ಹೆದರಿಸುವ ಗುಮ್ಮನಲ್ಲ, ಇದು ವಾಸ್ತವ !

ಸರಸಂಘಸಂಚಾಲಕರು ಹಿಂದೂಗಳಿಗೆ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಲು ಯಾರು ತಡೆದಿದ್ದಾರೆ ಎಂಬ ಹೇಳಿಕೆಗೆ ಎಲ್ಲ ಕಡೆಯಿಂದಲೂ ಟೀಕೆಯ ಸುರಿಮಳೆಯಾಗಿದ್ದು ಸ್ವಾಭಾವಿಕವೇ ಆಗಿದೆ ಮತ್ತು ಸಹಜವಾಗಿಯೇ ಆ ರೀತಿಯ ಟೀಕೆಯಾದವು. ಜವಾಬ್ದಾರಿಸ್ಥಾನದಲ್ಲಿರುವ ವ್ಯಕ್ತಿಗಳು ಎಷ್ಟು ವಿಚಾರಪೂರ್ವಕವಾಗಿ ಎಚ್ಚರಿಕೆಯಿಂದ ಮಾತನಾಡಬೇಕು ಎನ್ನುವುದು ಇದರಿಂದ ಕಂಡುಬರುತ್ತದೆ. ಸರಸಂಘಚಾಲಕರು ಹಿಂದೂಗಳ ಅಸ್ತಿತ್ವದ ರಕ್ಷಣೆಗಾಗಿ ಹೇಳಿದ ಉಪಾಯ ಅಯೋಗ್ಯವಾಗಿದ್ದರೂ ಅದನ್ನು ವಿರೋಧಿಸುವ ಸಾಮ್ಯವಾದಿ ಮತ್ತು ನಿಧರ್ಮಿಗಳು ಪ್ರಸ್ತುತ ಪಡಿಸಿದ ಅಂಶಗಳು ಮಾತ್ರ ಪೂರ್ಣ ಮೋಸಗೊಳಿಸುವಂತಿದೆ ಮತ್ತು ಈ ಕಾರಣಕ್ಕಾಗಿ ಈ ವಿಷಯವನ್ನು ಚರ್ಚಿಸಲೇ ಬೇಕಾಗಿದೆ, ಅಲ್ಲದೇ ಗೋಬೆಲ್ಸ ನೀತಿ ಯಂತೆ ಬುದ್ಧಿವಾದಿ ಹಿಂದೂಗಳಿಗೆ ಇದು ಸತ್ಯವೆನಿಸಬಾರದೆಂದು ಈ ವಾಕ್ಸಮರವಾಗಿದೆ.
ಸರಸಂಘಚಾಲಕರ ಹೇಳಿಕೆಗೆ ವಿರೋಧವನ್ನು ವ್ಯಕ್ತಪಡಿಸುವಾಗ ಬುದ್ಧಿವಾದಿಗಳೆಂದು ಹೇಳಿಕೊಳ್ಳುವವರು ಪ್ರಮುಖವಾಗಿ ಎರಡು ಅಂಶಗಳನ್ನು ಮುಂದಿಡುತ್ತಿದ್ದಾರೆ. ಅದರಲ್ಲಿ ಒಂದೆಂದರೆ ಎಲ್ಲಿ ಅಭಿವೃದ್ಧಿದರ ಮೇಲ್ಮಟ್ಟದ್ದಾಗಿರುತ್ತದೆಯೋ, ಅಲ್ಲಿ ಜನಸಂಖ್ಯೆದರ ಕ್ಷೀಣಿಸುತ್ತದೆ. ಇದು ರಾಜ್ಯದ ಜನಸಂಖ್ಯೆದರದ ಅಂಕಿಅಂಶಗಳಿಂದ ಸಿದ್ಧಗೊಂಡಿರುವುದರಿಂದ, ಅಭಿವೃದ್ಧಿದರವನ್ನು ಹೆಚ್ಚಿಸಬೇಕು ಮತ್ತು ಇನ್ನೊಂದು ವಿಷಯವೆಂದರೆ ಜನಗಣತಿಯ ಅಂಕಿಅಂಶಗಳನುಸಾರ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿರುವುದು ಕಂಡುಬರುತ್ತಿದ್ದರೂ, ಅದರತ್ತ ಗಮನಿಸದೇ ರಾಜ್ಯಗಳಿಗನುಸಾರ ಹಿಂದೂಗಳ ತುಲನಾತ್ಮಕ ಹೆಚ್ಚಳ ಮತ್ತು ಕುಸಿತವನ್ನು ನೋಡಿರಿ. ಇದು ಶಬ್ದ ಮತ್ತು ಅಂಕಿಅಂಶಗಳ ಆಟದಲ್ಲಿ ಬುದ್ಧಿವಾದಿಗಳೂ ಹಿಂದೂಗಳನ್ನು ಮರೆಮಾಚುವ ಶಬ್ದಗಳ ಆಟವಾಗಿದೆ. ಈ ಅಂಶಗಳ ಡಾಂಭಿಕತನ ಹೇಗಿದೆಯೆಂದು ನೋಡೋಣ.
