ದೇವರ ಪೂಜೆಯಲ್ಲಿನ ಕೃತಿಗಳನ್ನು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಮತ್ತು ಶ್ರಾದ್ಧದಲ್ಲಿನ ಅದೇ ಕೃತಿಗಳನ್ನು ವಿರುದ್ಧ ದಿಕ್ಕಿನಲ್ಲಿ ಏಕೆ ಮಾಡಬೇಕು?

ದೇವಕಾರ್ಯದಲ್ಲಿ ದೇವತೆಗಳನ್ನು ಆಹ್ವಾನಿಸಿದಾಗ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ಆಯಾ ದೇವತೆಗಳ ಲಹರಿಗಳು ದೇವಯಾನ ಮಾರ್ಗದಿಂದ ಪೃಥ್ವಿಯ ಕಕ್ಷೆಯಲ್ಲಿ ಬರುತ್ತವೆ. ಸಾತ್ತ್ವಿಕ ಮತ್ತು ಚೈತನ್ಯಮಯ ಲಹರಿಗಳ ಚಲನೆಯು ಯಾವಾಗಲೂ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿಯೇ ಇರುತ್ತವೆ. ಆದುದರಿಂದ ದೇವಕಾರ್ಯವನ್ನು ಮಾಡುವಾಗ ನೀರಿನಿಂದ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಮಂಡಲವನ್ನು ಅಥವಾ ಪ್ರದಕ್ಷಿಣೆಯನ್ನು ಹಾಕಿ ದೇವತೆಗಳ ಲಹರಿಗಳನ್ನು ಸ್ವಾಗತಿಸಲಾಗುತ್ತದೆ. ಇದಕ್ಕೆ ‘ಪ್ರದಕ್ಷಿಣೆ ಕರ್ಮ’ ಎನ್ನುತ್ತಾರೆ.
ತದ್ವಿರುದ್ಧ ಪಿತೃಯಾನದಿಂದ ಪೃಥ್ವಿಯ ಕಕ್ಷೆಯಲ್ಲಿ ಬರುವ ಪಿತೃಗಳು ಗಡಿಯಾರದ ಮುಳ್ಳುಗಳು ತಿರುಗುವ ವಿರುದ್ಧ ದಿಕ್ಕಿನಲ್ಲಿ ಕಾರ್ಯನಿರತವಾಗಿರುವ ರಜ-ತಮಾತ್ಮಕ ಲಹರಿಗಳ ಸಹಾಯದಿಂದ ಶ್ರಾದ್ಧದ ಸ್ಥಳಕ್ಕೆ ಬರುತ್ತವೆ. ಹಾಗಾಗಿ ಆಯಾ ದಿಕ್ಕಿಗೆ ಪೂರಕವಾದ ಕರ್ಮವನ್ನು ಆಯಾ ಪಿಂಡಗಳ ಸುತ್ತಲೂ ಅಥವಾ ಪಿತೃಗಳಿಗೆ ಸಂಬಂಧಿಸಿದ ವಸ್ತುಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ಮಂಡಲವನ್ನು ಹಾಕಿ ಅಥವಾ ಅವುಗಳ ಮೇಲೆ ನೀರನ್ನು ಸಿಂಪಡಿಸಿ ಸಂಕಲ್ಪವನ್ನು ಮಾಡಲಾಗುತ್ತದೆ. ಇದಕ್ಕೆ ‘ಅಪ್ರದಕ್ಷಿಣೆ ಕರ್ಮ’ ಎನ್ನುತ್ತಾರೆ. - ಓರ್ವ ವಿದ್ವಾಂಸ ((ಪೂ.) ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವರ ಪೂಜೆಯಲ್ಲಿನ ಕೃತಿಗಳನ್ನು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಮತ್ತು ಶ್ರಾದ್ಧದಲ್ಲಿನ ಅದೇ ಕೃತಿಗಳನ್ನು ವಿರುದ್ಧ ದಿಕ್ಕಿನಲ್ಲಿ ಏಕೆ ಮಾಡಬೇಕು?