ಗರಬಾ ನೃತ್ಯದ ಬಗ್ಗೆ ನಿಮಗಿವು ತಿಳಿದಿವೆಯೇ ?

ಗರಬಾದ ಪಾವಿತ್ರ್ಯವನ್ನು ಕಾಪಾಡಿ ಹಾಗೂ ಧರ್ಮ ಪಾಲನೆ ಮಾಡಿ !
೧. ಚಿತ್ರಗೀತೆಗಳು, ‘ರಿಮಿಕ್ಸ್’ ಗೀತೆಗಳು ಅಥವಾ ಪಾಶ್ಚಾತ್ಯ ಸಂಗೀತಗಳ ಬದಲು ದೇವಿಯ ಗೀತೆಗಳ ಲಯದಲ್ಲಿ ಗರಬಾ ಆಟವಾಡಿರಿ !
೨. ಅಶ್ಲೀಲ ಹಾವಭಾವಗಳಿಂದ ‘ಡಿಸ್ಕೋ-ದಾಂಡಿಯಾ’ ಆಡುವ ಬದಲು ಪಾರಂಪಾರಿಕ ಪದ್ಧತಿಯಂತೆ ‘ದಾಂಡಿಯಾ’ ಆಡಿರಿ !
೩. ಉತ್ತೇಜನಕಾರಿ ವೇಷಭೂಷಣ ಹಾಗೂ ಸ್ತ್ರೀ-ಪುರುಷರು ಜೊತೆಯಾಗಿ ನರ್ತಿಸುವುದನ್ನು ತಡೆಗಟ್ಟಿರಿ !
ಗರಬಾ ಇದು ಮೋಜು-ಮಜಾ ಮಾಡುವ ವಿಷಯವಲ್ಲ ಭಗವಂತನ ಸಾಮೂಹಿಕ ನೃತ್ಯೋಪಾಸನೆ
೪. ಗರಬಾ ಆಡುವವರಲ್ಲಿ ಸರಾಯಿ ಕುಡಿಯುವವರ ಸಂಖ್ಯೆಯೇ ಹೆಚ್ಚಿರುತ್ತದೆ.

೫. ನೃತ್ಯ ಮಾಡುವ ಬಹಳಷ್ಟು ಜನರು ಪಾದ ರಕ್ಷೆಗಳನ್ನು ಹಾಕಿಕೊಂಡೇ ಕುಣಿಯುತ್ತಾರೆ. ಇಂತಹ ಎಲ್ಲ ಪ್ರಸಂಗಗಳಿಂದ ಈ ಉತ್ಸವದ ಪಾವಿತ್ರ್ಯ ನಾಶವಾಗುತ್ತಿದೆ.
ನವರಾತ್ರ್ಯೋತ್ಸವದ ನಂತರ ಕುಮಾರಿ ಮಾತೆಯರ ಗರ್ಭಪಾತದ ಪ್ರಮಾಣ ಹೆಚ್ಚಾಗುವುದು
ಅನೇಕ ಆರಕ್ಷಕ ಅಧಿಕಾರಿಗಳ ಹೇಳಿಕೆಯಂತೆ ಗರಬಾ ನಿಮಿತ್ತಯುವಕ-ಯುವತಿಯರು ಸರಾಯಿ ಕುಡಿದು ರಾತ್ರಿಯೆಲ್ಲ ಹೊರಗೆ ಅಲೆದಾಡುತ್ತಿರುತ್ತಾರೆ, ಅಲ್ಲದೆ ಘೋಗೊಂದಲವೆಬ್ಬಿಸುತ್ತಾರೆ. ಗರಬಾ ಮುಗಿದ ನಂತರವೂ ಅವರು ತಮ್ಮ ಮನೆಗೆ ಹೋಗದೆ ಮಾರ್ಗದಲ್ಲಿಯೇ ಅಲೆದಾಡುತ್ತಿರುತ್ತಾರೆ. ನವರಾತ್ರ್ಯೋತ್ಸವದ ನಂತರ ಕೆಲವೇ ತಿಂಗಳಲ್ಲಿ ಕುಮಾರಿ ಮಾತೆಯರ ಗರ್ಭಪಾತದ ಪ್ರಮಾಣ ಹೆಚ್ಚಾಗಿರುವುದು ಈ ಹಿಂದೆ ಕೆಲವು ರಾಜ್ಯಗಳಲ್ಲಿ ವರದಿಯಾಗಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗರಬಾ ನೃತ್ಯದ ಬಗ್ಗೆ ನಿಮಗಿವು ತಿಳಿದಿವೆಯೇ ?