ಸಾಮಾಜಿಕ, ಧಾರ್ಮಿಕ ಅಥವಾ ರಾಷ್ಟ್ರಹಿತದ...ಯಾವುದೇ ಅಭಿಯಾನ ಇರಲಿ, ಪೊಲೀಸರ ಕಿರುಕುಳ ತಪ್ಪಿದ್ದಲ್ಲ !

ಶ್ರೀ. ಮನೋಜ ಖಾಡ್ಯೆ
ಶ್ರೀ. ಮನೋಜ ಖಾಡ್ಯೆಯವರಿಗೆ ಅಮಾನವೀಯವಾಗಿ
ಕಿರುಕುಳ ನೀಡುವ ಖಾಕಿ ಬಟ್ಟೆಯ ರಕ್ಷಕರಲ್ಲ ಭಕ್ಷಕ ಪೊಲೀಸರು !
ನವರಾತ್ರ್ಯೋತ್ಸವದಲ್ಲಾಗುವ ತಪ್ಪು ಆಚರಣೆಗಳನ್ನು ತಡೆಯಲು ಮತ್ತು ಈ ಉತ್ಸವವನ್ನು ಧರ್ಮಶಾಸ್ತ್ರಕ್ಕನುಸಾರ ಆಚರಿಸಲು ಸನಾತನ ಸಂಸ್ಥೆಯು ಪ್ರತೀವರ್ಷ ಅಭಿಯಾನವನ್ನು ಹಮ್ಮಿಕೊಳ್ಳುತ್ತದೆ. ೨೦೦೦ ದಲ್ಲೂ ಸಿಂಧುದುರ್ಗ (ಮಹಾರಾಷ್ಟ್ರ) ಜಿಲ್ಲೆಯಲ್ಲಿ ಇಂತಹದ್ದೇ ಒಂದು ಅಭಿಯಾನವನ್ನು ಹಮ್ಮಿಕೊಳ್ಳ ಲಾಗಿತ್ತು. ಆಗ ಸನಾತನದ್ವೇಷಿ ಉದ್ಯಮಿ ಗಳ ಒತ್ತಡಕ್ಕೆ ಮಣಿದು ಪೊಲೀಸರು ಸನಾತನದ ಕುಡಾಳ್‌ನ ಸಾಧಕರಾದ ಶ್ರೀ. ಮನೋಜ ಖಾಡ್ಯೆಯವರನ್ನು ಕಾರಾಗೃಹದಲ್ಲಿಟ್ಟು ಕಿರುಕುಳ ನೀಡಿದರು.
ಆಡಳಿತಕ್ಕೆ ಸಹಾಯ ಮಾಡುವ ಸಾಧಕರನ್ನೇ ‘ಕಳ್ಳರು’ ಎಂದು ಹಣೆಪಟ್ಟಿ ಕಟ್ಟುವ ನಿಂದನೀಯ ಕೃತ್ಯ !
ನವರಾತ್ರ್ಯೋತ್ಸವದಲ್ಲಿ ನಡೆಯುವ ತಪ್ಪು ಆಚರಣೆಗಳನ್ನು ತಡೆಯಲು ಸಿಂಧುದುರ್ಗ (ಮಹಾರಾಷ್ಟ್ರ) ಜಿಲ್ಲೆಯ ಕುಡಾಳ್‌ನ ತಹಶೀಲ್ದಾರರು ಸ್ಥಳೀಯ ಎಲ್ಲ ನವರಾತ್ರ್ಯೋತ್ಸವ ಮಂಡಳಗಳನ್ನು ಕರೆದು ಸಭೆಯನ್ನು ಆಯೋಜಿಸಿದ್ದರು. ಸನಾತನ ಸಂಸ್ಥೆಯು ಧಾರ್ಮಿಕ ಪದ್ಧತಿಯಿಂದ ಮತ್ತು ಶಾಸ್ತ್ರಕ್ಕನುಸಾರ ನವರಾತ್ರ್ಯೋತ್ಸವವನ್ನು ಆಚರಿಸಲು ಸತತವಾಗಿ ನಡೆಸುತ್ತಿರುವ ಪ್ರಬೋಧನೆಯಿಂದಾಗಿ ಆ ಸಭೆಗೆ ಸನಾತನ ಸಂಸ್ಥೆಯ ಪ್ರತಿನಿಧಿಗಳಿಗೆ ಉಪಸ್ಥಿತರಿರಲು ಆಮಂತ್ರಣ ನೀಡಲಾಗಿತ್ತು. ಕಛೇರಿಯಲ್ಲಿ ಸಿಬ್ಬಂದಿಗಳು ಸೀಮಿತವಾಗಿದ್ದರಿಂದ ಆಮಂತ್ರಣ ನೀಡಲು ತಹಶೀಲ್ದಾರರು ಸಾಧಕರಿಗೆ ವಿನಂತಿಸಿದರು.
ಈ ವಿನಂತಿಗನುಸಾರ ಸಂಸ್ಥೆಯ ಸಾಧಕರಾದ ಶ್ರೀ. ಮನೋಜ ಖಾಡ್ಯೆ ಮತ್ತು ಶ್ರೀ. ತಾತ್ಯಾ ಮ್ಹಾಪಣಕರ್ ಇವರು ಆಮಂತ್ರಣ ಪತ್ರಿಕೆಗಳನ್ನು ಸಂಬಂಧಪಟ್ಟ ಮಂಡಳದವರಿಗೆ ಕೊಡುವ ಏರ್ಪಾಡು ಮಾಡಿದರು. ಮೊದಲ ಆಮಂತ್ರಣ ಪತ್ರಿಕೆಯನ್ನು ಸ್ಥಳೀಯ ಉದ್ಯಮಿ ಮತ್ತು ಓರ್ವ ನವರಾತ್ರ್ಯೋತ್ಸವ ಮಂಡಳದ ಸದಸ್ಯರಾದ ಬಾಪೂ ನಾಯಿಕ ಇವರಿಗೆ ಕೊಡಲಾಯಿತು. ಆ ವ್ಯಕ್ತಿಯು ಸನಾತನದ್ವೇಷಿಯಾಗಿದ್ದ ರಿಂದ ಆ ಪತ್ರಿಕೆಯನ್ನು ತೆಗೆದುಕೊಂಡು ಅವರು ತಹಶೀಲ್ದಾರರಲ್ಲಿಗೆ ಹೋದರು ಮತ್ತು ಅವರು ತಹಶೀಲ್ದಾರರಿಗೆ ‘ಸರಕಾರಿ ಆಮಂತ್ರಣ ಪತ್ರಿಕೆಯನ್ನು ಹಂಚಲು ಸನಾತನ ಸಂಸ್ಥೆಗೆ ಕೊಟ್ಟ ಬಗ್ಗೆ, ದೂರು ನೀಡುತ್ತೇನೆ’, ಎಂದು ಭಯ ತೋರಿಸಿದರಲ್ಲದೇ ‘ನಿಮ್ಮನ್ನು ನೌಕರಿಯಿಂದ ತೆಗೆದುಹಾಕುತ್ತೇನೆ’, ಎಂದು ಒತ್ತಡ ತಂದು ‘ಆಮಂತ್ರಣ ಪತ್ರಿಕೆಗಳು ಕಳುವಾಗಿವೆ’, ಎಂಬ ದೂರನ್ನು ಪೊಲೀಸರು ದಾಖಲಿಸಿಕೊಳ್ಳಲು ಅನಿವಾರ್ಯಗೊಳಿಸಿದರು.
ಗೂಂಡಾಗಳಿಗೂ ನಾಚಿಕೆಯಾಗುವಂತೆ ಸಾಧಕರೊಂದಿಗಿನ ಪೊಲೀಸರ ವರ್ತನೆ !
ಪ್ರಸ್ತುತ ದೂರಿನ ಮೇರೆಗೆ ಪೊಲೀಸರು ಬೆಳಗ್ಗೆ ೧೧ ಗಂಟೆಗೆ ಇಬ್ಬರು ಸಾಧಕರನ್ನು ಆಮಂತ್ರಣ ಪತ್ರಿಕೆಗಳನ್ನು ಹಂಚುವಾಗ ವಶಕ್ಕೆ ಪಡೆದರು. ಈ ಸಮಯದಲ್ಲಿ ಪೊಲೀಸರು ಇಬ್ಬರೂ ಸಾಧಕರಿಗೆ ಅವಾಚ್ಯವಾಗಿ ಬೈದು ಹೊಡೆದರು ಮತ್ತು ತಪ್ಪೊಪ್ಪಿಗೆಯನ್ನು ಬರೆದು ಕೊಡಲು ಒತ್ತಾಯಿಸಿದರು. ಪೊಲೀಸರು ಬೆಳಗ್ಗೆ ೧೧ ರಿಂದ ರಾತ್ರಿ ೧೦ ಗಂಟೆಯ ವರೆಗೆ ಇಬ್ಬರೂ ಸಾಧಕರನ್ನು ಪೊಲೀಸ್ ಠಾಣೆಯಲ್ಲಿ ಕೂಡಿಟ್ಟರು. ‘ಅವರಿಗೆ ಕುಡಿಯಲು ನೀರನ್ನೂ ಕೊಡಬೇಡಿರಿ’, ಎಂದು ಅಲ್ಲಿಯ ಪೊಲೀಸ್ ನಿರೀಕ್ಷಕರು ಸಿಬ್ಬಂದಿಗಳಿಗೆ ತಾಕೀತು ಮಾಡಿದರು. ರಾತ್ರಿ ೧೦ ಗಂಟೆಗೆ ಶ್ರೀ. ತಾತ್ಯಾ
ಮ್ಹಾಪಣಕರ್ ಅವರಿಗೆ ಹೋಗಲು ಹೇಳಿ ಶ್ರೀ. ಮನೋಜ ಖಾಡ್ಯೆಯವರನ್ನು ಸರಕಾರಿ ಕಾಗದಪತ್ರಗಳನ್ನು ಕದ್ದ ಪ್ರಕರಣದಲ್ಲಿ ಬಂಧಿಸಲಾಯಿತು.
