ಡಾ. ವೀರೇಂದ್ರಸಿಂಹ ತಾವಡೆಯವರಿಗೆ ಥಳಿಸಿದ ಪ್ರಕರಣ

ಸನಾತನ ಸಂಸ್ಥೆಯ ತೇಜೋವಧೆ ಮಾಡುವ ಟ್ವಿಟರ್ ಟ್ರೆಂಡಿನ ಪ್ರತ್ಯುತ್ತರ ಟ್ರೆಂಡ್‌ಗೆ ಸನಾತನಪ್ರೇಮಿಗಳಿಂದ ಬೆಂಬಲ !
ಮುಂಬಯಿ : ಡಾ. ನರೇಂದ್ರ ದಾಭೋಲಕರ್ ಹತ್ಯೆಯ ಪ್ರಕರಣದಲ್ಲಿ ಸಂಶಯದ ಆಧಾರದಲ್ಲಿ ಬಂಧನಕ್ಕೊಳಗಾಗಿರುವ ಡಾ. ವೀರೇಂದ್ರಸಿಂಹ ತಾವಡೆ ಇವರ ವಿಷಯದಲ್ಲಿ ಹಾಗೂ ಸನಾತನವಿರೋಧಿ ವಾರ್ತೆಗಳು ಪ್ರಸಾರಮಾಧ್ಯಮದ ಮುಖಾಂತರ ಪ್ರಕಟವಾದ ನಂತರ ಸನಾತನ ಪರವಾಗಿ ನೈಜ ವಿಷಯಗಳನ್ನು ವಿವರಿಸಲು ಹಾಗೂ ತೇಜೋವಧೆಯ ಸುಳ್ಳುಸುದ್ದಿಗಳನ್ನು ಖಂಡಿಸಲು ಸನಾತನ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆಯ ಮೂಲಕ (@sanatansanstha) ವಿಷಯಗಳನ್ನು ವಿವರಿಸಲಾಗುತ್ತಿದೆ. ಅದಕ್ಕೆ ಸನಾತನಪ್ರೇಮಿಗಳಿಂದ ಬೆಂಬಲ ದೊರೆಯುತ್ತಿದೆ. ಈ ವಿಷಯದ ಸಾರಾಂಶವನ್ನು ಇಲ್ಲಿ ನೀಡುತ್ತಿದ್ದೇವೆ.

೧. ೫ ಸಪ್ಟೆಂಬರ್ ೨೦೧೬ ರಂದು ಸನಾತನದ ದೇವದ್ ಆಶ್ರಮದ ಮೇಲೆ ಎಸ್.ಐ.ಟಿ.ಯಿಂದ ದಾಳಿ ಎಂಬ ವಾರ್ತೆ ಪ್ರಕಟವಾದ ಬಳಿಕ ಟ್ವಿಟರ್ ಮುಖಾಂತರ StopInjusticeOnVirendraTawade (ವೀರೇಂದ್ರ ತಾವಡೆಯವರ ಮೇಲೆ ಆಗುತ್ತಿರುವ ಅನ್ಯಾಯವನ್ನು ನಿಲ್ಲಿಸಿರಿ) ಈ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಲಾಯಿತು. ಈ ಟ್ರೆಂಡಿಗೆ ಭಾರತಾದ್ಯಂತ ಟ್ವಿಟ್ಸ್ ಮಾಡಲಾಯಿತು. ಈ ಟ್ರೆಂಡ್ ಸುಮಾರು ೧ ಲಕ್ಷ ೩೯ ಸಾವಿರದ ೬೪೨ ಮಂದಿ ವರೆಗೆ ತಲುಪಿತು. ಅದರೊಂದಿಗೆ ಸಮಾಜದವರಿಂದ ಜನಮತವನ್ನು (ಪೋಲ್) ಸಂಗ್ರಹಿಸಲಾಯಿತು, ಇದರಲ್ಲಿ ಶೇ. ೯೬ ರಷ್ಟು ಜನರು ಇದು ಹಿಂದೂಗಳ ಮೇಲಿನ ಅನ್ಯಾಯವೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
೨. ದಿನಾಂಕ ೭ ಸಪ್ಟೆಂಬರ ೨೦೧೬ ರಂದು ಡಾ. ವೀರೇಂದ್ರಸಿಂಹ ತಾವಡೆಯವರ ಮೇಲೆ ಆರೋಪಪತ್ರವನ್ನು ದಾಖಲಿಸಿದ ಬಳಿಕ ಟ್ವಿಟರ್‌ನಲ್ಲಿ Virendra Tawde ಇದು ಟ್ವಿಟರ್‌ನಲ್ಲಿ ಮೊದಲ ೧೦ ಟ್ರೆಂಡ್‌ಗಳಲ್ಲಿ ೬ನೇ ಸ್ಥಾನದಲ್ಲಿತ್ತು. ಅದಕ್ಕೆ ಪ್ರತ್ಯುತ್ತರವೆಂದು SupportVirendraTawde (ವೀರೇಂದ್ರ ತಾವಡೆ ಇವರಿಗೆ ಬೆಂಬಲ) ಈ ಟ್ರೆಂಡ್ ಮಾಡಲಾಯಿತು. ಈ ಮಾಧ್ಯಮದಿಂದ ಸುಮಾರು ೩ ಲಕ್ಷ ೯೦ ಸಾವಿರ ೯೨೯ ಜನರಿಗೆ ಈ ವಿಷಯ ತಲುಪಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಡಾ. ವೀರೇಂದ್ರಸಿಂಹ ತಾವಡೆಯವರಿಗೆ ಥಳಿಸಿದ ಪ್ರಕರಣ