ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
೧. ಸಂತರಿಗೆ ಅನಿಸುವುದು ಸರಕಾರಕ್ಕೆ ಏಕೆ ಅನಿಸುವುದಿಲ್ಲ ?
 ‘ಪ್ರಧಾನಿ ಮೋದಿಯವರು ವಿದೇಶಿನೀತಿಯನ್ನು ಸುಧಾರಿಸಬಹುದು, ಎಂದು ಅನಿಸುತ್ತಿತ್ತು; ಆದರೆ ಈಗ, ಮೋದಿಯವರ ವಿದೇಶಿನೀತಿಯೂ ನಿರಾಧಾರವಾಗಿರುತ್ತದೆ. ಮೋದಿಯವರು ದೇಶವನ್ನು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಸಿದ್ಧತೆ ಮಾಡಬೇಕು ಎಂದೆನಿಸುತ್ತದೆ’, ಎಂದು ಶಂಕರಾಚಾರ್ಯರು ಸ್ವಾಮಿ ಸ್ವರೂಪಾನಂದರವರು ಮಾರ್ಗದರ್ಶನ ಮಾಡಿದರು.
೨. ಭಾರತವು ಮೊದಲು ಅಣ್ವಸ್ತ್ರಗಳನ್ನು ಉಪಯೋಗಿಸಿ ಪಾಕಿಸ್ತಾನಕ್ಕೆ ಪಾಠ ಕಲಿಸುವುದೇ ? 
 ಪಾಕಿಸ್ತಾನದ ಆಣ್ವಿಕ ಕಾರ್ಯಕ್ರಮವನ್ನು ನಿಷೇಧಿಸುವುದಿಲ್ಲ. ಹಾಗೆಯೆ ಪಾಕ್‌ಗಿಂತ ಮೊದಲು ಭಾರತದ ಅಣ್ವಿಕ ಕಾರ್ಯಕ್ರಮ ನಿಲ್ಲಿಸಲಿ, ಎಂಬ ಹೇಳಿಕೆಯನ್ನು ಸಂಯುಕ್ತ ರಾಷ್ಟ್ರ ಸಂಘದಲ್ಲಿರುವ ಪಾಕ್ ಪ್ರತಿನಿಧಿ ಮಲಿಹಾ ಲೋಢಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

೩. ಭಾರತವು ಪಾಕ್‌ನಿಂದ ತತ್ಪರತೆಯನ್ನು ಏಕೆ ಕಲಿಯುವುದಿಲ್ಲ ? 
ಭಾರತವು ಪಾಕ್‌ನ ಮೇಲೆ ದಾಳಿ ನಡೆಸಿದರೆ, ಭಾರತದ ಯಾವ ಸ್ಥಳಗಳ ಮೇಲೆ ಆಕ್ರಮಣ ಮಾಡಬೇಕೆಂಬ ಪಟ್ಟಿಯನ್ನು ಪಾಕ್ ಸಿದ್ಧಪಡಿಸಿದೆ. ಪಾಕಿಸ್ತಾನಿ ಸೈನ್ಯವು ಇದರ ಸಂಪೂರ್ಣ ಆಯೋಜನೆಯನ್ನೂ ಮಾಡಿದೆ, ಎಂಬುದಾಗಿ ಅಲ್ಲಿನ ಪ್ರಸಾರಮಾಧ್ಯಮಗಳಲ್ಲಿ ಕೊಡಲಾಗುತ್ತದೆ.
೪. ತಮಿಳುನಾಡಿನಲ್ಲಿ ಹಿಂದೂ ನಾಯಕರ ವಿರುದ್ಧ ಹೆಚ್ಚುತ್ತಿರುವ ‘ಅಸಹಿಷ್ಣುತೆ’ ! 
