ಶ್ರೀಕ್ಷೇತ್ರ ಮಂತ್ರಾಲಯ (ಆಂಧ್ರಪ್ರದೇಶ)ದಲ್ಲಿ ಸ್ವಾಮಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರವರ ಹಸ್ತದಿಂದ ‘ಕನ್ನಡ ಸನಾತನ ಪಂಚಾಂಗ ೨೦೧೭’ರ ಬಿಡುಗಡೆ !

‘ಕನ್ನಡ ಸನಾತನ ಪಂಚಾಂಗ ೨೦೧೭’ ಬಿಡುಗಡೆ ಮಾಡುತ್ತಿರುವ
ಸ್ವಾಮಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಮತ್ತು ಸಾಧಕರಾದ ಶ್ರೀ. ಶೇಷಗಿರಿ ರಾವ್,
ಶ್ರೀ. ಯಶವಂತ ಕಣಗಲೇಕರ್ ಮತ್ತು ಶ್ರೀ. ರಾಘವೇಂದ್ರ
ರಾಯಚೂರು : ಸೆಪ್ಟೆಂಬರ್ ೨೫ ರಂದು ರಾಯಚೂರಿನ ಸಾಧಕರು ಆಂಧ್ರಪ್ರದೇಶದಲ್ಲಿರುವ ಶ್ರೀ ಕ್ಷೇತ್ರ ಮಂತ್ರಾಲಯದ ಸ್ವಾಮಿಗಳಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥರವರನ್ನು ಭೇಟಿ ಯಾಗಿ ಅವರಿಗೆ ಸನಾತನದ ಕಾರ್ಯದ ಮಾಹಿತಿ ನೀಡಿದರು.
ಈ ಸಮಯದಲ್ಲಿ ಶ್ರೀ ಸ್ವಾಮಿಯವರು ‘ಕನ್ನಡ ಸನಾತನ ಪಂಚಾಂಗ ೨೦೧೭’ರ ಪ್ರಕಾಶನ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಸ್ವಾಮಿಯವರು ಸನಾತನದ ಕಾರ್ಯದ ಬಗ್ಗೆ ಪ್ರಶಂಸಿಸಿದರು. ಮುಂದೆ ಅವರು, ‘ಸನಾತನದ ಮೇಲೆ ಮುಂಬರುವ ಎಲ್ಲ ಸಂಕಟಗಳು ನಿವಾರಣೆಯಾಗಿ ಸನಾತನದ ಕಾರ್ಯ ಯಶಸ್ವಿಯಾಗುವುದು’ ಎಂದು ಆಶೀರ್ವಾದ ನೀಡಿದರು.
ಸನಾತನದ ‘ತೀರ್ಥಕ್ಷೇತ್ರ’ ಎಂಬ ಮರಾಠಿ ಗ್ರಂಥವು ಬೇಗನೇ ಮುದ್ರಿತಗೊಳ್ಳಲಿದೆ, ಎಂದು ಸ್ವಾಮೀಜಿಯವರಿಗೆ ಹೇಳಿದ ನಂತರ ಅವರು ಗ್ರಂಥದ ಹಿಂದಿನ ಪುಟಕ್ಕಾಗಿ ೧೫ ಸಾವಿರ ರೂಪಾಯಿಯ ಜಾಹೀರಾತು ನೀಡುವ ಸಿದ್ಧತೆಯನ್ನು ವ್ಯಕ್ತಪಡಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀಕ್ಷೇತ್ರ ಮಂತ್ರಾಲಯ (ಆಂಧ್ರಪ್ರದೇಶ)ದಲ್ಲಿ ಸ್ವಾಮಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರವರ ಹಸ್ತದಿಂದ ‘ಕನ್ನಡ ಸನಾತನ ಪಂಚಾಂಗ ೨೦೧೭’ರ ಬಿಡುಗಡೆ !