‘ಶ್ರಾದ್ಧ’ (ಮಹಾಲಯಾರಂಭ - ೧೭.೯.೨೦೧೬)

ಅ. ವ್ಯತ್ಪತ್ತಿ ಮತ್ತು ಅರ್ಥ : ‘ಶ್ರದ್ಧೆ’ ಈ ಶಬ್ದದಿಂದ ‘ಶ್ರಾದ್ಧ’ ಶಬ್ದವು ನಿರ್ಮಾಣವಾಗಿದೆ. ಈ ಲೋಕವನ್ನು ತ್ಯಜಿಸಿರುವ ನಮ್ಮ ಹಿರಿಯರು ನಮಗಾಗಿ ಏನೇನು ಮಾಡಿದ್ದಾರೆಯೋ, ಅದನ್ನು ನಮಗೆ ಹಿಂದಿರುಗಿಸಲು ಸಾಧ್ಯವಿಲ್ಲ. ಅವರಿಗಾಗಿ ಪೂರ್ಣ ಶ್ರದ್ಧೆಯಿಂದ ಮಾಡುವ ಕೃತಿಗಳಿಗೆ ಶ್ರಾದ್ಧ ಎನ್ನುತ್ತಾರೆ.
ಆ. ವ್ಯಾಖ್ಯೆ : ಬ್ರಹ್ಮಪುರಾಣದಲ್ಲಿನ ಶ್ರಾದ್ಧದ ಪ್ರಕರಣದಲ್ಲಿ ‘ಶ್ರಾದ್ಧ’ದ ವ್ಯಾಖ್ಯೆಯನ್ನು ಮುಂದಿನಂತೆ ಕೊಡಲಾಗಿದೆ.
ದೇಶೇ ಕಾಲೇ ಚ ಪಾತ್ರೆ ಚ ಶ್ರದ್ಧಯಾ ವಿಧಿನಾ ಚ ಯತ್ ಪಿತೃನುದ್ದಿಶ್ಯ ವಿಪ್ರೇಭ್ಯೋ ದತ್ತಂ ಶ್ರಾದ್ಧಮುದಾಹ್ಯತಮ್ ॥ - ಬ್ರಹ್ಮಪುರಾಣ
ಅರ್ಥ : ದೇಶ, ಕಾಲ ಮತ್ತು ಪಾತ್ರ (ಯೋಗ್ಯಸ್ಥಳ) ಇವುಗಳನ್ನು ಗಣನೆಗೆ ತೆಗೆದುಕೊಂಡು ಶ್ರದ್ಧೆಯಿಂದ ಮತ್ತು ವಿಧಿವತ್ತಾಗಿ ಪಿತೃಗಳನ್ನು ಉದ್ದೇಶಿಸಿ ಬ್ರಾಹ್ಮಣರಿಗೆ ಏನನ್ನು ಕೊಡಲಾಗುತ್ತದೆಯೋ (ಅನ್ನಾದಿ), ಅದಕ್ಕೆ ಶ್ರಾದ್ಧವೆಂದು ಹೇಳುತ್ತಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಶ್ರಾದ್ಧ’ (ಮಹಾಲಯಾರಂಭ - ೧೭.೯.೨೦೧೬)