೆಯಾಗಿ ನೀಡಬಹುದು.’ - (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೭.೮.೨೦೧೬)
 
೩೧.೧೦.೨೦೧೬ ರ ವರೆಗೆ ಎಲ್ಲ ಪಂಚಾಂಗಗಳ ವಿತರಣೆಯನ್ನು ಪೂರ್ಣಗೊಳಿಸಬೇಕು !
ಎಲ್ಲೆಡೆಯ ಸಾಧಕರು ಪಂಚಾಂಗ ವಿತರಣೆಯ ಸೇವೆಗೆ ಪ್ರಾಧಾನ್ಯತೆ ನೀಡಬೇಕು. ನಗರ ಹಾಗೂ ಊರು-ಊರುಗಳಲ್ಲಿನ ಸಂಪರ್ಕದ ವಿವರವಾದ ಪಟ್ಟಿಗಳನ್ನು ತಯಾರಿಸಿ ಅದಕ್ಕನುಸಾರ ಸಂಪರ್ಕ ಮಾಡಬೇಕು. ರಜೆಯ ದಿನದಂದು ಸಾಧಕರ ಯುವ ಮಕ್ಕಳು, ಪ್ರಾಸಂಗಿಕ ಸೇವೆ ಮಾಡುವ ಸಾಧಕರು ಹಾಗೂ ಕೃತಿಶೀಲ ಧರ್ಮಪ್ರೇಮಿಗಳೂ ಈ ಸೇವೆಯಲ್ಲಿ ಸಹಭಾಗಿಯಾಗಬೇಕು.
೩೧.೧೦.೨೦೧೬ ರ ವರೆಗೆ ಜಿಲ್ಲೆಯಲ್ಲಿರುವ ಎಲ್ಲ ಪಂಚಾಂಗಗಳ ವಿತರಣೆಯನ್ನು ಪೂರ್ಣಗೊಳಿಸಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರಿಗೆ ಸೂಚನೆ ಮತ್ತು ಕೃತಿಶೀಲ ಧರ್ಮಾಭಿಮಾನಿಗಳಲ್ಲಿ ಸವಿನಯ ವಿನಂತಿ !