ಉತ್ತರ ತಪ್ಪಾಗಿದ್ದರೂ, ಮೂಲ ಪ್ರಶ್ನೆಯಿಂದ ದೂರಗೊಂಡಿಲ್ಲ!
೧೯೪೭ರ ತುಲನೆಯಲ್ಲಿ ಅಂಕಿಅಂಶಗಳನ್ವಯ ಮುಸಲ್ಮಾನರ ಶೇಕಡಾವಾರು ಹೆಚ್ಚಾಗಿದೆಯೆಂದು ಅರಿಯಲು ಯಾವುದೇ ಲೆಕ್ಕಪತ್ರಗಳ ಅಥವಾ ದೊಡ್ಡ ವರದಿಗಳ ಆವಶ್ಯಕತೆಯಿಲ್ಲ. ಸಾಮಾನ್ಯ ಮನುಷ್ಯನೂ ಕಳೆದ ೪-೫ ವರ್ಷಗಳಲ್ಲಿ ಮುಂಬಯಿಯ ಉಪ ಮಹಾನಗರದ ಲೋಕಲ್‌ರೈಲಿನಲ್ಲಿ ಮತ್ತು ಗ್ರಾಮೀಣ ಭಾಗದ ರೈಲು ನಿಲ್ದಾಣಗಳಲ್ಲಿ ಕಣ್ಣು ಹಾಯಿಸಿದಲ್ಲಿ ಮುಸಲ್ಮಾನ ಸ್ತ್ರೀಯರು ಮತ್ತು ಅವರ ಚಿಕ್ಕ ಮಕ್ಕಳು ಕಂಡು ಬರುತ್ತಾರೆ. (ಈಗ ಇದನ್ನು ನಿಧರ್ಮಿಗಳು ಒಟ್ಟಾರೆ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಹೆಚ್ಚಳ ಕಂಡು ಬರುತ್ತಿದೆಯೆಂದು ಹೇಳಲು ಸಾಧ್ಯವಿಲ್ಲ) ಪಟ್ಟಣ, ನಗರಗಳಲ್ಲಿ ಮಸೀದಿಗಳ ಸಂಖ್ಯೆಯು ಅತಿ ಶೀಘ್ರಗತಿಯಲ್ಲಿ ಹೆಚ್ಚುತ್ತಿರುವುದು ಅವರ ಜನಸಂಖ್ಯೆ ಮತ್ತು ಬಲ ವೃದ್ಧಿಸಿರುವುದರ ಸಂಕೇತವಾಗಿದೆ. ಹಿಂದೂಗಳನ್ನು ನಾಶಗೊಳಿಸುವ ಲ್ಯಾಂಡ್ ಜಿಹಾದಿಗಳಿಗೆ ಬಲಿಯಾದ ಮಹಾರಾಷ್ಟ್ರದಲ್ಲಿಯೂ ಈಗ ಇದು ಕಂಡು ಬರುತ್ತಿದೆ. ಬಾಂಗ್ಲಾದೇಶದ ಮುಸಲ್ಮಾನರು ಲಂತರ ಸಂಖ್ಯೆಯಲ್ಲಿ ಭಾರತದಲ್ಲಿ ನುಸುಳಿದ್ದಾರೆ ಮತ್ತು ಅದರ ಭಯಾನಕ ದುಷ್ಪರಿಣಾಮವನ್ನು ದೇಶವು ಅನುಭವಿಸುತ್ತಿದೆ. ಸಾವಿರಾರು ಮನೆಗಳಲ್ಲಿ ಮತಾಂತರವಾಗಿದೆ ಹಾಗೂ ಇದರಿಂದಾಗಿ ಪೂರ್ವಭಾಗದ ರಾಜ್ಯಗಳಲ್ಲಿ ಹಿಂದೂಗಳ ಜನಸಂಖ್ಯೆಯೂ ಬಹಳ ಕ್ಷೀಣಿಸಿದೆ ಎಂದು ಸರಕಾರದ ಜನಗಣತಿಯಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ.