೫ x ೧೦ ರ ಒಂದು ಕತ್ತಲೆ ಕೋಣೆಯಲ್ಲಿ ಮೈಮೇಲೆ ಕೇವಲ ಒಂದು ಅಂತರ್ವಸ್ತ್ರದಲ್ಲಿಟ್ಟು ಕೂಡಿಟ್ಟರು. ಕುಡಿಯಲು ನೀರಿಲ್ಲ, ತಿನ್ನಲು ಏನಿಲ್ಲ, ಇಂತಹ ಸ್ಥಿತಿಯಲ್ಲಿ ಆ ಕತ್ತಲೆ ಕೋಣೆಯಲ್ಲಿಟ್ಟು ಮಾನಸಿಕ ಕಿರುಕುಳ ಕೊಡಲಾಯಿತು. ರಾತ್ರಿ ಮೂತ್ರವಿಸರ್ಜನೆಗೆ ಹೋಗಲು ವಿನಂತಿಸಿದಾಗ ಅವಾಚ್ಯವಾಗಿ ಬೈಯ್ಯುತ್ತಾ ‘ಇದ್ದಲ್ಲಿಯೇ ಮೂತ್ರವಿಸರ್ಜನೆ ಮಾಡು’ ಎಂದು
ರೇಗಿದರು. ಆ ಕೋಣೆಯಿಂದ ಹೊಲಸು ಶೌಚಾಲಯ ವಿದ್ದಂತೆ ದುರ್ಗಂಧ ಬರುತ್ತಿತ್ತು. ಅದೇ ಸ್ಥಿತಿಯಲ್ಲಿ ಮಾರನೇ ದಿನ ೧೦ ಗಂಟೆಯ ವರೆಗೆ ಕೂಡಿಟ್ಟರು. ‘ನಾವಿರುವ ಸ್ಥಳವು ಹೇಗಿದೆ, ಎಷ್ಟಿದೆ’, ಎಂಬುದೂ ಗೊತ್ತಾಗುತ್ತಿರಲಿಲ್ಲ.
ಶ್ರೀ. ಮನೋಜ ಖಾಡ್ಯೆಯವರು ಇಡೀ ರಾತ್ರಿಯನ್ನು ಒಂದು ಮೂಲೆಯಲ್ಲಿ ಕುಳಿತೇ ಕಳೆದರು. ಬೆಳಗ್ಗೆ ನ್ಯಾಯಾಲಯದಲ್ಲಿ ಹಾಜರುಪಡಿಸಲು ಹೊರಗೆ ಕರೆತಂದರು. ಆಗ ನೂಕುತ್ತಾ ಹೊರತಂದರು ಮತ್ತು ಮಹಿಳಾ ಸಿಬ್ಬಂದಿಗಳೆದುರೇ ಅಂತರ್ವಸ್ತ್ರದಲ್ಲಿ ಕರೆತಂದು ವಶಪಡಿಸಿಕೊಂಡಿದ್ದ ಬಟ್ಟೆಗಳನ್ನು ಹಾಕಲು ಹೇಳಿದರು. ಅನೇಕ ಸಲ ‘ಸನಾತನ ಸಂಸ್ಥೆಯು ನಿನ್ನನ್ನು ಉಳಿಸಲಾರದು’, ‘ನಿನ್ನಕಡೆಗೆ ಯಾರೂ ಇಣುಕಿ ನೋಡುವುದಿಲ್ಲ’, ‘ಎಲ್ಲವನ್ನು ಒಪ್ಪಿಕೊಳ್ಳು, ನಾವು ನಿನ್ನನ್ನು ಹೊರಗೆ ತರುತ್ತೇವೆ’, ಎಂದು ಹೇಳಿ ಮಾನಸಿಕ ಒತ್ತಡ ಹೇರಲು ಪ್ರಯತ್ನಿಸಿದರು.
