ಗೋವು ಮುಸಲ್ಮಾನರಿಗೂ ಮಾತೆ ! - ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ಹರಿದ್ವಾರ : ಗೋಮಾತೆಯ ಹಾಲಿನಲ್ಲಿ ಎಷ್ಟು ಪ್ರೋಟೀನ್ ಹಿಂದೂ ನಾಗರಿಕರಿಗೆ ಸಿಗುತ್ತದೋ, ಅಷ್ಟೇ ಮುಸಲ್ಮಾನರಿಗೂ ಸಿಗುತ್ತದೆ. ಆದ್ದರಿಂದ ಗೋಮಾತೆ ಮುಸಲ್ಮಾನರಿಗೂ ಮಾತೆಯಾಗಿದೆ, ಎಂದು ಹೇಳಿದರೆ ತಪ್ಪಾಗದು, ಎಂದು ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರು ಹೇಳಿದರು. ಶಂಕರಾಚಾರ್ಯರು ಮುಂದುವರಿಸುತ್ತಾ ‘ಧರ್ಮ ಯಾವುದೇ ಇರಲಿ, ಗೋಮಾತೆಯನ್ನು ರಕ್ಷಿಸುವುದು ದೇಶದ ಹಿತದ್ದಾಗಿದೆ’, ಎಂದು ಹೇಳಿದರು. ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ಗೋಹತ್ಯೆಯ ವಿರುದ್ಧ ಕಾನೂನು ತಯಾರಿಸಲಾಗಿದೆ, ಇದರಲ್ಲಿ ಏನೂ ತಪ್ಪಿಲ್ಲ. ಗೋಹತ್ಯೆಯ ಜೊತೆಗೆ ಈಗ ಗೋಮಾಂಸ ಮಾರಾಟದ ಮೇಲೆ ಸಹ ನಿರ್ಬಂಧ ಹೇರುವ ಕಾನೂನು ತರಬೇಕು. ಹಸುವಿನಿಂದ ಸಿಗುವ ಹಾಲು, ಗೋಮೂತ್ರ ಮತ್ತು ಇತರ ಎಲ್ಲವೂ ಉಪಯೋಗವಾಗುವುದು. ಆದ್ದರಿಂದ ಗೋಮಾತೆಯು ಪೂಜನೀಯವಾಗಿದೆ ಹಾಗೂ ಗೋಮಾತೆಯ ರಕ್ಷಣೆ ಮಾಡುವುದು ಆವಶ್ಯಕವಾಗಿದೆ’, ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋವು ಮುಸಲ್ಮಾನರಿಗೂ ಮಾತೆ ! - ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