ಡಾ. ವೀರೇಂದ್ರಸಿಂಹ ತಾವಡೆಯವರ ಛಾಯಾಚಿತ್ರಗಳನ್ನು ಪ್ರಸಾರ ಮಾಧ್ಯಮಗಳಲ್ಲಿ ಪ್ರಕಟಿಸಿರುವ ಪ್ರಕರಣ !

ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಬಗ್ಗೆ ಕೊಲ್ಹಾಪುರ
ಪೊಲೀಸರ ವಿರುದ್ಧ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆ !
ಕೊಲ್ಹಾಪುರ : ಸಂಶಯಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಾಗ ಅವರ ಛಾಯಾಚಿತ್ರವು ದಿನಪತ್ರಿಕೆ ಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಕಟಗೊಂಡು ಅವರ ಜೀವಕ್ಕೆ ಅಪಾಯವಾಗದಂತೆ ಎಚ್ಚರ ವಹಿಸಬೇಕೆಂದು ಉಚ್ಚ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ. ಹೀಗಿರುವಾಗ ಕೊಲ್ಹಾಪುರ ಪೊಲೀಸರು ಕಾ. ಗೋವಿಂದ ಪಾನ್ಸರೆ ಹತ್ಯೆಪ್ರಕರಣದಲ್ಲಿ ಸಂಶಯದ ಆಧಾರದಲ್ಲಿ ಬಂಧಿಸಲ್ಪಟ್ಟಿರುವ ಮತ್ತು ಸನಾತನದ ಸಾಧಕರಾದ ಡಾ. ತಾವಡೆಯವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಪ್ರಸಾರ ಮಾಧ್ಯಮಗಳೆದುರು ನಿಲ್ಲಿಸಿದ್ದರಿಂದ, ಡಾ. ತಾವಡೆಯವರ ಛಾಯಾಚಿತ್ರಗಳು ಎಲ್ಲ ಪ್ರಸಾರ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಇದರಿಂದ ಅವರ ಜೀವಕ್ಕೆ ಅಪಾಯ ಎದುರಾಗಿದೆ.
ಆದುದರಿಂದ ಕೊಲ್ಹಾಪುರ ಪೊಲೀಸರು ಉಚ್ಚ ನ್ಯಾಯಾಲಯದ ಅವಮಾನ ಮಾಡಿರುವ ಮತ್ತು ಆದೇಶವನ್ನು ಉಲ್ಲಂಘಿಸಿರುವ ಪ್ರಕರಣದಡಿ ಹಿಂದೂ ವಿಧಿಜ್ಞ ಪರಿಷತ್ತಿನ ವಕೀಲರಾದ ಶ್ರೀ. ವೀರೇಂದ್ರ ಇಚಲಕರಂಜಿಕರ ಇವರು ಡಾ. ತಾವಡೆ ಪರವಾಗಿ ಇಲ್ಲಿಯ ನ್ಯಾಯಾಲಯದಲ್ಲಿ ಸೆಪ್ಟೆಂಬರ್ ೭ ರಂದು ಕೊಲ್ಹಾಪುರ ಪೊಲೀಸರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದರು. ಪೊಲೀಸ್ ಕಸ್ಟಡಿ ನೀಡುವ ಮುನ್ನ ಪೊಲೀಸರ ನಡವಳಿಕೆಯನ್ನು ನ್ಯಾಯಾಲಯ ತಿಳಿದುಕೊಳ್ಳಬೇಕು. ಪೊಲೀಸರು ಡಾ. ತಾವಡೆಯವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವಾಗ ಉಚ್ಚ ನ್ಯಾಯಾಲಯವು ನೀಡಿದ ಆದೇಶ ಪಾಲಿಸಬೇಕೆಂದು ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ವಾದಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಡಾ. ವೀರೇಂದ್ರಸಿಂಹ ತಾವಡೆಯವರ ಛಾಯಾಚಿತ್ರಗಳನ್ನು ಪ್ರಸಾರ ಮಾಧ್ಯಮಗಳಲ್ಲಿ ಪ್ರಕಟಿಸಿರುವ ಪ್ರಕರಣ !