ತಪ್ಪು ವಾರ್ತೆಯನ್ನು ಮುದ್ರಿಸಿ ಸಾಧಕರ ತಂದೆಯವರು ಪ್ರಾಣ ಕಳೆದುಕೊಳ್ಳಲು ಕಾರಣರಾದ ಮಾಧ್ಯಮಗಳು !
ಪೊಲೀಸರು ನ್ಯಾಯಾಲಯದಲ್ಲಿ ೭ ದಿನಗಳ ಪೊಲೀಸ್ ಕಸ್ಟಡಿಯನ್ನು ಕೇಳಿದರು; ಆದರೆ ನ್ಯಾಯಾಲಯವು ಈ ಬೇಡಿಕೆಯನ್ನು ನಿರಾಕರಿಸಿ ಶ್ರೀ. ಖಾಡ್ಯೆಯವರಿಗೆ ಜಾಮೀನು ಮಂಜೂರು ಮಾಡಿತು. ಆ ದಿನ ಎಲ್ಲ ಸ್ಥಳೀಯ ದಿನಪತ್ರಿಕೆಯಲ್ಲಿ ಮೊದಲ ಪುಟದಲ್ಲಿ ‘ತಹಶೀಲ್ದಾರ ಕಚೇರಿಯಿಂದ ಕಾಗದ ಪತ್ರಗಳ ಕಳವು ಮಾಡಿದ ಪ್ರಕರಣದಲ್ಲಿ ಸನಾತನದ ಸಾಧಕ ಮನೋಜ ಖಾಡ್ಯೆ ಬಂಧನ’, ಎಂಬ ಕುರಿತು ಸುದ್ದಿಗಳು ಮುದ್ರಣವಾದವು. ದಿನಪತ್ರಿಕೆಯ ಮಾನ ಹಾನಿಯಿಂದಾಗಿ ಸಹಿಸಲಾರದೇ ಶ್ರೀ. ಮನೋಜ ಖಾಡ್ಯೆಯವರ ತಂದೆ ಶ್ರೀ. ವಸಂತ ಖಾಡ್ಯೆಯವರು ಎರಡು ತಿಂಗಳಲ್ಲಿ ಹೃದಯಾಘಾತದಿಂದ ಅಕಾಲಿಕ ನಿಧನರಾದರು.
ಪೊಲೀಸ್ ನಿರೀಕ್ಷಕರ ಕ್ಷಮಾಯಾಚನೆ !
ಜಾಮೀನು ನೀಡುವಾಗ ನ್ಯಾಯಾಧೀಶರು ‘ಪೊಲೀಸರ ಮೇಲೆ ಕ್ರಮಕೈಗೊಳ್ಳಲು ಮುಂದೆ ಹೋಗು ವಿರಾ ?’, ಎಂದು ಕೇಳಿದಾಗ ಸನಾತನದ ಗೌರವಾನ್ವಿತ ಕಾನೂನು ಸಲಹೆಗಾರ ನ್ಯಾಯವಾದಿ ಶ್ರೀ. ರಾಮದಾಸ ಕೇಸರಕರ್ ಅವರು ‘ಮಾನವಾಧಿಕಾರದ ಕಗ್ಗೊಲೆ ಮಾಡುವ ಮತ್ತು ಕಿರುಕುಳ ನೀಡುವ ಪ್ರಕರಣದಲ್ಲಿ ಮುಂದಿನ ಕ್ರಮಕೈಗೊಳ್ಳುತ್ತೇವೆ’, ಎಂದು ಹೇಳಿದರು. ಅನಂತರ ಪೊಲೀಸ್ ನಿರೀಕ್ಷಕರಾದ ಶೇಟ್ಯೆಯವರು ಶ್ರೀ. ಖಾಡ್ಯೆಯವರಲ್ಲಿ ಕ್ಷಮೆಯಾಚಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಮಾಜಿಕ, ಧಾರ್ಮಿಕ ಅಥವಾ ರಾಷ್ಟ್ರಹಿತದ...ಯಾವುದೇ ಅಭಿಯಾನ ಇರಲಿ, ಪೊಲೀಸರ ಕಿರುಕುಳ ತಪ್ಪಿದ್ದಲ್ಲ !