ತಮಿಳುನಾಡಿನ ದಿಂಡೀಗಲ್ ಜಿಲ್ಲೆಯ ಹಿಂದೂ ಮುನ್ನಾನಿಯ (ಚಳುವಳಿಯ) ಶ್ರೀ. ಶಂಕರ ಗಣೇಶರವರ ಮೇಲೆ ಮತಾಂಧರು ಹರಿತವಾದ ಆಯುಧಗಳಿಂದ ನಡೆಸಿದ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಕೆಲವು ದಿನಗಳ ಹಿಂದೆ ವಿಹಿಂಪನ ಹೊಸೂರು ಶಾಖೆಯ ಕಾರ್ಯದರ್ಶಿ ಆರ್. ಸುರಿಯವರನ್ನು ಮತಾಂಧರು ಹತ್ಯೆಗೈದಿದ್ದರು.
೫. ಬಿಹಾರದತ್ತ ಮಾರ್ಗಕ್ರಮಣ ಮಾಡುತ್ತಿರುವ ತಮಿಳುನಾಡು !
ತಮಿಳುನಾಡಿನ ಕೋಯಂಬತ್ತೂರಿನಲ್ಲಿ ೪ ಮತಾಂಧರ ಗುಂಪು ಹಿಂದೂ ಮುನ್ನಾನಿ (ಚಳುವಳಿಯ) ಸಂಘಟನೆಯ ವಕ್ತಾರರಾದ ಸಿ. ಶಶಿಕುಮಾರರವರನ್ನು ಹರಿತವಾದ ಶಸ್ತ್ರಗಿಂದ ಅಮಾನವೀಯವಾಗಿ ಹತ್ಯೆಗೈದಿತ್ತು. ತಮಿಳುನಾಡಿನಲ್ಲಿ ೮ ದಿನಗಳಲ್ಲಿ ಹಿಂದೂ ನಾಯಕರ ಮೇಲೆ ನಡೆದ ಆಕ್ರಮಣಗಳಲ್ಲಿ ಇದು ನಾಲ್ಕನೇ ಘಟನೆಯಾಗಿದೆ.
೬. ದುರ್ಗಾಪೂಜೆಗೆ ಅನುಮತಿ ನಿರಾಕರಿಸಲು ಬಂಗಾಲವು ಪಾಕ್‌ನಲ್ಲಿದೆಯೇ ? 
ಬಂಗಾಲದ ಬೀರಭೂಮ ಜಿಲ್ಲೆಯಲ್ಲಿನ ಕಾಂಗಲಾಪಹಾರ ಎಂಬಲ್ಲಿ ಮತಾಂಧರಿಗೆ ಹೆದರಿ ಅಲ್ಲಿನ ಆಡಳಿತವು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಅಡಚಣೆ ನಿರ್ಮಾಣವಾಗುತ್ತದೆಯೆಂಬ ಕಾರಣ ನೀಡಿ ಹಿಂದೂಗಳಿಗೆ ದುರ್ಗಾಪೂಜೆಯ ಉತ್ಸವವನ್ನು ಆಚರಿಸಲು ಅನುಮತಿ ನಿರಾಕರಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಇದೇ ರೀತಿ ಅನುಮತಿ ನಿರಾಕರಿಸಲಾಗುತ್ತಿದೆ.
೭. ಆಕ್ರಮಣ ಮಾಡಲು ಭಾರತವು ಮಾಡಿದ ವಿಳಂಬದಿಂದಾಗಿ ಜಿಹಾದಿ ಪಾಕ್‌ಗೆ ಲಾಭ !
ಉರಿ ಆಕ್ರಮಣದ ನಂತರ ಭಾರತವು ಪಾಕ್‌ನಲ್ಲಿರುವ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಆಕ್ರಮಣ ಮಾಡಬಹುದೆಂಬ ಭಯದಿಂದ ಲಷ್ಕರ್-ಎ- ತೊಯಬಾ, ಜೈಶ್-ಎ-ಮಹಮ್ಮದ್ ಮತ್ತು ಹಿಜಬುಲ್ ಮುಜಾಹಿದೀನ್ ಸಂಘಟನೆಯ ೧೬-೧೭ ತರಬೇತಿ ಕೇಂದ್ರಗಳನ್ನು  ಸ್ಥಳಾಂತರಗೊಳಿಸಲಾದ ಮಾಹಿತಿ ಗುಪ್ತಚರ ಇಲಾಖೆಯು ನೀಡಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !