ನ್ಯಾಯಾಲಯದ ಆದೇಶದಿಂದ ದೇಶದಲ್ಲಿ ರಾಮರಾಜ್ಯ ಬರುವುದೇ ? - ಸರ್ವೋಚ್ಚ ನ್ಯಾಯಾಲಯದಿಂದ ಸರಕಾರದ ನಿಷ್ಕ್ರಿಯತೆ ಬಗ್ಗೆ ಆಕ್ರೋಶ

ಇಂದಿನ ಆಡಳಿತ ವ್ಯವಸ್ಥೆಯು ಎಂದಿಗೂ ದೇಶದಲ್ಲಿ ರಾಮರಾಜ್ಯವನ್ನು ತರಲು ಸಾಧ್ಯವಿಲ್ಲ. ಹಾಗಾಗಿ ನಾಗರಿಕರು ಧರ್ಮಾಚರಣಿ ರಾಜಕಾರಣಿಗಳ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ) ತರಲು ಕೃತಿಶೀಲರಾಗಬೇಕು !
  ಸರ್ವೋಚ್ಚ ನ್ಯಾಯಾಲಯದ ಈ ಆಕ್ರೋಶವು ದೇಶದ ಪ್ರಜಾತಂತ್ರ ವ್ಯವಸ್ಥೆಯ ಕುರಿತು ಪ್ರಶ್ನೆಚಿಹ್ನೆಯಾಗಿದೆ
ನವ ದೆಹಲಿ : ದೇಶಾದ್ಯಂತ ಪಾದಚಾರಿ ರಸ್ತೆಯ ಮೇಲಾಗುವ ಅತಿಕ್ರಮಣವನ್ನು ತೆರವುಗೊಳಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶರಾದ ಟಿ.ಎಸ್. ಠಾಕೂರ ಇವರು ಸರಕಾರದ ನಿಷ್ಕ್ರಿಯತೆಯನ್ನು ಟೀಕಿಸಿ ಈ ಬಗ್ಗೆ ಪ್ರಶ್ನಿಸಿದರು. ಪಾದಚಾರಿ ರಸ್ತೆಯ ಮೇಲೆ ಆಗಿರುವ ಅತಿಕ್ರಮಣವನ್ನು ತೆರವುಗೊಳಿಸುವ ಆದೇಶವನ್ನು ನಾವು ನೀಡಿದಲ್ಲಿ, ಆ ಆದೇಶವನ್ನು ಪಾಲಿಸಲಾಗುತ್ತದೆಯೇ ? ನ್ಯಾಯಾಲಯದ ಆದೇಶದಿಂದ ದೇಶದಲ್ಲಿ ರಾಮರಾಜ್ಯ ಬರುವುದೇ ? ದೇಶದಲ್ಲಿ ಭ್ರಷ್ಟಾಚಾರವನ್ನು ಮುಕ್ತ ಗೊಳಿಸುವಂತೆ ಆದೇಶಿಸಿದರೆ, ಅದು ಸಾಧ್ಯವಾಗು ವುದೇ ? ಅಪರಾಧಗಳು ಆಗಬಾರದು, ಯಾವುದೇ ಹತ್ಯೆಗಳಾಗಬಾರದು ಎನ್ನುವ ಆದೇಶ ನೀಡಿದಲ್ಲಿ ಅದರ ಪಾಲನೆಯಾಗುವುದೇ ? ಎಂದು ನ್ಯಾಯಾಧೀಶರಾದ ಠಾಕೂರ ಇವರು ಪ್ರಶ್ನಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನ್ಯಾಯಾಲಯದ ಆದೇಶದಿಂದ ದೇಶದಲ್ಲಿ ರಾಮರಾಜ್ಯ ಬರುವುದೇ ? - ಸರ್ವೋಚ್ಚ ನ್ಯಾಯಾಲಯದಿಂದ ಸರಕಾರದ ನಿಷ್ಕ್ರಿಯತೆ ಬಗ್ಗೆ ಆಕ್ರೋಶ