ಪರಿಸರಕ್ಕೆ ಪೂರಕವಾಗಿರುವ ಗಣೇಶೋತ್ಸವ ಆಚರಿಸಿ ! - ಪ್ರಧಾನಿ ಮೋದಿ

ಳೆದ ಹಲವಾರು ವರ್ಷಗಳಿಂದ ಸನಾತನವು ಹೇಳುತ್ತಿರುವ ಶಾಸ್ತ್ರವನ್ನು
ಈಗ ಪ್ರಧಾನಿಗಳು ಹೇಳುವುದು, ಇದು ಸನಾತನವು ಮಾಡಿದ ಪ್ರಬೋಧನೆಯ ಪ್ರತಿಫಲವಾಗಿದೆ !
 ಪ್ರಧಾನಿ ಕರೆ !
ಮೂರ್ತಿಯನ್ನು ಜೇಡಿ ಮಣ್ಣಿನಿಂದ ತಯಾರಿಸಿ !
ಪ್ಲಾಸ್ಟರ್ ಆಫ್ ಪಾರೀಸ್‌ನಿಂದ ತಯಾರಿಸಿದ ಮೂರ್ತಿ ಉಪಯೋಗಿಸುವುದನ್ನು ತಡೆಯಿರಿ !
ನವ ದೆಹಲಿ : ಗಣೇಶೋತ್ಸವ ಸಮೀಪಿಸಿರುವುದರಿಂದ ಆ ನಿಮಿತ್ತ ಲೋಕಮಾನ್ಯ ತಿಲಕರ ನೆನಪಾಗುತ್ತದೆ. ಗಣೇಶೋತ್ಸವವು ಸಮಾಜವನ್ನು ಒಂದೇ ದಾರದಲ್ಲಿ ಪೋಣಿಸುತ್ತದೆ.
ಸ್ವರಾಜ್ಯವು ನಮಗೆ ಪ್ರಾಥಮಿಕವಾಗಿದ್ದು ನಾವು ಗಣೇಶೋತ್ಸವದ ಮಾಧ್ಯಮದಿಂದ ಈ ಸಂದೇಶವನ್ನು ನೀಡೋಣ. ಗಣೇಶೋತ್ಸವದ ಸಮಯದಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸಿ ನಾವು ಪ್ಲಾಸ್ಟರ್ ಆಫ್ ಪ್ಯಾರೀಸ್‌ನ ಮೂರ್ತಿಯ ತಯಾರಿಕೆಯನ್ನು ತಡೆಯಬೇಕು. ಪರಿಸರಕ್ಕೆ ಪೂರಕವಾಗಿರುವ ಗಣೇಶೋತ್ಸವ ಹಾಗೂ ದುರ್ಗಾಪೂಜೆ ಮಾಡಲು ಮಹತ್ವ ನೀಡಬೇಕು. ನಾವು ನಮ್ಮ ಪುರಾತನ ಪರಂಪರೆಯಂತೆ ಜೇಡಿ ಮಣ್ಣಿನ ಮೂರ್ತಿಯನ್ನು ಏಕೆ ತಯಾರಿಸುವುದಿಲ್ಲ ? ಮಣ್ಣಿನ ಮೂರ್ತಿಯಿಂದ ಪರಿಸರದ ರಕ್ಷಣೆಯಾಗು ತ್ತದೆ. ಪರಿಸರ ಹಾಗೂ ಸಮುದ್ರದ ಬಗ್ಗೆ ಕಾಳಜಿ ವಹಿಸುವುದು ಸಹ ಒಂದು ರೀತಿಯಲ್ಲಿ ಪೂಜೆಯೇ ಆಗಿದೆ, ಎಂದು ಆಗಸ್ಟ್ ೨೮ ರಂದು ಆಕಾಶವಾಣಿಯಲ್ಲಿ ನಡೆದ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಾದಿಸಿದರು.
ಪ್ರಧಾನಿಯವರು ಆಗ ಒಲಂಪಿಕ್, ಗಣೇಶೋತ್ಸವ, ಗಂಗಾ ಶುದ್ಧೀಕರಣ ಇತ್ಯಾದಿ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಿಸರಕ್ಕೆ ಪೂರಕವಾಗಿರುವ ಗಣೇಶೋತ್ಸವ ಆಚರಿಸಿ ! - ಪ್ರಧಾನಿ ಮೋದಿ