ಇನ್ನೊಂದೆಡೆ ಮಹತ್ವದ ಅಂಶವೆಂದರೆ ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆಸ್ಫೋಟಗೊಳ್ಳುವುದೆಂದು ಸಂಘವು ತನ್ನ ಮನಸ್ಸಿನಲ್ಲಿರುವ ಏನನ್ನೋ ಹೇಳದೆ ಐಸಿಸ್‌ನಂತಹ ನರಮೇಧ ಮುಸಲ್ಮಾನ ಸಂಘಟನೆಯೇ ಇದು ಅವರ ಗುರಿಯೆಂದು ತಿಳಿಸಿದೆ. ಇದರ ದಾಖಲೆಗಳೂ ಇವೆ. ನಾಲ್ಕು ಹಿಂದೂ ಯುವತಿಯರನ್ನು ಮೋಸಗೊಳಿಸಿ ಪ್ರತಿಯೊಬ್ಬರೂ ಐದು ಮಕ್ಕಳಿಗೆ ಜನ್ಮ ನೀಡಿದಲ್ಲಿ ಒಟ್ಟು ೨೫ ಮುಸಲ್ಮಾನರ ಸಂಖ್ಯೆಯಾಗುವುದು ಮತ್ತು ಈ ಅಂಕಿಅಂಶಗಳನುಸಾರ ೨೦೫೦ ರಲ್ಲಿ ಹಿಂದೂಸ್ತಾನವು ಮುಸಲ್ಮಾನ ಬಾಹುಳ್ಯವಿರುವ ದೇಶವಾಗುವುದು ಎಂದು ಅವರೇ ಹೇಳಿದ್ದಾರೆ. ಇದರಲ್ಲಿ ಒಂದೆಡೆ ಹಿಂದೂ ಯುವತಿಯ ಜೀವನವನ್ನು ಉಧ್ವಸ್ಥಗೊಳಿಸಿದ್ದರಿಂದ ಹಿಂದೂಗಳ ಜನನದರ ಕ್ಷೀಣಿಸುವುದು ಎನ್ನುವುದೂ ಅವರ ಮುಖ್ಯ ಉದ್ದೇಶವಾಗಿದೆ. ಭಾರತದಲ್ಲಿರುವ ಪ್ರತಿಯೊಂದು ಗ್ರಾಮಗಳಿಂದ ನಗರಗಳವರೆಗೆ ಲಂತರ ಸಂಖ್ಯೆಯಲ್ಲಿ ನಡೆದಿರುವ ಲವ್ ಜಿಹಾದ್ ಇದರ ಪ್ರತಿರೂಪವಾಗಿದೆ. ಈ ರೀತಿ ಖುರಾಸಾನ ನಿರ್ಮಾಣ ಮಾಡಲು ಸಹಜ ಸಾಧ್ಯವೆನ್ನುವ ಜಿಹಾದಿಗಳು ತಮ್ಮ ಗುರಿಯೆಡೆಗೆ ಅತ್ಯಂತ ವೇಗವಾಗಿ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಇದು ಭಾರತದಲ್ಲಿ ಐಸಿಸ್‌ನ ಹೆಜ್ಜೆಗಳಿಂದಾಗಿ ಪ್ರತ್ಯಕ್ಷದಲ್ಲಿ ಕಾಣಿಸುತ್ತಿದೆ. ಕೇವಲ ಪಾಕಿಸ್ತಾನ ಕೃಪಾಪೋಷಿತ ಭಯೋತ್ಪಾದಕರಷ್ಟೇ ಅಲ್ಲ, ಜಗತ್ತಿನಾದ್ಯಂತ ಇರುವ ಜಿಹಾದಿಗಳ ಹೇಳಿಕೆಗಳನುಸಾರ ಮುಸಲ್ಮಾನರ ಜನಸಂಖ್ಯೆ ಹೆಚ್ಚಿಸುವ ಕೃತ್ಯಗಳ ಪ್ರತ್ಯಕ್ಷ ಕೃತಿಯು ಇಂದು ಭಾರತದ ಪ್ರತಿಯೊಂದು ಗ್ರಾಮಗಳಲ್ಲಿನ ಮಸೀದಿಗಳಿಂದ ಆಗುತ್ತಿದೆ. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮತಾಂಧರೇ ಪೊಲೀಸರಿಗೆ ಹೇಳುತ್ತಿದ್ದಾರೆ.
