ಕೊಲ್ಹಾಪುರದಲ್ಲಿ ಪತ್ರಿಕಾಗೋಷ್ಠಿ ಡಾ. ತಾವಡೆಯವರಿಗೆ ಪೊಲೀಸರು ಥಳಿಸಿದ ಬಗ್ಗೆ ಸೂಕ್ತ ಕ್ರಮ ಜರುಗಿಸುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತರ ಆಶ್ವಾಸನೆ !


ಎಡದಿಂದ ನ್ಯಾಯವಾದಿ ಶ್ರೀ. ವೀರೇಂದ್ರ ಇಚಲಕರಂಜೀಕರ ಮತ್ತು ಡಾ. ಮಾನಸಿಂಗ ಶಿಂದೆ
ಕೊಲ್ಹಾಪುರ : ‘ಕೊಲ್ಹಾಪುರದಲ್ಲಿ ಡಾ. ವೀರೇಂದ್ರ ತಾವಡೆಯವರಿಗೆ ಪೊಲೀಸರು ಥಳಿಸಿದ ಬಗ್ಗೆ ವಿಚಾರಿಸುತ್ತೇನೆ. ರವಿ ಪಾಟೀಲ ಹೆಸರಿನ ಪೊಲೀಸ್ ಅಧಿಕಾರಿಯು ಒಂದು ವೇಳೆ ‘ಸಿ.ಬಿ.ಐ. ಅಧಿಕಾರಿಯಾಗಿದ್ದಲ್ಲಿ ಅವರು ಕೊಲ್ಹಾಪುರಕ್ಕೆ ಬಂದು ಹೊಡೆಯುವುದು ಸರಿಯಾದ ಕ್ರಮ ವಲ್ಲ. ಈ ಬಗ್ಗೆ ನಾನು ವಿಚಾರಿಸುತ್ತೇನೆ. ಡಾ. ತಾವಡೆಯವರಿಗೆ ಎಲ್ಲ ರೀತಿಯ ಸುರಕ್ಷೆ ನೀಡುವುದು ಅವಶ್ಯಕವಾಗಿರುವುದರಿಂದ ಅದರೆಡೆಗೂ ಗಮನ ಹರಿಸುತ್ತೇನೆ. ಕೊಲ್ಹಾಪುರದ ಪೊಲೀಸ್ ಅಧೀಕ್ಷಕರೊಂದಿಗೆ ನಾನೇ ಮಾತನಾಡುತ್ತೇನೆ ಎಂದು ಹೆಚ್ಚುವರಿ ಪೊಲೀಸ್ ಮಹಾಸಂಚಾಲಕರಾದ ಶ್ರೀ. ಎಸ್.ಪಿ. ಯಾದವ್ ಇವರು ಹಿಂದುತ್ವವಾದಿಗಳ ನಿಯೋಗಕ್ಕೆ ಆಶ್ವಾಸನೆ ನೀಡಿದ್ದಾರೆ ಎಂದು ಸನಾತನ ಸಂಸ್ಥೆಯ ಡಾ. ಮಾನಸಿಂಗ್ ಶಿಂದೆ ಇವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ವೇಳೆ ಹಿಂದೂ ವಿಧಿಜ್ಞ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ಶ್ರೀ. ವೀರೇಂದ್ರ ಇಚಲಕರಂಜೀಕರ ಹಾಜರಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೊಲ್ಹಾಪುರದಲ್ಲಿ ಪತ್ರಿಕಾಗೋಷ್ಠಿ ಡಾ. ತಾವಡೆಯವರಿಗೆ ಪೊಲೀಸರು ಥಳಿಸಿದ ಬಗ್ಗೆ ಸೂಕ್ತ ಕ್ರಮ ಜರುಗಿಸುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತರ ಆಶ್ವಾಸನೆ !