ಮಳೆಗಾಗಿ ಆಂಧ್ರಪ್ರದೇಶ ಸರಕಾರವು ಧಾರ್ಮಿಕದತ್ತಿ ಇಲಾಖೆಯು ಶಿವ ಮಂದಿರದಲ್ಲಿ ಹೋಮ-ಹವನ ಕೈಕೊಳ್ಳುವುದು !

ಬಾರ್ಶಿ, ಸೋಲಾಪುರದಲ್ಲಿ ಅಶ್ವಮೇಧಯಾಜಿ ಪ.ಪೂ. ಕಾಳೆ ಗುರೂಜಿಯವರು ಈ ವರ್ಷ ಮಳೆಯಾಗಬೇಕೆಂದು ಕಳೆದ ವರ್ಷದಿಂದ ಜ್ಯೋತಿರ್ಲಿಂಗಗಳ ಸ್ಥಳಗಳಲ್ಲಿ ಮಾಡಿದ ಯಜ್ಞಗಳ ಪರಿಣಾಮದಿಂದಲೇ ಈಗ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದನ್ನು ವಿಜ್ಞಾನವಾದಿಗಳು ಅರಿತುಕೊಳ್ಳಬೇಕು ! ಮನಸ್ಸು ಮತ್ತು ಬುದ್ಧಿಗಳಾಚೆಯೂ ಏನಾದರೂ ಇರುವುದೆಂದು ಅರಿವಿಲ್ಲದಿರುವ ಮತ್ತು ಅದನ್ನು ಅರಿತುಕೊಳ್ಳುವ ಆಸಕ್ತಿಯೂ ಇಲ್ಲದಿರುವ ಬುದ್ಧಿಜೀವಿಗಳು ಈ ವಿಷಯದಲ್ಲಿ ಏನು ಹೇಳಲಿದ್ದಾರೆ ? ರಾಜಕಾರಣಿಗಳು ಧರ್ಮಾಚರಣೆ ಮಾಡುತ್ತಿದ್ದರೆ, ಪ್ರಕೃತಿಯು ಸಹ ಮಾನವರಿಗಾಗಿ ಅನುಕೂಲವಾಗಿರುತ್ತದೆ. ಆದಕಾರಣ ನಾಗರಿಕರು ಧರ್ಮಾಚರಣಿ ರಾಜಕಾರಣಿಗಳನ್ನು ಆರಿಸಬೇಕು !
ಶ್ರೀಕಾಕುಲಂ (ಆಂಧ್ರಪ್ರದೇಶ): ಶ್ರೀಕಾಕುಲಂ ಜಿಲ್ಲೆಯಲ್ಲಿ ಅನೇಕ ದಿನಗಳಿಂದ ಮಳೆ ಬಾರದೇ ಇರುವುದರಿಂದ ನೀರಿನ ಸಂಕಷ್ಟ ಎದುರಾಗಿದೆ. ಇದರಿಂದ ಆಂಧ್ರಪ್ರದೇಶ ಸರಕಾರದ ಧಾರ್ಮಿಕದತ್ತಿ ಇಲಾಖೆಯು ರಾಜ್ಯದಲ್ಲಿರುವ ಶಿವಮಂದಿರದಲ್ಲಿ ವರುಣ-ಜಪ, ವರುಣ ಸೂಕ್ತ, ಪಾರಾಯಣ ಮತ್ತು ರುದ್ರ ಯಜ್ಞಗಳನ್ನು ಮಾಡಲು ನಿರ್ಧರಿಸಿದೆ.(ಆಂಧ್ರಪ್ರದೇಶ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಅಭಿನಂದನೆಗಳು ! ಇಂತಹ ನಿರ್ಧಾರವನ್ನು ಪ್ರತಿಯೊಂದು ರಾಜ್ಯದಲ್ಲಿರುವ ಧಾರ್ಮಿಕ ದತ್ತಿ ಇಲಾಖೆಯು ತೆಗೆದುಕೊಳ್ಳಬೇಕು ! - ಸಂಪಾದಕರು) ಈ ಪೂಜಾವಿಧಿಯು ಆಗಸ್ಟ್ ೨೯ ರ ವರೆಗೆ ನಡೆಯಲಿದೆ. ಈ ವಿಧಿಯು ಶ್ರೀಕಾಕುಲಂ ಜಿಲ್ಲೆಯ ಉಮಾ ರುದ್ರ ಕೊಟೇಶ್ವರ ಸ್ವಾಮಿ, ರಾಮಲಿಂಗೇಶ್ವರ, ಭೀಮೇಶ್ವರ ಮತ್ತು ಶ್ರೀ ಲಕ್ಷ್ವೇಶ್ವರ ಸ್ವಾಮಿ ಮಂದಿರ, ಜುಮುರೂವಿನ ಶ್ರೀ ಮುಖಲಿಂಗೇಶ್ವರ ಮತ್ತು ಸಂಗಮದ ಸಂಗಮೇಶ್ವರ ಈ ದೇವಸ್ಥಾನಗಳಲ್ಲಿ ಜರುಗಲಿದೆ. ಹಾಗೆಯೇ ಕಾಲ್ಲೆಪಲ್ಲಿಯ ಮಣಿ ನಾಗೇಶ್ವರ, ರವಿವಾಲಾಸಾದ ಶ್ರೀ ಎಂಡಲಾ ಮಲ್ಲಿಕಾರ್ಜುನ ಸ್ವಾಮಿ, ಕೊತಾಬೊಮ್ಮಲಿಯ ಮಲ್ಲೆೀಶ್ವರ ಮತ್ತು ಬರೂವಾದ ಕೋಟಿ ಲಿಂಗೇಶ್ವರ ದೇವಸ್ಥಾನದಲ್ಲಿಯೂ ಪೂಜೆ-ಅರ್ಚನೆಯನ್ನು ಮಾಡಲಾಗುತ್ತಿದೆ. (ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ಪ್ರಯತ್ನಿಸುವುದು ಮತ್ತು ದೇವಸ್ಥಾನದ ವತಿಯಿಂದ ಸಮಾಜಕ್ಕೆ ಧರ್ಮಶಿಕ್ಷಣವನ್ನು ನೀಡಲು ಅವಕಾಶವನ್ನು ಕಲ್ಪಿಸಿದರೆ, ಕೇವಲ ಮಳೆ ಬೀಳುವುದಷ್ಟೇಯಲ್ಲ, ಸಮಾಜದ ಸಾತ್ತ್ವಿಕತೆಯೂ ವೃದ್ಧಿಸಿ ಜನರೂ ಸುಖಿಗಳಾಗುತ್ತಾರೆ.- ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಳೆಗಾಗಿ ಆಂಧ್ರಪ್ರದೇಶ ಸರಕಾರವು ಧಾರ್ಮಿಕದತ್ತಿ ಇಲಾಖೆಯು ಶಿವ ಮಂದಿರದಲ್ಲಿ ಹೋಮ-ಹವನ ಕೈಕೊಳ್ಳುವುದು !