ಯುರೋಪಿನ ಪ್ರಾಗ್ ನಗರದಲ್ಲಿ ಇಸ್ಲಾಂವಿರೋಧಿ ನಾಯಕರಿಂದ ಇಸ್ಲಾಂ ಆಕ್ರಮಣಗಳ ಅಣಕು ಬೀದಿನಾಟಕ !

 ಜಿಹಾದಿ ಉಗ್ರವಾದದ ವಿಷಯದಲ್ಲಿ ಯುರೋಪ್‌ನಲ್ಲಿ ಭಯ ಹೆಚ್ಚುತ್ತಿರುವುದರ ದ್ಯೋತಕ !
ಪ್ರಾಗ್ (ಝೆಕ್ ರಿಪಬ್ಲಿಕ್) : ಯುರೋಪಿನ ಝೆಕ್ ರಿಪಬ್ಲಿಕ್ ದೇಶದ ರಾಜಧಾನಿ ಪ್ರಾಗ್‌ನಲ್ಲಿ ಆಗಸ್ಟ್ ೨೧ ರಂದು ಮಧ್ಯಾಹ್ನ ಮಾರ್ಟಿನ ಕೊನವಿಕಾ ಈ ಇಸ್ಲಾಂವಿರೋಧಿ ರಾಜಕೀಯ ಮುಖಂಡರು ಇಸ್ಲಾಂ ಆಕ್ರಮಣಗಳ ಕುರಿತಾದ ಒಂದು ಅಣಕು ಪ್ರದರ್ಶನವನ್ನು ನಡೆಸಿದರು. ಇದರಿಂದ ಪ್ರಾಗ್‌ನ ಓಲ್ಡ್ ಟೌನ್  ಸ್ಕ್ವೇರ್ ನ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.
೧. ಗಡ್ಡ-ಮೀಸೆ ಬೆಳೆಸಿರುವ ಮಿಲಿಟರಿ ವೇಷದಲ್ಲಿರುವ ನಕಲಿ ಭಯೋತ್ಪಾದಕರಿಂದ ತುಂಬಿರುವ ಒಂದು ಜೀಪ್ ಓಲ್ಡ್ ಟೌನ್ ಸ್ಕ್ವೇರ್‌ಗೆ ಬಂದಿತು ಮತ್ತು ಅವರು ಅಲ್ಲಾ ಹೋ ಅಕ್ಬರ ಘೋಷಣೆ ಕೂಗುತ್ತ, ಆಕಾಶದ ದಿಕ್ಕಿನಲ್ಲಿ ಒಂದೇ ಸಮನೆ ಗುಂಡನ್ನು ಹಾರಿಸಿದರು.

೨. ಜೀಪಿನಲ್ಲಿದ್ದ ಇಸ್ಲಾಮಿ ಪೋಷಾಕು ಧರಿಸಿದ್ದ ವ್ಯಕ್ತಿ ಗಳು ಕೈಗಳಲ್ಲಿ ಐಸಿಸ್ ಧ್ವಜ ಹಿಡಿದುಕೊಂಡಿದ್ದರು.
೩. ಅವರೊಂದಿಗೆ ಒಂದು ಒಂಟೆಯೂ ಇತ್ತು. ಹಾಗೆಯೇ ಬಂಧಿಸಿದ ಕಾಫಿರನ ರೂಪದಲ್ಲಿ ಕೆಂಪು ಬಣ್ಣದ ಪೋಷಾಕು ತೊಟ್ಟ ಒಬ್ಬ ವ್ಯಕ್ತಿಯೂ ಈ ಗುಂಪಿನಲ್ಲಿದ್ದನು.
೪. ಇದು ಅಣಕು ಪ್ರದರ್ಶನವಾಗಿತ್ತು ಮತ್ತು ಹಾರಿಸಿದ್ದ ಗುಂಡುಗಳು ನಕಲಿಯಾಗಿದ್ದವು. ಆದರೆ ಈ ಅಣಕು ನಾಟಕದ ಅರಿವಿರದ ಅಲ್ಲಿಯ ನಾಗರಿಕರು ಹೆದರಿ ದಿಕ್ಕುಪಾಲಾಗಿ ಓಡಿದರು.
೫. ಪ್ರಾಗ್‌ನ ಕೆಲವು ಸಾವಿರ ಕಿಲೋಮೀಟರ್‌ಗಳ ದೂರದಲ್ಲಿ ಪ್ರತಿದಿನ ನಡೆಯುತ್ತಿರುವುದನ್ನು ಅಲ್ಲಿಯ ನಿವಾಸಿಗಳಿಗೆ ತೋರಿಸುವ ಪ್ರಯತ್ನ ಮಾಡಲಾಗಿತ್ತು. ಹಾಗೆಯೇ ಐಸಿಸ್‌ನ ಭಯಾನಕ ವಾಸ್ತವ ಈಗ ಮಧ್ಯ ಮತ್ತು ಪಶ್ಚಿಮ ಯುರೋಪಿನಲ್ಲಿಯೂ ನಿಧಾನವಾಗಿ ಬಲವೂರುತ್ತಿದೆಯೆಂದು ಮಾರ್ಟಿನ ಕೊನವಿಕಾದ ಒಬ್ಬ ವಕ್ತಾರನು ವಿವರಿಸಿದನು.
೬. ಮಾರ್ಟಿನ ಕೋನವಿಕಾ ಇಸ್ಲಾಂ ವಿರೋಧಿ ಪಕ್ಷವಾಗಿದೆ. ಝೆಕೊಸ್ಲೋವಾಕಿಯಾ ಮೇಲೆ ರಷ್ಯಾದ ೪೮ ನೇ ವರ್ಧಂತಿ ದಿನದ ನಿಮಿತ್ತ ಆಗಸ್ಟ್ ೨೧ ರಂದು ಈ ಅಣಕು ಪ್ರದರ್ಶನವನ್ನು ಪ್ರದರ್ಶಿಸಲಾಗಿತ್ತು.
೭. ಝೆಕ್ ರಿಪಬ್ಲಿಕನ್‌ನಲ್ಲಿ ಕೇವಲ ೨೦ ಸಾವಿರ ಮುಸಲ್ಮಾನರು ವಾಸಿಸುತ್ತಿದ್ದು, ಈ ಸಂಖ್ಯೆಯು ಒಟ್ಟು ಜನಸಂಖ್ಯೆಯ ಶೇ. ೦.೨ ಕ್ಕಿಂತಲೂ ಕಡಿಮೆಯಿದೆ. ಸಿರಿಯಾ ಮತ್ತು ಮಧ್ಯಪೂರ್ವದಿಂದ ಮುಸಲ್ಮಾನರು ಈ ದೇಶದಲ್ಲಿ ಅತೀ ಕಡಿಮೆ ಶರಣಾರ್ಥಿಗಳಾಗಿದ್ದಾರೆ. ಹೀಗಿರುವಾಗಲೂ ಇಲ್ಲಿಯ ಜನರ ಮನಸ್ಸಿನಲ್ಲಿ ಇಸ್ಲಾಂ ವಿಷಯದ ಬಗ್ಗೆ ಭಯವಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಯುರೋಪಿನ ಪ್ರಾಗ್ ನಗರದಲ್ಲಿ ಇಸ್ಲಾಂವಿರೋಧಿ ನಾಯಕರಿಂದ ಇಸ್ಲಾಂ ಆಕ್ರಮಣಗಳ ಅಣಕು ಬೀದಿನಾಟಕ !