ಧರ್ಮಶಿಕ್ಷಣವರ್ಗಗಳ ಸೇವಕರಿಗೆ ಸೂಚನೆ

ಧರ್ಮಪ್ರೇಮಿಗಳಿಗೆ ಸನಾತನ ಪ್ರಭಾತವನ್ನು ಓದಲು ಉದ್ಯುಕ್ತಗೊಳಿಸಿ
ಅವರನ್ನು ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಕೃತಿಶೀಲರನ್ನಾಗಿಸಿ !
(ಸದ್ಗುರು) ಸೌ. ಬಿಂದಾ ಸಿಂಗಬಾಳ

. ಧರ್ಮಶಿಕ್ಷಣವರ್ಗಕ್ಕೆ ಬರುವ ಧರ್ಮಪ್ರೇಮಿಗಳಲ್ಲಿ ಸನಾತನ ಪ್ರಭಾತದ ಬಗ್ಗೆ ಜಾಗೃತಿ ಮೂಡಿಸಿರಿ ! : ಧರ್ಮಶಿಕ್ಷಣವರ್ಗದಲ್ಲಿ ವರ್ಗಸೇವಕರು ಸನಾತನ ಪ್ರಭಾತದ ಮಹತ್ವವನ್ನು ತಿಳಿಸುವ ವಿಷಯವನ್ನು ಮಂಡಿಸಿ ಧರ್ಮ ಪ್ರೇಮಿಗಳನ್ನು ವಾಚಕರನ್ನಾಗಿಸಲು ಉದ್ಯುಕ್ತಗೊಳಿಸಿ. ವಾಚಕ ಧರ್ಮಪ್ರೇಮಿಗಳಿಗೆ ಆರ್ಥಿಕ ಸ್ಥಿತಿ ಉತ್ತಮವಿರದ ಜಿಜ್ಞಾಸುವಿಗೆ ಓದುವುದಕ್ಕಾಗಿ ಸಂಚಿಕೆಯನ್ನು ನೀಡಲು ವಿನಂತಿಸಬೇಕು. ಧರ್ಮಪ್ರೇಮಿಗಳಿಗೆ ಅವರ ಸಂಬಂಧಿಕರು, ಸ್ನೇಹಿತರನ್ನು ಸಹ ವಾಚಕರನ್ನಾಗಿಸಲು ಉದ್ಯುಕ್ತಗೊಳಿಸಲು ಹೇಳಬೇಕು. ಧರ್ಮಪ್ರೇಮಿಗಳಿಗೆ ಚಂದಾದಾರರಾಗಲು ಇಚ್ಛೆಯಿಲ್ಲದಿದ್ದಲ್ಲಿ ಅವರಿಗೆ ಹೆಚ್ಚು ಒತ್ತಾಯ ಮಾಡಬಾರದು.
. ಧರ್ಮಪ್ರೇಮಿಗಳು ವಾಚಕರಾಗಲು ಇಚ್ಛೆ ವ್ಯಕ್ತಪಡಿಸಿದರೆ ಮುಂದಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ! : ದೈನಿಕ ವಿತರಣೆಯ ವ್ಯವಸ್ಥೆ ಯಿದ್ದರೆ ದೈನಿಕವನ್ನು ಪ್ರಾರಂಭಿಸಲು ಮೊದಲು ಪ್ರಾಧಾನ್ಯತೆ ನೀಡಬೇಕು. ಹಾಗೆ ಸಾಧ್ಯವಾಗದಿದ್ದಲ್ಲಿ ಸಾಪ್ತಾಹಿಕ, ಪಾಕ್ಷಿಕ, ಅಥವಾ ಮಾಸಿಕ ಸನಾತನ ಪ್ರಭಾತವನ್ನು ಪ್ರಾರಂಭಿಸಬಹುದು. ಧರ್ಮಪ್ರೇಮಿಗಳ ಭಾಷೆಯ ವಿಚಾರವನ್ನು ಮಾಡಿಯೇ ನಿಯತಕಾಲಿಕೆಯನ್ನು ಪ್ರಾರಂಭಿಸುವುದು ಅಪೇಕ್ಷಿತವಿದೆ. ವಿತರಣೆಯ ವ್ಯವಸ್ಥೆಯಿಲ್ಲದಿದ್ದರೆ ಧರ್ಮ ಪ್ರೇಮಿಗಳಿಗೆ ಅಂಚೆಯ ಮೂಲಕ ಸಂಚಿಕೆಯನ್ನು ಕಳುಹಿಸಲಾಗುತ್ತದೆ.
ವಾಚಕರಾಗಲು ಇಚ್ಛಿಸುವ ಧರ್ಮಪ್ರೇಮಿಗಳು www.sanatanprabhat.org/subscribe ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಚಂದಾದಾರರಾಗುವ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಬಹುದು. ಆನ್‌ಲೈನ್ ಚಂದಾದಾರರಿಗೆ ಅರ್ಜಿ ತುಂಬಲು ಸಾಧ್ಯವಾಗದಿದ್ದಲ್ಲಿ ಸ್ಥಳೀಯ ಸಾಧಕರು ಅವರನ್ನು ಸಂಪರ್ಕಿಸಬೇಕು. ಈ ಸೌಲಭ್ಯ ದೈನಿಕವನ್ನು ಬಿಟ್ಟು ಇತರ ನಿಯತಕಾಲಿಕೆಗಳಿಗಾಗಿ ಇದೆ.
ಕಾರ್ಯಕರ್ತರೇ, ‘ರಾಷ್ಟ್ರ - ಧರ್ಮದ ಜೊತೆಗೆ ಅಧ್ಯಾತ್ಮದ ಬಗ್ಗೆಯೂ ಮಾರ್ಗದರ್ಶನ ನೀಡುವ ಈ ನಿಯತಕಾಲಿಕೆಯು ಧರ್ಮಪ್ರೇಮಿಗಳ ಸಾಧನೆಯ ಮಾರ್ಗದ ದಿಶಾದರ್ಶಕವಾಗಿದೆ’, ಎಂಬುದನ್ನು ಗಮನದಲ್ಲಿಟ್ಟು ಕೊಂಡು ಸಂಚಿಕೆಯ ವಾಚಕರಾಗಲು ಅವರನ್ನು ಅವಶ್ಯವಾಗಿ ಉದ್ಯುಕ್ತಗೊಳಿಸಿರಿ!’
- (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪..೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಶಿಕ್ಷಣವರ್ಗಗಳ ಸೇವಕರಿಗೆ ಸೂಚನೆ