ದೇಶಾದ್ಯಂತ ಶೇ. ೪೦ ರಷ್ಟು ಶಾಲಾಮಕ್ಕಳು ಪ್ರತಿದಿನ ಸ್ಯಾಕ್ಸ್ ತಿನ್ನುತ್ತಾರೆ !

ವಿದೇಶಿ ಸಂಸ್ಕೃತಿಯ ಅಂಧಾನುಕರಣೆಯನ್ನು ತ್ಯಜಿಸಿ ಭಾರತೀಯ ಸಂಸ್ಕೃತಿಯ ಆಹಾರಪದಾರ್ಥಗಳನ್ನು ಮಕ್ಕಳಿಗೆ ನೀಡಿ ರಾಷ್ಟ್ರದ ಭಾವೀ ಪೀಳಿಗೆಯನ್ನು ಆರೋಗ್ಯಸಂಪನ್ನಗೊಳಿಸಿರಿ !
ಕೇಂದ್ರೀಯ ಮಹಿಳಾ ಬಾಲಕಲ್ಯಾಣ ಮಂತ್ರಾಲಯವು ಸ್ಥಾಪಿಸಿದ ಕಾರ್ಯಕಾರಿ ಗುಂಪಿನ ವರದಿ
ನವ ದೆಹಲಿ : ಭಾರತದ ಸುಮಾರು ಶೇ. ೪೦ ರಷ್ಟು ಶಾಲಾಮಕ್ಕಳು ಪ್ರತಿದಿನ ಕ್ಯಾಂಟೀನ್‌ನಿಂದ ಸ್ಯಾಕ್ಸ್ (ಚಿಪ್ಸ್, ಬರ್ಗರ್ ಇತ್ಯಾದಿ) ತಿನ್ನು ತ್ತಾರೆ. ಅದರ ಮೂಲಕ ಅವರಲ್ಲಿ ಉಪ್ಪಿನ ಅಂಶ ಹೆಚ್ಚುತ್ತಿದೆ, ಎಂದು ಕೇಂದ್ರೀಯ ಮಹಿಳಾ ಮತ್ತು ಮಕ್ಕಳಕಲ್ಯಾಣ ಸಚಿವಾಲಯವು ಸ್ಥಾಪನೆ ಮಾಡಿದ ಕಾರ್ಯಕಾರಿ ಗುಂಪಿನ ವರದಿಯಿಂದ ಬೆಳಕಿಗೆ ಬಂದಿದೆ. ಈ ವರದಿಯನ್ನು ಸರಕಾರಕ್ಕೆ ಒಪ್ಪಿಸಲಾಗಿದೆ. ಈ ವರದಿಯ ಆಧಾರ ದಲ್ಲಿ ಈಗ ಫೂಡ್ ಸೆಫ್ಟಿ ಆ್ಯಂಡ್ ಸ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ಯಾವುದರಲ್ಲಿ ಉಪ್ಪು, ಸಕ್ಕರೆ, ಕೊಬ್ಬು ಇತ್ಯಾದಿಗಳ ಪ್ರಮಾಣ ಹೆಚ್ಚಿರುತ್ತದೋ, ಆ ಉತ್ಪಾದನೆಗಳ ಪಟ್ಟಿ ಸಿದ್ಧಪಡಿಸುತ್ತಿದೆ. ಈ ಪದಾರ್ಥ ಗಳನ್ನು ಶಾಲಾಮಕ್ಕಳು ತಿನ್ನದಂತೆ ತಡೆಯುವುದು ಅವರ ಉದ್ದೇಶವಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇಶಾದ್ಯಂತ ಶೇ. ೪೦ ರಷ್ಟು ಶಾಲಾಮಕ್ಕಳು ಪ್ರತಿದಿನ ಸ್ಯಾಕ್ಸ್ ತಿನ್ನುತ್ತಾರೆ !