ಇಂದು ಫ್ರಾನ್ಸ್ , ರಷಾ, ಬ್ರಿಟನ್, ಅಮೇರಿಕಾ ಮತ್ತು ಚೀನಾಗಳಂತಹ ದೇಶಗಳಲ್ಲಿ ಮುಸಲ್ಮಾನರ ಮದವನ್ನು ಇಳಿಸಲು ಅವರ ಮೇಲೆ ಅನೇಕ ನಿರ್ಬಂಧಗಳನ್ನು ಹೇರುತ್ತಿದ್ದಾರೆ. ಅವರ ಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ಕೈಕೊಳ್ಳುತ್ತಿದ್ದಾರೆ. ಕಾರಣವೇನೆಂದರೆ ಅವರು ಮುಸಲ್ಮಾನರ ಜನಸಂಖ್ಯೆಯ ಸ್ಫೋಟದ ಅಪಾಯವನ್ನು ಅರಿತಿದ್ದಾರೆ. ಅದನ್ನು ಹಿಂದುತ್ವನಿಷ್ಠರೂ ತಿಳಿದಿದ್ದಾರೆ. ಆದರೆ ಕಣ್ಣಿಗೆ ಹಿಂದೂದ್ವೇಷದ ಪಟ್ಟಿಯನ್ನು ಕಟ್ಟಿಕೊಂಡಿರುವ ನಿಧರ್ಮಿ ಮತ್ತು ಸಾಮ್ಯವಾದಿಗಳಿಗೆ ಹಿಂದೂಗಳು ರಾಜಕಾರಣಕ್ಕಾಗಿ ಅದನ್ನು ಗುಮ್ಮನೆಂದು ಹೆದರಿಸುತ್ತಿದ್ದಾರೆಂದು ಹೇಳುತ್ತಿದ್ದಾರೆ. ಕಾಶ್ಮೀರಿ ನಿರಾಶ್ರಿತರ ನೋವನ್ನು ಅರಿತುಕೊಳ್ಳುವ ಸಂವೇದನೆಯೂ ಅವರಲ್ಲಿ ಇಲ್ಲವಾಗಿದೆ.
ಒಂದು ದೂರದರ್ಶನದ ಸುದ್ದಿ ವಾಹಿನಿಯ ಸಂವಾದದಲ್ಲಿ ಹೆಚ್ಚಿನ ಮಕ್ಕಳನ್ನು ಜನ್ಮ ನೀಡುವ ಸಂದರ್ಭದಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸಲಾಗಿದೆಯೇ ? ಎನ್ನುವ ಪ್ರಶ್ನೆಯನ್ನು ಎತ್ತಲಾಯಿತು. ಕಳೆದ ಅನೇಕ ವರ್ಷಗಳಿಂದ ಮುಸಲ್ಮಾನರ ಮಕ್ಕಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಜನಿಸುತ್ತಿರುವಾಗ ಅವರ ಸ್ತ್ರೀಯರ ಏನು ಸ್ಥಿತಿಯಾಗಿರಬಹುದು ಎನ್ನುವ ವಿಷಯವನ್ನು ಚರ್ಚಿಸಬೇಕೆಂದು ಇದುವರೆಗೂ ಯಾರಿಗೂ ಹೊಳೆದಿಲ್ಲವೇಕೆ ? ಹಿಂದುತ್ವನಿಷ್ಠರ ವಿರುದ್ಧ ಮಾತನಾಡಬೇಕಾದಾಗಲೆಲ್ಲ, ಅವರಿಗೆ ಸ್ತ್ರೀವಾದಿ ಮತ್ತು ಮಾನವತಾವಾದಿ ವಿಚಾರಗಳು ಹೊಳೆಯುತ್ತದೆ.
ಇರಲಿ, ಒಂದು ಮುಖ್ಯ ಅಂಶವನ್ನು ಹೇಳುವುದೇನೆಂದರೆ, ಮುಸಲ್ಮಾನರ ಜನಸಂಖ್ಯಾಸ್ಫೋಟಕ್ಕೆ ಹಿಂದೂಗಳ ಜನಸಂಖ್ಯೆಯ ಹೆಚ್ಚಳ ಉಪಾಯವಲ್ಲ. ಇದು ಸತ್ಯವಾಗಿದ್ದರೂ ಇದರಿಂದ ಮುಸಲ್ಮಾನರ ಜನಸಂಖ್ಯಾ ಸ್ಫೋಟವೆಂದರೆ ಹಿಂದೂಗಳ ನಿರ್ವಂಶ ಎನ್ನುವುದು ಸೂರ್ಯನ ಬೆಳಕಿನಷ್ಟೇ ಮೂಲಸತ್ಯದೆಡೆಗೆ ಕಣ್ಣುಮುಚ್ಚಿಕೊಂಡಿರಲು ಸಾಧ್ಯವಿಲ್ಲ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹೆದರಿಸುವ ಗುಮ್ಮನಲ್ಲ, ಇದು ವಾಸ್ತವ !